ನಂಬಲಸಾಧ್ಯ! ಒಂದೇ ಮರಕ್ಕೆ 40 ಜಾತಿಯ ಹಣ್ಣುಗಳು; ಕುತೂಹಲಕಾರಿ ಸುದ್ದಿ ಓದಿ

TV9 Digital Desk

| Edited By: shruti hegde

Updated on: Sep 15, 2021 | 9:57 AM

Viral News: ಮಾವು, ಪೇರಲ, ಬೆರ್ರಿ ಹಣ್ಣುಗಳ ಹಾಗೆ ಒಂದು ಗಿಡಕ್ಕೆ ಒಂದೇ ಜಾತಿಯ ಹಣ್ಣು ಬಿಡುವುದನ್ನು ನೀವು ನೋಡಿರುತ್ತೀರಿ. ಆದರೆ ಒಂದೇ ಮರದಲ್ಲಿ 40 ಬಗೆಯ ಹಣ್ಣುಗಳನ್ನು ನೀವು ಎಂದಾದರೂ ನೋಡಿದ್ದೀರಾ ಅಥವಾ ಕೇಳಿದ್ದೀರಾ? ಈ ಸುದ್ದಿ ಓದಿ.

ನಂಬಲಸಾಧ್ಯ! ಒಂದೇ ಮರಕ್ಕೆ 40 ಜಾತಿಯ ಹಣ್ಣುಗಳು; ಕುತೂಹಲಕಾರಿ ಸುದ್ದಿ ಓದಿ
credits : pixabay

ಕುತೂಹಲ ಕೆರಳಿಸುವ ಕೆಲವು ಸಂಗತಿಗಳು ನಿಜವಾಗಿಯೂ ಆಶ್ಚರ್ಯವನ್ನುಂಟು ಮಾಡುತ್ತವೆ. ಇದೀಗ ವೈರಲ್ ಆದ ಸುದ್ದಿಯೂ ಅಂಥದ್ದೇ! ನೀವು ಒಂದೇ ಮರದಲ್ಲಿ ನಿಮ್ಮ ಇಷ್ಟದ ಹಣ್ಣುಗಳೆಲ್ಲವನ್ನು ಬೆಳೆಯಬಹುದೇ? ಹೌದು, ಇದೀಗ ವೈರಲ್ ಆದ ಸುದ್ದಿ ನಿಜವಾಗಿಯೂ ಅಚ್ಚರಿ ಮೂಡಿಸುತ್ತದೆ. ಇಲ್ಲೋರ್ವರು ಒಂದೇ ಮರದಲ್ಲಿ ಸುಮಾರು 40 ಬಗೆಯ ಹಣ್ಣುಗಳನ್ನು ಬೆಳೆದಿದ್ದಾರೆ. ನಂಬಲಸಾಧ್ಯವಾಗಿದ್ದರೂ ಸಹ ಸಾಕ್ಷಿ ಎಂಬಂತೆ ಈ ಸುದ್ದಿ ಫುಲ್ ವೈರಲ್ ಆಗಿದೆ.

ಮಾವು, ಪೇರಲ, ಬೆರ್ರಿ ಹಣ್ಣುಗಳ ಹಾಗೆ ಒಂದು ಗಿಡಕ್ಕೆ ಒಂದೇ ಜಾತಿಯ ಹಣ್ಣು ಬಿಡುವುದನ್ನು ನೀವು ನೋಡಿರುತ್ತೀರಿ. ಆದರೆ ಒಂದೇ ಮರದಲ್ಲಿ 40 ಬಗೆಯ ಹಣ್ಣುಗಳನ್ನು ನೀವು ಎಂದಾದರೂ ನೋಡಿದ್ದೀರಾ ಅಥವಾ ಕೇಳಿದ್ದೀರಾ?

ನಂಬಲಸಾಧ್ಯ! ಒಂದೇ ಮರದಲ್ಲಿ 40 ಜಾತಿಯ ಹಣ್ಣುಗಳು ಸಿರಾಕ್ಯೂಸ್ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಮತ್ತು ಸ್ವಯಂ ಘೋಷಿತ ರೈತ 40 ವಿವಿಧ ರೀತಿಯ ಹಣ್ಣುಗಳನ್ನು ನೀಡುವ ಮರವನ್ನು ತಯಾರಿಸಿದ್ದಾರೆ. ಟ್ರೀ ಆಫ್ 40 ಎಂದು ಕರೆಯಲ್ಪಡುವ ಈ ಒಂದೇ ಮರವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪೇರಲ, ಪೀಚ್, ಚೆರ್ರಿ ಹೀಗೆ ಅನೇಕ ಹಣ್ಣುಗಳು ಒಂದೇ ಮರದಲ್ಲಿ ಬಿಡುತ್ತವೆ.

ಇದು ಹೇಗೆ ಸಾಧ್ಯ? ಪ್ರೊ. ಸ್ಯಾಮ್ ಈ ವಿಶಿಷ್ಟ ಮತ್ತು ನಂಬಲಸಾಧ್ಯವಾದ ಸಾಧನೆಯನ್ನು ಮಾಡಿದ್ದಾರೆ. ಇದನ್ನು ಕಸಿ ಮಾಡುವ ತಂತ್ರದ ಮೂಲಕ ಸಾಧಿಸಿದ್ದಾರೆ. ಈ ಮರವು ಸಂಪೂರ್ಣವಾಗಿ ಬೆಳೆಯಲು 9 ವರ್ಷ ತೆಗೆದುಕೊಂಡಿತು ಎಂಬುದು ವರದಿಗಳಿಂದ ತಿಳಿದು ಬಂದಿದೆ.

ಮರದ ಕೊಂಬೆಯನ್ನು ಮೊಗ್ಗಿನೊಂದಿಗೆ ಬೇರ್ಪಡಿಸಲಾಗುತ್ತದೆ. ಚಳಿಗಾಲದಲ್ಲಿ ಮುಖ್ಯ ಮರವನ್ನು ನೆಡುವ ಮೂಲಕ ಕಸಿ ಕಟ್ಟಲಾಗುತ್ತದೆ. ಪ್ರಾಧ್ಯಾಪಕ ಸ್ಯಾಮ್ ತನ್ನ ಯೋಜನೆಯನ್ನು 2008ರಲ್ಲಿ ಪ್ರಾರಂಭಿಸಿದರು ಹಾಹೆಯೇ ಇದಕ್ಕೆ ಟ್ರೀ ಆಫ್ 40 ಎಂದು ಹೆಸರಿಟ್ಟಿದ್ದಾರೆ.

ವ್ಯಾನ್ ಅಕೆನ್ ನ್ಯೂಯಾರ್ಕ್ ಸ್ಟೇಟ್ ಅಗ್ರಿಕಲ್ಚರ್ ಎಕ್ಸಪೆರಿಮೆಂಟ್ ಸ್ಟೇಷನ್ನಲ್ಲಿ 200 ಕ್ಕೂ ಹೆಚ್ಚು ವಿಧದ ಪ್ಲಮ್ ಮತ್ತು ಏಪ್ರಿಕಾಟ್​ಗಳ ತೋಟವನ್ನು ಸಿದ್ಧಪಡಿಸಲಾಯಿತು. ಆ ಬಳಿಕ ಕಸಿ ಮಾಡುವ ವಿಧಾನವನ್ನು ಪ್ರಾರಂಭಿಸಲಾಯಿತು. ಪ್ರೊಫೆಸರ್ ಸ್ಯಾಮ್ ಅವರು ಕೃಷಿಯ ಬಗೆಗೆ ಹೆಚ್ಚಿನ ಆಸಕ್ತಿಯಿಂದ ಈ ಶ್ಲಾಘನೆಯ ಸಾಧನೆಗೆ ಹೆಸರಾಗಿದ್ದಾರೆ.

ಇದನ್ನೂ ಓದಿ:

Viral News: ಈ ಮುಖ ಮೂತಿಗಾಗಿ ಈಕೆ ಖರ್ಚು ಮಾಡಿದ್ದು ಬರೋಬ್ಬರಿ 24 ಲಕ್ಷ ರೂ..!

Fruits: ಊಟದ ಬಳಿಕ ಹಣ್ಣುಗಳ ಸೇವನೆ ಸರಿಯೇ?

(Unbelievable story single tree has 40 different types of fruit viral news)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada