ಅಕ್ಟೋಬರ್ ತಿಂಗಳಲ್ಲಿ ಕೊವಿಡ್ 3ನೇ ಅಲೆ ಉತ್ತುಂಗಕ್ಕೇರುವ ಸಾಧ್ಯತೆ; ಮಕ್ಕಳಿಗೆ ಅಪಾಯವಿದೆ ಎಂದು ಎಚ್ಚರಿಸಿದ ಗೃಹ ಸಚಿವಾಲಯದ ವರದಿ
ವೈದ್ಯಕೀಯ ಸೌಲಭ್ಯಗಳ ಕೊರತೆ, ವೈದ್ಯರು, ಸಿಬ್ಬಂದಿ ಕೊರತೆ ಮತ್ತು ಅಂತಹ ಸನ್ನಿವೇಶಗಳನ್ನು ಎದುರಿಸಲು ವೆಂಟಿಲೇಟರ್‌ಗಳು, ಆಂಬ್ಯುಲೆನ್ಸ್‌ಗಳಂತಹ ಉಪಕರಣಗಳ ಕೊರತೆಯ ಬಗ್ಗೆ ವರದಿ ಎಚ್ಚರಿಸಿದೆ. ಮಾಧ್ಯಮ ವರದಿಗಳ ಪ್ರಕಾರ ಈಗಿರುವ ವೈದ್ಯಕೀಯ ಸೌಲಭ್ಯಗಳು ಹೆಚ್ಚಿನ ಸಂಖ್ಯೆಯ ಮಕ್ಕಳು ಸೋಂಕಿಗೆ ಒಳಗಾದ ಸಂದರ್ಭದಲ್ಲಿ ಸಾಕಾಗುವುದಿಲ್ಲ.
ದೆಹಲಿ: ಗೃಹ ಸಚಿವಾಲಯದ ನಿರ್ದೇಶನದ ಮೇರೆಗೆ ಸ್ಥಾಪಿಸಲಾದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆಯ (NIDM) ಅಡಿಯಲ್ಲಿ ರಚಿಸಲಾದ ತಜ್ಞರ ಸಮಿತಿಯು ಕೊವಿಡ್ -19 ರ ಮೂರನೇ ತರಂಗವು ಅಕ್ಟೋಬರ್ ವೇಳೆಗೆ ಉತ್ತುಂಗಕ್ಕೇರಬಹುದು ಎಂದು ಹೇಳಿದೆ. ಟೈಮ್ಸ್ ಆಫ್ ಇಂಡಿಯಾದ ವಿಶೇಷ ವರದಿಯಲ್ಲಿ ಇಂತಹ ಸನ್ನಿವೇಶಗಳನ್ನು ಎದುರಿಸಲು ದೇಶದಾದ್ಯಂತ ಇರುವ ಮಕ್ಕಳ ಸೌಲಭ್ಯಗಳು ಅಸಮರ್ಪಕವಾಗಿರುವುದನ್ನು ಎತ್ತಿ ತೋರಿಸಿದ್ದು, ವೈದ್ಯಕೀಯ ಮೂಲಸೌಕರ್ಯವನ್ನು ಹೆಚ್ಚಿಸಲು ಮತ್ತು ಆರೋಗ್ಯ ಸೌಲಭ್ಯಗಳನ್ನು ಹೆಚ್ಚಿಸಲು ಕರೆ ನೀಡಿದೆ ಎಂದು ಹೇಳಲಾಗಿದೆ. ಈ ವರದಿಯನ್ನು ಪ್ರಧಾನಿಯವರ ಕಚೇರಿಗೆ ಸಲ್ಲಿಸಲಾಗಿದೆ.
ವೈದ್ಯಕೀಯ ಸೌಲಭ್ಯಗಳ ಕೊರತೆ, ವೈದ್ಯರು, ಸಿಬ್ಬಂದಿ ಕೊರತೆ ಮತ್ತು ಅಂತಹ ಸನ್ನಿವೇಶಗಳನ್ನು ಎದುರಿಸಲು ವೆಂಟಿಲೇಟರ್‌ಗಳು, ಆಂಬ್ಯುಲೆನ್ಸ್‌ಗಳಂತಹ ಉಪಕರಣಗಳ ಕೊರತೆಯ ಬಗ್ಗೆ ವರದಿ ಎಚ್ಚರಿಸಿದೆ. ಮಾಧ್ಯಮ ವರದಿಗಳ ಪ್ರಕಾರ ಈಗಿರುವ ವೈದ್ಯಕೀಯ ಸೌಲಭ್ಯಗಳು ಹೆಚ್ಚಿನ ಸಂಖ್ಯೆಯ ಮಕ್ಕಳು ಸೋಂಕಿಗೆ ಒಳಗಾದ ಸಂದರ್ಭದಲ್ಲಿ ಸಾಕಾಗುವುದಿಲ್ಲ.
ಏತನ್ಮಧ್ಯೆ, ನೀತಿ ಆಯೋಗದ ಸದಸ್ಯ ವಿ ಕೆ ಪೌಲ್ ನೇತೃತ್ವದ ಗುಂಪು, ಕಳೆದ ತಿಂಗಳು ಸರ್ಕಾರದೊಂದಿಗೆ ಹಂಚಿಕೊಂಡಿದ್ದ ಶಿಫಾರಸಿನಲ್ಲಿ, ಭವಿಷ್ಯದಲ್ಲಿ ಕೊವಿಡ್ -19 ಸೋಂಕಿನ ಏರಿಕೆಯಲ್ಲಿ ಪ್ರತಿ 100 ಧನಾತ್ಮಕ ಪ್ರಕರಣಗಳಲ್ಲಿ 23 ಪ್ರಕರಣಗಳು ಆಸ್ಪತ್ರೆಗೆ ದಾಖಲಾಗುವಂತವುಗಳಾಗಿವೆ ಎಂದಿದೆ.
