ಸಿಕ್ಕಾಪಟ್ಟೆ ವೈರಲ್​ ಆಗ್ತಿದೆ ಮಂಜು-ದಿವ್ಯಾ ಫೋಟೋ; ಬಿಗ್​ ಬಾಸ್​ ಬಳಿಕ ಏನಿದು ಕಹಾನಿ?

ಗಣೇಶ ಚತುರ್ಥಿ ಆಚರಣೆಗಾಗಿ ಎಲ್ಲರೂ ಟ್ರೆಡಿಷನಲ್​ ಉಡುಗೆ ಧರಿಸಿ ಮಿಂಚಿದ್ದಾರೆ. ಈ ವೇಳೆ ಮಂಜು ಪಾವಗಡ ಮತ್ತು ದಿವ್ಯಾ ಸುರೇಶ್​ ಜೋಡಿ ಹೆಚ್ಚು ಗಮನ ಸೆಳೆದಿದೆ.

ಸಿಕ್ಕಾಪಟ್ಟೆ ವೈರಲ್​ ಆಗ್ತಿದೆ ಮಂಜು-ದಿವ್ಯಾ ಫೋಟೋ; ಬಿಗ್​ ಬಾಸ್​ ಬಳಿಕ ಏನಿದು ಕಹಾನಿ?
ಮಂಜು ಪಾವಗಡ, ದಿವ್ಯಾ ಸುರೇಶ್
TV9kannada Web Team

| Edited By: Madan Kumar

Sep 07, 2021 | 9:17 AM

ಬಿಗ್​ ಬಾಸ್​ ಕನ್ನಡ ಸೀಸನ್​ 8ರಲ್ಲಿ ಮಂಜು ಪಾವಗಡ ಮತ್ತು ದಿವ್ಯಾ ಸುರೇಶ್​ ಎಷ್ಟು ಆಪ್ತವಾಗಿದ್ದರು ಎಂಬುದನ್ನು ಹೊಸದಾಗಿ ಹೇಳಬೇಕಿಲ್ಲ. ಅವರಿಬ್ಬರ ನಡುವಿನ ಸ್ನೇಹ-ಸಂಬಂಧವನ್ನು ಪ್ರೇಕ್ಷಕರು ನೂರಾರು ದಿನಗಳ ಕಾಲ ನೋಡಿದ್ದಾರೆ. ಬಿಗ್​ ಬಾಸ್​ ಶೋಗಾಗಿ ಮಾತ್ರ ಅವರು ಪರಸ್ಪರ ಕ್ಲೋಸ್​ ಆಗಿದ್ದಾರೆ ಎಂದು ಕೆಲವರು ಟೀಕೆ ಮಾಡಿದ್ದು ಕೂಡ ಉಂಟು. ಆದರೆ ಆ ಟೀಕೆಯನ್ನು ಮಂಜು ಮತ್ತು ದಿವ್ಯಾ ಸುರೇಶ್​ ಸುಳ್ಳಾಗಿಸಿದ್ದಾರೆ. ಅಂದರೆ, ಬಿಗ್​ ಬಾಸ್​ನ ಆಚೆಗೂ ಕೂಡ ಅವರು ತಮ್ಮ ಬಾಂಧವ್ಯವನ್ನು ಮುಂದುವರಿಸಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಕೆಲವು ಫೋಟೋಗಳು ಈಗ ಸಖತ್​ ವೈರಲ್​ ಆಗುತ್ತಿವೆ.

ಪಕ್ಕಾ ಟ್ರೆಡಿಷನಲ್​ ಉಡುಗೆಯಲ್ಲಿ ಮಂಜು ಪಾವಗಡ ಮತ್ತು ದಿವ್ಯಾ ಸುರೇಶ್​ ಕಾಣಿಸಿಕೊಂಡಿದ್ದಾರೆ. ಮಂಜು ಭುಜದ ಮೇಲೆ ಕೈಯಿಟ್ಟು ಪೋಸ್​ ನೀಡಿರುವ ದಿವ್ಯಾ ನಗು ಬೀರಿದ್ದಾರೆ. ಈ ಫೋಟೋವನ್ನು ಅವರ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಹಬ್ಬ ಮಾಡುತ್ತಿದ್ದಾರೆ. ಅಂದಹಾಗೆ, ಇದು ಕಲರ್ಸ್​ ಕನ್ನಡ ವಾಹಿನಿ ಆಯೋಜಿಸಿದ್ದ ಗಣೇಶೋತ್ಸವ ಕಾರ್ಯಕ್ರಮದ ವೇಳೆ ಕ್ಲಿಕ್ಕಿಸಿದ ಫೋಟೋ.

ಬಿಗ್​ ಬಾಸ್​ ಸ್ಪರ್ಧಿಗಳನ್ನೆಲ್ಲ ಜೊತೆ ಸೇರಿಸಿ, ಕಲರ್ಸ್​ ಕನ್ನಡ ವಾಹಿನಿಯು ಗಣೇಶೋತ್ಸವ ಆಚರಿಸಿದೆ. ಅದಕ್ಕೆ ‘ಬಿಗ್​ ಗಣೇಶೋತ್ಸವ’ ಎಂದು ಹೆಸರಿಡಲಾಗಿದೆ. ಹಬ್ಬದ ಆಚರಣೆಗಾಗಿ ಎಲ್ಲರೂ  ಟ್ರೆಡಿಷನಲ್​ ಉಡುಗೆ ಧರಿಸಿ ಮಿಂಚಿದ್ದಾರೆ. ಈ ವೇಳೆ ಮಂಜು ಪಾವಗಡ ಮತ್ತು ದಿವ್ಯಾ ಸುರೇಶ್​ ಜೋಡಿ ಹೆಚ್ಚು ಗಮನ ಸೆಳೆದಿದೆ. ವೇದಿಕೆ ಮೇಲೆ ಭರಪೂರ ಮನರಂಜನೆ ಕೂಡ ನೀಡಲಾಗಿದೆ. ಮಂಜು ಪಾವಗಡ ಎಂದಿನಂತೆ ಕಾಮಿಡಿ ಕಚಗುಳಿ ಇಟ್ಟಿದ್ದಾರೆ. ಈ ಕಾರ್ಯಕ್ರಮ ಶುಕ್ರವಾರ (ಸೆ.10) ಮಧ್ಯಾಹ್ನ 1 ಗಂಟೆಗೆ ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗಲಿದೆ.

ಈ ಸಂದರ್ಭದಲ್ಲಿ ದಿವ್ಯಾ ಸುರೇಶ್​ ಅವರು ತಾಯಿ ಮತ್ತು ಸಹೋದರನ ಜೊತೆ ಕ್ಲಿಕ್ಕಿಸಿಕೊಂಡ ಫೋಟೋ ಕೂಡ ವೈರಲ್​ ಆಗುತ್ತಿದೆ. ಅದೇ ಫ್ರೇಮ್​ನಲ್ಲಿ ಮಂಜು ಪಾವಗಡ ಸಹ ಇದ್ದಾರೆ ಎಂಬುದು ವಿಶೇಷ. ‘ಈ ಮೂವರು ನನ್ನ ಬದುಕಿನ ನಿಜವಾದ ಶಿಕ್ಷಕರು. ಹಲವು ರೀತಿಯಲ್ಲಿ ನೀವು ನನಗೆ ಸ್ಫೂರ್ತಿಯಾಗಿದ್ದೀರಿ. ನೀವು ನನ್ನ ಹೃದಯಕ್ಕೆ ತುಂಬ ಹತ್ತಿರವಾದವರು’ ಎಂದು ದಿವ್ಯಾ ಸುರೇಶ್​ ಕ್ಯಾಪ್ಷನ್​ ನೀಡಿದ್ದಾರೆ. ಸಾವಿರಾರು ಅಭಿಮಾನಿಗಳು ಈ ಫೋಟೋ ಕಂಡು ಮೆಚ್ಚುಗೆ ಸೂಚಿಸಿದ್ದಾರೆ.

ಇದನ್ನೂ ಓದಿ:

ಅದ್ದೂರಿ ಮೆರವಣಿಗೆ, ಹೂವಿನ ಮಳೆ; ಪಾವಗಡದಲ್ಲಿ ಮಂಜುಗೆ ಸ್ವಾಗತ ಹೇಗಿತ್ತು ನೋಡಿ

ಶಿವರಾಜ್​ಕುಮಾರ್​ ಮನೆ ಮುಂದೆ ನಿಂತು ಮನದ ಮಾತು ಹಂಚಿಕೊಂಡ ಬಿಗ್​ ಬಾಸ್​ ವಿನ್ನರ್​ ಮಂಜು

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada