AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Health Tips: ಕಾಲುಗಳ ಊತ ಈ ಕಾಯಿಲೆಗಳ ಲಕ್ಷಣಗಳಾಗಿರುತ್ತದೆ; ನಿರ್ಲಕ್ಷಿಸುವ ಮುನ್ನ ಒಮ್ಮೆ ಯೋಚಿಸಿ

ಪಾದಗಳ ತೀವ್ರ ಊತವು ಒಂದು ದೊಡ್ಡ ಸಮಸ್ಯೆಯಾಗಿದೆ. ಹೀಗಾಗಿ ಇದನ್ನು ನಿರ್ಲಕ್ಷಿಸುವುದು ಅಷ್ಟು ಸಮಂಜಸವಲ್ಲ. ಅಲ್ಲದೆ ಕಾಲುಗಳ ಊತವು ಇನ್ನಿತರ ಕಾಯಿಲೆಯ ಲಕ್ಷಣಗಳು ಕೂಡ ಆಗಿರುತ್ತದೆ.

Health Tips: ಕಾಲುಗಳ ಊತ ಈ ಕಾಯಿಲೆಗಳ ಲಕ್ಷಣಗಳಾಗಿರುತ್ತದೆ; ನಿರ್ಲಕ್ಷಿಸುವ ಮುನ್ನ ಒಮ್ಮೆ ಯೋಚಿಸಿ
ಸಾಂಕೇತಿಕ ಚಿತ್ರ
TV9 Web
| Edited By: |

Updated on: Aug 22, 2021 | 8:15 AM

Share

ದೀರ್ಘಕಾಲದವರೆಗೆ ಒಂದೇ ಕಡೆ ಕುಳಿತುಕೊಳ್ಳುವುದರಿಂದ ಪಾದದ ಅಡಿ ಭಾಗದಲ್ಲಿ ಸೆಳೆತ ಮತ್ತು ಊತವನ್ನು ಉಂಟುಮಾಡಬಹುದು. ಹಾಗೆಯೇ ಕಾಲಿಗೆ ಗಾಯವಾದಾಗ ಕೂಡ ಕಾಲಿನಲ್ಲಿ ಊತ ಉಂಟಾಗುತ್ತದೆ. ದಿನವಿಡೀ ನಿರಂತರವಾಗಿ  ಕುರ್ಚಿಯಲ್ಲಿ ಕುಳಿತು ಕೆಲಸ ಮಾಡುವ ಜನರ ಕಾಲುಗಳಿಗೆ ಇಂತಹ ಸಮಸ್ಯೆ ಕಾಡುವುದು ಹೆಚ್ಚು. ಪಾದಗಳ ತೀವ್ರ ಊತವು ಒಂದು ದೊಡ್ಡ ಸಮಸ್ಯೆಯಾಗಿದೆ. ಹೀಗಾಗಿ ಇದನ್ನು ನಿರ್ಲಕ್ಷಿಸುವುದು ಅಷ್ಟು ಸಮಂಜಸವಲ್ಲ. ಅಲ್ಲದೆ ಕಾಲುಗಳ ಊತವು ಇನ್ನಿತರ ಕಾಯಿಲೆಯ ಲಕ್ಷಣಗಳು ಕೂಡ ಆಗಿರುತ್ತದೆ. ಹೀಗಾಗಿ ಕಾಲುಗಳಲ್ಲಿ ಊತವಿದ್ದರೆ ಮೊದಲು ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.

ಕಿಡ್ನಿ ಸಮಸ್ಯೆ ಕಾಲುಗಳಲ್ಲಿ ಊತವಿದ್ದರೆ, ತಕ್ಷಣ ಮೂತ್ರಪಿಂಡ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ. ಮೂತ್ರಪಿಂಡಗಳು ಸರಿಯಾಗಿ ಕಾರ್ಯನಿರ್ವಹಿಸದಿದ್ದಾಗ ದೇಹದಲ್ಲಿ ದ್ರವಗಳು ಸಂಗ್ರಹವಾಗುತ್ತವೆ. ಈ ಸ್ಥಿತಿಯು ಉಸಿರಾಟದ ತೊಂದರೆ, ಕಾಲುಗಳ ಊತ, ಮೂತ್ರ ವಿಸರ್ಜನೆಯಾಗದಿರುವುದು, ಸುಸ್ತು ಇತ್ಯಾದಿಗಳಿಗೆ ಕಾರಣವಾಗಬಹುದು. ಹಾಗಾಗಿ ಕಾಲುಗಳ ಮೇಲೆ ಊತವಿದ್ದಲ್ಲಿ ತಜ್ಞರ ಸಲಹೆ ಪಡೆಯಲು ಮರೆಯದಿರಿ.

