ಮಗ-ಸೊಸೆಯ ಡಿವೋರ್ಸ್​ ವದಂತಿಯಿಂದ ಮುಖ್ಯ ನಿರ್ಧಾರ ತೆಗೆದುಕೊಂಡ ನಾಗಾರ್ಜುನ? ಹೆಚ್ಚಿತು ಸಂಶಯದ ಬೆಂಕಿ

TV9 Digital Desk

| Edited By: ಮದನ್​ ಕುಮಾರ್​

Updated on: Sep 06, 2021 | 4:06 PM

ಅಕ್ಕಿನೇನಿ ಕುಟುಂಬದವರು ನೇರವಾಗಿ ಏನನ್ನೂ ಹೇಳಿಲ್ಲವಾದರೂ ಪರೋಕ್ಷವಾಗಿ ಎಲ್ಲವೂ ಗೋಚರಿಸುವಂತಿದೆ. ಸಾರ್ವಜನಿಕವಾಗಿ ಸಮಂತಾ ಮತ್ತು ನಾಗ ಚೈತನ್ಯ ಒಟ್ಟಿಗೆ ಕಾಣಿಸಿಕೊಳ್ಳದೇ ಹಲವು ದಿನಗಳಾಗಿವೆ ಎಂಬುದು ಗಮನಿಸಬೇಕಾದ ಅಂಶ.

ಮಗ-ಸೊಸೆಯ ಡಿವೋರ್ಸ್​ ವದಂತಿಯಿಂದ ಮುಖ್ಯ ನಿರ್ಧಾರ ತೆಗೆದುಕೊಂಡ ನಾಗಾರ್ಜುನ? ಹೆಚ್ಚಿತು ಸಂಶಯದ ಬೆಂಕಿ
ಸಮಂತಾ ಅಕ್ಕಿನೇನಿ, ನಾಗ ಚೈತನ್ಯ, ನಾಗಾರ್ಜುನ
Follow us

2017ರಲ್ಲಿ ಮದುವೆಯಾದ ನಟಿ ಸಮಂತಾ ಅಕ್ಕಿನೇನಿ ಮತ್ತು ಅಕ್ಕಿನೇನಿ ನಾಗ ಚೈತನ್ಯ ಅವರ ಸಂಸಾರದಲ್ಲಿ ಈಗ ಏನೋ ಕಿರಿಕ್​ ಎದುರಾಗಿದೆ ಎಂಬ ಅನುಮಾನ ಮೂಡಿದೆ. ಆ ಅನುಮಾನಕ್ಕೆ ಪೂರಕ ಆಗುವಂತಹ ಅನೇಕ ಘಟನೆಗಳು ಮತ್ತೆ ಮತ್ತೆ ನಡೆಯುತ್ತಿವೆ. ಕೆಲವೇ ದಿನಗಳ ಹಿಂದೆ ಸಮಂತಾ ಅವರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಹೆಸರಿನ ಜೊತೆ ಇದ್ದ ಅಕ್ಕಿನೇನಿ ಎಂಬ ಸರ್​ನೇಮ್​ ಅನ್ನು ತೆಗೆದು ಹಾಕಿದ ನಂತರ ಈ ಸಂಶಯ ಹುಟ್ಟುಕೊಂಡಿತ್ತು. ಆ ಬಗ್ಗೆ ಕುಟುಂಬದವರು ಏನೂ ಪ್ರತಿಕ್ರಿಯೆ ನೀಡಿಲ್ಲ. ಆದರೆ ಸಮಂತಾ ಮಾವ ಅಕ್ಕಿನೇನಿ ನಾಗಾರ್ಜುನ ಅವರು ಇತ್ತೀಚೆಗೆ ತೆಗೆದುಕೊಂಡ ಒಂದು ನಿರ್ಧಾರದಿಂದಾಗಿ ಅನುಮಾನ ಇನ್ನಷ್ಟು ಹೆಚ್ಚುವಂತಾಗಿದೆ.

ನಾಗಾರ್ಜುನ ಅವರು ಬಿಗ್​ ಬಾಸ್​ ತೆಲುಗು ಸೀಸನ್​ 5ಕ್ಕೆ ನಿರೂಪಣೆ ಮಾಡುತ್ತಿದ್ದಾರೆ. ಸೆ.5ರಂದು ಈ ಶೋ ಅದ್ದೂರಿಯಾಗಿ ಶುರುವಾಗಿದೆ. ಪ್ರತಿಬಾರಿ ಬಿಗ್​ ಬಾಸ್​ ಲಾಂಚ್​ ಆಗುವುದಕ್ಕೂ ಮುನ್ನ ಒಂದು ಸುದ್ದಿಗೋಷ್ಠಿ ನಡೆಸುವುದು ವಾಡಿಕೆ. ಆದರೆ ಈ ಬಾರಿ ಆ ಸಂಪ್ರದಾಯಕ್ಕೆ ನಾಗಾರ್ಜುನ ಬ್ರೇಕ್​ ಹಾಕಿದ್ದಾರೆ. ಅದರಿಂದಾಗಿ ಹಲವು ಬಗೆಯ ವದಂತಿಗಳು ಜೀವ ಪಡೆದುಕೊಂಡಿವೆ.

ಒಂದು ವೇಳೆ ಈ ಸಂದರ್ಭದಲ್ಲಿ ನಾಗಾರ್ಜುನ ಸುದ್ದಿಗೋಷ್ಠಿ ನಡೆಸಿದರೆ ಬಿಗ್​ ಬಾಸ್​ಗಿಂತಲೂ ಹೆಚ್ಚಾಗಿ ಅವರ ಮಗ-ಸೊಸೆಯ ವಿಚ್ಛೇದನದ ವದಂತಿ ಕುರಿತು ಮಾಧ್ಯಮದವರು ಪ್ರಶ್ನೆಗಳನ್ನು ಕೇಳುತ್ತಾರೆ ಎಂಬುದು ಖಚಿತ. ಹಾಗಾಗಿ ಅಂಥ ಪ್ರಸಂಗವನ್ನು ತಪ್ಪಿಸುವ ಸಲುವಾಗಿಯೇ ಅವರು ಬಿಗ್​ ಬಾಸ್​ ಸುದ್ದಿಗೋಷ್ಠಿಯನ್ನು ಕ್ಯಾನ್ಸಲ್​ ಮಾಡಿದ್ದಾರೆ ಎಂದು ಟಾಲಿವುಡ್​ ಅಂಗಳದಲ್ಲಿ ಸುದ್ದಿ ಹಬ್ಬಿದೆ.

ಇಷ್ಟೆಲ್ಲ ಗುಸುಗುಸು ಹರಿದಾಡುತ್ತಿದ್ದರೂ ಕೂಡ ಸಮಂತಾ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆ.29ರಂದು ನಾಗಾರ್ಜುನ ಜನ್ಮದಿನ. ಅಂದು ಕೂಡ ಸಮಂತಾ ಅವರು ಕುಟುಂಬದವರ ಜೊತೆ ಕಾಣಿಸಿಕೊಳ್ಳಲಿಲ್ಲ. ನಯನತಾರಾ ಪ್ರಿಯಕರ ವಿಘ್ನೇಶ್​ ಶಿವನ್​ ನಿರ್ದೇಶನ ಮಾಡುತ್ತಿರುವ ಹೊಸ ಸಿನಿಮಾದಲ್ಲಿ ಸಮಂತಾ ನಟಿಸುತ್ತಿದ್ದು, ಆ ಚಿತ್ರದ ಶೂಟಿಂಗ್​ ಸಲುವಾಗಿ ಅವರು ಮಾವನ ಬರ್ತ್​ಡೇ ಸೆಲೆಬ್ರೇಷನ್​ಗೆ ಚಕ್ಕರ್​ ಹಾಕಿದ್ದಾರೆ ಎನ್ನಲಾಗಿದೆ. ನೇರವಾಗಿ ಈ ಕುಟುಂಬದವರು ಏನನ್ನೂ ಹೇಳಿಲ್ಲವಾದರೂ ಪರೋಕ್ಷವಾಗಿ ಎಲ್ಲವೂ ಗೋಚರಿಸುವಂತಿದೆ. ಸಾರ್ವಜನಿಕವಾಗಿ ಸಮಂತಾ ಮತ್ತು ನಾಗಚೈತನ್ಯ ಒಟ್ಟಿಗೆ ಕಾಣಿಸಿಕೊಳ್ಳದೇ ಹಲವು ದಿನಗಳಾಗಿವೆ ಎಂಬುದು ಗಮನಿಸಬೇಕಾದ ಅಂಶ.

ಇದನ್ನೂ ಓದಿ:

ಅಭಿಮಾನಿಗಳ ಬಳಿ ಬಹಿರಂಗ ಕ್ಷಮೆ ಕೇಳಿ, ನಟನೆಯಿಂದ ಬ್ರೇಕ್​ ಪಡೆದ ಸಮಂತಾ ಅಕ್ಕಿನೇನಿ 

ಸಖತ್​ ಬೇಡಿಕೆ ಇದ್ದರೂ ಸಮಂತಾ ಯಾಕಿನ್ನೂ ಬಾಲಿವುಡ್​ಗೆ ಕಾಲಿಟ್ಟಿಲ್ಲ? ನಾಗಾರ್ಜುನ ಸೊಸೆಗೆ ಕಾಡುತ್ತಿದೆ ಭಯ

ತಾಜಾ ಸುದ್ದಿ

Related Stories

Click on your DTH Provider to Add TV9 Kannada