AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತ ವಿಶ್ವಗುರು ಆಗುವ ಮೊದಲು ಈ ಕೆಲಸ ಮಾಡಬೇಕು, ಆಗ ಜಗತ್ತು ವಿಶ್ವಗುರು ಆಗುವುದು: ಡಾ ಮೋಹನ್ ಭಾಗವತ್

ಭಾರತದ ಜತೆಗೆ ಜಗತ್ತು ವಿಶ್ವಗುರು ಆಗಬೇಕು, ಆಗ ಮಾತ್ರ ಈ ಜಗತ್ತಿಗೆ ಭಾರತದ ವಿಚಾರಗಳು ಅರ್ಥವಾಗುವುದು. ಅದಕ್ಕೂ ಮೊದಲು ಭಾರತ ಈ ಪ್ರಮುಖ ಕೆಲಸಗಳನ್ನು ಮಾಡಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಡಾ ಮೋಹನ್ ಭಾಗವತ್ ಹೇಳಿದರು. ಹಾಗಾದರೆ ಭಾರತ ಮಾಡಬೇಕಾದ ಪ್ರಮುಖ ಕಾರ್ಯಗಳೇನು, ವಿದೇಶಿ ವಿಚಾರಗಳಿಂದ ಹೊರ ಬಂದು ಭಾರತ ವಿಚಾರಗಳ ಬಗ್ಗೆ ಜಗತ್ತಿಗೆ ಸಾರುವುದು ಹೇಗೆ? ಎಂಬ ಬಗ್ಗೆ ಅವರು ಹೇಳಿದ್ದಾರೆ. ಈ ಬಗ್ಗೆ ಇಲ್ಲಿದೆ ನೋಡಿ.

ಭಾರತ ವಿಶ್ವಗುರು ಆಗುವ ಮೊದಲು ಈ ಕೆಲಸ ಮಾಡಬೇಕು, ಆಗ ಜಗತ್ತು ವಿಶ್ವಗುರು ಆಗುವುದು: ಡಾ ಮೋಹನ್ ಭಾಗವತ್
ಡಾ ಮೋಹನ್ ಭಾಗವತ್
ಅಕ್ಷಯ್​ ಪಲ್ಲಮಜಲು​​
|

Updated on:Jan 04, 2025 | 11:44 AM

Share

ಭಾರತ ವಿಶ್ವಗುರು ಆಗುವುದರ ಜತೆಗೆ ಜಗತ್ತನ್ನು ವಿಶ್ವಗುರುವನ್ನಾಗಿ ಮಾಡಬೇಕಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಡಾ ಮೋಹನ್ ಭಾಗವತ್ ಅವರು ಹೇಳಿದ್ದಾರೆ. ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಸಹಜೀವನ ವ್ಯಾಖ್ಯನ್ಮಾಲಾ (ಉಪನ್ಯಾಸ ಸರಣಿ) 23 ನೇ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನಾವು ಅನಾದಿ ಕಾಲದಿಂದಲೂ ಪರಸ್ಪರ ಸಾಮರಸ್ಯದಿಂದ ಬದುಕುತ್ತಿದ್ದೇವೆ. ಜಗತ್ತು ಹಾಗೆ ಬದುಕಬೇಕಾದರೆ, ಭಾರತವು ಅದರೊಳಗೆ ಸಾಮರಸ್ಯದ ಮಾದರಿಯನ್ನು ಹೊಂದಿರಬೇಕು. ಹಿಂದೂ ರಾಷ್ಟ್ರದ ವಿಶಿಷ್ಟ ಲಕ್ಷಣವಾಗಿ ಅಂತರ್ಗತ ಸಮಾಜದ ಬಗ್ಗೆ ಒತ್ತಿ ಹೇಳಿದರು. ಭಾರತವು ಸೌಹಾರ್ದತೆಯಿಂದ ಬಾಳಬಹುದು ಎಂಬುದನ್ನು ಜಗತ್ತಿಗೆ ತೋರಿಸಬೇಕಾಗಿದೆ, ವಿಶ್ವಗುರು ಭಾರತದ ಸಾಮೂಹಿಕ ಆಶಯ ಕೂಡ ಅದೇ ಆಗಿರಬೇಕು ಎಂದು ಹೇಳಿದರು.

