Drug Case: ಸಿಸಿಬಿ ಚಾರ್ಜ್​ಶೀಟ್​ನಲ್ಲಿ ಆಂಕರ್ ಅನುಶ್ರೀ ಹೆಸರು ಉಲ್ಲೇಖ; ಅವರು ಡ್ರಗ್ಸ್ ಸೇವಿಸುತ್ತಿದ್ದರು ಎಂದು ಆರೋಪಿ ಹೇಳಿಕೆ

Anchoor Anushree: ಕಿರುತೆರೆಯ ಖ್ಯಾತ ಆಂಕರ್ ಅನುಶ್ರೀಗೆ ಮತ್ತೆ ಕಂಟಕ ಎದುರಾಗಿದೆ. ಡ್ರಗ್ಸ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎ2 ಆರೋಪಿ ಅನುಶ್ರೀ ಅವರ ಕುರಿತು ಮಾಹಿತಿಗಳನ್ನು ನೀಡಿದ್ದು, ಸಿಸಿಬಿ ಚಾರ್ಜ್​ ಶೀಟ್​ನಲ್ಲಿ ಅವನ್ನು ಉಲ್ಲೇಖಿಸಿಲಾಗಿದೆ. ಈ ಮಾಹಿತಿ ಟಿವಿ9ಗೆ ಲಭ್ಯವಾಗಿದೆ.

Drug Case: ಸಿಸಿಬಿ ಚಾರ್ಜ್​ಶೀಟ್​ನಲ್ಲಿ ಆಂಕರ್ ಅನುಶ್ರೀ ಹೆಸರು ಉಲ್ಲೇಖ; ಅವರು ಡ್ರಗ್ಸ್ ಸೇವಿಸುತ್ತಿದ್ದರು ಎಂದು ಆರೋಪಿ ಹೇಳಿಕೆ
ಆಂಕರ್ ಅನುಶ್ರೀ
TV9kannada Web Team

| Edited By: Apurva Kumar Balegere

Sep 08, 2021 | 10:29 AM


Anchoor Anushree: ನಟಿ, ಸ್ಟಾರ್ ಆಂಕರ್​ ಅನುಶ್ರೀ ಡ್ರಗ್ಸ್​ ಕೇಸ್​ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರಕರಣದ ಚಾರ್ಜ್​ಶೀಟ್​ನಲ್ಲಿರುವ​ ಮಾಹಿತಿ ಟಿವಿ9ಗೆ ಲಭ್ಯವಾಗಿದೆ. ಆಂಕರ್ ಅನುಶ್ರೀ ಡ್ರಗ್ಸ್ ಸೇವನೆ ಜತೆಗೆ ಅದರ ಸಾಗಾಟ ಮಾಡುತ್ತಿದ್ದರು ಎಂದು ಪ್ರಕರಣದ ಎ2 ಆರೋಪಿಯಾಗಿರುವ ಕಿಶೋರ್​ ಅಮನ್​ ಶೆಟ್ಟಿ ಹೇಳಿಕೆಯನ್ನು ಅದರಲ್ಲಿ ಉಲ್ಲೇಖಿಸಲಾಗಿದೆ. ಕಿಶೋರ್ ಶೆಟ್ಟಿ ನೀಡಿರುವ ಹೇಳಿಕೆಯಂತೆ, ಅವರ ರೂಮ್​ಗೆ ಅನುಶ್ರೀ ಡ್ರಗ್ಸ್​ ತರುತ್ತಿದ್ದರು. ಕಿಶೋರ್, ತರುಣ್ ಜೊತೆ ಸಾಕಷ್ಟು ಬಾರಿ ಅನುಶ್ರೀ ಕೂಡ ಡ್ರಗ್ಸ್​ ಸೇವನೆ ಮಾಡಿದ್ದರು ಎಂದು ಹೇಳಿಕೆಯಲ್ಲಿ ದಾಖಲಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಚಾರ್ಜ್​ಶೀಟ್​ನಲ್ಲಿ ಎ2 ಕಿಶೋರ್ ಶೆಟ್ಟಿಯನ್ನು ಉಲ್ಲೇಖಿಸಲಾಗಿದೆ. ‘ರಿಯಾಲಿಟಿ ಶೋನ ಕೊರಿಯೋಗ್ರಾಫರ್​ ಆಗಿದ್ದ ತರುಣ್​ ಮುಖಾಂತರ ತನಗೆ ಅನುಶ್ರೀ ಪರಿಚಯವಾಗಿತ್ತು. ತರುಣ್​ ರೂಮ್​ನಲ್ಲಿ ತಡರಾತ್ರಿವರೆಗೂ ಅನುಶ್ರೀಗೆ ಡ್ಯಾನ್ಸ್ ಪ್ರಾಕ್ಟೀಸ್ ಮಾಡಿಸುತ್ತಿದ್ದೆವು. ಡ್ಯಾನ್ಸ್ ಪ್ರಾಕ್ಟೀಸ್​ಗೆ ಬರುವಾಗ ಅನುಶ್ರೀ ಎಕ್ಸ್‌ಟಸಿ ಡ್ರಗ್ಸ್​ ಖರೀದಿಸಿ  ತರುತ್ತಿದ್ದರು. ನಮಗೆ ಎಕ್ಸ್‌ಟಸಿ ಡ್ರಗ್ಸ್ ನೀಡಿ ಅನುಶ್ರೀ ಕೂಡ ಸೇವಿಸುತ್ತಿದ್ದರು. ಅನುಶ್ರೀಗೆ ಡ್ರಗ್ಸ್ ಪೆಡ್ಲರ್​ಗಳ ಪರಿಚಯವಿದೆ. ಡ್ರಗ್ಸ್ ಎಲ್ಲಿ ಸಿಗುತ್ತೆ, ಯಾರು ಪೂರೈಸುತ್ತಾರೆಂದು ಆಕೆಗೆ ಗೊತ್ತಿತ್ತು. ಡ್ರಗ್ಸ್​ ಅಷ್ಟು ಸುಲಭವಾಗಿ ಅನುಶ್ರೀಗೆ ಹೇಗೆ ಸಿಗುತ್ತಿತ್ತೋ ಗೊತ್ತಿಲ್ಲ.’ ಎಂದು ಚಾರ್ಜ್​ಶೀಟ್​​ನಲ್ಲಿ ಎ2 ಕಿಶೋರ್​ ಶೆಟ್ಟಿ ಹೇಳಿಕೆಯನ್ನು ಉಲ್ಲೇಖಿಸಲಾಗಿದೆ.

