AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kisan Mahapanchayat: ಕರ್ನಾಲ್​​ನಲ್ಲಿ ರೈತರ ಸಮಾವೇಶಕ್ಕೆ ವೇದಿಕೆ ಸಜ್ಜು, ಬಿಗಿ ಭದ್ರತೆ

Haryana ಕರ್ನಾಲ್ ಮಿನಿ ಸೆಕ್ರೆಟರಿಯೇಟ್ ಅನ್ನು ತಡೆಯಲು ಹತ್ತಿರದ ಜಿಲ್ಲೆಗಳಿಂದ ಬ್ಯಾರಿಕೇಡ್‌ಗಳನ್ನು ಕರ್ನಾಲ್‌ಗೆ ತರಲಾಗಿದೆ.  ಕರ್ನಾಲ್ ಜಿಲ್ಲಾಡಳಿತವು ಕಾರ್ನಾಲ್ ಧಾನ್ಯ ಮಾರುಕಟ್ಟೆಯಿಂದ ಮಿನಿ ಸೆಕ್ರೆಟರಿಯೇಟ್‌ಗೆ ಸಾಗುವುದನ್ನು ತಡೆಯಲು ಹೆದ್ದಾರಿಗಳ ಉದ್ದಕ್ಕೂ ನಿರ್ಮಾಣ ಸಾಮಗ್ರಿಗಳನ್ನು ಸಾಗಿಸುವ ಲಾರಿಗಳನ್ನು ತಡೆಗೋಡೆಯಾಗಿ ಬಳಸಲು ನಿಲ್ಲಿಸಿದೆ.

Kisan Mahapanchayat: ಕರ್ನಾಲ್​​ನಲ್ಲಿ ರೈತರ ಸಮಾವೇಶಕ್ಕೆ ವೇದಿಕೆ ಸಜ್ಜು, ಬಿಗಿ ಭದ್ರತೆ
ಕರ್ನಾಲ್​​ನಲ್ಲಿ ಬಿಗಿ ಬಂದೋಬಸ್ತ್
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: Sep 07, 2021 | 11:39 AM

Share

ಕರ್ನಾಲ್: ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ (Manohar Lal Khattar) ಅವರ ಕ್ಷೇತ್ರವು ರೈತರ ಆಂದೋಲನದ ಹೊಸ ಕೇಂದ್ರಬಿಂದುವಾಗಿ ಹೊರಹೊಮ್ಮಿರುವ ಕಾರಣ ಹರ್ಯಾಣದ (Haryana) ವಿವಿಧ ಜಿಲ್ಲೆಗಳಿಂದ ಬಂದಿರುವ ನೂರಾರು ಅರೆಸೇನಾ ಪಡೆಗಳು ಮತ್ತು ಪೊಲೀಸರನ್ನು ಕರ್ನಾಲ್​​ನಲ್ಲಿ (Karnal)  ನಿಯೋಜಿಸಲಾಗಿದೆ. ಕರ್ನಾಲ್‌ನ ಧಾನ್ಯ ಮಾರುಕಟ್ಟೆಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾದ (SKM) ಕಿಸಾನ್ ಮಹಾಪಂಚಾಯತ್ (kisan mahapanchayat) ಇಂದು ನಡೆಯಲಿದೆ. ಆಗಸ್ಟ್ 28 ರಂದು ತಮ್ಮ ವಿರುದ್ಧದ ಲಾಠಿಚಾರ್ಜ್ ಅನ್ನು ಪ್ರತಿಭಟಿಸಲು ರೈತರು ಕರ್ನಾಲ್ ಮಿನಿ ಸೆಕ್ರೆಟರಿಯೇಟ್ ಅನ್ನು ಘೇರಾವ್ ಮಾಡಲು ನಿರ್ಧರಿಸಿದ್ದಾರೆ. 40 ಕಂಪನಿಗಳ ಅರೆಸೇನಾ ಪಡೆಗಳನ್ನು ನಿಯೋಜಿಸುವ ಮೂಲಕ ಸಂಚಾರವನ್ನು ಬೇರೆಡೆಗೆ ತಿರುಗಿಸಿ ಮತ್ತು ಕರ್ನಾಲ್‌ನ ಮೂಲೆ ಮೂಲೆಗಳನ್ನು ನಿರ್ಬಂಧಿಸಿರುವ ಆಡಳಿತವು ರೈತರಿಗೆ ಮಿನಿ ಸೆಕ್ರೆಟರಿಯೇಟ್‌ ಘೇರಾವ್ ಮಾಡಲು ಅವಕಾಶ ನೀಡದಂತೆ ಮಾಡಿದೆ. ಕಳೆದ 24 ಗಂಟೆಗಳಲ್ಲಿ ಪ್ಯಾರಾಮಿಲಿಟರಿ ಸಿಬ್ಬಂದಿ ಕರ್ನಾಲ್‌ನಲ್ಲಿ ಜಮಾಯಿಸಿದ್ದಾರೆ.

ಭದ್ರತಾ ವ್ಯವಸ್ಥೆಗಳನ್ನು ಮೇಲ್ವಿಚಾರಣೆ ಮಾಡುವ ಅಧಿಕಾರಿಗಳ ಪ್ರಕಾರ ಧಾನ್ಯ ಮಾರುಕಟ್ಟೆಯಿಂದ 5 ಕಿಮೀ ದೂರದಲ್ಲಿರುವ ಮಿನಿ ಸೆಕ್ರೆಟರಿಯೇಟ್ ಅನ್ನು ಘೇರಾವ್ ಮಾಡಲು ಆಡಳಿತವು ರೈತರಿಗೆ ಅನುಮತಿಸುವುದಿಲ್ಲ. ಪೊಲೀಸರು ತಡೆಯಲು ಪ್ರಯತ್ನಿಸಿದರೆ ಮಿನಿ ಸೆಕ್ರೆಟರಿಯೇಟ್‌ಗೆ ಹೋಗುವ ದಾರಿಯಲ್ಲಿ ಬ್ಯಾರಿಕೇಡ್‌ಗಳನ್ನು ಮುರಿಯುವುದಾಗಿ ಎಸ್‌ಕೆಎಂ ನಾಯಕರು ಹೇಳಿದ್ದಾರೆ.

ಪೊಲೀಸರು ಬೆಳಿಗ್ಗೆ ಎಲ್ಲಾ ಬ್ಯಾರಿಕೇಡ್‌ಗಳನ್ನು ತೆರೆದರು ಮತ್ತು ರೈತರು ಕರ್ನಾಲ್‌ನಲ್ಲಿ ಧಾನ್ಯ ಮಾರುಕಟ್ಟೆಯನ್ನು ತಲುಪಲು ಅವಕಾಶ ನೀಡಲಾಯಿತು ಎಂದು ಹರ್ಯಾಣ ಭಾರತೀಯ ಕಿಸಾನ್ ಯೂನಿಯನ್ (BKU) ಮುಖ್ಯಸ್ಥ ಗುರ್ನಾಮ್ ಸಿಂಗ್ ಚಾರುಣಿ ಹೇಳಿದ್ದಾರೆ.

ಗುಂಪು ಗುಂಪಾಗಿ ಸೇರಲಿದ್ದಾರೆ ರೈತರು ಎಸ್ಕೆಎಂ ನಾಯಕರು ರೈತರನ್ನು ಗುಂಪುಗಳಾಗಿ ಸೇರುವಂತೆ ಕೇಳಿದ್ದಾರೆ ಮತ್ತು ಹತ್ತಿರದ ಜಿಲ್ಲೆಗಳಲ್ಲಿರುವವರು ತಮ್ಮ ಟ್ರಾಕ್ಟರ್ ಟ್ರಾಲಿಯನ್ನು ತರಲು ವಿನಂತಿಸಿದ್ದಾರೆ. “ನಾವು ರೈತರನ್ನು ಗುಂಪುಗಳಾಗಿ ಬರಲು ವಿನಂತಿಸುತ್ತೇವೆ, ಪೊಲೀಸರೊಂದಿಗೆ ಯಾವುದೇ ಘರ್ಷಣೆಯನ್ನು ತಪ್ಪಿಸಬೇಕು ಮತ್ತು ಬ್ಯಾರಿಕೇಡ್‌ಗಳನ್ನು ಶಾಂತಿಯುತವಾಗಿ ದಾಟಬೇಕು. ಪೊಲೀಸರು ನಿಮ್ಮನ್ನು ಥಳಿಸಿದರೂ ಪ್ರತಿಕ್ರಿಯಿಸಬೇಡಿ ಎಂದು ಚಾರುಣಿ ರೈತರಿಗೆ ಹೇಳಿದರು. ದೆಹಲಿಯ ಸಿಂಗು ಮತ್ತು ಟಿಕ್ರಿ ಗಡಿಗಳಿಂದ ಸಾವಿರಾರು ರೈತರು ಆಗಮಿಸುವ ವರದಿಗಳಿವೆ.

ಬ್ಯಾರಿಕೇಡ್‌ಗಳಾಗದ ಲಾರಿಗಳು

ಕರ್ನಾಲ್ ಮಿನಿ ಸೆಕ್ರೆಟರಿಯೇಟ್ ಅನ್ನು ತಡೆಯಲು ಹತ್ತಿರದ ಜಿಲ್ಲೆಗಳಿಂದ ಬ್ಯಾರಿಕೇಡ್‌ಗಳನ್ನು ಕರ್ನಾಲ್‌ಗೆ ತರಲಾಗಿದೆ.  ಕರ್ನಾಲ್ ಜಿಲ್ಲಾಡಳಿತವು ಕಾರ್ನಾಲ್ ಧಾನ್ಯ ಮಾರುಕಟ್ಟೆಯಿಂದ ಮಿನಿ ಸೆಕ್ರೆಟರಿಯೇಟ್‌ಗೆ ಸಾಗುವುದನ್ನು ತಡೆಯಲು ಹೆದ್ದಾರಿಗಳ ಉದ್ದಕ್ಕೂ ನಿರ್ಮಾಣ ಸಾಮಗ್ರಿಗಳನ್ನು ಸಾಗಿಸುವ ಲಾರಿಗಳನ್ನು ತಡೆಗೋಡೆಯಾಗಿ ಬಳಸಲು ನಿಲ್ಲಿಸಿದೆ.

“ಸೋಮವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ನಮಗೆ ಧಾನ್ಯ ಮಾರುಕಟ್ಟೆಯ ಬಳಿ ಟ್ರಕ್ ನಿಲ್ಲಿಸಲು ಹೇಳಲಾಯಿತು ಮತ್ತು ನಾನು ಮುಖ್ಯ ದ್ವಾರದ ಬಳಿ ನಿಲ್ಲಿಸಿದ ನಂತರ ಪೊಲೀಸರು ನನ್ನ ಟ್ರಕ್‌ನ ಕೀಲಿಗಳನ್ನು ತೆಗೆದುಕೊಂಡರು. ತಿನ್ನಲು ಏನೂ ಇಲ್ಲದಿದ್ದರೂ ನಮಗೆ ಟ್ರಕ್ ಅನ್ನು ಬಿಡಬೇಡಿ ಎಂದು ಹೇಳಲಾಗಿದೆ, ”ಎಂದು ಯಮುನಾನಗರದಿಂದ ಉತ್ತರ ಪ್ರದೇಶದ ಶಾಮ್ಲಿಗೆ ನಿರ್ಮಾಣ ಸಾಮಗ್ರಿಗಳನ್ನು ಸಾಗಿಸುತ್ತಿದ್ದ ಟ್ರಕ್ ಚಾಲಕ ಮೊಹಮ್ಮದ್ ತನ್ವೀರ್ ಹೇಳಿದರು. ಆದಾಗ್ಯೂ, ಇಲ್ಲಿಯವರೆಗೆ ಅವುಗಳನ್ನು ಬ್ಯಾರಿಕೇಡ್ ಪ್ರದೇಶಗಳಿಗೆ ಬಳಸಲಾಗಿಲ್ಲ

ಇಂಟರ್ನೆಟ್ ಸ್ಥಗಿತ ಐದು ಜಿಲ್ಲೆಗಳಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸುವ ಹರ್ಯಾಣ ಸರ್ಕಾರದ ಕ್ರಮವು ಜನರಿಂದ ತೀವ್ರ ಟೀಕೆಗೆ ಗುರಿಯಾಗಿದೆ. ಶಾಂತಿ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ಬರದಂತೆ ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ ಆದರೆ ಜನರು ಈ ಕ್ರಮವನ್ನು ದಿಕ್ಸೂಚಿ ಎಂದು ಕರೆದರು. “ಜಿಲ್ಲಾಡಳಿತ ಕರ್ನಾಲ್ ಅಂತರ್ಜಾಲ ಸೇವೆಗಳನ್ನು ಸ್ಥಗಿತಗೊಳಿಸುವುದಾಗಿ ಸೆಪ್ಟೆಂಬರ್ 7 ರಂದು ಬೆಳಿಗ್ಗೆ 12.30 ಕ್ಕೆ ಘೋಷಿಸಿದೆ #FarmersProtest #InternetBlackoutByBJP ಎಂದು ಕಿಸಾನ್ ಏಕತಾ ಮೋರ್ಚಾ ಟ್ವಿಟರ್‌ನಲ್ಲಿ ಬರೆದಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ರೈತರು ಸಂವಹನ ಮತ್ತು ವಿಡಿಯೊಗಳ ಹಂಚಿಕೆಯನ್ನು ತಪ್ಪಿಸಲು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸುವ ಕ್ರಮ ಕೈಗೊಳ್ಳಲಾಗಿದೆ ಎಂದು ರೈತ ಮುಖಂಡರು ಆರೋಪಿಸಿದ್ದಾರೆ. ಕುರುಕ್ಷೇತ್ರ ವಿಶ್ವವಿದ್ಯಾಲಯವು ಸೆಪ್ಟೆಂಬರ್ 7 ರಂದು ನಿಗದಿಯಾಗಿದ್ದ ಪರೀಕ್ಷೆಗಳನ್ನು ಮುಂದೂಡಿದೆ.

ಇದನ್ನೂ ಓದಿ: Farmer protests  ಹರ್ಯಾಣದಲ್ಲಿ ರೈತರ ಪ್ರತಿಭಟನೆ; ಕರ್ನಾಲ್ ಜಿಲ್ಲೆಯಲ್ಲಿ ಮೊಬೈಲ್ ಇಂಟರ್ನೆಟ್ ಸೇವೆ ಸ್ಥಗಿತ

(Kisan mahapanchayatin Karnal security beefed up in Haryana)