ಭಾರತವನ್ನು ಹಿಂದೂ ರಾಷ್ಟ್ರದ ಮೂಲಭೂತ ತತ್ವವನ್ನು ಹಾಗೂ ವಿಶ್ವಗುರುವಾಗಲು ಹಲವಾರು ಪೂರ್ವ ಷರತ್ತುಗಳ ಬಗ್ಗೆ ಹೇಳಿದರು. “ಜಗತ್ತಿಗೆ ನಿಜವಾಗಿಯೂ ವಿಶ್ವಗುರು ಬೇಕೇ? ಜಗತ್ತು ಇಂದು ಇರುವ ಸ್ಥಿತಿ, ಅಂತಹ ಯಾವುದೇ ಅಗತ್ಯದ ಅವಶ್ಯಕತೆಯನ್ನು ತೋರಿಸುತ್ತದೆಯೇ? ” ಇದಲ್ಲದೆ, ನಾವು ವಿವಿಧ ಕ್ಷೇತ್ರಗಳಲ್ಲಿ ದಾಪುಗಾಲು ಹಾಕುತ್ತಿದ್ದೇವೆ ಮತ್ತು ಆರ್ಥಿಕತೆ ಹಾಗೂ ಮೂಲಸೌಕರ್ಯವ ಭಾರತದಲ್ಲಿ ಬೆಳೆಯುತ್ತಿದೆ. ಪ್ರಪಂಚವು ತಾಂತ್ರಿಕವಾಗಿ ಪ್ರಗತಿ ಹೊಂದುತ್ತಿದೆ ಮತ್ತು ವೇಗವಾಗಿ ಬದಲಾಗುತ್ತಿದೆ. ಈಗ ಅನೇಕರು ಹೇಳಬಹುದು ಎಲ್ಲವೂ ಸರಿಯಾಗಿ ನಡೆಯುತ್ತಿದೆ ಎಂದು. ಆದರೆ ಈ ಎಲ್ಲ ಅತಿಯಾದ ಬದಲಾವಣೆಯಿಂದ ಪರಿಸರದ ಅವನತಿಯಾಗುತ್ತಿದೆ. ಇದರಿಂದ ಜಾಗತಿಕ ನಾಶವಾಗುತ್ತದೆ ಎಂದು ಹೇಳಿದರು.

ನಮ್ಮ ಸಾಂಸ್ಕೃತಿಕ ಮತ್ತು ರಾಷ್ಟ್ರೀಯ ನೀತಿಯ ವಿರುದ್ಧ ಅನೇಕ ಭಾರತೀಯರು ನಡೆಯುತ್ತಿದ್ದಾರೆ. ಪಾಶ್ಚಾತ್ಯ ಮಾದರಿಯಿಂದ ಮೋಕ್ಷ, ಅರ್ಥ ಮತ್ತು ಕಾಮ (ಭೌತಿಕ ಬಯಕೆಗಳು) ಬಗ್ಗೆ ಯೋಚಿಸುತ್ತಿದ್ದಾರೆ. ಇದರಿಂದ ಧರ್ಮ ಆಯಾಮವನ್ನು ಕಳೆದುಕೊಳ್ಳುತ್ತಿದ್ದಾರೆ. ಮಾನವರು ದೈಹಿಕ, ಮಾನಸಿಕ ಮತ್ತು ಬೌದ್ಧಿಕ ಸಾಮರ್ಥ್ಯಗಳ ಹಿಂದೆ ಹೋಗಿ ಆಧ್ಯಾತ್ಮಿಕ ಅಂಶ – ಆತ್ಮ – ಪಾಶ್ಚಿಮಾತ್ಯ ಕಾಣೆಯಾಗಿದೆ. ಆದ್ದರಿಂದ, ಭಾರತವನ್ನು ಭರವಸೆಯಾಗಿ ನೋಡಲಾಗುತ್ತದೆ ಮತ್ತು ಜಗತ್ತಿಗೆ ಮಾರ್ಗದರ್ಶಿ ಶಕ್ತಿಯಾಗಬೇಕು ಎಂದು ಹೇಳಿದ್ದಾರೆ.

