ಶರಣ್​ ಡ್ಯಾನ್ಸ್​ ನೋಡಿ ಎಂಜಾಯ್​ ಮಾಡುವವರು ಈ ಮಂಡಿ ಚಿಪ್ಪಿನ ಕಥೆ ಕೇಳಲೇಬೇಕು

ಶರಣ್​ ಡ್ಯಾನ್ಸ್​ ನೋಡಿ ಎಂಜಾಯ್​ ಮಾಡುವವರು ಈ ಮಂಡಿ ಚಿಪ್ಪಿನ ಕಥೆ ಕೇಳಲೇಬೇಕು

TV9 Web
| Updated By: ಮದನ್​ ಕುಮಾರ್​

Updated on: Sep 06, 2021 | 5:09 PM

ಜಿಮ್​ ರವಿ ಹೀರೋ ಆಗಿ ನಟಿಸಿರುವ ‘ಪುರುಷೋತ್ತಮ’ ಸಿನಿಮಾದ ಆಡಿಯೋ ರಿಲೀಸ್​ ಕಾರ್ಯಕ್ರಮಕ್ಕೆ ಶರಣ್​ ಅತಿಥಿಯಾಗಿ ಆಗಮಿಸಿದ್ದರು. ಆ ವೇಳೆ ತಮ್ಮ ಡ್ಯಾನ್ಸ್​ ಜರ್ನಿ ಕುರಿತು ಶರಣ್​ ಮಾತನಾಡಿದರು.

ಕಾಮಿಡಿ ಸಿನಿಮಾಗಳ ಮೂಲಕ ಜನಪ್ರಿಯರಾದ ನಟ ಶರಣ್​ ಅವರು ಓರ್ವ ಅಪ್ಪಟ ಹಾಸ್ಯ ಕಲಾವಿದ. ಅಷ್ಟೇ ಅಲ್ಲ, ಅವರು ಅತ್ಯುತ್ತಮವಾಗಿ ಡ್ಯಾನ್ಸ್​ ಕೂಡ ಮಾಡುತ್ತಾರೆ. ಈಗಾಗಲೇ ಅನೇಕ ಹಾಡುಗಳ ಮೂಲಕ ಅದು ಸಾಬೀತಾಗಿದೆ. ಹಾಗಂತ ಶಾಸ್ತ್ರೀಯವಾಗಿ ಶರಣ್​ ಡ್ಯಾನ್ಸ್​ ಕಲಿತಿಲ್ಲ. ಪ್ರತಿ ಹಾಡಿನ ಶೂಟಿಂಗ್​ ಸಮಯದಲ್ಲೂ ಅವರು ಸಿಕ್ಕಾಪಟ್ಟೆ ಕಷ್ಟಪಡಬೇಕಾಗುತ್ತದೆ. ಆ ಬಗ್ಗೆ ಅವರು ಈಗ ಹೇಳಿಕೊಂಡಿದ್ದಾರೆ. ‘ರ‍್ಯಾಂಬೋ’ ಸಿನಿಮಾದ ‘ಜಯ ಜಯ ಜಾಕೆಟ್ಟು, ಜಯನ್​ ಗಂಡ ರಾಕೆಟ್ಟು..’ ಹಾಡಿನಿಂದ ಅವರ ಮಂಡಿ ಸ್ಪೆಪ್​ ಫೇಮಸ್​ ಆಯಿತು. ಅದಕ್ಕೆ ಕಾರಣ ಏನು ಎಂಬುದನ್ನು ಶರಣ್​ ವಿವರಿಸಿದ್ದಾರೆ.

ಜಿಮ್​ ರವಿ ಹೀರೋ ಆಗಿ ನಟಿಸಿರುವ ‘ಪುರುಷೋತ್ತಮ’ ಸಿನಿಮಾದ ಆಡಿಯೋ ರಿಲೀಸ್​ ಕಾರ್ಯಕ್ರಮಕ್ಕೆ ಶರಣ್​ ಅತಿಥಿಯಾಗಿ ಆಗಮಿಸಿದ್ದರು. ಆ ವೇಳೆ ತಮ್ಮ ಡ್ಯಾನ್ಸ್​ ಜರ್ನಿಯಲ್ಲಿ ಇರುವ ಮಂಡಿ ಚಿಪ್ಪಿನ ಸ್ಟೆಪ್​ ಕುರಿತು ಶರಣ್​ ಮಾತನಾಡಿದರು. ಒಂದುವೇಳೆ ತಾವು ಚೆನ್ನಾಗಿ ಡ್ಯಾನ್ಸ್​ ಮಾಡಿದ್ದರೆ ಅದಕ್ಕೆ ಕೊರಿಯೋಗ್ರಾಫರ್​ಗಳು ನೇರ ಕಾರಣ ಎಂಬುದು ಅವರ ವಿನಯಪೂರ್ವಕ ಮಾತುಗಳು.

ಇದನ್ನೂ ಓದಿ:

ನಮಗೆ ಕೊರೊನಾ​ ಕಲಿಸಿದ ಪಾಠ ಜೀವನಪರ್ಯಂತ ಮರೆಯುವಂತಿಲ್ಲ; ನಟ ಶರಣ್​

ಜೀವನದಲ್ಲಿ ತೆಗೆದುಕೊಂಡ ತಪ್ಪು ನಿರ್ಧಾರಕ್ಕೆ ಮರುಗಿದ ಶರಣ್​ ಸಿನಿಮಾದ ನಟಿ