Fruits: ಊಟದ ಬಳಿಕ ಹಣ್ಣುಗಳ ಸೇವನೆ ಸರಿಯೇ?
ಆಹಾರವನ್ನು ಸೇವಿಸಿದ ಬಳಿಕವೇ ಹಣ್ಣುಗಳನ್ನು ಸೇವಿಸುವುದು ಅಷ್ಟಾಗಿ ದೇಹಕ್ಕೆ ಒಳ್ಳೆಯದಲ್ಲ. ಸರಿಯಾದ ಆಹಾರ ಸೇವಿಸಿದ ಕೆಲವು ಸಮಯದ ಬಳಿಕ ಹಣ್ಣುಗಳನ್ನು ಸೇವಿಸಬಹುದಾಗಿದೆ.
ಹಣ್ಣುಗಳು ಅಥವಾ ಹಣ್ಣಿನ ಜ್ಯೂಸ್ಗಳೆಲ್ಲಾ ಆರೋಗ್ಯಕ್ಕೆ ಉತ್ತಮ ಎಂಬ ವಿಷಯ ಗೊತ್ತೇ ಇದೆ. ಹಣ್ಣುಗಳನ್ನು ಸೇವಿಸುವುದು ನಿಮ್ಮ ಆರೋಗ್ಯಕ್ಕೆ ಉತ್ತಮವೂ ಹೌದು. ಹಣ್ಣುಗಳಲ್ಲಿ ಅನೇಕ ಪೌಷ್ಟಿಕಾಂಶಗಳಿರುತ್ತದೆ. ನಮ್ಮ ದೇಹಕ್ಕೆ ಬೇಕಾದ ಪ್ರೋಟೀನ್ನಿಂದ ಸಮೃದ್ಧವಾಗಿರುತ್ತದೆ. ಹಾಗಿರುವಾಗ ಯಾವ ಸಮಯದಲ್ಲಿ ಹಣ್ಣುಗಳನ್ನು ಸೇವಿಸುವುದು ಉತ್ತಮ ಎಂಬುದನ್ನು ತಿಳಿದುಕೊಳ್ಳಿ.
ಆಹಾರವನ್ನು ಸೇವಿಸಿದ ಬಳಿಕವೇ ಹಣ್ಣುಗಳನ್ನು ಸೇವಿಸುವುದು ಅಷ್ಟಾಗಿ ದೇಹಕ್ಕೆ ಒಳ್ಳೆಯದಲ್ಲ. ಸರಿಯಾದ ಆಹಾರ ಸೇವಿಸಿದ ಕೆಲವು ಸಮಯದ ಬಳಿಕ ಹಣ್ಣುಗಳನ್ನು ಸೇವಿಸಬಹುದಾಗಿದೆ. ಖಾಲಿ ಹೊಟ್ಟೆಯಲ್ಲಿರುವಾಗ ಹಣ್ಣಿನ ಸೇವನೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಅದರ ಬದಲಿಗೆ ಈಗಷ್ಟೇ ಊಟ ಮಾಡಿದ ಬಳಿಕ ಮತ್ತೆ ಹಣ್ಣುಗಳನ್ನು ಸೇವಿಸುವುದರಿಂದ ಜೀರ್ಣಕ್ರಿಯೆ ನಿಧಾನಗೊಳ್ಳುತ್ತದೆ. ಸರಿಯಾಗಿ ಆಹಾರ ಜೀರ್ಣಗೊಳ್ಳಲು ಕಷ್ಟವಾಗುತ್ತದೆ. ಊಟ ಮಾಡಿದ ಬಳಿಕ ಕೆಲ ಸಮಯದ ಬಳಿಕ ಹಣ್ಣುಗಳನ್ನು ಸೇವಿಸುವುದು ಉತ್ತಮ ಎಂದು ಪರಿಗಣಿಸಲಾಗಿದೆ.
ನಿಮ್ಮ ಹೊಟ್ಟೆ ತುಂಬಿರುವಾಗ ಹಣ್ಣುಗಳನ್ನು ಸೇವಿಸಲು ಪ್ರಾರಂಭಿಸಿದರೆ ಜೀರ್ಣಕ್ರಿಯೆ ಕಷ್ಟವಾಗುತ್ತದೆ. ಇದರಿಂದ ನೀವು ಸಂಪೂರ್ಣ ಪೋಷಕಾಂಶಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಆಹಾರ ಸೇವಿಸಿ ದೀರ್ಘಾವಧಿಯ ಬಳಿಕ ಹಣ್ಣುಗಳನ್ನು ಸೇವಿಸುವುದು ಹೆಚ್ಚು ಲಾಭದಾಯಕ ಎಂದು ಪರಿಗಣಿಸಲಾಗಿದೆ.
ನೀವು ಹಣ್ಣುಗಳನ್ನು ತಿನ್ನಲು ಬಯಸಿದರೆ ಆಹಾರ ಸೇವಿಸಿದ ತಕ್ಷಣವೇ ಹಣ್ಣುಗಳನ್ನು ಸೇವಿಸಬೇಡಿ. ಈ ವಿಷಯವನ್ನು ಎಂದಿಗೂ ನೆನಪಿಡಿ. ಊಟದ ಬಳಿಕ ಕೆಲ ಸಮಯದ ನಂತರ ಹಣ್ಣುಗಳನ್ನು ಸೇವಿಸುವ ಅಭ್ಯಾಸ ಒಳ್ಳೆಯದು. ಇಲ್ಲದಿದ್ದರೆ ಅಜೀರ್ಣದಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಇದನ್ನೂ ಓದಿ:
Health Tips: ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಕಾದ 6 ಆರೋಗ್ಯಕರ ತರಕಾರಿಗಳು
Health Tips: ಕಾಲುಗಳ ಊತ ಈ ಕಾಯಿಲೆಗಳ ಲಕ್ಷಣಗಳಾಗಿರುತ್ತದೆ; ನಿರ್ಲಕ್ಷಿಸುವ ಮುನ್ನ ಒಮ್ಮೆ ಯೋಚಿಸಿ