ಜಗತ್ತಿನ ಮುಂದೆ ಭಾರತ ತೆರೆದುಕೊಳ್ಳುವ ಮೊದಲು ನಾವು ಯಾರು, ಏನು ಎಂಬ ಬಗ್ಗೆ ಮೊದಲು ತಿಳಿದುಕೊಳ್ಳಬೇಕು. ನಮ್ಮ ರಾಷ್ಟ್ರವು ರಾಜಕೀಯ ಪ್ರಕ್ರಿಯೆಯ ಉತ್ಪನ್ನವಲ್ಲ ಆದರೆ ಹಂಚಿಕೆಯ ಸಂಸ್ಕೃತಿ ಮತ್ತು ಧರ್ಮದ ಕಲ್ಪನೆಯನ್ನು ಆಧರಿಸಿದೆ. ಸಂಪೂರ್ಣ ವೈವಿಧ್ಯತೆಯು ಅಂತರ್ಗತ ಏಕತೆಯ ಅಭಿವ್ಯಕ್ತಿಯಾಗಿದೆ. ಭಗವಾನನನ್ನು ಒಬ್ಬರ ರೀತಿಯಲ್ಲಿ ನೋಡಬಹುದು, ಅದು ನಮ್ಮ ನಂಬಿಕೆಯಾಗಿದೆ. ನಾವು ಯಾರು, ಮತ್ತು ನಮ್ಮ ಗುರುತು ಘರ್ಷಣೆಗಳಿಗೆ ಸಮಸ್ಯೆಯಾಗುವುದಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ:  ಡಿಜಿಟಲ್ ಡೇಟಾ ಭದ್ರತೆ ಬಗ್ಗೆ ನನಗೆ ನಿಮ್ಮ ಅಭಿಪ್ರಾಯ ಬೇಕು, DPDP ನಿಯಮಗಳ ಬಗ್ಗೆ ಸಾರ್ವಜನಿಕರ ಅಭಿಪ್ರಾಯ ಕೇಳಿದ ಅಶ್ವಿನಿ ವೈಷ್ಣವ್

ನಾಗರಿಕತೆಯ ಪರಿಕಲ್ಪನೆಯಾಗಿ ಈ ಭಾರತೀಯ ರಾಷ್ಟ್ರೀಯತೆಯ ಸ್ಪಷ್ಟತೆಯು ವಿಶ್ವಗುರು ಸ್ಥಾನಮಾನವನ್ನು ಪಡೆಯಲು ಮೊದಲ ಪ್ರಮುಖ ಆಯಾಮವಾಗಿದೆ. ಪಾಶ್ಚಾತ್ಯ ಮಾದರಿಯ ಕುರುಡು ಅನುಕರಣೆ ನಮ್ಮ ಸಾಮರ್ಥ್ಯವನ್ನು ಅರಿತುಕೊಳ್ಳಲು ಹಾನಿಕಾರಕವಾಗಿದೆ. ಆದ್ದರಿಂದ, ನಮ್ಮ ರಾಷ್ಟ್ರೀಯ ಗುರುತು ಒಮ್ಮತದ ವಿಷಯವಾಗಿರಬೇಕು ಹೊರತು ಅದು ಸಂಘರ್ಷವಾಗಬಾರದು ಎಂದು ಹೇಳಿದರು.

ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 11:34 am, Sat, 4 January 25

ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?