AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನರೇಂದ್ರ ಮೋದಿ, ರಜನಿಕಾಂತ್, ಅಕ್ಷಯ್ ಕುಮಾರ್ ನಂತರ ಭಾರತದ ಮತ್ತಿಬ್ಬರು ಸೆಲೆಬ್ರಿಟಿಗಳು ‘ಇನ್​ಟು ದಿ ವೈಲ್ಡ್​​’ನಲ್ಲಿ!

‘ಇನ್​ಟು ದಿ ವೈಲ್ಡ್ ವಿತ್ ಬೇರ್ ಗ್ರಿಲ್ಸ್’ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ, ಅಕ್ಷಯ್ ಕುಮಾರ್, ರಜನಿಕಾಂತ್ ನಂತರ ಭಾರತದ ಮತ್ತಿಬ್ಬರು ಭಾಗವಹಿಸುವುದು ಖಚಿತವಾಗಿದೆ. ಅವರೀರ್ವರೂ ಕೂಡ ಬಾಲಿವುಡ್​ ತಾರೆಯರು ಎಂಬುದು ವಿಶೇಷ.

ನರೇಂದ್ರ ಮೋದಿ, ರಜನಿಕಾಂತ್, ಅಕ್ಷಯ್ ಕುಮಾರ್ ನಂತರ ಭಾರತದ ಮತ್ತಿಬ್ಬರು ಸೆಲೆಬ್ರಿಟಿಗಳು ‘ಇನ್​ಟು ದಿ ವೈಲ್ಡ್​​’ನಲ್ಲಿ!
‘ಇನ್​ಟು ದಿ ವೈಲ್ಡ್ ವಿತ್ ಬೇರ್ ಗ್ರಿಲ್ಸ್’ ಕಾರ್ಯಕ್ರಮದಲ್ಲಿ ರಜನಿಕಾಂತ್ ಹಾಗೂ ನರೇಂದ್ರ ಮೋದಿ
TV9 Web
| Edited By: |

Updated on:Sep 12, 2021 | 10:52 AM

Share

ಡಿಸ್ಕವರಿ ಚಾನೆಲ್​ನಲ್ಲಿ ಪ್ರಸಾರವಾಗುವ ‘ಇನ್​ ಟು ದಿ ವೈಲ್ಡ್ ವಿತ್ ಬೇರ್ ಗ್ರಿಲ್ಸ್’ ಕಾರ್ಯಕ್ರಮ ಹಲವು ಕಾರಣಗಳಿಂದ ಜನಪ್ರಿಯವಾಗಿದೆ. ಅದರಲ್ಲಿ ಭಾಗವಹಿಸುವವರು ಸೆಲೆಬ್ರಿಟಿಗಳು ಎಂಬುದು ಒಂದು ಕಾರಣವಾದರೆ, ಆ ಕಾರ್ಯಕ್ರಮದ ವಿಷಯ ವಸ್ತು ನೋಡುಗರಿಗೆ ಬಹಳ ಆಸಕ್ತಿಯ ವಿಷಯ ಎಂಬುದು ಅದರ ಖ್ಯಾತಿಗೆ ಮತ್ತೊಂದು ಕಾರಣ. ಈಗಾಗಲೇ ಕಾರ್ಯಕ್ರಮದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ, ಬಾಲಿವುಡ್​ನ ಖ್ಯಾತ ನಟ ಅಕ್ಷಯ್ ಕುಮಾರ್ ಹಾಗೂ ಸೂಪರ್​ಸ್ಟಾರ್ ರಜನಿಕಾಂತ್ ಕಾಣಿಸಿಕೊಂಡಿದ್ದಾರೆ. ಮುಂದಿನ ಎಪಿಸೋಡ್​ಗಳಲ್ಲಿ ಮತ್ತಿಬ್ಬರು ಬಾಲಿವುಡ್ ಸೆಲೆಬ್ರಿಟಿಗಳು ಭಾಗವಹಿಸಲಿದ್ದಾರೆ ಎಂದು ಕಾರ್ಯಕ್ರಮವನ್ನು ನಡೆಸಿಕೊಡುವ ಬೇರ್ ಗ್ರಿಲ್ಸ್ ಖಚಿಪಡಿಸಿದ್ದಾರೆ. ನಟ ಅಜಯ್ ದೇವಗನ್ ಅವರಲ್ಲಿ ಓರ್ವರು ಎನ್ನುತ್ತವೆ ಮೂಲಗಳು.

ಅಜಯ ದೇವಗನ್ ಕಾಣಿಸಿಕೊಳ್ಳಲಿದ್ದಾರಾ? ಬಲ್ಲ ಮೂಲಗಳ ಪ್ರಕಾರ ಬಾಲಿವುಡ್​ನ ಖ್ಯಾತ ನಟ ಅಜಯ್ ದೇವಗನ್ ಶೋನಲ್ಲಿ ಕಾಣಿಸಿಕೊಳ್ಳುವುದು ಬಹುತೇಕ ಖಚಿತ ಎನ್ನಲಾಗಿದೆ. ಇಂಡಿಯನ್ ಎಕ್ಸ್​ಪ್ರೆಸ್ ವರದಿ ಮಾಡಿರುವ ಪ್ರಕಾರ, ಅಜಯ್, ಬೇರ್ ಗ್ರಿಲ್ಸ್ ನಡೆಸಿಕೊಡಲಿರುವ ಪ್ರಖ್ಯಾತ ಶೋನಲ್ಲಿ ಭಾಗವಹಿಸಲಿದ್ದಾರೆ. ಅವರು ಭಾಗವಹಿಸಲಿರುವ ಶೋ, ಮಾಲ್ಡೀವ್ಸ್​ನಲ್ಲಿ ಚಿತ್ರೀಕರಣವಾಗಲಿದೆ. ಇದಕ್ಕಾಗಿ ಇಂದು (ಭಾನುವಾರ) ಅಜಯ್, ಮಾಲ್ಡೀವ್ಸ್​ಗೆ ತೆರಳಲಿದ್ದಾರೆ ಎಂದು ವರದಿಯಾಗಿದೆ.

ಕೆಲ ಸಮಯಗಳ ಹಿಂದಷ್ಟೇ ಬಾಲಿವುಡ್​ನ ಖ್ಯಾತ ನಟಿ ದೀಪಿಕಾ ಪಡುಕೋಣೆ ಹಾಗೂ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಈ ರಿಯಾಲಿಟಿ ಶೋನಲ್ಲಿ ಭಾಗವಹಿಸುತ್ತಾರೆ ಎಂದು ಸುದ್ದಿಯಾಗಿತ್ತು. ಆದರೆ ಪ್ರಸ್ತುತ ಬೇರ್ ಗ್ರಿಲ್ಸ್ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಸ್ಟೋರಿಯ ಪ್ರಕಾರ, ಮುಂದಿನ ಎಪಿಸೋಡ್​ನಲ್ಲಿ ಬಾಲಿವುಡ್​ನ ಖ್ಯಾತ ಸೆಲೆಬ್ರಿಟಿಗಳು ಭಾಗವಹಿಸಲಿದ್ದಾರೆ.  ಹಾಗಾದರೆ ದೀಪಿಕಾ ಕೂಡ ಭಾಗವಹಿಸಲಿದ್ದಾರೆಯೇ ಎಂಬ ಚರ್ಚೆ ಮತ್ತೆ ಅಭಿಮಾನಿ ಬಳಗದಲ್ಲಿ ಪ್ರಾರಂಭವಾಗಿದೆ.

bear grylls

ಬೇರ್ ಗ್ರಿಲ್ಸ್ ಹಂಚಿಕೊಂಡಿರುವ ಸ್ಟೋರಿ

‘ಇನ್​ಟು ದಿ ವೈಲ್ಡ್ ವಿತ್ ಬೇರ್ ಗ್ರಿಲ್ಸ್’ ಖ್ಯಾತ ಕಾರ್ಯಕ್ರಮವಾಗಿದ್ದು, ಕಾಡಿನಲ್ಲಿ ಅತ್ಯಂತ ಕಷ್ಟದ ಸಂದರ್ಭದಲ್ಲಿ ಬಚಾವಾಗುವುದು ಹೇಗೆ ಎಂಬ ಪರಿಕಲ್ಪನೆಯಲ್ಲಿ ಮೂಡಿಬರುತ್ತದೆ. ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ, ಅಮೇರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮ, ಖ್ಯಾತ ಟೆನ್ನಿಸ್ ತಾರೆ ರೋಜರ್ ಫೆಡರರ್ ಸೇರಿದಂತೆ ಅನೇಕರು ಬ್ರಿಟನ್ ಮೂಲದ ಬೇರ್ ಗ್ರಿಲ್ಸ್ ನಡೆಸಿಕೊಡುವ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

ಇದನ್ನೂ ಓದಿ:

‘ಕುಡಿಯೋ ಎಂದು ಅಂಬರೀಷ್​ ಯಾವತ್ತೂ ಒತ್ತಾಯ ಮಾಡಲಿಲ್ಲ, ಅದು ದೊಡ್ಡಗುಣ’; ರವಿಚಂದ್ರನ್​

ಭೀಕರ ಬೈಕ್​ ಅಪಘಾತ; ನಟನ 4 ತಪ್ಪುಗಳು ಬಟಾಬಯಲು: ಸಾಯಿ ಧರಮ್​ ತೇಜ್​ ಹೀಗೆ ಮಾಡಬಾರದಿತ್ತು

(Into the wild with bear grylls program will host two Bollywood celebrities in their next)

Published On - 10:36 am, Sun, 12 September 21

Follow Us
Web contact
Web contact

TV9 Kannada

Read More
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು