Vikrant Rona: ವಿಕ್ರಾಂತ್​ ರೋಣ ಗೆಟಪ್​ನಲ್ಲಿ ಕಂಗೊಳಿಸುತ್ತಿರುವ ಗಣೇಶ; ಹೇಗಿದೆ ನೋಡಿ ಸುದೀಪ್​ ಸಿನಿಮಾ ಕ್ರೇಜ್​

Ganesh Chaturthi 2021: ಕಲಾವಿದ ಯಶವಂತ ಅವರ ಕೈಚಳಕದಲ್ಲಿ ‘ವಿಕ್ರಾಂತ್​ ರೋಣ’ ಗೆಟಪ್​ನ ಆಕರ್ಷಕ ಗಣೇಶ ಮೂರ್ತಿಗಳು ಮೂಡಿಬಂದಿವೆ. ಈ ಸಿನಿಮಾ ಮೇಲೆ ಈ ಪರಿ ಕ್ರೇಜ್​ ಹೆಚ್ಚಲು ಹಲವು ಕಾರಣಗಳಿವೆ.

Vikrant Rona: ವಿಕ್ರಾಂತ್​ ರೋಣ ಗೆಟಪ್​ನಲ್ಲಿ ಕಂಗೊಳಿಸುತ್ತಿರುವ ಗಣೇಶ; ಹೇಗಿದೆ ನೋಡಿ ಸುದೀಪ್​ ಸಿನಿಮಾ ಕ್ರೇಜ್​
ವಿಕ್ರಾಂತ್​ ರೋಣ ಗೆಟಪ್​ನಲ್ಲಿ ಕಂಗೊಳಿಸುತ್ತಿರುವ ಗಣೇಶ
Follow us
| Updated By: Digi Tech Desk

Updated on:Sep 10, 2021 | 11:38 AM

ಕೊರೊನಾ ಹಾವಳಿಯಿಂದಾಗಿ ಗಣೇಶೋತ್ಸವದ ಅದ್ದೂರಿತನಕ್ಕೆ ಕೊಂಚ ಹಿನ್ನಡೆ ಆಗಿರಬಹುದು. ಆದರೆ ಜನರ ಉತ್ಸಾಹ ಕುಗ್ಗಿಲ್ಲ. ಪ್ರತಿವರ್ಷದಂತೆ ಈ ವರ್ಷ ಕೂಡ ಗಣೇಶನ ಹಲವು ಬಗೆಯ ವಿಗ್ರಹಗಳು ರಾರಾಜಿಸುತ್ತಿವೆ. ವಿಶೇಷ ಎಂದರೆ, ಸುದೀಪ್​ ನಟನೆಯ ‘ವಿಕ್ರಾಂತ್​ ರೋಣ’ ಸಿನಿಮಾದ ಗೆಟಪ್​ನಲ್ಲೂ ಗಣಪತಿ ಮೂರ್ತಿಗಳನ್ನು ತಯಾರಿಸಲಾಗಿದೆ. ಕಿಚ್ಚನ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಎಷ್ಟು ಕ್ರೇಜ್ ಇದೆ ಎಂಬುದಕ್ಕೆ ಇದು ಲೇಟೆಸ್ಟ್​ ಉದಾಹರಣೆ. ಈಗಾಗಲೇ ಬಿಡುಗಡೆ ಆಗಿರುವ ಪೋಸ್ಟರ್​ಗಳಲ್ಲಿ ಸುದೀಪ್​ ಹೇಗೆ ಪೋಸ್​ ನೀಡಿದ್ದಾರೋ ಅದೇ ರೀತಿಯಲ್ಲಿ ಗಣಪತಿ ಮೂರ್ತಿಗಳನ್ನು ತಯಾರಿಸಲಾಗಿದೆ.

ಸಿನಿಮಾ ಗೆಟಪ್​ಗಳಲ್ಲಿ ಗಣೇಶನ ವಿಗ್ರಹಗಳನ್ನು ತಯಾರಿಸುವುದು ಹೊಸದೇನಲ್ಲ. ಈ ಹಿಂದೆಯೂ ಅಂಥ ಸಂಗತಿಗಳು ನಡೆದಿದ್ದವು. ಆದರೆ ಅಷ್ಟರಮಟ್ಟಿಗೆ ಕ್ರೇಜ್​ ಸೃಷ್ಟಿ ಮಾಡುವ ಸಿನಿಮಾಗಳು ಅಪರೂಪ. ಈಗ ಸುದೀಪ್​ ನಟನೆಯ ‘ವಿಕ್ರಾಂತ್​ ರೋಣ’ ಚಿತ್ರ ಕೂಡ ಅಂಥದ್ದೊಂದು ಹವಾ ಸೃಷ್ಟಿ ಮಾಡಿದೆ. ಕಲಾವಿದ ಯಶವಂತ ಅವರ ಕೈಚಳಕದಲ್ಲಿ ಈ ಮೂರ್ತಿಗಳು ಮೂಡಿಬಂದಿವೆ. ಇದಲ್ಲದೇ ಇನ್ನೂ ಅನೇಕ ಬಗೆಯ ಮೂರ್ತಿಗಳನ್ನು ತಯಾರಿಸಲಾಗಿದೆ. ಕೊರೊನಾ ಲಸಿಕೆ ಹೊತ್ತ ಗಣಪ, ಬಾಡಿ ಬಿಲ್ಡರ್​ ಗಣಪ, ಬೈಕ್ ಸವಾರಿ ಮಾಡುತ್ತಿರುವ ಗಣಪ ಸೇರಿದಂತೆ ಹಲವು ವೇಷಗಳಲ್ಲಿ ಮೂರ್ತಿಗಳು ಕಂಗೊಳಿಸುತ್ತಿವೆ.

