ಕಲಬುರಗಿ: ಬಿಜೆಪಿ ಗೂಂಡಾಗಿರಿಗೆ ನಮ್ಮ ಗಾಂಧಿಗಿರಿ ಬ್ಯಾನರ್ ಜೊತೆ ಕಾಂಗ್ರೆಸ್ ಕಾರ್ಯಕರ್ತರ ಕೌಂಟರ್, ಪಾನೀಯಗಳ ವ್ಯವಸ್ಥೆ

ಕಲಬುರಗಿ: ಬಿಜೆಪಿ ಗೂಂಡಾಗಿರಿಗೆ ನಮ್ಮ ಗಾಂಧಿಗಿರಿ ಬ್ಯಾನರ್ ಜೊತೆ ಕಾಂಗ್ರೆಸ್ ಕಾರ್ಯಕರ್ತರ ಕೌಂಟರ್, ಪಾನೀಯಗಳ ವ್ಯವಸ್ಥೆ

ಅರುಣ್​ ಕುಮಾರ್​ ಬೆಳ್ಳಿ
|

Updated on:Jan 04, 2025 | 4:41 PM

ವಿರೋಧ ಪಕ್ಷದ ನಾಯಕ ಅರ್ ಅಶೋಕ, ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿಟಿ ರವಿ, ಚಲವಾದಿ ನಾರಾಯಣ ಸ್ವಾಮಿ ಸೇರಿದಂತೆ ಹಲವಾರು ನಾಯಕರು ಕಲಬುರಗಿಯಲ್ಲಿ ಪ್ರಿಯಾಂಕ್ ಖರ್ಗೆ ರಾಜೀನಾಮೆ ಅಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅತ್ತ ಬೆಂಗಳೂರಲ್ಲಿ ಹೇಳಿಕೆಯೊಂದನ್ನು ನೀಡಿರುವ ಖರ್ಗೆ, ಸಚಿನ್ ಪಾಂಣಸ್ಚಾವಾಳ್ ಕುಟುಂಬದೊಂದಿಗೆ ತಾನು ಮಾತಾಡಿರುವುದಾಗಿ ಹೇಳಿದ್ದಾರೆ.

ಕಲಬುರಗಿ: ಭಾಲ್ಕಿ ಗುತ್ತಿಗೆದಾರ ಸಚಿನ್ ಪಾಂಚಾಳ್ ಸಾವಿಗೆ ಶರಣಾದ ಪ್ರಕರಣದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ಆಗ್ರಹಿಸಿ ಬಿಜೆಪಿ ನಾಯಕರು ಇಂದು ಕಲಬುರಗಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದರೆ ಕಾಂಗ್ರೆಸ್ ಕಾರ್ಯಕರ್ತರು ಅದಕ್ಕೆ ಕೌಂಟರ್ ನೀಡಲು ಸಚಿವನ ಮನೆ ಬಳಿ ನೀರು, ಟೀ, ಕಾಫಿ ಮತ್ತು ಎಳ್ನೀರು ಸರಬರಾಜು ಮಾಡುತ್ತಿದ್ದಾರೆ. ಬಿಜೆಪಿಯ ಗೂಂಡಾಗಿರಿಗೆ ನಮ್ಮ ಗಾಂಧಿಗಿರಿ ಅಂತ ಬ್ಯಾನರ್ ಅಲ್ಲಿ ಕಾಣಿಸುತ್ತಿದೆ. ಅದು ಸರಿ, ಕಾಂಗ್ರೆಸ್ ಕಾರ್ಯಕರ್ತರು ನೀರು ಟೀ ಯಾರಿಗಾಗಿ ವ್ಯವಸ್ಥೆ ಮಾಡುತ್ತಿದ್ದಾರೆ? ಅವರು ನೀಡೋದನ್ನು ಪೊಲೀಸರು ಸ್ವೀಕರಿಸಬಾರದು ಮತ್ತು ಜನ ಐವಾನ್-ಇ-ಶಾಹಿ ರಸ್ತೆಯಲ್ಲಿ ಓಡಾಡೋದು ಕಮ್ಮಿ. ಈ ವ್ಯವಸ್ಥೆ ಕೇವಲ ಕಾಂಗ್ರೆಸ್ ಕಾರ್ಯಕರ್ತರಿಗಾಗಿಯೇ?

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಅಂಬೇಡ್ಕರ್ ಸಂವಿಧಾನ ಕಲಬುರಗಿಯಲ್ಲಿ ಅನ್ವಯವಾಗುವುದಿಲ್ಲವೇ? ಕಾಂಗ್ರೆಸ್ ರೀತಿಯಲ್ಲೇ ಅಶೋಕ್ ತಿರುಗೇಟು

Published on: Jan 04, 2025 12:21 PM