AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಡಿ ಅಧಿಕಾರಿಗಳಿಂದ 8 ತಾಸು ವಿಚಾರಣೆ; ಒಂದಕ್ಕೂ ಸರಿಯಾಗಿ ಉತ್ತರಿಸದ ಟಿಎಂಸಿ ಸಂಸದ ಅಭಿಷೇಕ್​ ಬ್ಯಾನರ್ಜಿ

Coal Smuggling Case: ಅಭಿಷೇಕ್​ ಬ್ಯಾನರ್ಜಿಯವರ ಕುಟುಂಬದ ಸದಸ್ಯರಿಗೆ ಸೇರಿದ ಎರಡು ಕಂಪನಿಗಳು ಸ್ವೀಕರಿಸಿದ ಅಪಾರ ಪ್ರಮಾಣದ, ಲೆಕ್ಕವಿಲ್ಲದ ಹಣದ ಬಗ್ಗೆ ಇಡಿ ಅಧಿಕಾರಿಗಳು ವಿಚಾರಣೆ ವೇಳೆ ಕೇಳಿದ್ದಾರೆ.

ಇಡಿ ಅಧಿಕಾರಿಗಳಿಂದ 8 ತಾಸು ವಿಚಾರಣೆ; ಒಂದಕ್ಕೂ ಸರಿಯಾಗಿ ಉತ್ತರಿಸದ ಟಿಎಂಸಿ ಸಂಸದ ಅಭಿಷೇಕ್​ ಬ್ಯಾನರ್ಜಿ
ಅಭಿಷೇಕ್ ಬ್ಯಾನರ್ಜಿ
TV9 Web
| Edited By: |

Updated on:Sep 07, 2021 | 10:00 AM

Share

ಕಲ್ಲಿದ್ದಲು ಅಕ್ರಮ ಸಾಗಣೆ ಹಗರಣ (Coal Smuggling Case)ದಡಿ ಜಾರಿನಿರ್ದೇಶನಾಲಯ (ಇಡಿ)ದ ಎದುರು ಹಾಜರಾಗಿದ್ದ ತೃಣಮೂಲ ಕಾಂಗ್ರೆಸ್​ ಸದಸ್ಯ ಅಭಿಷೇಕ್​ ಬ್ಯಾನರ್ಜಿ ಯಾವ ಪ್ರಶ್ನೆಗೂ ಸರಿಯಾಗಿ ಉತ್ತರ ನೀಡಲಿಲ್ಲ. ಸುಮಾರು 8 ತಾಸುಗಳ ಕಾಲ ನಡೆದ ವಿಚಾರಣೆಯಲ್ಲಿ ಅವರು ತನಿಖಾಧಿಕಾರಿಗಳಿಗೆ ಸಹಕರಿಸಲಿಲ್ಲ ಎಂದು ಇಡಿ ಮೂಲಗಳಿಂದ ತಿಳಿದುಬಂದಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಸೋದರಳಿಯನೂ ಆಗಿರುವ ಅಭಿಷೇಕ್​ ಬ್ಯಾನರ್ಜಿ (Abhishek Banerjee) ಸೋಮವಾರ ದೆಹಲಿಯ ಜಾಮ್​ ನಗರದಲ್ಲಿರುವ ಇಡಿ ಪ್ರಧಾನ ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದರು.  

ಅಭಿಷೇಕ್​ ಬ್ಯಾನರ್ಜಿಯವರ ಕುಟುಂಬದ ಸದಸ್ಯರಿಗೆ ಸೇರಿದ ಎರಡು ಕಂಪನಿಗಳು ಸ್ವೀಕರಿಸಿದ ಅಪಾರ ಪ್ರಮಾಣದ, ಲೆಕ್ಕವಿಲ್ಲದ ಹಣದ ಬಗ್ಗೆ ಇಡಿ ಅಧಿಕಾರಿಗಳು ವಿಚಾರಣೆ ವೇಳೆ ಕೇಳಿದ್ದಾರೆ. ಈ ಹಣ ಕಲ್ಲಿದ್ದಲು ಅಕ್ರಮ ಸಾಗಣೆಯಿಂದ ಬಂದಿದ್ದು ಎಂದೇ ಇಡಿ ಅಧಿಕಾರಿಗಳು ಪ್ರತಿಪಾದಿಸುತ್ತಿದ್ದಾರೆ. ಆದರೆ ಅಭಿಷೇಕ್​ ಬ್ಯಾನರ್ಜಿ ಅದನ್ನು ಒಪ್ಪದಿದ್ದರೂ, ಹಣದ ಮೂಲ ಯಾವುದು ಎಂಬುದನ್ನು ಸ್ಪಷ್ಟವಾಗಿ ವಿವರಿಸಲು ವಿಫಲರಾಗಿದ್ದಾರೆ ಎಂದು ಇಡಿ ಮೂಲಗಳು ತಿಳಿಸಿದ್ದಾಗಿ ಇಂಡಿಯಾ ಟುಡೆ ವರದಿ ಮಾಡಿದೆ.  ಅಷ್ಟೇ ಅಲ್ಲ, ಆ ಎರಡು ಸಂಸ್ಥೆಗಳ ಬ್ಯಾಂಕ್​ ಸ್ಟೇಟ್​ಮೆಂಟ್​ಗಳನ್ನೂ ಕೂಡ ತನಿಖೆ ಸಮಯದಲ್ಲಿ ಅಭಿಷೇಕ್​ ಬ್ಯಾನರ್ಜಿ ಎದುರು ಇಡಲಾಗಿತ್ತು ಎಂದೂ ಹೇಳಲಾಗಿದೆ.

ಇಡಿ ಆರೋಪವೇನು? ಲೀಪ್ಸ್​ ಆ್ಯಂಡ್​ ಬೌಂಡ್​ ಪ್ರೈವೇಟ್​ ಲಿಮಿಟೆಡ್​ (Leaps and Bound PVT LTD) ಮತ್ತು ಲೀಪ್ಸ್​ ಆ್ಯಂಡ್ ಬೌಂಡ್​ ಮ್ಯಾನೇಜ್​ಮೆಂಟ್​ ಸರ್ವೀಸ್​ ಎಲ್​ಎಲ್​ಪಿ (Leaps and Bound Management Services LLP) ಈ ಎರಡೂ ಕಂಪನಿಗಳು ಅಭಿಷೇಕ್​ ಬ್ಯಾನರ್ಜಿ ಮತ್ತು ಅವರ ಕುಟುಂಬದ ಸದಸ್ಯರಿಗೆ ಸೇರಿದ ಕಂಪನಿಗಳಾಗಿವೆ. ಈ ಕಂಪನಿಗಳು ಕಲ್ಲಿದ್ದಲು ಮಾಫಿಯಾ ವ್ಯಕ್ತಿಗಳಿಂದ ಕಿಕ್​ಬ್ಯಾಕ್​ ಪಡೆಯುತ್ತಿದ್ದರು. ಸದ್ಯ ಕಲ್ಲಿದ್ದಲು ಅಕ್ರಮ ಸಾಗಣೆ ಪ್ರಕರಣದ ಪ್ರಮುಖ ಆರೋಪಿಯೊಬ್ಬರಿಂದ ಸುಮಾರು 4.37 ಕೋಟಿ ರೂಪಾಯಿ ಸ್ವೀಕರಿಸಿವೆ ಎಂದು ಇಡಿ ಪ್ರತಿಪಾದಿಸಿದೆ.  ಇದರಲ್ಲಿ ಲೀಪ್ಸ್​ ಆ್ಯಂಡ್​ ಬೌಂಡ್​ ಪ್ರೈವೇಟ್​ ಲಿಮಿಟೆಡ್ ಕಂಪನಿಯ ನಿರ್ದೇಶಕರಲ್ಲಿ ಅಭಿಷೇಕ್​ ಬ್ಯಾನರ್ಜಿ ತಂದೆ ಅಮಿತ್​ ಬ್ಯಾನರ್ಜಿ ಕೂಡ ಇದ್ದಾರೆ. ಹಾಗೇ ಇನ್ನೊಂದು ಕಂಪನಿ ಲೀಪ್ಸ್​ ಆ್ಯಂಡ್ ಬೌಂಡ್​ ಮ್ಯಾನೇಜ್​ಮೆಂಟ್​ ಸರ್ವೀಸ್​ ಎಲ್​ಎಲ್​ಪಿಗೆ ಅಭಿಷೇಕ್​ ಪತ್ನಿ ರುಜಿರಾ ಬ್ಯಾನರ್ಜಿ ನಿರ್ದೇಶಕಿಯಾಗಿದ್ದಾರೆ.  ಪ್ರಸ್ತುತ ಪ್ರಕರಣದ ತನಿಖೆಯನ್ನು ಸಿಬಿಐ ಕೂಡ ಕೈಗೆತ್ತಿಕೊಂಡಿದೆ. ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ.

ಇದನ್ನೂ ಓದಿ: ಮರಡಿಗುಡ್ಡ ಸೆರಗಿನಲ್ಲಿ ರೋಮಾಂಚನಕಾರಿ ಅನುಭವ ನೀಡುವ ಜಿಪ್ ಲೈನ್; ಮನಸೋತ ಪ್ರವಾಸಿಗರು

ಸ್ವಂತ ತಮ್ಮನನ್ನೇ ಬೆಳೆಸಲಿಲ್ಲ ಆಮಿರ್​ ಖಾನ್​; ನಟನೆ ಬರಲ್ಲ ಅಂತ ಬೈಯಿಸಿಕೊಂಡಿದ್ದ ಫೈಸಲ್​ ಖಾನ್​​ ಬಿಚ್ಚಿಟ್ಟ ರಹಸ್ಯ

Published On - 9:40 am, Tue, 7 September 21

ಬಾರ್​​​ನಲ್ಲಿ ಸಿಗರೇಟ್ ವಿಚಾರಕ್ಕೆ ಜಗಳ:ಚಾಕು ಇರಿದು ಯುವಕನಿಗೆ ಹಲ್ಲೆ
ಬಾರ್​​​ನಲ್ಲಿ ಸಿಗರೇಟ್ ವಿಚಾರಕ್ಕೆ ಜಗಳ:ಚಾಕು ಇರಿದು ಯುವಕನಿಗೆ ಹಲ್ಲೆ
ಐದೇ ನಿಮಿಷ, ಪಕ್ಕಾ ಪ್ಲ್ಯಾನ್​​: ಕೆಜಿಗಟ್ಟಲೆ ಚಿನ್ನ ಕದ್ದು ಎಸ್ಕೇಪ್​
ಐದೇ ನಿಮಿಷ, ಪಕ್ಕಾ ಪ್ಲ್ಯಾನ್​​: ಕೆಜಿಗಟ್ಟಲೆ ಚಿನ್ನ ಕದ್ದು ಎಸ್ಕೇಪ್​
‘ಉತ್ತರ ಕರ್ನಾಟಕ ಅಳ್ತಿದೆ, ಯಾರನ್ನೂ ವಿನ್ನರ್ ಅಂತ ಒಪ್ಪಿಕೊಳ್ಳಲ್ಲ’; ಮಾಳು
‘ಉತ್ತರ ಕರ್ನಾಟಕ ಅಳ್ತಿದೆ, ಯಾರನ್ನೂ ವಿನ್ನರ್ ಅಂತ ಒಪ್ಪಿಕೊಳ್ಳಲ್ಲ’; ಮಾಳು
ಮೆಕ್ಸಿಕೋದಲ್ಲಿ ಹಳಿ ತಪ್ಪಿದ ರೈಲು, 13 ಮಂದಿ ಸಾವು, ಹಲವರಿಗೆ ಗಾಯ
ಮೆಕ್ಸಿಕೋದಲ್ಲಿ ಹಳಿ ತಪ್ಪಿದ ರೈಲು, 13 ಮಂದಿ ಸಾವು, ಹಲವರಿಗೆ ಗಾಯ
ಸ್ಪಂದನಾ ಸೇವ್ ಆಗಿದ್ದು ಸರಿಯಲ್ಲ; ನೇರವಾಗಿ ಆರೋಪಿಸಿದ ಮಾಳು
ಸ್ಪಂದನಾ ಸೇವ್ ಆಗಿದ್ದು ಸರಿಯಲ್ಲ; ನೇರವಾಗಿ ಆರೋಪಿಸಿದ ಮಾಳು
ಭೀಕರ ಅವಘಡದಿಂದ ಆಟಗಾರರು ಕೂದಲೆಳೆಯ ಅಂತರದಲ್ಲಿ ಪಾರು..!
ಭೀಕರ ಅವಘಡದಿಂದ ಆಟಗಾರರು ಕೂದಲೆಳೆಯ ಅಂತರದಲ್ಲಿ ಪಾರು..!
ಕತ್ರಿಗುಪ್ಪೆಯಲ್ಲಿ ಗ್ಯಾಂಗ್​ ವಾರ್, ಲಾಂಗು ಮಚ್ಚಿನ ಹೊಡೆತಕ್ಕೆ ಕಾರು ಪೀಸ್!
ಕತ್ರಿಗುಪ್ಪೆಯಲ್ಲಿ ಗ್ಯಾಂಗ್​ ವಾರ್, ಲಾಂಗು ಮಚ್ಚಿನ ಹೊಡೆತಕ್ಕೆ ಕಾರು ಪೀಸ್!
ಬಿಜೆಪಿ ಶಾಸಕ ಶರಣು ಸಲಗರ ವಿರುದ್ಧ ಎಫ್ಐಆರ್ ದಾಖಲು
ಬಿಜೆಪಿ ಶಾಸಕ ಶರಣು ಸಲಗರ ವಿರುದ್ಧ ಎಫ್ಐಆರ್ ದಾಖಲು
ಪೊಲೀಸರ ಕಣ್ಣಿಗೆ ಬಿದ್ದ ಚಿರತೆ, ಗ್ರಾಮಸ್ಥರಲ್ಲಿ ಆತಂಕ
ಪೊಲೀಸರ ಕಣ್ಣಿಗೆ ಬಿದ್ದ ಚಿರತೆ, ಗ್ರಾಮಸ್ಥರಲ್ಲಿ ಆತಂಕ
ಕರ್ನಾಟಕವನ್ನೇ ಬೆಚ್ಚಿ ಬೀಳಿಸಿದ ದರೋಡೆ ಪ್ರಕರಣಗಳ ಲಿಸ್ಟ್ ಇಲ್ಲಿದೆ ನೋಡಿ!
ಕರ್ನಾಟಕವನ್ನೇ ಬೆಚ್ಚಿ ಬೀಳಿಸಿದ ದರೋಡೆ ಪ್ರಕರಣಗಳ ಲಿಸ್ಟ್ ಇಲ್ಲಿದೆ ನೋಡಿ!