ದೆಹಲಿ-ಮೀರತ್​ ಎಕ್ಸ್​ಪ್ರೆಸ್​ ವೇನಲ್ಲಿ ಭೀಕರ ಅಪಘಾತ; ಐವರು ದುರ್ಮರಣ

ಈ ಕಾರು ಉತ್ತರಾಖಂಡ್​ನ ಹರಿದ್ವಾರದಿಂದ ವಾಪಸ್​ ಗಾಜಿಯಾಬಾದ್​ಗೆ ಬರುತ್ತಿತ್ತು. ಆದರೆ ಟ್ರಕ್​ಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಏಳು ಮಂದಿಯಲ್ಲಿ ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ದೆಹಲಿ-ಮೀರತ್​ ಎಕ್ಸ್​ಪ್ರೆಸ್​ ವೇನಲ್ಲಿ ಭೀಕರ ಅಪಘಾತ; ಐವರು ದುರ್ಮರಣ
ಸಾಂಕೇತಿಕ ಚಿತ್ರ
TV9kannada Web Team

| Edited By: Lakshmi Hegde

Sep 07, 2021 | 10:21 AM

ಕಾರು-ಟ್ರಕ್​ ಡಿಕ್ಕಿ (Road Accident)ಯಾಗಿ ಐವರು ಮೃತಪಟ್ಟ ದುರ್ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್​ ಜಿಲ್ಲೆಯ ದೆಹಲಿ-ಮೀರತ್​ ರಸ್ತೆ (Delhi-Meerut Expressway)ಯಲ್ಲಿ ಇಂದು ಮುಂಜಾನೆ ನಡೆದಿದೆ. ಕಾರಿನಲ್ಲಿ ಎರಡು ಜೋಡಿ (ಎರಡು ದಂಪತಿಗಳು), ಮೂವರು ಮಕ್ಕಳು ಪ್ರಯಾಣ ಮಾಡುತ್ತಿದ್ದರು. ಅದರಲ್ಲೀಗ ಇಬ್ಬರು ಮಕ್ಕಳು ಮಾತ್ರ ಉಳಿದುಕೊಂಡಿದ್ದು, ಉಳಿದವರೆಲ್ಲ ಸಾವನ್ನಪ್ಪಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಈ ಕಾರು ಉತ್ತರಾಖಂಡ್​ನ ಹರಿದ್ವಾರದಿಂದ ವಾಪಸ್​ ಗಾಜಿಯಾಬಾದ್​ಗೆ ಬರುತ್ತಿತ್ತು. ಆದರೆ ಟ್ರಕ್​ಗೆ ಡಿಕ್ಕಿ ಹೊಡೆದ ಪರಿಣಾಮ ದುರಂತ ಸಂಭವಿಸಿದೆ. ದೆಹಲಿ ಮೀರತ್​ ಎಕ್ಸ್​ಪ್ರೆಸ್ ವೇಯಲ್ಲಿ ವಾಹನ ಸಂಚಾರ ಈ ವರ್ಷದ ಏಪ್ರಿಲ್​ ತಿಂಗಳಿನಿಂದ ಪ್ರಾರಂಭವಾಗಿದೆ. ಹಾಗಂತ ಇನ್ನೂ ಅಧಿಕೃತವಾಗಿ ಅದರ ಉದ್ಘಾಟನೆ ಆಗಲಿಲ್ಲ. ಇದು ದೆಹಲಿಯಿಂದ ಉತ್ತರಪ್ರದೇಶದ ಮೀರತ್​ನ್ನು, ಗಾಜಿಯಾಬಾದ್​ನ ದಾಸ್ನಾ ಮಾರ್ಗದಲ್ಲಿ ಸಂಪರ್ಕಿಸುತ್ತದೆ.

ಮೌ ಎಂಬಲ್ಲಿ ಭೀಕರ ಅಪಘಾತವಾಗಿತ್ತು ಕೆಲವೇ ದಿನಗಳ ಹಿಂದೆ ಉತ್ತರ ಪ್ರದೇಶದ ಮೌನಲ್ಲಿ ಇಂಥದ್ದೇ ಒಂದು ಭೀಕರ ಅಪಘಾತ ಉಂಟಾಗಿತ್ತು. ಏಳು ಮಂದಿಯಿಂದ ಕಾರು ಪಲ್ಟಿಯಾಗಿ ಕಣಿವೆಯಲ್ಲಿ ಸಿಲುಕಿ ನಾಲ್ವರು ಮಕ್ಕಳು ಸೇರಿ ಒಟ್ಟು ಐದು ಮಂದಿ ಮೃತಪಟ್ಟಿದ್ದರು.  ಈ ದುರ್ಘಟನೆ ನಡೆದದ್ದು ಸೋನಬರ್ಸಾ ಗ್ರಾಮದ ಬಳಿಯಾಗಿದ್ದು, ಇಬ್ಬರು ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಇದನ್ನೂ ಓದಿ:  ಇಡಿ ಅಧಿಕಾರಿಗಳಿಂದ 8 ತಾಸು ವಿಚಾರಣೆ; ಒಂದಕ್ಕೂ ಸರಿಯಾಗಿ ಉತ್ತರಿಸದ ಟಿಎಂಸಿ ಸಂಸದ ಅಭಿಷೇಕ್​ ಬ್ಯಾನರ್ಜಿ

ಸ್ವಂತ ತಮ್ಮನನ್ನೇ ಬೆಳೆಸಲಿಲ್ಲ ಆಮಿರ್​ ಖಾನ್​; ನಟನೆ ಬರಲ್ಲ ಅಂತ ಬೈಯಿಸಿಕೊಂಡಿದ್ದ ಫೈಸಲ್​ ಖಾನ್​​ ಬಿಚ್ಚಿಟ್ಟ ರಹಸ್ಯ

(Five people including a child died In Uttarpradesh after car collide with Truck)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada