ಬೇಬಿ ಕಾರ್ನ್ ಕ್ರಿಸ್ಪಿ ಡ್ರೈ; ಮನೆಯಲ್ಲೇ ಸರಳವಾಗಿ ತಯಾರಿಸಬಹುದು

ರುಚಿಕರವಾದ ಪಿಜ್ಜಾ, ಬರ್ಗರ್, ನಿಪ್ಪಟ್ಟು, ಬಜ್ಜಿ​​, ಸ್ಯಾಂಡ್ವಿಚ್ ಇವುಗಳನ್ನು ಬಿಟ್ಟು ಇರುವುದು ಹಲವರಿಗೆ ಕಷ್ಟ ಎನಿಸಬಹುದು. ಆದರೆ ಯೋಚಿಸುವ ಅಗತ್ಯ ಇಲ್ಲ. ಸರಳ ವಿಧಾನದ ಜತೆಗೆ ಇವುಗಳನ್ನು ಮನೆಯಲ್ಲಿಯೇ ಮಾಡಬಹುದು. ಅದರಲ್ಲೂ ಬೇಬಿ ಕಾರ್ನ್ ಕ್ರಿಸ್ಪಿ ಡ್ರೈ ಅನ್ನು 10 ನಿಮಿಷಗಳಲ್ಲಿ ಮನೆಯಲ್ಲಿಯೇ ತಯಾರಿಸಬಹುದು.

ಲಾಕ್​ಡೌನ್​ ಕಾಲಘಟ್ಟದಲ್ಲಿ ಹೊರಗಿನ ತಿಂಡಿಗಳನ್ನು ತಿನ್ನುವುದು ಅಷ್ಟು ಸಮಂಜಸವಲ್ಲ. ಹಾಗಂತ ರುಚಿಕರವಾದ ಪಿಜ್ಜಾ, ಬರ್ಗರ್, ನಿಪ್ಪಟ್ಟು, ಬಜ್ಜಿ​​, ಸ್ಯಾಂಡ್ವಿಚ್ ಇವುಗಳನ್ನು ಬಿಟ್ಟು ಇರುವುದು ಹಲವರಿಗೆ ಕಷ್ಟ ಎನಿಸಬಹುದು. ಆದರೆ ಯೋಚಿಸುವ ಅಗತ್ಯ ಇಲ್ಲ. ಸರಳ ವಿಧಾನದ ಜತೆಗೆ ಇವುಗಳನ್ನು ಮನೆಯಲ್ಲಿಯೇ ಮಾಡಬಹುದು. ಅದರಲ್ಲೂ ಬೇಬಿ ಕಾರ್ನ್ ಕ್ರಿಸ್ಪಿ ಡ್ರೈ ಅನ್ನು 10 ನಿಮಿಷಗಳಲ್ಲಿ ಮನೆಯಲ್ಲಿಯೇ ತಯಾರಿಸಬಹುದು. ಹಾಗಿದ್ದರೆ ಬೇಬಿ ಕಾರ್ನ್ ಕ್ರಿಸ್ಪಿ ಡ್ರೈ ಮಾಡುವುದು ಹೇಗೆ ಎಂದು ತಿಳಿದುಕೊಳ್ಳೋಣ.

ಬೇಬಿ ಕಾರ್ನ್ ಕ್ರಿಸ್ಪಿ ಡ್ರೈ ಮಾಡಲು ಬೇಕಾಗುವ ಸಾಮಾಗ್ರಿಗಳು ಬೇಬಿ ಕಾರ್ನ್, ಈರುಳ್ಳಿ, ಕ್ಯಾಪ್ಸಿಕಂ, ಹಸಿ ಮೆಣಸಿನಕಾಯಿ, ಮೈದಾ ಹಿಟ್ಟು, ಕಾನ್​ಫ್ಲವರ್​, ಶುಂಠಿ- ಬೆಳ್ಳುಳ್ಳಿ ಪೇಸ್ಟ್, ಸೋಯಾ ಸಾಸ್, ವೆನಿಗರ್, ಕರಿಮೆಣಸಿನ ಪುಡಿ, ಉಪ್ಪು.

ಬೇಬಿ ಕಾರ್ನ್ ಕ್ರಿಸ್ಪಿ ಡ್ರೈ ಮಾಡುವ ವಿಧಾನ
ಮೊದಲು ಬೇಬ್ ಕಾರ್ನ್ ಅನ್ನು ಬೇಯಿಸಿಕೊಳ್ಳಿ, ಬಳಿಕ ಅದಕ್ಕೆ ಕಾನ್​ಫ್ಲವರ್, ಮೈದಾ ಹಿಟ್ಟು, ಕರಿಮೆಣಸಿನ ಪುಡಿ, ಉಪ್ಪು ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ಬಳಿಕ ಒಂದು ಪಾತ್ರೆಗೆ ಎಣ್ಣೆ ಹಾಕಿ ಅದು ಕಾದ ಮೇಲೆ ಕಲಸಿದ ಬೇಬಿ ಕಾರ್ನ್ ಕರಿಯಿರಿ.
ಬಳಿಕ ಒಂದು ಪಾತ್ರೆಗೆ ಎಣ್ಣೆ ಹಾಕಿ ಅದು ಕಾದ ಮೇಲೆ ಶುಂಠಿ- ಬೆಳ್ಳುಳ್ಳಿ, ಈರುಳ್ಳಿ, ಕ್ಯಾಪ್ಸಿಕಂ, ಹಸಿ ಮೆಣಸಿನಕಾಯಿ ಹಾಕಿ ಕಲಸಿ. ಬಳಿಕ ಉಪ್ಪು, ಸೋಯಾ ಸಾಸ್, ವೆನಿಗರ್, ಹುರಿದ ಬೇಬಿ ಕಾರ್ನ್ ಹಾಕಿದರೆ ಬಿಸಿ ಬಿಸಿ ಬೇಬಿ ಕಾರ್ನ್ ಕ್ರಿಸ್ಪಿ ಡ್ರೈ ಸವಿಯಲು ಸಿದ್ಧ.

ಇದನ್ನೂ ಓದಿ:
ಗಾರ್ಲಿಕ್ ಚೀಸ್​ಕಾರ್ನ್​ ಸ್ಯಾಂಡ್ವಿಚ್; ಮನೆಯಲ್ಲಿ ಇಂದೇ ಮಾಡಿ ಸವಿಯಿರಿ

ಮನೆಯಲ್ಲೇ ಕೋಲಾರ ಸ್ಟೈಲ್ ಚಿಕನ್ ಧಮ್ ಬಿರಿಯಾನಿ ಮಾಡಿ ಸವಿಯಿರಿ

Click on your DTH Provider to Add TV9 Kannada