ಮೊದಲ ಸಿನಿಮಾದಲ್ಲೇ ಮಿಂಚಿದ ಹರ್ಭಜನ್ ಸಿಂಗ್; ಆ್ಯಕ್ಷನ್ ದೃಶ್ಯಗಳಿಗೆ ಫ್ಯಾನ್ಸ್ ಫಿದಾ
ಟ್ರೇಲರ್ನಲ್ಲಿ ಕಾಲೇಜ್ ಜೀವನವನ್ನು ಅದ್ಭುತವಾಗಿ ಕಟ್ಟಿಕೊಟ್ಟಿರುವುದು ಕಂಡು ಬರುತ್ತಿದೆ. ಇನ್ನು, ಶೀರ್ಷಿಕೆಗೆ ತಕ್ಕಂತೆ ಗೆಳೆತನದ ಬಗ್ಗೆ ಸಾಕಷ್ಟು ವಿಚಾರಗಳನ್ನು ಸಿನಿಮಾದಲ್ಲಿ ಹೇಳಲಾಗಿದೆ.

ಟೀಮ್ ಇಂಡಿಯಾ ಸ್ಪಿನ್ನರ್ ಹರ್ಭಜನ್ ಸಿಂಗ್ ಈಗ ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದಾರೆ. ಅವರ ನಟನೆಯ ಮೊದಲ ಸಿನಿಮಾ ‘ಫ್ರೆಂಡ್ಶಿಪ್’ ರಿಲೀಸ್ಗೆ ರೆಡಿ ಇದೆ. ಸದ್ಯ, ಸಿನಿಮಾದ ಟ್ರೇಲರ್ ರಿಲೀಸ್ ಆಗಿದ್ದು ಭಜ್ಜಿ ಆ್ಯಕ್ಷನ್ ದೃಶ್ಯಗಳಲ್ಲಿ ಮಿಂಚಿದ್ದಾರೆ. ಈ ಸಿನಿಮಾದಲ್ಲಿ ಸೋಶಿಯಲ್ ಮೆಸೇಜ್ ಕೂಡ ಇದೆ ಅನ್ನೋದು ಟ್ರೇಲರ್ನಲ್ಲಿ ಕಂಡು ಬಂದಿದೆ. ಸದ್ಯ, ಟ್ರೇಲರ್ ನೋಡಿದ ಅನೇಕರು ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ.
ಸಿನಿಮಾದ ಕಥೆ ಮೆಕಾನಿಕಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯಲಿದೆ. ಈ ಸಿನಿಮಾದಲ್ಲಿ ಕ್ರೈಮ್ ಇದೆ, ಆ್ಯಕ್ಷನ್ ಇದೆ. ಖ್ಯಾತ ನಟ ಅರ್ಜುನ್ ಸರ್ಜಾ ಕೂಡ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಕೂಡ ಆ್ಯಕ್ಷನ್ನಲ್ಲಿ ಮಿಂಚಿದ್ದಾರೆ ಹರ್ಭಜನ್ ಕ್ರಿಕೆಟ್ ಹಿನ್ನೆಲೆಯವರು. ಅವರು ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂದರೆ, ಕ್ರಿಕೆಟ್ ಇರಲೇಬೇಕು. ಅಂತೆಯೇ ಈ ಚಿತ್ರದಲ್ಲಿ ಕ್ರಿಕೆಟ್ ಮ್ಯಾಚ್ ಕೂಡ ಪ್ರಮುಖ ಎನಿಸಿಕೊಂಡಿದೆ.
ಟ್ರೇಲರ್ನಲ್ಲಿ ಕಾಲೇಜ್ ಜೀವನವನ್ನು ಅದ್ಭುತವಾಗಿ ಕಟ್ಟಿಕೊಟ್ಟಿರುವುದು ಕಂಡು ಬರುತ್ತಿದೆ. ಇನ್ನು, ಶೀರ್ಷಿಕೆಗೆ ತಕ್ಕಂತೆ ಗೆಳೆತನದ ಬಗ್ಗೆ ಸಾಕಷ್ಟು ವಿಚಾರಗಳನ್ನು ಸಿನಿಮಾದಲ್ಲಿ ಹೇಳಲಾಗಿದೆ. ‘ತಮಿಳು ಬಿಗ್ ಬಾಸ್ 3’ ಖ್ಯಾತಿಯ ಲೋಸ್ಲಿಯಾ ಈ ಸಿನಿಮಾದ ನಾಯಕಿ.
ಜಾನ್ ಪೌಲ್ ರಾಜ್ ಮತ್ತು ಶ್ಯಾಮ್ ಸೂರ್ಯ ಈ ಸಿನಿಮಾವನ್ನು ಒಟ್ಟಾಗಿ ನಿರ್ದೇಶನ ಮಾಡಿದ್ದಾರೆ. ಡಿ.ಎಂ. ಉಪಾಧ್ಯಾಯ ಕುಮಾರ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಸಂಥ ಕುಮಾರ್ ಛಾಯಾಗ್ರಹಣ ಚಿತ್ರಕ್ಕಿದೆ. ಸೆಪ್ಟೆಂಬರ್ 17ರಂದು ಸಿನಿಮಾ ತೆರೆಗೆ ಬರುತ್ತಿದೆ. ತಮಿಳು ಭಾಷೆಯಲ್ಲಿ ಸಿನಿಮಾ ಸಿದ್ಧಗೊಂಡಿದ್ದು, ಇದಲ್ಲದೆ, ಇನ್ನೂ ಕೆಲ ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರುತ್ತಿದೆ. ಹರ್ಭಜನ್ ಮೊದಲ ಸಿನಿಮಾ ಆದ ಕಾರಣ ಸಿನಿ ಪ್ರಿಯರು ಹಾಗೂ ಕ್ರಿಕೆಟ್ ಪ್ರಿಯರಿಗೆ ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ.
ಇದನ್ನೂ ಓದಿ: ಭಜ್ಜಿ ಕುಟುಂಬಕ್ಕೆ ಹೊಸ ಅತಿಥಿಯ ಆಗಮನ; ಹರ್ಭಜನ್ ಸಿಂಗ್-ಗೀತಾ ಬಸ್ರಾ ದಂಪತಿಗೆ ಗಂಡು ಮಗು ಜನನ
ಭಾರತ ಟಿ-20 ವಿಶ್ವಕಪ್ ಗೆಲ್ಲಬೇಕಾದರೆ ಇಂಥಹ ಆಟಗಾರರು ತಂಡದಲ್ಲಿರಬೇಕು ಎಂದ ಹರ್ಭಜನ್




