10 ದಿನಗಳಲ್ಲಿ 13 ಹಾರರ್ ಫಿಲ್ಮ್ ವೀಕ್ಷಿಸಲು 95,000 ರೂ. ಖರ್ಚು ಮಾಡಲು ಸಿದ್ಧವಿದೆ ಅಮೆರಿಕಾ ಕಂಪನಿ; ಅವಕಾಶ ಯಾರಿಗಿದೆ ಗೊತ್ತಾ?
ಮುಂಬರುವ ಭಯಾನಕ ಚಲನ ಚಿತ್ರಗಳನ್ನು ಆಧರಿಸಿ, ಹಣಕಾಸು ವಿಷಯದಲ್ಲಿ ಹೆಚ್ಚಿನ ಬಜೆಟ್ನಿಂದ ತಯಾರಾದ ಹಾರರ್ ಚಲನ ಚಿತ್ರಗಳು ಕಡಿಮೆ ಬಜೆಟ್ನಿಂದ ತಯಾರಾದ ಹಾರರ್ ಚಿತ್ರಗಳಿಗಿಂದ ಹೆಚ್ಚಿನ ಭಯವನ್ನು ಸೃಷ್ಟಿಸುತ್ತಿದೆಯೇ ಎಂದು ತಿಳಿಯುವ ಪ್ರಯತ್ನದಲ್ಲಿದ್ದೇವೆ ಎಂದು ಘೋಷಿಸಲಾಗಿದೆ.
ನೀವು ಭಯಾನಕ ಚಿತ್ರಗಳನ್ನು ಪ್ರೀತಿಸುತ್ತೀರಾ? ನಿಮ್ಮ ಹವ್ಯಾಸವಾಗಿದ್ದರೆ ನಿಮಗಾಗಿ ಒಂದು ಉತ್ತಮ ಅವಕಾಶವಿದೆ. ಮುಂದಿನ ಅಕ್ಟೋಬರ್ ತಿಂಗಳಿನಲ್ಲಿ 13 ಭಯಾನಕ ಚಲನಚಿತ್ರಗಳನ್ನು ವೀಕ್ಷಿಸಲು ಅಮೆರಿಕಾ ಕಂಪನಿಯು ಅವಕಾಶ ಕಲ್ಪಿಸಿದೆ. 1,300 ಡಾಲರ್ (95,000 ರೂಪಾಯಿ) ಹಣವನ್ನು ಕಂಪನಿಯೇ ಪಾವತಿಸುತ್ತದೆ. 10 ದಿನಗಳಲ್ಲಿ ಒಟ್ಟು 13 ಚಲನಚಿತ್ರಗಳನ್ನು ನೋಡುತ್ತ ಮನರಂಜನೆ ಪಡೆಯಬಹುದು.
ನೀವು 13 ಭಯಾನಕ ಚಲನ ಚಿತ್ರಗಳನ್ನು ನೋಡಬಹುದಾಗಿದೆ. ಅರ್ಜಿ ಸಲ್ಲಿಸಿದ ಪ್ರೇಕ್ಷಕನ ಹೃದಯ ಬಡಿತವನ್ನು ಮೇಲ್ವಿಚಾರಣೆ ಮಾಡಲು ಅವರಿಗೆ ಫಿಟ್ ಬಿಟ್ ನೀಡಲಾಗುತ್ತದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ. ಸಿನಿಮಾ ಬಜೆಟ್ನ ಮೌಲ್ಯವು ಅದು ನೀಡುವ ಪರಿಣಾಮದ ಮೇಲೆ ಎಷ್ಟರ ಮಟ್ಟಿಗೆ ಪ್ರಭಾವ ಬೀರುತ್ತದೆ ಎಂದು ಪರಿಶೀಲಿಸುವ ಉದ್ದೇಶದಿಂದ ಈ ಅವಕಾಶವನ್ನು ಕಲ್ಪಿಸಲಾಗಿದೆ. ಈ ಕುರಿತಂತೆ ಸಿಎನ್ಎನ್ ವರದಿ ಮಾಡಿದೆ.
ಮುಂಬರುವ ಭಯಾನಕ ಚಲನ ಚಿತ್ರಗಳನ್ನು ಆಧರಿಸಿ, ಹಣಕಾಸು ವಿಷಯದಲ್ಲಿ ಹೆಚ್ಚಿನ ಬಜೆಟ್ನಿಂದ ತಯಾರಾದ ಹಾರರ್ ಚಲನ ಚಿತ್ರಗಳು ಕಡಿಮೆ ಬಜೆಟ್ನಿಂದ ತಯಾರಾದ ಹಾರರ್ ಚಿತ್ರಗಳಿಗಿಂದ ಹೆಚ್ಚಿನ ಭಯವನ್ನು ಸೃಷ್ಟಿಸುತ್ತಿದೆಯೇ ಎಂದು ತಿಳಿಯುವ ಪ್ರಯತ್ನದಲ್ಲಿದ್ದೇವೆ ಎಂದು ಘೋಷಿಸಲಾಗಿದೆ. ಇದನ್ನು ತಿಳಿಯಲು ನೀವು ನಮಗೆ ಸಹಾಯ ಮಾಡುತ್ತೀರಾ. ಫಿಟ್ಬಿಟ್ ಧರಿಸುವ ಮೂಲಕ ಚಲನಚಿತ್ರಕ್ಕೆ ಅನುಗುಣವಾಗಿ ಎಷ್ಟು ಭಯವನ್ನು ಉಂಟುಮಾಡುತ್ತದೆ ಎಂಬುದರ ಮೇಲ್ವಿಚಾರಣೆಗೆ ಸಹಾಯಕರಾಗುತ್ತೀರಾ ಎಂದು ಕಂಪನಿ ಹೇಳಿದೆ.
ನೀವು ನೋಡಬೇಕಾದ 13 ಹಾರರ್ ಚಿತ್ರಗಳು: ಸಾ ಅಮಿಟಿವಿಲ್ಲೆ ಹಾರರ್, ಅ ಕ್ವೈಟ್ ಪ್ಲೇಸ್, ಅ ಕ್ವೈಟ್ ಪ್ಲೇಸ್ ಪಾರ್ಟ್ 2, ಕ್ಯಾಂಡೀಮ್ಯಾನ್, ಇನ್ಸೀಡಿಯಸ್, ದಿ ಬ್ಲೈರ್ ವಿಚ್ ಪ್ರಾಜೆಕ್ಟ್, ಸಿನಿಸ್ಟೆರ್, ಗೆಟ್ ಔಟ್, ದಿ ಪರ್ಜ್, ಹಲ್ಲೋವಿನ್ ( 2018), ಪಾರಾನಾರ್ಮಲ್ ಆ್ಯಾಕ್ಟಿವಿಟಿ, ಅನ್ನಾಬೆಲ್ಲೆ
ಇದಕ್ಕೆ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 26ರ ಒಳಗೆ ಮಾಹಿತಿ ನೀಡಲಾಗುತ್ತದೆ. ಅದಾಗ್ಯೂ ಇದು ಅಮೆರಿಕದಲ್ಲಿರುವ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮಾತ್ರ ಎಂದು ತಿಳಿಸಲಾಗಿದೆ.
ಇದನ್ನೂ ಓದಿ:
Viral News: ಈ ಮುಖ ಮೂತಿಗಾಗಿ ಈಕೆ ಖರ್ಚು ಮಾಡಿದ್ದು ಬರೋಬ್ಬರಿ 24 ಲಕ್ಷ ರೂ..!
Viral News: ಮೂರು ದಿನಗಳಿಂದ ಕಾಣೆಯಾಗಿದ್ದ ಮೂರು ವರ್ಷದ ಬಾಲಕ ಪತ್ತೆಯಾಗಿದ್ದು ಕಾಡಿನಲ್ಲಿ! ರೋಚಕ ಕಥೆ ಓದಿ
(US Company will pay rs 95,000 to watch 13 horror film in 10 days)