‘ವಿಕ್ರಾಂತ್​ ರೋಣ’ ಚಿತ್ರದ ಮೇಲೆ ಈ ಪರಿ ಕ್ರೇಜ್​ ಹೆಚ್ಚಲು ಹಲವು ಕಾರಣಗಳಿವೆ. ಕನ್ನಡ ಮಾತ್ರವಲ್ಲದೆ ಹಿಂದಿ, ತಮಿಳು, ಮಲಯಾಳಂ, ತೆಲುಗು ಮುಂತಾದ ಭಾಷೆಗಳಲ್ಲೂ ಈ ಚಿತ್ರ ರಿಲೀಸ್​ ಆಗಲಿದೆ. ಈಗಾಗಲೇ ಹೊರ ಬಂದಿರುವ ಟೀಸರ್​ಗಳು ಗಮನ ಸೆಳೆದಿವೆ. ಡಿಫರೆಂಟ್​ ಗೆಟಪ್​ನಲ್ಲಿ ಸುದೀಪ್​ ಕಾಣಿಸಿಕೊಳ್ಳಲಿದ್ದಾರೆ. ಆರಂಭದಿಂದಲೂ ಹೊಸಬಗೆಯಲ್ಲಿ ಪ್ರಚಾರ ಮಾಡಲಾಗುತ್ತಿದೆ. ವಿಶ್ವದ ಅತಿ ಎತ್ತರದ ಕಟ್ಟಡ ಬುರ್ಜ್​ ಖಲೀಫಾ ಮೇಲೆ ಟೈಟಲ್​ ಲಾಂಚ್​ ಮಾಡಿದ್ದು ಈ ಚಿತ್ರತಂಡದ ಹೆಚ್ಚುಗಾರಿಕೆ.

‘ರಂಗಿತರಂಗ’ ಖ್ಯಾತಿಯ ನಿರ್ದೇಶಕ ಅನೂಪ್​ ಭಂಡಾರಿ ಅವರು ಈ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಸುದೀಪ್​ ಜೊತೆ ನಿರೂಪ್ ಭಂಡಾರಿ, ನೀತಾ ಅಶೋಕ್​, ಜಾಕ್ವೆಲಿನ್​ ಫರ್ನಾಂಡಿಸ್​ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. ಕಿಚ್ಚನ ಬರ್ತ್​ಡೇ (ಸೆ.2) ಪ್ರಯುಕ್ತ ಹೊಸ ಟೀಸರ್​ ಬಿಡುಗಡೆ ಆಗಿತ್ತು. ಅದಕ್ಕೆ ಎಲ್ಲರಿಂದ ಮೆಚ್ಚುಗೆ ಸಿಕ್ಕಿದೆ. ಈ ಎಲ್ಲ ಕಾರಣಗಳಿಂದಾಗಿ ‘ವಿಕ್ರಾಂತ್ ರೋಣ’ ಬಗ್ಗೆ ಜನರಲ್ಲಿ ಕ್ರೇಜ್ ಹೆಚ್ಚಿದೆ.

ಇದನ್ನೂ ಓದಿ:

ಸುದೀಪ್ ‘ವಿಕ್ರಾಂತ್ ರೋಣ’ಗೆ ಸಿಕ್ತು ಸಲ್ಮಾನ್ ಖಾನ್ ಹೊಗಳಿಕೆ; ಇದು ಕಿಚ್ಚನ ಫ್ಯಾನ್ಸ್ ಖುಷಿಪಡುವ ವಿಚಾರ

ಗಡಂಗ್​ ರಕ್ಕಮ್ಮನಾಗಿ ಚಂದನವನಕ್ಕೆ ಬಂದ ಜಾಕ್ವೆಲಿನ್​ ಫರ್ನಾಂಡಿಸ್​; ವಿಕ್ರಾಂತ್​ ರೋಣದಲ್ಲಿ ವಿಶೇಷ ಪಾತ್ರ

Published On - 8:44 am, Fri, 10 September 21

ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