ರಾಮ್​ ಚರಣ್​ ಒಪ್ಪದಿದ್ದರೂ ಲಿಪ್​ ಲಾಕ್ ಮಾಡಿದ್ದ ಸಮಂತಾ? ‘ರಂಗಸ್ಥಲಂ’ ತೆರೆಹಿಂದೆ ಮುತ್ತಿನ ಪ್ರಹಸನ

ರಾಮ್​ ಚರಣ್​ ಒಪ್ಪದಿದ್ದರೂ ಲಿಪ್​ ಲಾಕ್ ಮಾಡಿದ್ದ ಸಮಂತಾ? ‘ರಂಗಸ್ಥಲಂ’ ತೆರೆಹಿಂದೆ ಮುತ್ತಿನ ಪ್ರಹಸನ
ಸಮಂತಾ ಅಕ್ಕಿನೇನಿ, ರಾಮ್​ ಚರಣ್

ಸಮಂತಾ ಜೊತೆ ಲಿಪ್​ ಲಾಕ್​ ದೃಶ್ಯದಲ್ಲಿ ನಟಿಸಲು ರಾಮ್​ ಚರಣ್​ ಹಿಂದೇಟು ಹಾಕಿದ್ದರು. ಒಂದಲ್ಲ, ಎರಡಲ್ಲ, ಮೂರು ಬಾರಿ ತಿಳಿಸಿ ಹೇಳಿದರೂ ಅವರು ಅದಕ್ಕೆ ಒಪ್ಪಲಿಲ್ಲ. ಕಡೆಗೆ ನಿರ್ದೇಶಕರು ಬೇರೆ ಉಪಾಯ ಮಾಡಬೇಕಾಯಿತು.

TV9kannada Web Team

| Edited By: Madan Kumar

Sep 06, 2021 | 4:39 PM

ನಟಿ ಸಮಂತಾ ಅಕ್ಕಿನೇನಿ ಅವರು ಒಂದಿಲ್ಲೊಂದು ಕಾರಣಕ್ಕೆ ಈಗ ಸುದ್ದಿ ಆಗುತ್ತಿದ್ದಾರೆ. ಸಿನಿಮಾದ ಜೊತೆಜೊತೆಗೆ ಅವರ ವೈಯಕ್ತಿಕ ಜೀವನದ ವಿಚಾರಗಳೆಲ್ಲ ಹೊರಬರುತ್ತಿವೆ. ಪತಿ ನಾಗ ಚೈತನ್ಯ ಜೊತೆ ಅವರಿಗೆ ವೈಮನಸ್ಸು ಉಂಟಾಗಿದೆ ಎಂಬ ಗಾಸಿಪ್​ ಕೂಡ ಹಬ್ಬಿದೆ. ಈ ಸಮಯಕ್ಕೆ ಸರಿಯಾಗಿ ಅವರ ಒಂದು ಮುತ್ತಿನ ಕಥೆ ಬಹಿರಂಗ ಆಗಿದೆ. ಅದು ‘ರಂಗಸ್ಥಲಂ’ ಸಿನಿಮಾದ ಶೂಟಿಂಗ್​ ವೇಳೆ ನಡೆದಿದ್ದು. ಆ ವಿಚಾರ ಟಾಲಿವುಡ್​ ಅಂಗಳದಲ್ಲಿ ಜೀವ ಪಡೆದುಕೊಂಡಿದೆ.

‘ರಂಗಸ್ಥಲಂ’ ಸಿನಿಮಾಗೆ ಸುಕುಮಾರ್​ ನಿರ್ದೇಶನ ಮಾಡಿದ್ದರು. ಸಮಂತಾ ಮತ್ತು ರಾಮ್​ ಚರಣ್​ ವೃತ್ತಿಜೀವನಕ್ಕೆ ಆ ಚಿತ್ರದಿಂದ ದೊಡ್ಡ ಮೈಲೇಜ್​ ಸಿಕ್ಕಿತು. ಅದರಲ್ಲಿನ ಒಂದು ಲಿಪ್​ ಲಾಕ್​ ದೃಶ್ಯ ಸಿಕ್ಕಾಪಟ್ಟೆ ಹೈಲೈಟ್ ಆಗಿತ್ತು. ಆ ದೃಶ್ಯದ ಹಿಂದೆ ಒಂದು ಇಂಟರೆಸ್ಟಿಂಗ್​ ಕಥೆ ಇದೆ. ಚಿತ್ರತಂಡ ಈ ಬಗ್ಗೆ ಅಧಿಕೃತವಾಗಿ ಎಲ್ಲಿಯೂ ಬಾಯಿಬಿಟ್ಟಿಲ್ಲವಾದರೂ ರಸವತ್ತಾದ ವಿವರಗಳು ಹರಿದಾಡುತ್ತಿರುವುದು ನಿಜ.

ನಾಯಕ-ನಾಯಕಿ ನಡುವೆ ಪ್ರೀತಿಯನ್ನು ತೋರಿಸಲು ಆ ಲಿಪ್​ ಲಾಕ್​ ದೃಶ್ಯ ನಿರ್ದೇಶಕರಿಗೆ ಮುಖ್ಯವಾಗಿತ್ತು. ಆದರೆ ರಾಮ್​ ಚರಣ್​ ಅವರು ಆ ದೃಶ್ಯದಲ್ಲಿ ನಟಿಸಲು ಹಿಂದೇಟು ಹಾಕಿದರು. ಒಂದಲ್ಲ, ಎರಡಲ್ಲ, ಮೂರು ಬಾರಿ ತಿಳಿಸಿ ಹೇಳಿದರೂ ಅವರು ಅದಕ್ಕೆ ಒಪ್ಪಲಿಲ್ಲ. ರಾಮ್​ ಚರಣ್​ ಪತ್ನಿ ಉಮಾಸನಾ ಅವರಿಗೆ ಇದೆಲ್ಲ ಇಷ್ಟ ಆಗುವುದಿಲ್ಲ ಎಂಬ ಕಾರಣಕ್ಕೆ ಮುತ್ತಿನ ದೃಶ್ಯಕ್ಕೆ ಅವರು ನೋ ಎಂದಿದ್ದರು.

ಇನ್ನೇನು ಚಿತ್ರೀಕರಣ ಮುಗಿಯುತ್ತಿದೆ ಎಂದಾಗ ನಿರ್ದೇಶಕ ಸುಕುಮಾರ್ ಒಂದು ಪ್ಲ್ಯಾನ್​ ಮಾಡಿದರಂತೆ. ‘ನೀವು ಕಿಸ್​ ಮಾಡುವುದು ಬೇಡ. ಸಮಂತಾ ಮತ್ತು ನೀವು ದೂರದಿಂದಲೇ ಲಿಪ್​ ಲಾಕ್​ ಮಾಡಿದಂತೆ ನಟಿಸಿ. ಗ್ರಾಫಿಕ್ಸ್​ ಮೂಲಕ ಅದನ್ನು ಲಿಪ್​ ಲಾಕ್​ ರೀತಿ ತೋರಿಸುತ್ತೇನೆ’ ಎಂದು ನಿರ್ದೇಶಕರು ಹೇಳಿದ ಬಳಿಕ ರಾಮ್​ ಚರಣ್​ ಒಪ್ಪಿಕೊಂಡರಂತೆ. ಆದರೆ ಅದರ ಚಿತ್ರೀಕರಣ ನಡೆಯುವಾಗ ಸಮಂತಾ ನಿಜವಾಗಿಯೇ ಲಿಪ್ ಲಾಕ್​ ಮಾಡಿಬಿಟ್ಟರು ಎಂಬ ಸುದ್ದಿ ಈಗ ಗಾಸಿಪ್​ ಮಂದಿಯ ಬಾಯಲ್ಲಿ ಹರಿದಾಡುತ್ತಿದೆ. ಚಿತ್ರತಂಡದಿಂದ ಯಾರಾದರೊಬ್ಬರು ಈ ಕುರಿತು ಅಧಿಕೃತ ಸ್ಪಷ್ಟನೆ ನೀಡುವವರೆಗೆ ಇದನ್ನು ನಂಬುವುದು ಬಿಡುವುದು ಅವರವರಿಗೆ ಬಿಟ್ಟ ವಿಚಾರ.

ಇದನ್ನೂ ಓದಿ:

ಮಗ-ಸೊಸೆಯ ಡಿವೋರ್ಸ್​ ವದಂತಿಯಿಂದ ಮುಖ್ಯ ನಿರ್ಧಾರ ತೆಗೆದುಕೊಂಡ ನಾಗಾರ್ಜುನ? ಹೆಚ್ಚಿತು ಸಂಶಯದ ಬೆಂಕಿ

ಅಭಿಮಾನಿಗಳ ಬಳಿ ಬಹಿರಂಗ ಕ್ಷಮೆ ಕೇಳಿ, ನಟನೆಯಿಂದ ಬ್ರೇಕ್​ ಪಡೆದ ಸಮಂತಾ ಅಕ್ಕಿನೇನಿ 

Follow us on

Related Stories

Most Read Stories

Click on your DTH Provider to Add TV9 Kannada