AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕ ಹೈಕೋರ್ಟ್​ಗೆ ಹಂಗಾಮಿ ನ್ಯಾಯಮೂರ್ತಿ ಆಗಿ ಸತೀಶ್ ಚಂದ್ರಶರ್ಮಾ ನೇಮಕ

ಹಂಗಾಮಿ‌ ಮುಖ್ಯ ನ್ಯಾಯಮೂರ್ತಿ ಆಗಿ ಸತೀಶ್ ಚಂದ್ರಶರ್ಮಾ ನೇಮಕ ಮಾಡಲಾಗಿದೆ. ಹಂಗಾಮಿ ಸಿಜೆ ನೇಮಿಸಿ ರಾಷ್ಟ್ರಪತಿಗಳಿಂದ ಆದೇಶ ಹೊರಡಿಸಲಾಗಿದೆ.

ಕರ್ನಾಟಕ ಹೈಕೋರ್ಟ್​ಗೆ ಹಂಗಾಮಿ ನ್ಯಾಯಮೂರ್ತಿ ಆಗಿ ಸತೀಶ್ ಚಂದ್ರಶರ್ಮಾ ನೇಮಕ
ಸತೀಶ್ ಚಂದ್ರಶರ್ಮಾ, ಕರ್ನಾಟಕ ಹೈಕೋರ್ಟ್
TV9 Web
| Updated By: ganapathi bhat|

Updated on:Aug 27, 2021 | 5:54 PM

Share

ಬೆಂಗಳೂರು: ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ (Supreme Court Chief Justice) ಒಕಾ‌ ನೇಮಕ ಹಿನ್ನೆಲೆ, ಕರ್ನಾಟಕ ಹೈಕೋರ್ಟ್​ಗೆ (Karnataka High Court) ಹಂಗಾಮಿ ಮುಖ್ಯ ನ್ಯಾಯಮೂರ್ತಿ ನೇಮಕ ಮಾಡಲಾಗಿದೆ. ಹಂಗಾಮಿ‌ ಮುಖ್ಯ ನ್ಯಾಯಮೂರ್ತಿ ಆಗಿ ಸತೀಶ್ ಚಂದ್ರಶರ್ಮಾ ನೇಮಕ ಮಾಡಲಾಗಿದೆ. ಹಂಗಾಮಿ ಸಿಜೆ ನೇಮಿಸಿ ರಾಷ್ಟ್ರಪತಿಗಳಿಂದ ಆದೇಶ ಹೊರಡಿಸಲಾಗಿದೆ.

ತೆಲಂಗಾಣ, ಗುಜರಾತ್, ಸಿಕ್ಕಿಂ ಹಾಗೂ ಕರ್ನಾಟಕಕ್ಕೆ ಹಂಗಾಮಿ ಮುಖ್ಯ ನ್ಯಾಯಾಧೀಶರನ್ನು ರಾಷ್ಟ್ರಪತಿಗಳು ಶುಕ್ರವಾರ (ಆಗಸ್ಟ್ 27) ನೇಂಇಸಿ ಆದೇಶ ಹೊರಡಿಸಿದ್ದಾರೆ. ಈ ಹೈಕೋರ್ಟ್​ಗಳ ಮುಖ್ಯ ನ್ಯಾಯಾಧೀಶರು ಸುಪ್ರೀಂ ಕೋರ್ಟ್​ನ ನ್ಯಾಯಾಧೀಶರಾಗಿ ಅಧಿಕಾರ ಸ್ವೀಕರಿಸಲಿರುವ ಹಿನ್ನೆಲೆಯಲ್ಲಿ ಈ ಆದೇಶ ನೀಡಲಾಗಿದೆ.

ಕರ್ನಾಟಕದ ಹಿರಿಯ ನ್ಯಾಯಾಧೀಶ ಜಸ್ಟೀಸ್ ಸತೀಶ್​ಚಂದ್ರ ಶರ್ಮಾ ಮುಖ್ಯ ನ್ಯಾಯಾಧೀಶರಾಗಿ ಕರ್ನಾಟಕ ಹೈಕೋರ್ಟ್​ನಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಸಿಕ್ಕಿಂ ಹೈಕೋರ್ಟ್​ನ ಹಿರಿಯ ನ್ಯಾಯಾಧೀಶೆ ಜಸ್ಟೀಸ್ ಮೀನಾಕ್ಷಿ ಮದನ್ ರೈ ಜಸ್ಟೀಸ್ ಜಿತೇಂದ್ರ ಕುಮಾರ್ ಮಹೇಶ್ವರಿ ಅವರ ಸ್ಥಾನಕ್ಕೆ ಹಂಗಾಮಿ ಆಗಿ ಕೆಲಸ ಮಾಡಲಿದ್ದಾರೆ. ತೆಲಂಗಾಣ ಹೈಕೋರ್ಟ್​ನ ಹಿರಿಯ ನ್ಯಾಯಾಧೀಶ ಜಸ್ಟೀಸ್ ಮಮಿದನ್ನ ಸತ್ಯ ರತ್ನ ಶ್ರೀ ರಾಮಚಂದ್ರ ರಾವ್ ಅವರು ಜಸ್ಟೀಸ್ ಹಿಮಾ ಕೊಹ್ಲಿ ಸ್ಥಾನದಲ್ಲಿ ಕಾರ್ಯ ಕೈಗೊಳ್ಳಲಿದ್ದಾರೆ.

ಗುಜರಾತ್ ಹೈಕೋರ್ಟ್​ಗೆ ಸಂಬಂಧಿಸಿ ಜಸ್ಟೀಸ್ ವಿನೀತ್ ಕೊಠಾರಿ ಅವರು ಜಸ್ಟೀಸ್ ವಿಕ್ರಾಂತ್ ನಾಥ್ ಸ್ಥಾನ ತುಂಬಲಿದ್ದಾರೆ. ಜಸ್ಟೀಸ್ ಕೊಠಾರಿ ಸಪ್ಟೆಂಬರ್ 2, 2021ರಂದು ನಿವೃತ್ತಿ ಹೊಂದಲಿದ್ದಾರೆ. ಆ ಬಳಿಕ, ಜಸ್ಟೀಸ್ ರಶ್ಮಿನ್ ಮನ್​ಹರ್​ಭಾಯ್ ಛಯ್ಯ ಮುಖ್ಯ ನ್ಯಾಯಾಧೀಶರಾಗಿ ಕೆಲಸ ಮಾಡಲಿದ್ದಾರೆ. ಈ ಬಗ್ಗೆ ಶುಕ್ರವಾರ ಆದೇಶ ಹೊರಡಿಸಲಾಗಿದೆ.

ಇದನ್ನೂ ಓದಿ: ಸುಪ್ರೀಂಕೋರ್ಟ್​ನ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿ ಆಗಲಿದ್ದಾರಾ ಕರ್ನಾಟಕ ಮೂಲದ ನ್ಯಾ. ಬಿ.ವಿ.ನಾಗರತ್ನ?

ಮೇಕೆದಾಟು ಡ್ಯಾಂ ಯೋಜನೆ ವಿರೋಧಿಸಿ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ ತಮಿಳುನಾಡು

Published On - 4:59 pm, Fri, 27 August 21