ಕಂದಾಯ ಸಚಿವನಾಗಿದ್ದಾಗ ನಾನು ಸ್ಟ್ಯಾಂಪ್ ಡ್ಯೂಟಿಯನ್ನು ಶೇ. 5ರಷ್ಟು ಕಮ್ಮಿ ಮಾಡಿದ್ದೆ: ಆರ್ ಅಶೋಕ
ಸಿದ್ದರಾಮಯ್ಯ ಕೆಲದಿನಗಳಲ್ಲಿ ಸ್ಥಾನದಿಂದ ಕೆಳಗಿಳಿಯುತ್ತಾರೆ, ಹಾಗಾಗಿ ಅವರಿಗೆ ಸರ್ಕಾರ ಮತ್ತು ತಮ್ಮ ಸಚಿವರ ಮೇಲೆ ಹಿಡಿತವಿಲ್ಲ, ಎಲ್ಲರೂ ಲೂಟಿಯಲ್ಲಿ ತೊಡಗಿದ್ದಾರೆ, ಸಚಿನ್ ಪಾಂಚಾಳ್ ಸಾವು ಒಂದು ಕೊಲೆ, ಅವರ ಕುಟುಂಬಕ್ಕೆ ಈ ಸರ್ಕಾರದ ಮೇಲೆ ನಂಬಿಕೆಯಿಲ್ಲದ ಕಾರಣ ಪ್ರಧಾನಿ ಮತ್ತು ಗೃಹಸಚಿವರಿಗೆ ಪತ್ರ ಬರೆದಿದ್ದಾರೆ, ಕುಟುಂಬಕ್ಕೆ ನ್ಯಾಯ ಸಿಗುವವರೆಗೆ ಬಿಜೆಪಿ ಅವರೊಂದಿಗೆ ನಿಲ್ಲುತ್ತದೆ ಎಂದು ಅಶೋಕ ಹೇಳಿದರು.
ಕಲಬುರಗಿ: ಪ್ರಿಯಾಂಕ್ ಖರ್ಗೆ ವಿರುದ್ಧ ನಡೆಸುತ್ತಿರುವ ಪ್ರತಿಭಟನೆಯ ಭಾಗವಾಗಿ ಸುದ್ದಿಗೋಷ್ಠಿಯೊಂದನ್ನು ನಡೆಸಿ ಮಾತಾಡಿದ ವಿಪಕ್ಷ ನಾಯಕ ಅರ್ ಅಶೋಕ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯೇರಿಕೆ ಆಗೋದು ನಿರಂತರ ಪ್ರಕ್ರಿಯೆ, ಸರ್ಕಾರೀ ನೌಕರರ ಸಂಬಳ ಸಹ 4 ವರ್ಷಗಳಿಗೊಮ್ಮೆ ಪರಿಷ್ಕರಣೆ ಮಾಡಬೇಕಾಗುತ್ತದೆ, ಸಾರಿಗೆ ಸಚಿವನಾಗಿದ್ದಾಗ ತಾನು ನೌಕರರ ಸಂಬಳ ಹೆಚ್ಚಿಸಿದ್ದಾಗಿ ಹೇಳಿದರು. ಕೋವಿಡ್ ಸಮಯದಲ್ಲಿ ತಮ್ಮ ಸರ್ಕಾರ ಅಧಿಕಾರದಲ್ಲಿತ್ತು ಮತ್ತು ತೆರಿಗೆ ಸಂಗ್ರಹ ಪಾತಾಳಕ್ಕಿಳಿದಿತ್ತು, ಆದಾಗ್ಯೂ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸೆಸ್ ಕಡಿಮೆ ಮಾಡಿತ್ತು, ಮತ್ತು ಕಂದಾಯ ಸಚಿವನಾಗಿದ್ದ ತಾನು ಸ್ಟ್ಯಾಂಪ್ ಡ್ಯೂಟಿಯನ್ನು ಶೇಕಡ 5ರಷ್ಟು ಕಡಿಮೆ ಮಾಡಿದ್ದೆ, ಬಸ್ ಟಿಕೆಟ್ ದರ ಹೆಚ್ಚಿಸುವ ಮೂಲಕ ಈ ಸರ್ಕಾರ ದಿವಾಳಿಯೆದ್ದಿದೆ ಅನ್ನೋದು ಸಾಬೀತಾಗಿದೆ ಎಂದು ಅಶೋಕ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದೊಳಗೆ ಹೋಗಲು ಬಿಡದ ಪೊಲೀಸ್ ಅಧಿಕಾರಿಗೆ ಅರ್ ಅಶೋಕ ಮನಬಂದಂತೆ ತರಾಟೆ!