ಮಚ್ಚು ಹಿಡಿದ ಶ್ರೇಯಸ್ಗೆ ಆಲ್ ದಿ ಬೆಸ್ಟ್ ಹೇಳಿದ ಉಪೇಂದ್ರ
ಸಿನಿಮಾ ರಂಗದಲ್ಲಿ ಶ್ರೇಯಸ್ ಈಗತಾನೇ ಗುರುತಿಸಿಕೊಳ್ಳುತ್ತಿದ್ದಾರೆ. ‘ರಾಣ’ ಅವರಿಗೆ ಮೂರನೇ ಸಿನಿಮಾ. ಈ ತಂಡಕ್ಕೆ ಉಪ್ಪಿ ಶುಭ ಕೋರಿದ್ದಾರೆ.
ನಟ ಉಪೇಂದ್ರ ಅವರು ಸಾಕಷ್ಟು ಯುವ ನಟರ ಬೆನ್ನು ತಟ್ಟಿದ್ದಾರೆ. ಹೊಸ ತಂಡಗಳ ಸಿನಿಮಾದ ಟೀಸರ್, ಟ್ರೇಲರ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಈಗ ಉಪೇಂದ್ರ ಅವರು ಶ್ರೇಯಸ್ ಕೆ. ಮಂಜು ನಟಿಸುತ್ತಿರುವ ‘ರಾಣ’ ಚಿತ್ರದ ಟೀಸರ್ ಹಾಗೂ ಪೋಸ್ಟರ್ ಬಿಡುಗಡೆ ಮಾಡಿ ತಂಡಕ್ಕೆ ಆಲ್ ದಿ ಬೆಸ್ಟ್ ಹೇಳಿದ್ದಾರೆ.
ಸಿನಿಮಾ ರಂಗದಲ್ಲಿ ಶ್ರೇಯಸ್ ಈಗತಾನೇ ಗುರುತಿಸಿಕೊಳ್ಳುತ್ತಿದ್ದಾರೆ. ‘ರಾಣ’ ಅವರಿಗೆ ಮೂರನೇ ಸಿನಿಮಾ. ಈ ತಂಡಕ್ಕೆ ಉಪ್ಪಿ ಶುಭ ಕೋರಿದ್ದಾರೆ. ‘ಶ್ರೇಯಸ್ ಹೆಸರಿನಲ್ಲೇ ಶ್ರೇಯಸ್ಸು ಇದೆ. ಅವನ ಮಾತು ಕೇಳಿ ಸಂತೋಷವಾಯಿತು. ತಂದೆಯನ್ನು ಶ್ರೇಯಸ್ ಮೀರಿಸುತ್ತಾನೆ. ಅವನಿಗೆ ಹಾಗೂ ಚಿತ್ರತಂಡಕ್ಕೆ ಒಳ್ಳೆಯದಾಗಲಿ’ ಎಂದರು ಉಪೇಂದ್ರ.
ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿರುವ ಈ ಚಿತ್ರದ ಟೀಸರ್ಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಯುವ ನಟರ ಹಾಡುಗಳಿಗೆ ಬೇಡಿಕೆ ಸಿಗೋದು ಕಷ್ಟ. ಆದರೆ, ಈ ಸಿನಿಮಾದ ಹಾಡುಗಳನ್ನು ಬರೋಬ್ಬರಿ 76 ಲಕ್ಷ ರೂಪಾಯಿಗೆ ಆನಂದ್ ಆಡಿಯೋ ಖರೀದಿಸಿದೆ ಅನ್ನೋದು ವಿಶೇಷ.
‘ಚಿತ್ರೀಕರಣ ಬಹುತೇಕ ಮುಗಿದಿದೆ. ಕೊವಿಡ್ ಕಾರಣದಿಂದ ಕೆಲವು ಜಾಗಗಳಲ್ಲಿ ಚಿತ್ರೀಕರಣ ನಡೆಸಲು ಅನುಮತಿ ಸಿಕ್ಕಿದ್ದು ತಡವಾಯಿತು. ಇಲ್ಲದಿದ್ದರೆ, ಈ ವೇಳೆಗೆ ಸಿನಿಮಾ ರೆಡಿ ಆಗಿರುತ್ತಿತ್ತು. ಚಿತ್ರ ಉತ್ತಮವಾಗಿ ಬರಲು ಸಹಕರಿಸುತ್ತಿರುವ ಚಿತ್ರತಂಡದ ಸದಸ್ಯರಿಗೆ ನನ್ನ ಧನ್ಯವಾದ’ ಎಂದರು ನಿರ್ದೇಶಕ ನಂದ ಕಿಶೋರ್ .
‘ನಾನು ಚಿಕ್ಕ ವಯಸ್ಸಿನಿಂದಲೂ ಉಪೇಂದ್ರ ಅವರ ಅಭಿಮಾನಿ. ನಾನು ಅವರಿಂದ ಕಲಿತಿರುವುದು ಸಾಕಷ್ಟು. ಇದೆ. ಚಿತ್ರರಂಗಕ್ಕೆ ಹೊಸದಾಗಿ ಬರುತ್ತಿರುವ ನೂತನ ಪ್ರತಿಭೆಗಳಿಗೆ ಅವರು ನೀಡುವ ಪ್ರೋತ್ಸಾಹಕ್ಕೆ ಚಿರ ಋಣಿ. ಶಿವರಾಜ್ಕುಮಾರ್ ಅವರು ಸಹ ನನಗೆ ಈ ಚಿತ್ರದಲ್ಲಿ ಲಾಂಗ್ ಹಿಡಿಯುವುದನ್ನು ಹೇಳಿಕೊಟ್ಟಿದ್ದಾರೆ. ನಾನು ಏನಾದರೂ ಉತ್ತಮವಾಗಿ ನಟಿಸಿದ್ದೇನೆಂದರೆ ಅದಕ್ಕೆ ಕಾರಣ ನಿರ್ದೇಶಕ ನಂದಕಿಶೋರ್ ಹಾಗೂ ಛಾಯಾಗ್ರಹಕ ಶೇಖರ್ ಚಂದ್ರ. ಹಿರಿಯ ಕಲಾವಿದರಿಗೆ, ನಿರ್ಮಾಪಕರಿಗೆ, ನನ್ನ ಅಪ್ಪ ಕೆ.ಮಂಜು ಅವರಿಗೆ ಹಾಗೂ ಇಡೀ ತಂಡಕ್ಕೆ’ ಧನ್ಯವಾದ ಎಂದರು ಶ್ರೇಯಸ್.
ಈ ಚಿತ್ರದಲ್ಲಿ ಶ್ರೇಯಸ್ಗೆ ನಾಯಕಿಯರಾಗಿ ರೀಷ್ಮಾ ನಾಣಯ್ಯ ಹಾಗೂ ರಜನಿ ಭಾರದ್ವಾಜ್ ನಟಿಸುತ್ತಿದ್ದಾರೆ. ಕೆ. ಮಂಜು ಅರ್ಪಿಸುವ ಈ ಚಿತ್ರಕ್ಕೆ ಕೆ.ಎಂ.ಪ್ರಕಾಶ್ ಸಂಕಲನವಿದೆ. ವಿಶ್ವ ಕಲಾ ನಿರ್ದೇಶನ ಹಾಗೂ ರವಿವರ್ಮ ಅವರ ಸಾಹಸ ನಿರ್ದೇಶನವಿರುವ ‘ರಾಣ’ ಚಿತ್ರಕ್ಕೆ ಪ್ರಶಾಂತ್ ರಾಜಪ್ಪ ಸಂಭಾಷಣೆ ಬರೆದಿದ್ದಾರೆ.
ಇದನ್ನೂ ಓದಿ: Raana: ಸ್ಯಾಂಡಲ್ವುಡ್ಗೆ ‘ರಾಣ’ ಅದ್ದೂರಿ ಎಂಟ್ರಿ, ಟೀಸರ್ ಬಿಡುಗಡೆಗೊಳಿಸಿದ ಉಪೇಂದ್ರ
ಅಕ್ಷಯ್ ಕುಮಾರ್ ನಂಬಿಕಸ್ಥ ಬಾಡಿಗಾರ್ಡ್ ಶ್ರೇಯಸ್ಗೆ 1.2 ಕೋಟಿ ರೂ. ಸಂಬಳ; ಈ ವ್ಯಕ್ತಿಯ ಕೆಲಸಗಳೇನು?