‘ನಾನು ಎಲ್ಲೂ ಹಾರಿ ಹೋಗಿಲ್ಲ, ಮುಂಬೈಗೆ ಹೋಗಿದ್ದು ವೈಯಕ್ತಿಕ ಕೆಲಸಕ್ಕಾಗಿ‘; ಆ್ಯಂಕರ್​ ಅನುಶ್ರೀ ಸ್ಪಷ್ಟನೆ

ಅನುಶ್ರೀ ವಿರುದ್ಧ ಬಿಗ್​ ಬಾಸ್​ ಸ್ಪರ್ಧಿ ಹಾಗೂ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್​ ಸಂಬರ್ಗಿ ಸಾಕಷ್ಟು ರೀತಿಯಲ್ಲಿ ಹೇಳಿಕೆಗಳನ್ನು ನೀಡಿದ್ದರು. ಈ ವಿಚಾರದಲ್ಲೂ ಅನುಶ್ರೀ ಸ್ಪಷ್ಟನೆ ನೀಡಿದ್ದಾರೆ.

‘ನಾನು ಎಲ್ಲೂ ಹಾರಿ ಹೋಗಿಲ್ಲ, ಮುಂಬೈಗೆ ಹೋಗಿದ್ದು ವೈಯಕ್ತಿಕ ಕೆಲಸಕ್ಕಾಗಿ‘; ಆ್ಯಂಕರ್​ ಅನುಶ್ರೀ ಸ್ಪಷ್ಟನೆ
ಅನುಶ್ರೀ (ಸಂಗ್ರಹ ಚಿತ್ರ)
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Sep 09, 2021 | 8:28 PM

ಡ್ರಗ್​ ಕೇಸ್​ಗೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಚಾರ್ಜ್​ಶೀಟ್​ ಸಲ್ಲಿಕೆ ಮಾಡಿದ ಬೆನ್ನಲ್ಲೇ ಅನುಶ್ರೀ ಹೆಸರು ಮುನ್ನೆಲೆಗೆ ಬಂದಿದೆ. ಅಲ್ಲದೆ, ಅವರು ಮುಂಬೈಗೆ ಹಾರಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಅನುಶ್ರೀ ಸ್ಪಷ್ಟನೆ ನೀಡಿದ್ದಾರೆ. ‘ಡ್ರಗ್ಸ್​ ಸೇವನೆ, ಖರೀದಿ ಪ್ರಕರಣದಲ್ಲಿ ನನ್ನ ವಿಚಾರಣೆ ನಡೆಸಿರಲಿಲ್ಲ. ಕಳೆದ ವರ್ಷ ವಿಚಾರಣೆಗೆ ಕರೆದಾಗ ಕಾನೂನು ರೀತಿ ಎಲ್ಲವನ್ನೂ ಹೇಳಿದ್ದೇನೆ. ನಾನು ಸೋಮವಾರ ಮುಂಬೈಗೆ ವೈಯಕ್ತಿಕ ಕೆಲಸದ ನಿಮಿತ್ತ ಹೋಗಿದ್ದೆ. ಅಂದೇ ನಾನು ರಿಟರ್ನ್​ ಟಿಕೆಟ್​ ಕೂಡ ಬುಕ್ ಮಾಡಿದ್ದೆ. ನಾನು ಎಲ್ಲೂ ಹಾರಿ ಹೋಗಿರಲಿಲ್ಲ’ ಎಂದಿದ್ದಾರೆ ಅವರು.

ಅನುಶ್ರೀ ವಿರುದ್ಧ ಬಿಗ್​ ಬಾಸ್​ ಸ್ಪರ್ಧಿ ಹಾಗೂ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್​ ಸಂಬರ್ಗಿ ಸಾಕಷ್ಟು ರೀತಿಯಲ್ಲಿ ಹೇಳಿಕೆಗಳನ್ನು ನೀಡಿದ್ದರು. ಈ ವಿಚಾರದಲ್ಲೂ ಅನುಶ್ರೀ ಸ್ಪಷ್ಟನೆ ನೀಡಿದ್ದಾರೆ. ‘ಪ್ರಶಾಂತ್​ ಸಂಬರಗಿ ಅವರು ಕಾನೂನು ಮೂಲಕ ಹೋಗಲಿ. ನಮ್ಮ ಸಮಾಜದಲ್ಲಿ ಕಾನೂನು ಇದೆ. ಎಲ್ಲ ವಿಚಾರಗಳಿಗೆ ಆಗಲೂ ಉತ್ತರ ಕೊಟ್ಟಿದ್ದೇನೆ, ಈಗಲೂ ಉತ್ತರ ಕೊಡುತ್ತಿದ್ದೇನೆ’ ಎಂದಿದ್ದಾರೆ ಅನುಶ್ರೀ.

‘ಆರೋಪಿಗಳು ಏನು ಬೇಕಾದರೂ ಆರೋಪ ಮಾಡಲಿ. ಅದಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ. ವಿಚಾರಣೆ ವೇಳೆ ಕೇಳಿದ ಪ್ರಶ್ನೆಗಳ ಬಗ್ಗೆ ಮಾಹಿತಿ ನೀಡೋಕೆ ಸಾಧ್ಯವಿಲ್ಲ. ನನಗೆ ಯಾವುದೇ ಪ್ರಭಾವಿಗಳ ಬೆಂಬಲವೂ ಇಲ್ಲ. ನಾನು ಕಳೆದ 3 ವರ್ಷದಿಂದ ಇದೇ ಮನೆಯಲ್ಲಿ ಇದ್ದೇನೆ. ಬಾಡಿಗೆ ಬಗ್ಗೆ ನಮ್ಮ ಮನೆ ಮಾಲೀಕರ ಬಳಿ ಕೇಳಬಹುದು. ಮಂಗಳೂರಿನ ಕದ್ರಿಯಲ್ಲಿ ಒಂದು ಮನೆ ಇದೆ. ಆದರೆ ಆ ಮನೆಯ ಮೇಲೆ ಸಾಲವಿದೆ’ ಎಂದು ಅನುಶ್ರೀ ಹೇಳಿದ್ದಾರೆ.

‘ನನ್ನ ಬಗ್ಗೆ ಮಾತಾಡುವ ನೂರಾರು ಜನಕ್ಕೆ ಉತ್ತರಿಸಲು ಸಾಧ್ಯವಿಲ್ಲ. ನನ್ನ ವಿರುದ್ಧ ಮಾಡುತ್ತಿರುವ ಎಲ್ಲ ಆರೋಪಗಳು ಸುಳ್ಳು. ಯಾವಾಗ ವಿಚಾರಣೆಗೆ ಕರೆದರೂ ನಾನು ಹೋಗುತ್ತೇನೆ. ಚಾರ್ಜ್​ಶೀಟ್ ಬಗ್ಗೆ ನನಗೆ ಏನೇನೂ ಗೊತ್ತಿಲ್ಲ. ಕಿಶೋರ್ ಶೆಟ್ಟಿಯನ್ನು 12 ವರ್ಷದ ಹಿಂದೆ ನೋಡಿದ್ದೆ. 13 ವರ್ಷ ಹಿಂದೆ ಅವರು ಕೊರಿಯೋಗ್ರಾಫರ್ ಆಗಿದ್ರು. ಆ ರಿಯಾಲಿಟಿ ಶೋನಲ್ಲಿ ನಾನು ವಿನ್ನರ್ ಆಗಿದ್ದೆ. ಆಗ ಪ್ರಾಕ್ಟೀಸ್​ ಮಾಡಲು ಎಲ್ಲರೂ ಒಂದೇ ಕಡೆ ಇದ್ದೆವು’ ಎಂದು ಅನುಶ್ರೀ ಕಿಶೋರ್​ ಶೆಟ್ಟಿ ಪರಿಚಯ ಆಗಿದ್ದು ಹೇಗೆ ಎಂದು ವಿವರಿಸಿದ್ದಾರೆ.

‘ನಾನು ಸಿಂಪಲ್ ಪರ್ಸನ್. ಯಾವ ಪಬ್​, ಬಾರ್, ಪಾರ್ಟಿಗಳಿಗೆ ಹೋಗಲ್ಲ. ಈ ಎಲ್ಲ ಘಟನೆಗಳಿಂದ ನಾನು ಮತ್ತಷ್ಟು ಗಟ್ಟಿಯಾಗಿದ್ದೇನೆ. ಈ ಬೆಳವಣಿಗೆಯಿಂದ ನನ್ನ ತಾಯಿಗೆ ಏನಾದರೂ ಆದರೆ ಅವರು ಎಷ್ಟೇ ಪ್ರಭಾವಿ ಆಗಿದ್ದರೂ ಸುಮ್ಮನೆ ಬಿಡಲ್ಲ’ ಎಂದು ಎಚ್ಚರಿಸಿದ್ದಾರೆ.

ಇದನ್ನೂ ಓದಿ:ಕೇಸ್​​ ರೀ ಓಪನ್​ ಆದರೆ ಏನೆಲ್ಲಾ ಕಷ್ಟ ಎಂದು ವಕೀಲರಿಂದ ಮಾಹಿತಿ ಪಡೆದ ಅನುಶ್ರೀ; ಪೊಲೀಸರ ನಡೆ ಬಗ್ಗೆಯೂ ಹಲವು ಸಂಶಯ 

ಡ್ರಗ್ಸ್​ ಕೇಸ್​ನಲ್ಲಿ ನಿರೂಪಕಿ ಅನುಶ್ರೀ ಹೆಸರು ಕೈಬಿಟ್ಟಿದ್ದೇಕೆ? ಇಲ್ಲಿದೆ ಸಚಿವ ಮಾಧುಸ್ವಾಮಿ ಪ್ರತಿಕ್ರಿಯೆ

Published On - 7:39 pm, Thu, 9 September 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