Accident: ಬೈಕ್ ಸ್ಕಿಡ್ ಆಗಿ ಬಿದ್ದವರ ಮೇಲೆ ಹರಿದ ಲಾರಿ, ಮದುವೆ ಆಮಂತ್ರಣ ಕೊಡುತ್ತಿದ್ದ ವರ ಮಸಣ ಸೇರಿದ

TV9 Digital Desk

| Edited By: Ayesha Banu

Updated on: Sep 08, 2021 | 8:46 AM

ಎಲ್ಲವೂ ಅಂದುಕೊಂಡಂತೆ ಆಗಿದ್ರೆ, ಆ ಯುವಕ ಎರಡೇ ವಾರದಲ್ಲಿ ಹಸಮಣೆ ಏರಬೇಕಿತ್ತು. ತನ್ನ ಬಾಳ ಸಂಗಾತಿ ಜೊತೆ ಸಪ್ತಪದಿ ತುಳಿದು ಹೊಸ ಜೀವನಕ್ಕೆ ಕಾಲಿಡಬೇಕಿತ್ತು. ಇದಕ್ಕಾಗಿ ತನ್ನ ಮದುವೆ ಇನ್ವಿಟೇಷನ್ ಹಿಡಿದು ಮಡಿಕೇರಿಯತ್ತ ಬೈಕ್ ಏರಿದ್ದ. ಆದ್ರೆ ದುರ್ವಿಧಿ ಆತನನ್ನು ಮಸಣಕ್ಕೆ ಕರೆದೊಯ್ದಿದೆ.

Accident: ಬೈಕ್ ಸ್ಕಿಡ್ ಆಗಿ ಬಿದ್ದವರ ಮೇಲೆ ಹರಿದ ಲಾರಿ, ಮದುವೆ ಆಮಂತ್ರಣ ಕೊಡುತ್ತಿದ್ದ ವರ ಮಸಣ ಸೇರಿದ
ಬೈಕ್ ಸ್ಕಿಡ್ ಆಗಿ ಬಿದ್ದವರ ಮೇಲೆ ಹರಿದ ಲಾರಿ, ಮದುವೆ ಆಮಂತ್ರಣ ಕೊಡುತ್ತಿದ್ದ ವರ ಮಸಣ ಸೇರಿದ

ಕೊಡಗು: ಮಡಿಕೇರಿಯ ಸಂಪಿಗೆ ಕಟ್ಟೆ ಬಳಿ ಭೀಕರ ಅಪಘಾತವೊಂದು ನಡೆದಿದೆ. ಬೈಕ್ ಸ್ಕಿಡ್ ಆಗಿ ಬಿದ್ದ ತಕ್ಷಣ ಲಾರಿಯೊಂದು ಹರಿದು ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರ ಬ್ಯಾಗ್ನಲ್ಲಿ ಸಿಕ್ಕ ಆಮಂತ್ರಣ ಪತ್ರಿಕೆಯಲ್ಲಿದ್ದ ದೂರವಾಣಿ ಸಂಖ್ಯೆಗೆ ಕರೆ ಮಾಡಿದ ಬಳಿಕ ಮೃತರ ಗುರುತು ಪತ್ತೆಯಾಗಿದೆ. ಹಸೆಮಣೆ ಏರಬೇಕಿದ್ದ ಯುವಕ ಮಸಣ ಸೇರಿದ್ದಾನೆ. ಮೈಸೂರಿನ ಯುವ ವಕೀಲ ವಿಶ್ವನಾಥ್ ಮತ್ತು ಆತನ ಸಂಬಂಧಿ ದಿನೇಶ್ ಮೃತರು.

ವಕೀಲ ವಿಶ್ವನಾಥ್, ಮದುವೆ ಆಮಂತ್ರಣ ನೀಡಲು ಪಿರಿಯಾಪಟ್ಟಣಕ್ಕೆ ಬಂದು ಅಲ್ಲಿ ತನ್ನ ಸೋದರ ಮಾವನ ಕುಟುಂಬವನ್ನ ಆಮಂತ್ರಿಸಿದ್ದ. ಬಳಿಕ ಭಾವಮೈದ ದಿನೇಶ್ನನ್ನು ಬೈಕ್ ಹತ್ತಿಸಿಕೊಂಡು ಮಡಿಕೇರಿಯಲ್ಲಿದ್ದ ಸಂಬಂಧಿಕರ ಮನೆಗೆ ಹೋಗಿದ್ರು. ಮಡಿಕೇರಿ ಸಮೀಪ ದಟ್ಟ ಮಂಜು ಆವರಿಸಿದೆ. ಈ ವೇಳೆ ಲಾರಿಯೊಂದನ್ನು ಓವರ್ ಟೇಕ್ ಮಾಡಲು ವಿಶ್ವನಾಥ್ ಯತ್ನಿಸಿದ್ದಾರೆ. ಆಗ ಲಾರಿಗೆ ಬೈಕ್ ತಾಗಿ ಇಬ್ಬರೂ ಕೆಳಕ್ಕುರುಳಿದ್ದಾರೆ. ಈ ವೇಳೆ ವಿಶ್ವನಾಥ್ ಮತ್ತು ದಿನೇಶ್ ಮೇಲೆ ಲಾರಿ ಹರಿದಿದೆ. ತಕ್ಷಣ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಅಪಘಾತವೆಸಗಿದ ಲಾರಿ ಚಾಲಕನನ್ನು ಬಂಧಿಸಿ ಮೊಕದ್ದಮೆ ದಾಖಲಿಸಲಾಗಿದೆ. ಮಡಿಕೇರಿ ರಸ್ತೆಗಳು ತೀರಾ ಅಪಾಯಕಾರಿ ತಿರುವುಗಳಿಂದ ಕೂಡಿವೆ. ಅದ್ರಲ್ಲೂ ದಟ್ಟ ಮಂಜು ಇದ್ರೆ ಅಪಾಯ ಕಟ್ಟಿಟ್ಟ ಬುತ್ತಿ. ಹೀಗಾಗಿ ಕೊಡಗಿನಲ್ಲಿ ಸ್ವಲ್ಪ ಎಚ್ಚರಿಕೆ ತಪ್ಪಿದ್ರೂ ಸಾವಿನ ಮನೆ ಸೇರ್ತಿರಿ ಅನ್ನೋದನ್ನ ಮಾತ್ರ ಯಾರೂ ಮರೆಯುವಂತಿಲ್ಲ.

ಇದನ್ನೂ ಓದಿ: ದೆಹಲಿ-ಮೀರತ್​ ಎಕ್ಸ್​ಪ್ರೆಸ್​ ವೇನಲ್ಲಿ ಭೀಕರ ಅಪಘಾತ; ಐವರು ದುರ್ಮರಣ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada