ಕಾವೇರಿ ಕೂಗು ಯೋಜನೆ ವಿರುದ್ಧದ ಪಿಐಎಲ್ ವಜಾ; ಹೈಕೋರ್ಟ್ ವಿಭಾಗೀಯ ಪೀಠದಿಂದ ಆದೇಶ

ಈಗಾಗಲೇ ಅರ್ಜಿದಾರರನ್ನು ಹೈಕೋರ್ಟ್ ಪ್ರಕರಣದಿಂದ ಕೈಬಿಟ್ಟಿದೆ. ಹೀಗಾಗಿ ಅರ್ಜಿದಾರರಿಗೆ ದಂಡ‌ ವಿಧಿಸದೇ ಪಿಐಎಲ್ ವಜಾ ಮಾಡಲಾಗಿದೆ ಎಂದು ಹಂಗಾಮಿ ನ್ಯಾಯಮೂರ್ತಿ ಸಿಜೆ ಸತೀಶ್ ಚಂದ್ರ ಶರ್ಮಾ, ನ್ಯಾಯಾದೀಶರಾದ ಸಚಿನ್ ಶಂಕರ್ ಮಗದುಮ್ ಅವರ ಪೀಠ ಆದೇಶ ಹೊರಡಿಸಿದೆ.

ಕಾವೇರಿ ಕೂಗು ಯೋಜನೆ ವಿರುದ್ಧದ ಪಿಐಎಲ್ ವಜಾ; ಹೈಕೋರ್ಟ್ ವಿಭಾಗೀಯ ಪೀಠದಿಂದ ಆದೇಶ
ಕರ್ನಾಟಕ ಹೈಕೋರ್ಟ್
Follow us
TV9 Web
| Updated By: preethi shettigar

Updated on:Sep 07, 2021 | 11:35 AM

ದೆಹಲಿ: ಕಾವೇರಿ ಕೂಗು ಯೋಜನೆ ವಿರುದ್ಧದ ಪಿಐಎಲ್ ಅನ್ನು ಹೈಕೋರ್ಟ್ ವಿಭಾಗೀಯ ಪೀಠ ವಜಾಗೊಳಿಸಿದೆ. ಕಾವೇರಿ ಕೂಗು ಉತ್ತಮವಾದ ಯೋಜನೆ. ಅರಣ್ಯ ಕಡಿಮೆಯಾಗುತ್ತಿರುವ ಸಮಯದಲ್ಲಿ ಮರ ಬೆಳೆಸುವ ಅಗತ್ಯವಿದೆ. ಅರಣ್ಯ ಭೂಮಿಯಲ್ಲಿ ಮರ ಬೆಳೆಸಬಾರದೆಂಬ ನಿರ್ಬಂಧವಿಲ್ಲ ಎಂದು ಹೈಕೋರ್ಟ್ ತಿಳಿಸಿದೆ.

ಖಾಸಗಿಯವರಿಗೆ ನಿರ್ಬಂಧವಿರುವ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಿಲ್ಲ. ಮರ ಬೆಳೆಸುವ ಯೋಜನೆಯನ್ನು ಪ್ರೋತ್ಸಾಹಿಸಬೇಕಿದೆ. ಅಲ್ಲದೆ ಈಶಾ ಔಟ್ ರೀಚ್ ಸಂಸ್ಥೆಯ ಕ್ರಮ ಶ್ಲಾಘನೀಯ. ದಂಡ ವಿಧಿಸಿ ಈ ಪಿಐಎಲ್ ವಜಾಗೊಳಿಸಬೇಕಿತ್ತು. ಆದರೆ ಈಗಾಗಲೇ ಅರ್ಜಿದಾರರನ್ನು ಹೈಕೋರ್ಟ್ ಪ್ರಕರಣದಿಂದ ಕೈಬಿಟ್ಟಿದೆ. ಹೀಗಾಗಿ ಅರ್ಜಿದಾರರಿಗೆ ದಂಡ‌ ವಿಧಿಸದೇ ಪಿಐಎಲ್ ವಜಾ ಮಾಡಲಾಗಿದೆ ಎಂದು ಹಂಗಾಮಿ ನ್ಯಾಯಮೂರ್ತಿ ಸಿಜೆ ಸತೀಶ್ ಚಂದ್ರ ಶರ್ಮಾ, ನ್ಯಾಯಾದೀಶರಾದ ಸಚಿನ್ ಶಂಕರ್ ಮಗದುಮ್ ಅವರ ಪೀಠ ಆದೇಶ ಹೊರಡಿಸಿದೆ.

ಬೆಂಗಳೂರು ಗ್ರಾ. ಸೇರಿ 7 ಜಿಲ್ಲೆಯಲ್ಲಿ ಕಾವೇರಿ ಕೂಗು ಗ್ರಾಮ ಸಂಪರ್ಕ ಅಭಿಯಾನ ಕಾವೇರಿ ನದಿ ಉಳಿವಿಗಾಗಿ ಈಶಾ ಫಂಡೇಶನ್​ ಹಮ್ಮಿಕೊಂಡಿರುವ ಕಾವೇರಿ ಕೂಗು ಗ್ರಾಮ ಸಂಪರ್ಕ ಅಭಿಯಾನವನ್ನು ಜಿಲ್ಲೆಯಾದ್ಯಂತ ನಡೆಸಲಾಗುವುದು. ಕಾವೇರಿ ಕೂಗು ಯೋಜನೆಯ ಭಾಗವಾಗಿ ಕಾವೇರಿ ನದಿ ಹರಿಯುವ ಭಾಗಗಳಲ್ಲಿ ಗಿಡಗಳನ್ನು ನೆಟ್ಟು ಬೆಳೆಸುವುದರಿಂದ ನದಿ ಸಂರಕ್ಷಣೆ, ಅಂತರ್ಜಲ ಹೆಚ್ಚಳ ಹಾಗೂ ರೈತರಿಗೂ ಆದಾಯ ತರುವ ಕಾರ್ಯಕ್ರಮವಾಗಿದೆ ಎಂದು ಈಶಾ ಫೌಂಡೇಶನ್​  (Isha foundation) ಸ್ವಯಂ ಸೇವಕರಾದ ತೀರ್ಥನ್​ ಮತ್ತು ಸಂಭವ್ ಸುದ್ದಿಗೋಷ್ಠಿಯಲ್ಲಿ​ ತಿಳಿಸಿದ್ದಾರೆ. ಈಗಾಗಲೇ ಈ ಅಭಿಯಾನ ಆರಂಭವಾಗಿದ್ದು, 215 ಗ್ರಾಮ ಪಂಚಾಯತ್​​​ಗಳಿಗೆ ಭೇಟಿ ಕಾರ್ಯಕ್ರಮ ನಡೆಸಲಾಗಿದೆ. ಸೆಪ್ಟೆಂಬರ್​​ವರೆಗೂ ಈ ಅಭಿಯಾನ ನಡೆಯಲಿದೆ.

ಕಾವೇರಿ ನದಿ ಉಳಿವಿಗಾಗಿ ಕಾವೇರಿ ಕೂಗು ಯೋಜನೆ (Cauvery Calling) ನಡೆಸಲಾಗುತ್ತಿದೆ. ಕಾರ್ಯಕ್ರಮದ ಅಂಗವಾಗಿ ರೈತರಿಂದ ಗಿಡಗಳಿಗಾಗಿ ಬೇಡಿಕೆ ಪಡೆಯುವ ಉದ್ದೇಶದಿಂದ ಕಾವೇರಿ ಕೂಗು (cauvery koogu) ಗ್ರಾಮ ಸಂಪರ್ಕ ಅಭಿಯಾನಕ್ಕೆ ಆಗಸ್ಟ್​ 2 ರಂದು ಚಾಲನೆ ದೊರೆತಿದೆ. ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಮಂಡ್ಯ, ರಾಮನಗರ, ತುಮಕೂರು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ 1785 ಪಂಚಾಯತ್​​ಗಳಲ್ಲಿ ಈ ಅಭಿಯಾನ ನಡೆಸಲು ಉದ್ದೇಶಿಸಲಾಗಿದೆ ಎಂದು ಅವರು ತಿಳಿಸಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​​ ರಾಜ್​ ಇಲಾಖೆ, ಅರಣ್ಯ ಇಲಾಖೆ, ತೋಟಗಾರಿಕೆ ಇಲಾಖೆ, ರೇಷ್ಮೆ ಇಲಾಖೆ ಸಹಯೋಗದಲ್ಲಿ ಕಾವೇರಿ ಕೊಳ್ಳದ ಜಿಲ್ಲೆಗಳ ಪ್ರತಿ ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್​ ಮತ್ತು ಜಿಲ್ಲಾ ಪಂಚಾಯತ್​​ ವ್ಯಾಪ್ತಿಯಲ್ಲಿ ಜಾಗೃತಿ ಮೂಡಿಸಲಾಗುತ್ತದೆ. ಮುಂದಿನ 8 ವಾರಗಳಲ್ಲಿ 1,800 ಪ್ರಚಾರ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ಈಶಾ ಸ್ವಯಂ ಸೇವಕರಾದ ತೀರ್ಥನ್​ ಮತ್ತು ಸಂಭವ್ ತಿಳಿಸಿದ್ದಾರೆ.

ರೈತರಿಗೆ ಯಾವ ರೀತಿಯ ಗಿಡಗಳು ಬೇಕು ಎಂಬ ಮಾಹಿತಿ ಪಡೆಯುವ ಉದ್ದೇಶದಿಂದ ಕಾವೇರಿ ಕೂಗು ಗ್ರಾಮ ಸಂಪರ್ಕ ಅಭಿಯಾನ ತಂಡವು ಎಲ್ಲ 1785 ಪಂಚಾಯತ್​ಗಳಲ್ಲಿಯೂ (Cauvery basin) ‘ಮರ ಮಿತ್ರ’ ಎಂಬ ಹಸರಿನಲ್ಲಿ ಸಂಯೋಜಕರನ್ನು ನೇಮಿಸಿಕೊಳ್ಳಲಾಗುವುದು. ಮರ ಮಿತ್ರರು (mara mitra) ಮರ ಆಧಾರಿತ ಕೃಷಿ, ಅರಣ್ಯ ಕೃಷಿ ಬಗ್ಗೆ ರೈತರಲ್ಲಿ ಅರಿವು ಮೂಡಿಸಿ, ರೈತ ಸಮುದಾಯವನ್ನು ಸಂಘಟಿಸಿ, ಅವರಿಂದ ಮರಗಳ ಬೇಡಿಕೆ ಪಡೆಯುತ್ತಾರೆ ಎಂದು ಅವರು ವಿವರಿಸಿದರು. ಇದನ್ನೂ ಓದಿ:

ಕರ್ನಾಟಕ ಹೈಕೋರ್ಟ್​ಗೆ ಹಂಗಾಮಿ ನ್ಯಾಯಮೂರ್ತಿ ಆಗಿ ಸತೀಶ್ ಚಂದ್ರಶರ್ಮಾ ನೇಮಕ

ಶಾಲಾ ಮಕ್ಕಳಿಗೆ 20 ದಿನಗಳಲ್ಲಿ ಎಲ್ಲಾ ಪಠ್ಯ ಪುಸ್ತಕ ಪೂರೈಕೆ ಮಾಡಲಾಗುವುದು: ಹೈಕೋರ್ಟ್​ಗೆ ಸರ್ಕಾರದ ಹೇಳಿಕೆ

Published On - 11:25 am, Tue, 7 September 21

ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