ಡ್ರಗ್ಸ್​ ಕೇಸ್​ನಲ್ಲಿ ನಿರೂಪಕಿ ಅನುಶ್ರೀ ಹೆಸರು ಕೈಬಿಟ್ಟಿದ್ದೇಕೆ? ಇಲ್ಲಿದೆ ಸಚಿವ ಮಾಧುಸ್ವಾಮಿ ಪ್ರತಿಕ್ರಿಯೆ

‘ಪೊಲೀಸರಿಗೆ ತನಿಖೆ ಹೀಗೆ ಮಾಡಿ, ಹಾಗೆ ಮಾಡಿ ಎಂದು ಹೇಳಲು ಆಗಲ್ಲ. ಅವರನ್ನ ಇವರನ್ನ ಫಿಕ್ಸ್ ಮಾಡಿ ಎಂದು ನಾವ್ಯಾರೂ ಹೇಳಲು ಆಗಲ್ಲ’ ಎಂದು ಸಚಿವ ಮಾಧುಸ್ವಾಮಿ ಹೇಳಿಕೆ ನೀಡಿದ್ದಾರೆ.

ಡ್ರಗ್ಸ್​ ಕೇಸ್​ನಲ್ಲಿ ನಿರೂಪಕಿ ಅನುಶ್ರೀ ಹೆಸರು ಕೈಬಿಟ್ಟಿದ್ದೇಕೆ? ಇಲ್ಲಿದೆ ಸಚಿವ ಮಾಧುಸ್ವಾಮಿ ಪ್ರತಿಕ್ರಿಯೆ
ಆ್ಯಂಕರ್​ ಅನುಶ್ರೀ

ಸ್ಯಾಂಡಲ್​ವುಡ್​ ಡ್ರಗ್ಸ್​ ಕೇಸ್​ನಲ್ಲಿ ನಟಿ, ನಿರೂಪಕಿ ಅನುಶ್ರೀ ಹೆಸರು ತಳುಕು ಹಾಕಿಕೊಂಡು ದೊಡ್ಡ ಸುದ್ದಿ ಆಗುತ್ತಿದೆ. ಈ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಅನುಶ್ರೀ ಮೇಲೆ ಆರೋಪ ಇದ್ದರೂ ಕೂಡ ಪೊಲೀಸರು ಅವರ ಹೆಸರನ್ನು ಪ್ರಕರಣದಿಂದ ಕೈಬಿಟ್ಟಿದ್ದೇಕೆ? ಅವರ ಹೇರ್​ ಸ್ಯಾಂಪಲ್​ ಪರೀಕ್ಷೆ ಯಾಕೆ ಮಾಡಿಲ್ಲ ಎಂಬ ಪ್ರಶ್ನೆ ಹಲವರ ಮನದಲ್ಲಿ ಮೂಡಿದೆ. ಅನುಶ್ರೀ ಹೆಸರನ್ನು ಕೈ ಬಿಟ್ಟಿರುವ ಬಗ್ಗೆ ಸಚಿವ ಮಾಧುಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ‘ಸಾಕ್ಷ್ಯಾಧಾರ ಇಲ್ಲದೆ ಅವರ ಹೆಸರು ಬಿಟ್ಟಿದ್ದೇವೆ ಅಂತ ಕಮಿಷನರ್ ಹೇಳಿದಾರೆ’ ಎಂದು ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಮಾಡಾಳು ಗ್ರಾಮದಲ್ಲಿ ಸಚಿವ ಮಾಧುಸ್ವಾಮಿ ಹೇಳಿಕೆ ನೀಡಿದ್ದಾರೆ.

‘ಪೊಲೀಸರಿಗೆ ತನಿಖೆ ಹೀಗೆ ಮಾಡಿ, ಹಾಗೆ ಮಾಡಿ ಎಂದು ಹೇಳಲು ಆಗಲ್ಲ. ಅವರನ್ನ ಇವರನ್ನ ಫಿಕ್ಸ್ ಮಾಡಿ ಎಂದು ನಾವ್ಯಾರೂ ಹೇಳಲು ಆಗಲ್ಲ. ಅವರು ಕೋರ್ಟ್ ಮುಂದೆ ಏನು ಹೇಳ್ತಾರೋ ಅದರ ಮೇಲೆ ವಿಚಾರಣೆ ನಡೆಯುತ್ತೆ. ಅನುಶ್ರಿ ಹೆಸರು ಕೈಬಿಟ್ಟಿರೋದರ ಹಿಂದೆ ಪ್ರಭಾವ ಇದೆ ಅಂತ ನನಗನ್ನಿಸಲ್ಲ’ ಎಂದು ಮಧುಸ್ವಾಮಿ ಹೇಳಿದ್ದಾರೆ.

‘ಚಾರ್ಜ್ ಶೀಟ್​ನಲ್ಲಿ ಅನುಶ್ರೀ ಹೆಸರು ಕೈಬಿಟ್ಟಿದಾರೆ ಅಂತ ನಾವು ಮೂರನೆಯವರು ಹೇಗೆ ಹೇಳೋದು? ಪೊಲೀಸರು ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತಾರೆ. ಒಂದು ವೇಳೆ ಹೆಸರು ಬಿಟ್ಟಿದಾರೆ ಎಂದಾದರೆ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಬಹುದು. ನಾರ್ಕೊಟಿಕ್ ಕೇಸ್​ನಲ್ಲಿ ಪೊಲೀಸರು ಹೀಗೆ ಪ್ರಭಾವದಿಂದ ಹೆಸರು ಕೈಬಿಡ್ತಾರೆ ಅಂತ ನಾನಂದುಕೊಂಡಿಲ್ಲ. ಜನ ಏನೇನೋ‌ ಮಾತಾಡ್ತಾರೆ. ಒಬ್ಬೊಬ್ಬರಿಗೆ ಒಂದೊಂದು ರೀತಿ ಅನ್ನಿಸುತ್ತೆ. ಪ್ರಭಾವ ಇದೆ ಅಂತ ಸುಮ್ಮಸುಮ್ಮನೇ ಚಾರ್ಜ್ ಶೀಟ್​ನಲ್ಲಿ ತರೋಕೆ ಆಗಲ್ಲ’ ಎಂದು ಮಾಧುಸ್ವಾಮಿ ಹೇಳಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಹೆಸರು ಮತ್ತೆ ಚಾಲ್ತಿಗೆ ಬರುತ್ತಿದ್ದಂತೆಯೇ ಅತೀ ಆಪ್ತರನ್ನು ಹೊರತುಪಡಿಸಿ ಬೇರೆ ಯಾರ ಸಂಪರ್ಕಕ್ಕೂ ಸಿಗದ ಅನುಶ್ರೀ ಮುಂಬೈಗೆ ತೆರಳಿದರು ಎನ್ನಲಾಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮ ವಕೀಲರನ್ನು ಸಂಪರ್ಕಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ಪ್ರಕರಣ ಮತ್ತೆ ಮುನ್ನೆಲೆಗೆ ಬಂದರೆ ಏನೆಲ್ಲಾ ಸಮಸ್ಯೆಯಾಗಬಹುದು ಎಂಬ ಮಾಹಿತಿ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ:

ಅನುಶ್ರೀ ಡ್ರಗ್ಸ್ ಕೇಸ್; ಅವರ ವಿರುದ್ಧ ಆರೋಪವಿದ್ದರೂ ಹೇರ್ ಸ್ಯಾಂಪಲ್ ಪರೀಕ್ಷೆ ಏಕೆ ಮಾಡಿಲ್ಲ ಎಂದು ಪ್ರಶ್ನಿಸಿದ ಇಂದ್ರಜಿತ್

ಆ್ಯಂಕರ್ ಅನುಶ್ರೀ ವಿರುದ್ಧ ಸಾಕ್ಷಾಧಾರ ಕೊರತೆಯಿಂದ ಪ್ರಕರಣ ದಾಖಲಿಸಿಲ್ಲ: ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್

Click on your DTH Provider to Add TV9 Kannada