ಹೃದಯ ಸಂಬಂಧಿ ಕಾಯಿಲೆಯ ಅಪಾಯ ಕೆಲವೊಮ್ಮೆ ಹೃದಯ ಸರಿಯಾಗಿ ಕೆಲಸ ಮಾಡದಿದ್ದರೆ ಹೃದಯವು ರಕ್ತವನ್ನು ಸರಿಯಾಗಿ ಪಂಪ್ ಮಾಡುವುದಿಲ್ಲ. ಅಂತಹ ಸಂದರ್ಭಗಳಲ್ಲಿ ದೇಹ ಉಪ್ಪಿನಾಂಶಯುಕ್ತ ನೀರನ್ನು ಉಳಿಸಿಕೊಳ್ಳುತ್ತದೆ. ಈ ಸ್ಥಿತಿಯು ಪಾದಗಳಲ್ಲಿ ಊತವನ್ನು ಉಂಟುಮಾಡಬಹುದು. ಈ ರೋಗಲಕ್ಷಣಗಳು ಹೆಚ್ಚಿದ ಹೃದಯ ಬಡಿತ, ಉಸಿರಾಟದ ತೊಂದರೆ, ಆಯಾಸ ಉಂಟು ಮಾಡುತ್ತದೆ.

ಯಕೃತ್ತಿನ ಸಮಸ್ಯೆಗಳು ಅಲ್ಬುಮಿನ್ ಎಂಬ ಪ್ರೋಟೀನ್ ರಕ್ತನಾಳಗಳ ಮೂಲಕ ರಕ್ತ ಹರಿಯುವುದನ್ನು ತಡೆಯುತ್ತದೆ. ಕೆಲವೊಮ್ಮೆ ಯಕೃತ್ತು ಅಲ್ಬುಮಿನ್ ಮಾಡುವುದನ್ನು ನಿಲ್ಲಿಸುತ್ತದೆ. ದೇಹವು ಪ್ರೋಟೀನ್ ಕೊರತೆಯಿಂದ ಇದೆ ಎಂದರ್ಥ. ಇದು ಅಪಧಮನಿಗಳಿಂದ ರಕ್ತಸ್ರಾವಕ್ಕೂ ಕಾರಣವಾಗಬಹುದು. ಈ ಸ್ಥಿತಿಯು ನಿಮ್ಮ ಪಾದಗಳಲ್ಲಿ ಊತವನ್ನು ಉಂಟುಮಾಡಬಹುದು. ಕಾಮಾಲೆ, ಮೂತ್ರದ ಬಣ್ಣ ಮತ್ತು ದೈಹಿಕ ಆಯಾಸ ಇವುಗಳ ಲಕ್ಷಣಗಳಾಗಿವೆ.

ಬೆವರುವಿಕೆಗೆ ಕಾರಣವಾಗುತ್ತದೆ ದೇಹ ಬೆವರುವ ಮೂಲಕ ದೇಹದಿಂದ ಜೀವಾಣು ಮತ್ತು ಬ್ಯಾಕ್ಟೀರಿಯಾವನ್ನು ತೆಗೆದುಹಾಕುತ್ತದೆ. ಈ ವ್ಯವಸ್ಥೆಯು ಸರಿಯಾಗಿ ಕೆಲಸ ಮಾಡದಿದ್ದಾಗ, ದೇಹದಲ್ಲಿ ಜೀವಾಣು ಸಂಗ್ರಹವಾಗುತ್ತದೆ. ಈ ಸ್ಥಿತಿಯು ಕೈ ಅಥವಾ ಕಾಲುಗಳ ಊತಕ್ಕೆ ಕಾರಣವಾಗಬಹುದು. ಸಾಂದರ್ಭಿಕವಾಗಿ ಎರಡೂ ಕೈಗಳಲ್ಲಿ ಅಥವಾ ಕಾಲುಗಳಲ್ಲಿ ಊತ ಉಂಟಾಗುತ್ತದೆ.

ಇದನ್ನೂ ಓದಿ: Custard Apple: ಸೀತಾಫಲ ಹಣ್ಣು ಸೇವಿಸುದರಿಂದ ಅನೇಕ ಆರೋಗ್ಯಕರ ಪ್ರಯೋಜನಗಳಿವೆ

ಕೊತ್ತಂಬರಿ ಸೊಪ್ಪು ರುಚಿಗಷ್ಟೇ ಎಂಬ ಭ್ರಮೆಯಲ್ಲಿದ್ದರೆ ಇಂದೇ ಹೊರ ಬನ್ನಿ; ಆರೋಗ್ಯಕರ ಅನುಕೂಲದ ಬಗ್ಗೆ ತಿಳಿಯಿರಿ

ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?