ಪ್ರಕರಣದ ಕುರಿತ ವಿಡಿಯೊ ವರದಿ ಇಲ್ಲಿದೆ:

2007-08ರ ಸಮಯದಲ್ಲಿ ರಿಯಾಲಿಟಿ ಶೋ ನಡೆಯುತ್ತಿತ್ತು. ಆಗ ಅನುಶ್ರೀ, ತರುಣ್ ಹಾಗೂ ಕಿಶೋರ್ ಒಡನಾಟವಿತ್ತು ಎನ್ನಲಾಗಿದೆ. ಈ ಕುರಿತಂತೆ ಕಿಶೋರ್ ಶೆಟ್ಟಿ ಹೇಳಿಕೆ ನೀಡಿರುವಂತೆ, ನಟಿ ಅನುಶ್ರೀ, ತರುಣ್ ಹಾಗೂ ಕಿಶೋರ್ ಒಟ್ಟಿಗೆ ಡ್ರಗ್ಸ್​ ಸೇವಿಸುತ್ತಿದ್ದರು. ಊಟಕ್ಕೂ ಮುನ್ನ ಡ್ರಗ್ಸ್ ಸೇವಿಸುತ್ತಿದ್ದರು ಎಂದು ಕಿಶೋರ್ ಹೇಳಿಕೆಯನ್ನು ಉಲ್ಲೇಖಿಸಲಾಗಿದೆ. ಆರೋಪಿ ಕಿಶೋರ್ ಹೇಳಿಕೆಯಿಂದ ಪ್ರಕರಣ ಮತ್ತಷ್ಟು ಮಹತ್ವ ಪಡೆದುಕೊಂಡಿದೆ.

ಇದನ್ನೂ ಓದಿ:

Accident: ಬೈಕ್ ಸ್ಕಿಡ್ ಆಗಿ ಬಿದ್ದವರ ಮೇಲೆ ಹರಿದ ಲಾರಿ, ಮದುವೆ ಆಮಂತ್ರಣ ಕೊಡುತ್ತಿದ್ದ ವರ ಮಸಣ ಸೇರಿದ

Japan: ಸ್ತ್ರೀಯರ ಒಳಉಡುಪುಗಳ ಕಳ್ಳ ಅರೆಸ್ಟ್; ಮನೆಯಲ್ಲಿ ಇದ್ದ ಅಂಡರ್​​ವೇರ್​​ಗಳ ಸಂಖ್ಯೆ​ ನೋಡಿ ಪೊಲೀಸರೇ ಕಂಗಾಲು

(Anchor Anushree name in CCB drug case charge sheet)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada