ಸಾಯಿ ಧರಮ್​ ತೇಜ್​ ಬೈಕ್​ ಅಪಘಾತ: ಅಪಶಕುನ ನುಡಿದ ಹಿರಿಯ ನಟನ ವಿರುದ್ಧ ಭಾರಿ ಆಕ್ರೋಶ

ಸಾಯಿ ಧರಮ್​ ತೇಜ್​ ಬೈಕ್​ ಅಪಘಾತ: ಅಪಶಕುನ ನುಡಿದ ಹಿರಿಯ ನಟನ ವಿರುದ್ಧ ಭಾರಿ ಆಕ್ರೋಶ
ಸಾಯಿ ಧರಮ್​ ತೇಜ್​ ಬೈಕ್​ ಅಪಘಾತ: ಅಪಶಕುನ ನುಡಿದ ಹಿರಿಯ ನಟನ ವಿರುದ್ಧ ಭಾರಿ ಆಕ್ರೋಶ

‘ಈ ಹಿಂದೆಯೂ ಅನೇಕ ಸೆಲೆಬ್ರಿಟಿಗಳು ಬೈಕ್​ ಅಪಘಾತದಲ್ಲಿ ತಮ್ಮ ಆಪ್ತರನ್ನು ಕಳೆದುಕೊಂಡಿದ್ದುಂಟು’ ಎಂದು ನರೇಶ್​ ಹೇಳಿದ್ದಾರೆ. ಸಾಯಿ ಧರಮ್​ ತೇಜ್​ ಚಿಕಿತ್ಸೆ ಪಡೆಯುತ್ತಿರುವಾಗಲೇ ನರೇಶ್​ ಇಂಥ ಹೇಳಿಕೆ ನೀಡಿರುವುದು ಎಲ್ಲರ ಆಕ್ರೋಶಕ್ಕೆ ಕಾರಣ ಆಗಿದೆ.

TV9kannada Web Team

| Edited By: Madan Kumar

Sep 12, 2021 | 8:59 AM

ತೆಲುಗು ಚಿತ್ರರಂಗದ ಯುವ ನಟ ಸಾಯಿ ಧರಮ್​ ತೇಜ್​ ಅವರು ಬೈಕ್​ ಅಪಘಾತಕ್ಕೆ ಒಳಗಾಗಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ಪ್ರಾರ್ಥಿಸುತ್ತಿದ್ದಾರೆ. ಸೆ.10ರಂದು ರಾತ್ರಿ 8 ಗಂಟೆಗೆ ಸ್ಪೋರ್ಟ್ಸ್​ ಬೈಕ್​ನಲ್ಲಿ ತೆರಳುತ್ತಿದ್ದಾಗ ಸಾಯಿ ಧರಮ್​ ತೇಜ್​ ಅಪಘಾತಕ್ಕೆ ಒಳಗಾದರು. ಆ ಬಗ್ಗೆ ಟಾಲಿವುಡ್​ನ ಹಿರಿಯ ನಟ ನರೇಶ್​ ಒಂದು ವಿಡಿಯೋದಲ್ಲಿ ಮಾತನಾಡಿದ್ದಾರೆ. ಆದರೆ ಅವರ ಮಾತುಗಳಿಗೆ ಅನೇಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ. ಇಂಥ ಸೂಕ್ಷ್ಮ ವಿಚಾರಗಳ ಬಗ್ಗೆ ಮಾತನಾಡುವಾಗ ಅವರು ಹೆಚ್ಚು ಎಚ್ಚರಿಕೆ ವಹಿಸಬೇಕು ಎಂದು ಎಲ್ಲರೂ ಛೀಮಾರಿ ಹಾಕುತ್ತಿದ್ದಾರೆ. ಅಷ್ಟಕ್ಕೂ ನರೇಶ್​ ಹೇಳಿದ್ದೇನು?

ಅಪಘಾತ ಆಗುವುದಕ್ಕೂ ಕೆಲವೇ ಗಂಟೆಗಳ ಮುನ್ನ ನರೇಶ್​ ಮನೆಗೆ ಸಾಯಿ ಧರಮ್​ ತೇಜ್​ ಭೇಟಿ ನೀಡಿದ್ದರಂತೆ. ಆ ಕುರಿತು ನರೇಶ್​ ವಿವರಿಸಿದ್ದಾರೆ. ‘ನನ್ನ ಮಗ ನವೀನ್ ಮತ್ತು ಸಾಯಿ ಧರಮ್​ ತೇಜ್​ ಆಪ್ತ ಸ್ನೇಹಿತರು. ನಿನ್ನೆ (ಸೆ.10) ಸಂಜೆ ನಮ್ಮ ಮನೆಯಿಂದಲೇ ಅವರಿಬ್ಬರು ಬೈಕ್​ನಲ್ಲಿ ತೆರಳಿದ್ದರು. ಅವರನ್ನು ತಡೆಯಬೇಕು ಎಂಬ ಮನಸ್ಸಾಯಿತು. ಆದರೆ ಅಷ್ಟರಲ್ಲಾಗಲೇ ಅವರು ಹೊರಟುಹೋಗಿದ್ದರು. ಕೇವಲ ನಾಲ್ಕು ದಿನದ ಹಿಂದೆ ಅವರಿಗೆ ಬೈಕ್​ ರೈಡಿಂಗ್​ ಬಗ್ಗೆ ಬುದ್ಧಿ ಹೇಳಬೇಕು ಅಂದುಕೊಂಡಿದ್ದೆ’ ಎಂದಿದ್ದಾರೆ ನರೇಶ್​.

‘ಮದುವೆ ಮತ್ತು ವೃತ್ತಿಜೀವನದ ಬಗ್ಗೆ ಗಮನ ಹರಿಸಲು ಇದು ಅವರಿಗೆ ಸರಿಯಾದ ಸಮಯ. ಈ ವೇಳೆ ಅವರು ಸ್ಪೋರ್ಟ್ಸ್​ ಬೈಕ್​ ಓಡಿಸುವಂಥ ರಿಸ್ಕ್​ ತೆಗೆದುಕೊಳ್ಳಬಾರದು. ಒಂದು ಅಪಘಾತ ಆದ ಬಳಿಕ ನಾನು ಕೂಡ ಬೈಕ್​ ಓಡಿಸುವುದಿಲ್ಲ ಅಂತ ಅಮ್ಮನ ಬಳಿ ಪ್ರಮಾಣ ಮಾಡಿದ್ದೆ. ಈ ಹಿಂದೆಯೂ ಅನೇಕ ಸೆಲೆಬ್ರಿಟಿಗಳು ಬೈಕ್​ ಅಪಘಾತದಲ್ಲಿ ತಮ್ಮ ಆಪ್ತರನ್ನು ಕಳೆದುಕೊಂಡಿದ್ದುಂಟು. ಅಂಥವರ ಕುಟುಂಬ ಕಣ್ಣೀರಿನಲ್ಲಿದೆ’ ಎಂದು ನರೇಶ್​ ಹೇಳಿದ್ದಾರೆ.

ಸಾಯಿ ಧರಮ್​ ತೇಜ್​ ಅವರು ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗಲೇ ಸತ್ತ ವ್ಯಕ್ತಿಗಳಿಗೆ ಹೋಲಿಸಿ ಅವರ ಬಗ್ಗೆ ನರೇಶ್​ ಮಾತನಾಡಿರುವುದು ಅನೇಕರ ಕೋಪಕ್ಕೆ ಕಾರಣ ಆಗಿದೆ. ನಿರ್ಮಾಪಕ ಬಂಡ್ಲಾ ಗಣೇಶ್​, ಹಿರಿಯ ನಟ ಶ್ರೀಕಾಂತ್​ ಸೇರಿದಂತೆ ಹಲವರು ಈ ಹೇಳಿಕೆಯನ್ನು ಖಂಡಿಸಿದ್ದಾರೆ. ಮಾತನಾಡುವುದಕ್ಕಿಂತ ಮುನ್ನ ನರೇಶ್​ ಎಚ್ಚರಿಕೆ ವಹಿಸಬೇಕು ಎಂದು ಅವರೆಲ್ಲ ಟೀಕಿಸಿದ್ದಾರೆ.

ಇದನ್ನೂ ಓದಿ:

ಡಿಕೆ ರವಿ ಬಗ್ಗೆ 2 ದಿನದ ಹಿಂದೆ ಮಾತಾಡಿದ್ದ ಸಾಯಿ ಧರಮ್​ ತೇಜ್​ಗೆ ಭೀಕರ ಅಪಘಾತ; ಏನಿದು ಕಾಕತಾಳೀಯ?

ಚಿರಂಜೀವಿ ಅಳಿಯ ಸಾಯಿ ಧರಮ್​ ತೇಜ್​ ಆಕ್ಸಿಡೆಂಟ್​ನ ಸಿಸಿಟಿವಿ ದೃಶ್ಯ; ಹೆಲ್ಮೆಟ್​ನಿಂದ ಬಚಾವ್​

Follow us on

Related Stories

Most Read Stories

Click on your DTH Provider to Add TV9 Kannada