ಬಿಗ್ ಬಾಸ್ಗೆ ಎದುರಾಯ್ತು ಸಂಕಷ್ಟ; ಮೊದಲ ದಿನವೇ ಶೋ ನೋಡಲ್ಲ ಎಂದ ವೀಕ್ಷಕರು
19 ಸ್ಪರ್ಧಿಗಳು ಮನೆ ಒಳಗೆ ಹೋಗಿದ್ದಾರೆ ಅನ್ನೋದು ನಿಜ. ಆದರೆ, ಇವರಲ್ಲಿ ಕೆಲವೇ ಕೆಲವು ಮಂದಿ ಮಾತ್ರ ಗೊತ್ತಿರುವವರು. ಉಳಿದವರೆಲ್ಲ ಹೊಸ ಮುಖಗಳೇ. ಇದರಿಂದ ವೀಕ್ಷಕರು ಬೇಸರಗೊಂಡಿದ್ದಾರೆ.
‘ತೆಲುಗು ಬಿಗ್ ಬಾಸ್ ಸೀಸನ್ 5’ ಭಾನುವಾರದಿಂದ (ಸೆಪ್ಟೆಂಬರ್ 5) ಆರಂಭಗೊಂಡಿದೆ. ಸ್ಟಾರ್ ಮಾ ವಾಹಿನಿಯಲ್ಲಿ ಈ ಶೋ ಪ್ರಸಾರ ಆರಂಭಿಸಿದೆ. ಆದರೆ, ಮೊದಲ ದಿನದಿಂದಲೇ ವಾಹಿನಿಯವರಿಗೆ ಸಾಕಷ್ಟು ಅಡೆತಡೆ ಆರಂಭವಾಗಿದೆ. ಅಷ್ಟೇ ಅಲ್ಲ, ವೀಕ್ಷಕರನ್ನು ಹೇಗೆ ಸೆಳೆಯಬೇಕು ಎನ್ನುವ ಚಿಂತೆ ಕಾಡುತ್ತಿದೆ.
ಅಕ್ಕಿನೇನಿ ನಾಗಾರ್ಜುನ ಅವರು ‘ಬಿಗ್ ಬಾಸ್ 5’ ನಡೆಸಿಕೊಡುತ್ತಿದ್ದಾರೆ. ಬರೋಬ್ಬರಿ 19 ಸ್ಪರ್ಧಿಗಳು ಮನೆ ಒಳಗೆ ಎಂಟ್ರಿ ಕೊಟ್ಟಿದ್ದಾರೆ. ಸಿನಿಮಾ ಮತ್ತು ಕಿರುತೆರೆ ಸೆಲೆಬ್ರಿಟಿಗಳ ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿರುವ ವ್ಯಕ್ತಿಗಳಿಗೂ ಈ ಬಾರಿ ತೆಲುಗು ಬಿಗ್ ಬಾಸ್ ಚಾನ್ಸ್ ನೀಡಿದೆ. ಆದರೆ, ಸೀಸನ್ 4ರಲ್ಲಿ ಮಾಡಿದ ತಪ್ಪು ಮತ್ತೆ ಮರುಕಳಿಸಿದೆ. 19 ಸ್ಪರ್ಧಿಗಳು ಮನೆ ಒಳಗೆ ಹೋಗಿದ್ದಾರೆ ಅನ್ನೋದು ನಿಜ. ಆದರೆ, ಇವರಲ್ಲಿ ಕೆಲವೇ ಕೆಲವು ಮಂದಿ ಮಾತ್ರ ಗೊತ್ತಿರುವವರು. ಉಳಿದವರೆಲ್ಲ ಹೊಸ ಮುಖಗಳೇ. ಇದರಿಂದ ವೀಕ್ಷಕರು ಬೇಸರಗೊಂಡಿದ್ದಾರೆ. ಅಲ್ಲದೆ, ನಾವು ಶೋ ನೋಡುವುದಿಲ್ಲ. ಶೋ ಈಗಲೇ ನಿಲ್ಲಿಸಿ ಎಂದು ಮೊದಲ ದಿನವೇ ಸೋಶಿಯಲ್ ಮೀಡಿಯಾದಲ್ಲಿ ಆಗ್ರಹಿಸಿದ್ದಾರೆ.
ಇಂಡಿಯನ್ ಐಡಲ್ ವಿನ್ನರ್ ಶ್ರೀರಾಮ್ ಚಂದ್ರ, ಆ್ಯಂಕರ್ ರವಿ, ಆ್ಯಂಕರ್ ಲೊಬೊ ಮತ್ತು ಶಣ್ಮುಖ್ ಜಸ್ವಂತ್ ಮಾತ್ರ ಪರಿಚಯ ಇರುವ ಮುಖಗಳು. ಉಳಿದಂತೆ ಎಲ್ಲರೂ ಅಷ್ಟಾಗಿ ಪರಿಚಯವಿಲ್ಲ. ಇದು ವೀಕ್ಷಕರಿಗೆ ಬೇಸರತರಿಸಿದೆ.
ಇನ್ನು, ಇಲ್ಲಿ ಮತ್ತೊಂದು ಸಮಸ್ಯೆ ಇದೆ. ಇದೇ ತಿಂಗಳಿನಿಂದ ಐಪಿಎಲ್, ಅದಾದ ನಂತರದಲ್ಲಿ ಟಿ20 ವರ್ಲ್ಡ್ಕಪ್ ಆರಂಭವಾಗಲಿದೆ. ಈ ಸಂದರ್ಭದಲ್ಲಿ ಬಿಗ್ ಬಾಸ್ ನೋಡುವವರ ಸಂಖ್ಯೆ ಕಡಿಮೆ. ಟಿಆರ್ಪಿ ದೃಷ್ಟಿಯಲ್ಲಿ ಬಿಗ್ ಬಾಸ್ಗೆ ಇದು ಕೂಡ ಅಡೆತಡೆಯೇ.
ವಾಹಿನಿಯವರಿಗೆ ಈ ಬಗ್ಗೆ ಅರಿವಾಗಿದೆ. ಆದರೆ, ಅವರಿಗೆ ಬೇರೆ ಆಯ್ಕೆ ಇಲ್ಲ. ಬಿಗ್ ಬಾಸ್ ಮನೆಯಲ್ಲಿ ಒಂದಷ್ಟು ವಿವಾದಗಳು ಹುಟ್ಟಿಕೊಂಡರೆ ಖಂಡಿತವಾಗಿಯೂ ಹೆಚ್ಚು ವೀಕ್ಷಕರನ್ನು ಸೆಳೆಯೋಕೆ ಸಾಧ್ಯವಾಗುತ್ತದೆ. ಇಲ್ಲವಾದಲ್ಲಿ, ಶೋ ಸಂಕಷ್ಟ ಎದುರಿಸೋದು ಪಕ್ಕಾ ಎನ್ನುವ ಮಾತು ಕೇಳಿ ಬಂದಿದೆ.
ಇದನ್ನೂ ಓದಿ: ಹೊಸ ಬಿಗ್ ಬಾಸ್ ಆರಂಭಕ್ಕೂ ಮುನ್ನವೇ ಲೀಕ್ ಆಯ್ತು 15 ಸ್ಪರ್ಧಿಗಳ ಹೆಸರು; ಈ ಬಾರಿ ಯಾರಿಗೆಲ್ಲ ಚಾನ್ಸ್?