ಸಮಂತಾ ಬಗ್ಗೆ ಏನೂ ಪ್ರಶ್ನಿಸಬೇಡಿ; ಮಾಧ್ಯಮಗಳಿಗೆ ನಾಗ ಚೈತನ್ಯ ಖಡಕ್​ ಎಚ್ಚರಿಕೆ?

TV9 Digital Desk

| Edited By: Rajesh Duggumane

Updated on: Sep 15, 2021 | 2:01 PM

ನಾಗ ಚೈತನ್ಯ ಮತ್ತು ಸಾಯಿ ಪಲ್ಲವಿ ನಟನೆಯ ‘ಲವ್​ ಸ್ಟೋರಿ’ ಸಿನಿಮಾ ಸೆಪ್ಟೆಂಬರ್ 24ರಂದು ತೆರೆಗೆ ಬರುತ್ತಿದೆ. ಈ ಸಿನಿಮಾದ ಪ್ರಮೋಷನ್​ ಕೆಲಸಗಳಿಗೆ ನಾಗ ಚೈತನ್ಯ ಚಾಲನೆ ನೀಡಿದ್ದಾರೆ. ಮಾಧ್ಯಮಗಳನ್ನು ಎದುರಾಗಿ ಅವರು ಸಂದರ್ಶನ ನೀಡುತ್ತಿದ್ದಾರೆ.

ಸಮಂತಾ ಬಗ್ಗೆ ಏನೂ ಪ್ರಶ್ನಿಸಬೇಡಿ; ಮಾಧ್ಯಮಗಳಿಗೆ ನಾಗ ಚೈತನ್ಯ ಖಡಕ್​ ಎಚ್ಚರಿಕೆ?
ನಟಿ ಸಮಂತಾ- ನಾಗ ಚೈತನ್ಯ

Follow us on

ಸಮಂತಾ ಮತ್ತು ನಾಗ ಚೈತನ್ಯ ದಾಂಪತ್ಯ ಜೀವನದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಲೇ ಇದೆ. ಈ ಬಗ್ಗೆ ಕುಟುಂಬದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇತ್ತೀಚೆಗೆ ನಾಗ ಚೈತನ್ಯ ‘ಲವ್ ಸ್ಟೋರಿ’ ಸಿನಿಮಾಗೆ ಆಲ್​ ದಿ ಬೆಸ್ಟ್​ ಹೇಳಿದ್ದರು ಸಮಂತಾ. ಈ ಮೂಲಕ ವಿಚ್ಛೇದನ ವದಂತಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದರು. ಆದರೆ, ಈ ಬಗ್ಗೆ ಅಭಿಮಾನಿಗಳಿಗೆ ಪೂರ್ತಿ ಸ್ಪಷ್ಟನೆ ಸಿಕ್ಕಿಲ್ಲ. ಹೀಗಿರುವಾಗಲೇ ನಾಗ ಚೈತನ್ಯ ಕಡೆಯಿಂದ ಮಾಧ್ಯಮಗಳಿಗೆ ಖಡಕ್​ ಸೂಚನೆ ಒಂದು ಬಂದಿದೆ ಎನ್ನುವ ಮಾತು ಕೇಳಿ ಬಂದಿದೆ. 

ನಾಗ ಚೈತನ್ಯ ಮತ್ತು ಸಾಯಿ ಪಲ್ಲವಿ ನಟನೆಯ ‘ಲವ್​ ಸ್ಟೋರಿ’ ಸಿನಿಮಾ ಸೆಪ್ಟೆಂಬರ್ 24ರಂದು ತೆರೆಗೆ ಬರುತ್ತಿದೆ. ಈ ಸಿನಿಮಾದ ಪ್ರಮೋಷನ್​ ಕೆಲಸಗಳಿಗೆ ನಾಗ ಚೈತನ್ಯ ಚಾಲನೆ ನೀಡಿದ್ದಾರೆ. ಮಾಧ್ಯಮಗಳನ್ನು ಎದುರಾಗಿ ಅವರು ಸಂದರ್ಶನ ನೀಡುತ್ತಿದ್ದಾರೆ. ಸದ್ಯ, ವಿಚ್ಛೇದನ ವಿಚಾರ ಹೈಲೈಟ್​ ಆಗಿರುವುದರಿಂದ ಎಲ್ಲರೂ ಅತ್ತ ಗಮನ ಕೊಡುತ್ತಿದ್ದಾರೆ. ಸಂದರ್ಶನದ ವೇಳೆ ಇದನ್ನೇ ಹೈಲೈಟ್​ ಮಾಡುವ ಸಾಧ್ಯತೆ ಕೂಡ ಹೆಚ್ಚಿದೆ. ಆ ರೀತಿ ಆಗೋಕೆ ಬಿಡಬಾರದು ಎಂದು ನಾಗ ಚೈತನ್ಯ ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಈ ಕಾರಣಕ್ಕೆ ಮಾಧ್ಯಮದವರಿಗೆ ಸಮಂತಾ ಹಾಗೂ ಖಾಸಗಿ ಬದುಕಿನ ಬಗ್ಗೆ ಯಾವುದೇ ಪ್ರಶ್ನೆ ಮಾಡದಂತೆ ಅವರು ಖಡಕ್​ ಎಚ್ಚರಿಕೆ ನೀಡಿದ್ದಾರೆ. ಒಂದೊಮ್ಮೆ ಆ ರೀತಿ ಪ್ರಶ್ನೆ ಮಾಡುವ ಆಲೋಚನೆ ಇದ್ದರೆ ಅಂಥ ಮಾಧ್ಯಮಗಳಿಗೆ ಸಂದರ್ಶನ ನೀಡದೇ ಇರಲು ನಾಗ ಚೈತನ್ಯ ನಿರ್ಧರಿಸಿದ್ದಾರೆ ಎನ್ನುತ್ತಿವೆ ಮೂಲಗಳು.

ನಿರ್ಮಾಪಕರು ಕೋಟ್ಯಂತರ ರೂಪಾಯಿ ಹಾಕಿ ಸಿನಿಮಾ ಮಾಡುತ್ತಾರೆ. ಆದರೆ, ಸಂದರ್ಶನದ ವೇಳೆ ನಾಗ ಚೈತನ್ಯ ಖಾಸಗಿ ವಿಚಾರ ಪ್ರಸ್ತಾಪವಾದರೆ ಅದು ಚಿತ್ರತಂಡಕ್ಕೆ ನಿಜಕ್ಕೂ ದೊಡ್ಡ ಲಾಸ್​. ಹೀಗಾಗಿ, ನಾಗ ಚೈತನ್ಯ ಈ ರೀತಿಯ ಖಡಕ್​ ಸೂಚನೆ ನೀಡಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಸಮಂತಾ ಡಿವೋರ್ಸ್​ ವದಂತಿ ಬೆನ್ನಲ್ಲೇ ನಾಗ ಚೈತನ್ಯ-ಸಾಯಿ ಪಲ್ಲವಿ ಲವ್​ ಸ್ಟೋರಿ ಮೇಲೆ ಕಣ್ಣಿಟ್ಟ ಸಿನಿಪ್ರಿಯರು

ಸಾಯಿ ಪಲ್ಲವಿ-ನಾಗ ಚೈತನ್ಯ ಲವ್​ ಸ್ಟೋರಿ ಬಗ್ಗೆ ಮೌನ ಮುರಿದ ಸಮಂತಾ; ಡಿವೋರ್ಸ್​ ವದಂತಿಗೆ ಬ್ರೇಕ್​

ತಾಜಾ ಸುದ್ದಿ

Related Stories

Most Read Stories

Click on your DTH Provider to Add TV9 Kannada