NEET UG Admit Card 2021: ನೀಟ್​ ಪರೀಕ್ಷೆಯ ಪ್ರವೇಶ ಪತ್ರ ಬಿಡುಗಡೆ; ಡೌನ್​ಲೋಡ್​ ಮಾಡಿಕೊಳ್ಳುವ ವಿಧಾನ ಹೀಗಿದೆ

NEET UG Exam 2021: ನೀಟ್​ ಪರೀಕ್ಷೆಯನ್ನು ಮುಂದೂಡಬೇಕು ಎಂದು ಒತ್ತಾಯಿಸಿ ಅನೇಕ ವಿದ್ಯಾರ್ಥಿಗಳು ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಅದನ್ನೆಲ್ಲ ವಜಾಗೊಳಿಸಿ ನಿನ್ನೆ ಆದೇಶ ಹೊರಬಿದ್ದಿದೆ. ನೀಟ್ ಪರೀಕ್ಷೆ ಸೆಪ್ಟೆಂಬರ್​ 12ರಂದು ನಡೆಯಲಿದೆ.

NEET UG Admit Card 2021: ನೀಟ್​ ಪರೀಕ್ಷೆಯ ಪ್ರವೇಶ ಪತ್ರ ಬಿಡುಗಡೆ; ಡೌನ್​ಲೋಡ್​ ಮಾಡಿಕೊಳ್ಳುವ ವಿಧಾನ ಹೀಗಿದೆ
ಸಾಂಕೇತಿಕ ಚಿತ್ರ
Follow us
| Updated By: Lakshmi Hegde

Updated on: Sep 07, 2021 | 11:17 AM

ನೀಟ್​ ಪರೀಕ್ಷೆಯ (NEET UG Exam 2021) ಪ್ರವೇಶ ಪತ್ರವನ್ನು ನಿನ್ನೆ (ಸೆಪ್ಟೆಂಬರ್ 6) ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಬಿಡುಗಡೆ ಮಾಡಿದೆ. ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET UG Exam) ಬರೆಯಲಿರುವ ಪರೀಕ್ಷಾರ್ಥಿಗಳು ಎನ್​ಟಿಎ ನೀಟ್​ (NTA NEET)ನ ಅಧಿಕೃತ ವೆಬ್​ಸೈಟ್​ neet.nta.nic.in. ಮೂಲಕ ತಮ್ಮ ಪ್ರವೇಶ ಪತ್ರ (Admit Card)ವನ್ನು ಡೌನ್​ಲೋಡ್ ಮಾಡಿಕೊಳ್ಳಬಹುದು.  ಅಂದಹಾಗೆ ನೀಟ್​ ಪರೀಕ್ಷೆ ಸೆಪ್ಟೆಂಬರ್​ 12ರಂದು ನಡೆಯಲಿದೆ. 

ನೀಟ್​ ಪರೀಕ್ಷೆಯನ್ನು ಮುಂದೂಡಬೇಕು ಎಂದು ಒತ್ತಾಯಿಸಿ ಅನೇಕ ವಿದ್ಯಾರ್ಥಿಗಳು ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ನೀಟ್ ಪರೀಕ್ಷೆ ನಿಗದಿಪಡಿಸಿರುವ ಸಮಯದಲ್ಲೇ ಇನ್ನೂ ಬೇರೆ ಕೆಲವು ಪರೀಕ್ಷೆಗಳು ಇರುವುದರಿಂದ ನೀಟ್​ ಪರೀಕ್ಷೆ ಸದ್ಯ ಬೇಡ ಎಂದು ವಿದ್ಯಾರ್ಥಿಗಳು ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನವನ್ನೂ ನಡೆಸಿದ್ದರು. ಆದರೆ ಈ ಸಂಬಂಧ ನಿನ್ನೆ ತೀರ್ಪು ನೀಡಿರುವ ಸುಪ್ರೀಂಕೋರ್ಟ್ ವಿದ್ಯಾರ್ಥಿಗಳ ಅರ್ಜಿಯನ್ನು ವಜಾಗೊಳಿಸಿದೆ. ಪರೀಕ್ಷೆ ಮುಂದೂಡಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿದೆ. ಈ ತೀರ್ಪಿನ ಬೆನ್ನಲ್ಲೇ ಎನ್​ಟಿಎ, ಪರೀಕ್ಷಾರ್ಥಿಗಳ ಪ್ರವೇಶ ಪತ್ರವನ್ನೂ ಬಿಡುಗಡೆ ಮಾಡಿದೆ.

ನೀಟ್​ ಪರೀಕ್ಷೆಯ ಪ್ರವೇಶ ಪತ್ರ ಡೌನ್​ಲೋಡ್ ಮಾಡಿಕೊಳ್ಳುವ ವಿಧಾನ ಇಲ್ಲಿದೆ.. 1.NTA NEETದ ಅಧಿಕೃತ ವೆಬ್​ಸೈಟ್​  neet.nta.nic.in.ಗೆ ಭೇಟಿ ನೀಡಿ 2. ನಿಮ್ಮ ಲಾಗಿನ್​ ಮಾಹಿತಿಗಳನ್ನು ಹಾಕಿ, ಸಬ್​ಮಿಟ್ (Submit)ಮಾಡಿ. 3. ಆಗ ಸ್ಕ್ರೀನ್​ ಮೇಲೆ ನಿಮ್ಮ ಪ್ರವೇಶ ಪತ್ರ (Admit Card) ಕಾಣಿಸಿಕೊಳ್ಳುತ್ತದೆ 4. ಪ್ರವೇಶ ಪತ್ರವನ್ನು ಒಮ್ಮೆ ಸರಿಯಾಗಿ ಪರಿಶೀಲನೆ ಮಾಡಿಕೊಂಡು ಡೌನ್​ಲೋಡ್ ಮಾಡಿಕೊಳ್ಳಿ.

ಪ್ರವೇಶ ಪತ್ರದ ಮೇಲೆ ಪರೀಕ್ಷೆಯ ದಿನಾಂಕ, ಸಮಯ, ಆಯಾ ಪರೀಕ್ಷಾರ್ಥಿಗಳ ಪರೀಕ್ಷಾ ಕೇಂದ್ರದ ಬಗ್ಗೆ ಮಾಹಿತಿ ಇರುತ್ತದೆ. ಪ್ರತಿ ಪರೀಕ್ಷಾರ್ಥಿಯೂ ಪರೀಕ್ಷೆಗೆ ಹೋಗುವಾಗ ಈ ಪ್ರವೇಶ ಪತ್ರ ತೆಗೆದುಕೊಂಡು ಹೋಗುವುದು ಕಡ್ಡಾಯವಾಗಿರುತ್ತದೆ ಎಂದು ಎನ್​ಟಿಎ ತಿಳಿಸಿದೆ.

ಈ ಬಾರಿ  ಬರೋಬ್ಬರಿ 16 ಲಕ್ಷ ವಿದ್ಯಾರ್ಥಿಗಳು ನೀಟ್ ಪರೀಕ್ಷೆ ಬರೆಯಲಿದ್ದಾರೆ. ನೀಟ್-2021ರ ಪರೀಕ್ಷಾ ಕೇಂದ್ರಗಳ ಪಟ್ಟಿಯನ್ನು ಈಗಾಗಲೇ NTA ಬಿಡುಗಡೆ ಮಾಡಿದೆ. ನೀವೇನಾದರೂ ನೀಟ್ ಪರೀಕ್ಷೆ ಬರೆಯಲು ಹೆಸರು ನೋಂದಾಯಿಸಿಕೊಂಡಿದ್ದರೆ ನಿಮ್ಮ ಪರೀಕ್ಷಾ ಕೇಂದ್ರದ (NEET Exam Centre) ಬಗ್ಗೆ ಮಾಹಿತಿ ಪಡೆಯಲು ನೀಟ್‌ನ ಅಧಿಕೃತ ವೆಬ್‌ಸೈಟ್ neet.nta.nic.inಗೆ ಭೇಟಿ ನೀಡಬಹುದು.

ಇದನ್ನೂ ಓದಿ: NEET UG Exam: ನೀಟ್ ಪರೀಕ್ಷೆ ಮುಂದೂಡಿಕೆ ಸಾಧ್ಯವಿಲ್ಲ ಎಂದ ಸುಪ್ರೀಂ ಕೋರ್ಟ್​; ಸೆ. 12ಕ್ಕೆ ಎಕ್ಸಾಂ ನಡೆಯುವುದು ಖಚಿತ

NEET MDS Counselling 2021: ನೀಟ್ ಎಂಡಿಎಸ್ ಕೌನ್ಸೆಲಿಂಗ್ ಆರಂಭ; ಆನ್​ಲೈನ್​ನಲ್ಲಿ ಸೀಟ್ ಆಯ್ಕೆ ಮಾಡಿಕೊಳ್ಳುವುದು ಹೇಗೆ?

(NEET UG Admit Card 2021 released By NTA check here to Know Download method)