NEET MDS Counselling 2021: ನೀಟ್ ಎಂಡಿಎಸ್ ಕೌನ್ಸೆಲಿಂಗ್ ಆರಂಭ; ಆನ್ಲೈನ್ನಲ್ಲಿ ಸೀಟ್ ಆಯ್ಕೆ ಮಾಡಿಕೊಳ್ಳುವುದು ಹೇಗೆ?
NEET 2021 Exam: ನೀಟ್ ಎಂಡಿಎಸ್ ಕೌನ್ಸಿಲಿಂಗ್ಗೆ 1,000 ರೂ. ಶುಲ್ಕ ನಿಗದಿಪಡಿಸಲಾಗಿದೆ. ಆ. 25 ಮತ್ತು 26ರಂದು ಎಂಡಿಎಸ್ ಸೀಟ್ಗಳ ಹಂಚಿಕೆ ಪ್ರಕ್ರಿಯೆ ನಡೆಯಲಿದೆ. ಆ. 24ರೊಳಗೆ ಅಭ್ಯರ್ಥಿಗಳು ತಮ್ಮ ಸೀಟ್ಗಳನ್ನು ಬುಕ್ ಮಾಡಿಕೊಳ್ಳಬೇಕು.
ನವದೆಹಲಿ: 2020ರಲ್ಲಿ ನಡೆಸಲಾಗಿದ್ದ ನೀಟ್ ಎಂಡಿಎಸ್ (NEET MDS 2021) ಪರೀಕ್ಷೆಯ ಕೌನ್ಸಿಲಿಂಗ್ ಶುಕ್ರವಾರದಿಂದ (ಆ. 20) ಆರಂಭವಾಗಿದೆ. ಅಕ್ಟೋಬರ್ 10ರವರೆಗೆ ನೀಟ್ ಎಂಡಿಎಸ್ (Masters of Dental Surgery Counselling) ಕೌನ್ಸಿಲಿಂಗ್ ನಡೆಯಲಿದೆ. ನೀಟ್ ಎಂಡಿಎಸ್ ಪ್ರವೇಶಾತಿ ಕೌನ್ಸಿಲಿಂಗ್ mcc.nic.in ವೆಬ್ಸೈಟ್ ಮೂಲಕ ನಡೆಯಲಿದೆ. ಕಳೆದ ವರ್ಷ ನೀಟ್ ಎಂಡಿಎಸ್ ಪ್ರವೇಶ ಪರೀಕ್ಷೆ ಬರೆದು ತೇರ್ಗಡೆಯಾಗಿರುವ ಅಭ್ಯರ್ಥಿಗಳು ತಮ್ಮ ಮೆರಿಟ್ಗೆ ಅನುಗುಣವಾಗಿ ಸೀಟ್ಗಳನ್ನು ಬುಕ್ ಮಾಡಬಹುದು.
ಆ. 25 ಮತ್ತು 26ರಂದು ಎಂಡಿಎಸ್ ಸೀಟ್ಗಳ ಹಂಚಿಕೆ ಪ್ರಕ್ರಿಯೆ ನಡೆಯಲಿದೆ. ಆ. 24ರೊಳಗೆ ಅಭ್ಯರ್ಥಿಗಳು ತಮ್ಮ ಸೀಟ್ಗಳನ್ನು ಬುಕ್ ಮಾಡಿಕೊಳ್ಳಬೇಕು. ಆ. 24ಕ್ಕೆ ಮೊದಲ ಸುತ್ತಿನ ನೋಂದಣಿ ಪ್ರಕ್ರಿಯೆ ಮುಗಿಯಲಿದೆ. ನೀಟ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವ ಅಭ್ಯರ್ಥಿಗಳಿಗೆ ಆನ್ಲೈನ್ ಮೂಲಕವೇ ಎಂಡಿಎಸ್ ಕೌನ್ಸೆಲಿಂಗ್ ನಡೆಯಲಿದೆ. ಹಾಗೇ, ಆ. 27ರಂದು ಫಲಿತಾಂಶ ಪ್ರಕಟವಾಗಲಿದೆ. ಅಭ್ಯರ್ಥಿಗಳಿಗೆ ನೀಡಲಾಗುವ ಕಾಲೇಜುಗಳಿಗೆ ಭೇಟಿ ನೀಡಿ ಆ. 28ರಿಂದ ಸೆ. 1ರೊಳಗೆ ಅಭ್ಯರ್ಥಿಗಳು ಪ್ರವೇಶ ಪಡೆಯಬಹುದು.
ಕೇಂದ್ರ ಸರ್ಕಾರವು ಎಂಡಿಎಸ್ ಸೀಟ್ಗೆ ಒಬಿಸಿಗೆ ಶೇ. 27ರಷ್ಟು ಮೀಸಲಾತಿ, ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ (EWS) ಶೇ. 10ರಷ್ಟು ಮೀಸಲಾತಿ ನೀಡುವುದಾಗಿ ತಿಳಿಸಿದೆ.
ನೀಟ್ ಎಂಡಿಎಸ್ ಕೌನ್ಸಿಲಿಂಗ್ಗೆ 1,000 ರೂ. ಶುಲ್ಕ ನಿಗದಿಪಡಿಸಲಾಗಿದೆ. ಎಂಡಿಎಸ್ ಕೌನ್ಸಿಲಿಂಗ್ನಲ್ಲಿ ಪಾಲ್ಗೊಳ್ಳಲು ಎನ್ಬಿಎಯಿಂದ ನೀಡಲಾಗಿರುವ ಅಡ್ಮಿಟ್ ಕಾರ್ಡ್, ಫಲಿತಾಂಶ ಅಥವಾ ರ್ಯಾಂಕ್ ಲೆಟರ್, ಎಂಬಿಬಿಎಸ್/ ಬಿಡಿಎಸ್ನ 1, 2, 3ನೇ ಪರೀಕ್ಷೆಯ ಅಂಕ ಪಟ್ಟಿ, ಎಂಬಿಬಿಎಸ್/ ಬಿಡಿಎಸ್ ಡಿಗ್ರಿ ಸರ್ಟಿಫಿಕೆಟ್ ನೀಡಬೇಕಾಗುತ್ತದೆ.
ಎಂಡಿಎಸ್ ಕೌನ್ಸಿಲಿಂಗ್ನಲ್ಲಿ ಆನ್ಲೈನ್ನಲ್ಲಿ ಪಾಲ್ಗೊಳ್ಳಲು ನೀವು ಮಾಡಬೇಕಾದ್ದು ಇಷ್ಟು… 1. ಕಂಪ್ಯೂಟರ್ನಲ್ಲಿ mcc.nic.in ವೆಬ್ಸೈಟ್ ಓಪನ್ ಮಾಡಿ. 2. ವೆಬ್ಸೈಟ್ನ ಹೋಂ ಪೇಜಿನಲ್ಲಿ ನೀಟ್ ಎಂಡಿಎಸ್ 2021 (NEET MDS 2021) ಮೇಲೆ ಕ್ಲಿಕ್ ಮಾಡಿ. 3. ಆ ಹೊಸ ಪೇಜ್ ಓಪನ್ ಆಗುತ್ತದೆ. ಅಲ್ಲಿ ನಿಮ್ಮ ಲಾಗಿನ್ ಡೀಟೇಲ್ಗಳನ್ನು ತುಂಬಿ. 4. ಹೊಸ ಪೇಜಿನಲ್ಲಿ ಅಪ್ಲಿಕೇಷನ್ ಫಾರ್ಮ್ ಓಪನ್ ಆಗುತ್ತದೆ. ಅಲ್ಲಿ ಕೇಳಿದ ಮಾಹಿತಿಗಳೊಂದಿಗೆ ಅದನ್ನು ಭರ್ತಿ ಮಾಡಿ ಎಲ್ಲ ದಾಖಲೆಗಳನ್ನೂ ಅಟ್ಯಾಚ್ ಮಾಡಿ. 5. ನೀವು ಹಾಕಿರುವ ಮಾಹಿತಿಯನ್ನು ಮರು ಪರಿಶೀಲನೆ ಮಾಡಿಕೊಳ್ಳಿ. ಬಳಿಕ ಶುಲ್ಕವನ್ನು ಪಾವತಿ ಮಾಡಿ. 6 ಶುಲ್ಕ ಪಾವತಿಸಿದ ನಂತರ ಸಬ್ಮಿಟ್ ಬಟನ್ ಒತ್ತಿರಿ.
ಅಕ್ಟೋಬರ್ 10ರವರೆಗೆ ನೀಟ್ ಎಂಡಿಎಸ್ ಕೌನ್ಸಿಲಿಂಗ್ ಪ್ರಕ್ರಿಯೆಗಳು ನಡೆಯಲಿದೆ. 2020ರ ಡಿಸೆಂಬರ್ 16ರಂದು ನೀಟ್- ಎಂಡಿಎಸ್ ಪರೀಕ್ಷೆ ನಡೆದಿತ್ತು. ಆದರೆ, ಕೊವಿಡ್ನಿಂದಾಗಿ ಇನ್ನೂ ದಾಖಲಾತಿ ಶುರುವಾಗಿರಲಿಲ್ಲ. ಈ ಬಗ್ಗೆ ಮೆಡಿಕಲ್ ಕೌನ್ಸೆಲಿಂಗ್ ಕಮಿಟಿ ಮತ್ತು ಯೂನಿಯನ್ ಆಫ್ ಇಂಡಿಯಾ ಇಂದು ಸುಪ್ರೀಂ ಕೋರ್ಟ್ಗೆ ಅಫಿಡವಿಟ್ ಸಲ್ಲಿಸಿತ್ತು. ಕೌನ್ಸೆಲಿಂಗ್ ವಿಳಂಬವಾಗುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ ಎಂದು ನ್ಯಾಯಮೂರ್ತಿ ಡಿವೈ ಚಂದ್ರಚೂಡ ಹಾಗೂ ನ್ಯಾಯಮೂರ್ತಿ ಎಂಆರ್ ಶಾ ಅವರ ನ್ಯಾಯಪೀಠ ಅಸಮಾಧಾನ ಹೊರಹಾಕಿತ್ತು. ಈ ಹಿನ್ನೆಲೆಯಲ್ಲಿ ತುರ್ತಾಗಿ ನಿನ್ನೆಯಿಂದಲೇ ಎಂಡಿಎಸ್ ಕೌನ್ಸಿಲಿಂಗ್ ಪ್ರಕ್ರಿಯೆ ಆರಂಭಿಸಲಾಗಿದೆ.
OBC Reservation: ಒಬಿಸಿ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣದಲ್ಲಿ ಶೇ. 27ರಷ್ಟು ಮೀಸಲಾತಿ; ಕೇಂದ್ರ ಸರ್ಕಾರ ಘೋಷಣೆ
(NEET MDS Counselling 2021 How to Register in Website and Book a Seat)