Raana: ಸ್ಯಾಂಡಲ್​ವುಡ್​ಗೆ ‘ರಾಣ’ ಅದ್ದೂರಿ ಎಂಟ್ರಿ, ಟೀಸರ್ ಬಿಡುಗಡೆಗೊಳಿಸಿದ ಉಪೇಂದ್ರ

TV9 Digital Desk

| Edited By: shivaprasad.hs

Updated on:Sep 14, 2021 | 12:40 PM

ಕನ್ನಡದ ಖ್ಯಾತ ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್ ಮಂಜು ‘ರಾಣ’ ಚಿತ್ರದ ಮುಖಾಂತರ ಮತ್ತೆ ಮಿಂಚಲು ತಯಾರಾಗುತ್ತಿದ್ದಾರೆ.

Raana: ಸ್ಯಾಂಡಲ್​ವುಡ್​ಗೆ ‘ರಾಣ’ ಅದ್ದೂರಿ ಎಂಟ್ರಿ, ಟೀಸರ್ ಬಿಡುಗಡೆಗೊಳಿಸಿದ ಉಪೇಂದ್ರ
‘ರಾಣ’ ಚಿತ್ರದ ಪೋಸ್ಟರ್


ಸ್ಯಾಂಡಲ್​ವುಡ್​​ನಲ್ಲಿ ಹೊಸ ಚಿತ್ರಗಳು, ಟೀಸರ್​ಗಳು ಘೋಷಣೆಯಾಗುತ್ತಿದ್ದು, ಎಲ್ಲರ ಗಮನ ಸೆಳೆಯುತ್ತಿವೆ. ಈ ಸಾಲಿಗೆ ಹೊಸ ಸೇರ್ಪಡೆ ‘ರಾಣ’. ಖ್ಯಾತ ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್ ಮಂಜು ‘ರಾಣ’ ಚಿತ್ರದಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಚಿತ್ರದ ಮೊದಲ ಲುಕ್​ ತಿಳಿಸುವ ಟೀಸರ್ ಬಿಡುಗಡೆಯಾಗಿದ್ದು, ಎಲ್ಲರ ಗಮನ ಸೆಳೆದಿದೆ. ಪೊಗರು ಚಿತ್ರದ ನಂತರ ನಂದ ಕಿಶೋರ್ ರಾಣಾಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಚಿತ್ರಕ್ಕೆ ಚಂದನ್ ಶೆಟ್ಟಿ ಸಂಗೀತ ನೀಡಲಿದ್ದಾರೆ. ವಿಶೇಷವೆಂದರೆ, ಟೀಸರ್ ಲಾಂಚ್ ಮಾಡಿದ್ದು, ಸ್ಯಾಂಡಲ್​ವುಡ್​ನ ರಿಯಲ್ ಸ್ಟಾರ್ ಉಪೇಂದ್ರ. ಟೀಸರ್​ನಲ್ಲಿ ಲಾಂಗ್ ಹಿಡಿದು ಬಂದಿರುವ ‘ರಾಣ’, ಉಪೇಂದ್ರ ನಿರ್ದೇಶನದ ‘ಓಂ’ ಚಿತ್ರವನ್ನು ನೆನಪಿಸಿದ್ದಾನೆ.

ಚಿತ್ರದ ಟೀಸರ್ ಇಲ್ಲಿದೆ:

‘ರಾಣಾ’ ಚಿತ್ರವನ್ನು ಗುಜ್ಜಲ್ ಪುರುಷೋತ್ತಮ್, ‘ಗುಜ್ಜಲ್ ಟಾಕೀಸ್’ ಬ್ಯಾನರ್​ನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ವಿಕ್ಟರಿ, ಅಧ್ಯಕ್ಷ, ರನ್ನ, ಮುಕುಂದ ಮುರಾರಿ, ಪೊಗರು ಮೊದಲಾದ ಚಿತ್ರಗಳಿಂದ ಖ್ಯಾತಿ ಗಳಿಸಿರುವ ನಂದ ಕಿಶೋರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ನಾಯಕ ನಟ ಶ್ರೇಯಸ್ ಮಂಜು ಈ ಹಿಂದೆ ‘ಪಡ್ಡೆ ಹುಲಿ’ ಚಿತ್ರದ ಮುಖಾಂತರ ಗಮನ ಸೆಳೆದಿದ್ದರು. ಭರವಸೆಯ ನಟಿ ರೀಷ್ಮಾ ನಾಣಯ್ಯ, ಶ್ರೇಯಸ್​ಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಖ್ಯಾತ ಛಾಯಾಗ್ರಾಹಕ ಶೇಖರ್ ಚಂದ್ರ ಛಾಯಾಗ್ರಹಣ ‘ರಾಣ’ ಚಿತ್ರಕ್ಕಿದೆ. ಕೆ.ಎಂ.ಪ್ರಕಾಶ್ ಸಂಕಲನ ಮಾಡುತ್ತಿದ್ದಾರೆ.

ಇದನ್ನೂ ಓದಿ:

10 ದಿನಗಳಲ್ಲಿ 13 ಹಾರರ್ ಫಿಲ್ಮ್ ವೀಕ್ಷಿಸಲು 95,000 ರೂ. ಖರ್ಚು ಮಾಡಲು ಸಿದ್ಧವಿದೆ ಅಮೆರಿಕಾ ಕಂಪನಿ; ಅವಕಾಶ ಯಾರಿಗಿದೆ ಗೊತ್ತಾ?

Met Gala 2021: ಸದಾ ಮೈಮಾಟದಿಂದ ಸೆಳೆಯುತ್ತಿದ್ದ ಸುಂದರಿ ಕಿಮ್​ ಇಂದು ಹೀಗೇಕೆ ಆದ್ರು? ಇದು ಸಿನಿಮಾ ಅಲ್ಲ ರಿಯಲ್​

(Raana new kannada movie first look teaser launched by Upendra starring Sjreyas Manju and Reeshma Nanayya)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada