AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಖ್ಯಾತ ಕಿರುತೆರೆ ನಟಿ ವಿರುದ್ಧ ಅಭಿಮಾನಿಯಿಂದಲೇ ಕಿರುಕುಳ ಆರೋಪ

ಕೆಲ ತಿಂಗಳ ಹಿಂದೆ ಜಯಲಕ್ಷ್ಮೀ ಬಿಜೆಪಿ ಸೇರಿದ್ದು, 2021ರ ವಿಧಾನಸಭೆ ಚುನಾವಣೆಯಲ್ಲಿ ಪ್ರಚಾರ ಕೂಡ ಮಾಡಿದ್ದರು. ಈಗ ಗೀತಾ ಹೆಸರಿನ ಅಭಿಮಾನಿಯೊಬ್ಬಳು ಜಯಲಕ್ಷ್ಮೀ ವಿರುದ್ಧ ಗಂಭೀರ ಆರೋಪ ಮಾಡಿದ್ದಾಳೆ.

ಖ್ಯಾತ ಕಿರುತೆರೆ ನಟಿ ವಿರುದ್ಧ ಅಭಿಮಾನಿಯಿಂದಲೇ ಕಿರುಕುಳ ಆರೋಪ
ಖ್ಯಾತ ಕಿರುತೆರೆ ನಟಿ ವಿರುದ್ಧ ಅಭಿಮಾನಿಯಿಂದಲೇ ಕಿರುಕುಳ ಆರೋಪ
TV9 Web
| Updated By: ರಾಜೇಶ್ ದುಗ್ಗುಮನೆ|

Updated on:Sep 16, 2021 | 3:14 PM

Share

ಸೆಲೆಬ್ರಿಟಿ ವಲಯದಲ್ಲಿ ಗುರುತಿಸಿಕೊಂಡ ನಂತರ ಬೇರೆಬೇರೆ ರೀತಿಯ ಆರೋಪಗಳು ಕೇಳಿ ಬರುವುದು ಸಹಜ. ಇದರಲ್ಲಿ ಕೆಲವು ಸತ್ಯವಾದರೆ, ಇನ್ನೂ ಕೆಲವು ನಕಲಿ ಆರೋಪಗಳು. ಈಗ ತಮಿಳಿನ ಖ್ಯಾತ ಕಿರುತೆರೆ ನಟಿ ವಿರುದ್ಧ ಗಂಭೀರ ಆರೋಪವೊಂದು ಕೇಳಿ ಬಂದಿದೆ. ಅಭಿಮಾನಿಯೊಬ್ಬಳು ತಮಗೆ ನಟಿ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾಳೆ. ಈ ಆರೋಪದಲ್ಲಿ ಎಷ್ಟು ಸತ್ಯವಿದೆ ಎನ್ನುವ ವಿಚಾರದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ತಮಿಳು ಕಿರುತೆರೆ ನಟಿ ಜಯಲಕ್ಷ್ಮೀ ಸಿನಿಮಾ ಮೂಲಕ ಬಣ್ಣದ ಬದುಕಿಗೆ ಕಾಲಿಟ್ಟರು. ಅವರು ‘ಕೆಳದಿ ಕಣ್ಮಣಿ’, ‘ತಮಿಳ್​ ಕಡುವಲ್​ ಮುರುಗನ್​’, ‘ಪೂವೆ ಉನಕ್ಕಾಗ’ ಮೊದಲಾದ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಕೆಲ ತಿಂಗಳ ಹಿಂದೆ ಅವರು ಬಿಜೆಪಿ ಸೇರಿದ್ದು, 2021ರ ವಿಧಾನಸಭೆ ಚುನಾವಣೆಯಲ್ಲಿ ಪ್ರಚಾರ ಕೂಡ ಮಾಡಿದ್ದರು. ಈಗ ಗೀತಾ ಹೆಸರಿನ ಅಭಿಮಾನಿಯೊಬ್ಬಳು ಜಯಲಕ್ಷ್ಮೀ ವಿರುದ್ಧ ಗಂಭೀರ ಆರೋಪ ಮಾಡಿದ್ದಾಳೆ.

ಬ್ಯಾಂಕ್​ನಿಂದ ಸಾಲ ಪಡೆಯಲು ಗೀತಾಗೆ ಜಯಲಕ್ಷ್ಮೀ ಸಹಾಯ ಮಾಡಿದ್ದರು. ನಂತರ ಆ ಹಣವನ್ನು ಗೀತಾ ಹಿಂದಿರುಗಿಸಿದ್ದರು. ‘ಸಂಪೂರ್ಣ ಸಾಲದ ಮೊತ್ತವನ್ನು ಪಾವತಿಸಿದ ನಂತರವೂ ಚಾರ್ಲ್ಸ್ ಮತ್ತು ಅಲೆಕ್ಸಾಂಡರ್ ಎಂಬ ಇಬ್ಬರನ್ನು ರಾತ್ರಿ ತನ್ನ ಮನೆಗೆ ಜಯಲಕ್ಷ್ಮೀ ಕಳುಹಿಸಿದ್ದರು. ಜತೆಗೆ ಸಾಲದ ಮೊತ್ತ ಬಾಕಿ ಇದೆ, ಅದನ್ನು ಪಾವತಿಸುವಂತೆ ಒತ್ತಾಯಿಸುತ್ತಿದ್ದರು’ ಎಂದು ಗೀತಾ ಆರೋಪಿಸಿದ್ದಾರೆ. ನಟಿ ಮತ್ತು ಅವರ ಸ್ನೇಹಿತರ ವಿರುದ್ಧ ಕ್ರಮ ಕೈಗೊಳ್ಳುವಂತೆ ಗೀತಾ ಪೊಲೀಸರಿಗೆ ವಿನಂತಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಗೀತಾ ಮಾಡಿರುವ ಆರೋಪದಲ್ಲಿ ನಿಜವಿದೆಯೇ ಎನ್ನುವ ಬಗ್ಗೆ ಪೊಲೀಸರು ಮೊದಲು ತನಿಖೆ ನಡೆಸಲಿದ್ದಾರೆ. ಅವರ ಆರೋಪ ನಿಜ ಎಂಬುದು ಸಾಬೀತಾದರೆ ಪೊಲೀಸರು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ. ಈ ಬಗ್ಗೆ ನಟಿ ಜಯಲಕ್ಷ್ಮೀ ಕಡೆಯಿಂದ ಯಾವುದೇ ಉತ್ತರ ಬಂದಿಲ್ಲ. ಇದು ನಿಜವಾದಲ್ಲಿ ಅವರ ರಾಜಕೀಯ ಬದುಕಿಗೆ ಹಿನ್ನಡೆ ಆಗಲಿದೆ.

ಇದನ್ನೂ ಓದಿ: ಸಮಂತಾ ಬಗ್ಗೆ ಏನೂ ಪ್ರಶ್ನಿಸಬೇಡಿ; ಮಾಧ್ಯಮಗಳಿಗೆ ನಾಗ ಚೈತನ್ಯ ಖಡಕ್​ ಎಚ್ಚರಿಕೆ?

‘ನಾನು ಉಳಿಯುವ ರೀತಿ ಕಾಣುತ್ತಿಲ್ಲ’; ಹೊಸ ವಿಡಿಯೋ ಮಾಡಿ ಹರಿಬಿಟ್ಟ ನಟಿ ವಿಜಯಲಕ್ಷ್ಮಿ

Published On - 3:14 pm, Thu, 16 September 21