ಈ ಅಂದಾಜು ಸೆಪ್ಟೆಂಬರ್ 2020 ರಲ್ಲಿ ಎರಡನೇ ಅಲೆಗೆ ಮುಂಚಿತವಾಗಿ ಗುಂಪು ಮಾಡಿದ ಊಹೆಗಿಂತ ಹೆಚ್ಚಾಗಿದೆ. “ತೀವ್ರ/ ಮಧ್ಯಮ ತೀವ್ರ” ರೋಗಲಕ್ಷಣಗಳನ್ನು ಹೊಂದಿರುವ ಸುಮಾರು ಶೇ 20 ರೋಗಿಗಳಿಗೆ ಆಸ್ಪತ್ರೆಗೆ ಅಗತ್ಯವಿರುತ್ತದೆ ಎಂದು ಲೆಕ್ಕಾಚಾರ ಮಾಡಲಾಗಿತ್ತು ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಕೊವಿಡ್ -19 ಎರಡನೇ ಸಾಂಕ್ರಾಮಿಕದ ನಂತರ, ಈ ವರ್ಷದ ಏಪ್ರಿಲ್-ಜೂನ್ ಅವಧಿಯಲ್ಲಿ ಕಂಡುಬಂದ ಮಾದರಿಯನ್ನು ಆಧರಿಸಿ ಹೆಚ್ಚಿನ ಸಂಖ್ಯೆಯ ಆಸ್ಪತ್ರೆ ಹಾಸಿಗೆಗಳನ್ನು ಮೀಸಲಿಡುವ ಶಿಫಾರಸನ್ನು ಮಾಡಲಾಗಿದೆ. ವರದಿ ಪ್ರಕಾರ ಅದರ ಉತ್ತುಂಗದಲ್ಲಿ, ಜೂನ್ 1 ರಂದು ದೇಶಾದ್ಯಂತ ಸಕ್ರಿಯ ಪ್ರಕರಣಗಳು 18 ಲಕ್ಷ ಆಗಿದ್ದು ಈ ಪೈಕಿ ಶೇ 21.74 ಪ್ರಕರಣಗಳು 10 ರಾಜ್ಯಗಳಲ್ಲಿ ಆಸ್ಪತ್ರೆಗೆ ದಾಖಲಾಗಬೇಕಾಗಿದ್ದು, ಅವುಗಳಲ್ಲಿ ಗರಿಷ್ಠ ಪ್ರಕರಣಗಳು ಶೇ 2.2 ಐಸಿಯು ಚಿಕಿತ್ಸೆ ಪಡೆಯಬೇಕಾಗಿ ಬಂದಿತ್ತು.
ಕೊವಿಡ್ -19 ರ ಮೂರನೇ ತರಂಗವನ್ನು ನಿಭಾಯಿಸಲು ಕೇಂದ್ರವು ಸಂಪೂರ್ಣವಾಗಿ ಸಿದ್ಧವಾಗಿದೆ ಮತ್ತು ಈ ಉದ್ದೇಶಕ್ಕಾಗಿ 23,123 ಕೋಟಿ ರೂ.ಗಳನ್ನು ಒದಗಿಸಲಾಗಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಶುಕ್ರವಾರ ತಿಳಿಸಿದ್ದಾರೆ. ಮೂರನೇ ತರಂಗವು ಇತರರಿಗಿಂತ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರಬಹುದು ಎಂಬ ಆತಂಕದ ನಡುವೆ ಮಕ್ಕಳ ಆರೈಕೆಯನ್ನು ಬಲಪಡಿಸಲು ವಿಶೇಷ ಒತ್ತು ನೀಡಲಾಗುತ್ತಿದೆ ಎಂದು ಅವರು ಹೇಳಿದರು.
ಕೊವಿಡ್ -19 ರ ಮೂರನೇ ತರಂಗವನ್ನು ಎದುರಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸಂಪೂರ್ಣ ಸಿದ್ಧವಾಗಿದೆ. ಅದನ್ನು ನಿಭಾಯಿಸಲು 23,123 ಕೋಟಿ ರೂ.ಗಳನ್ನು ಒದಗಿಸಲಾಗಿದೆ ಎಂದು ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವರಾಗಿರುವ ಠಾಕೂರ್ ಹೇಳಿದರು.
ಮೂರನೇ ಅಲೆ ಇತರರಿಗಿಂತ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರಬಹುದು ಎಂದು ತಜ್ಞರು ಭಯಪಡುತ್ತಿರುವುದರಿಂದ ಮಕ್ಕಳ ಆರೈಕೆಯನ್ನು ಬಲಪಡಿಸಲು ವಿಶೇಷ ಒತ್ತು ನೀಡಲಾಗುತ್ತಿದೆ ಎಂದು ಅವರು ಹೇಳಿದರು. ಕೆಲವು ತಜ್ಞರು ಕೊವಿಡ್ ನ ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರಬಹುದು ಎಂದು ಎಚ್ಚರಿಸಿದ್ದಾರೆ. ಆದರೆ ಇತರರು ಈ ಸಿದ್ಧಾಂತವನ್ನು ನಂಬಲು ಸ್ವಲ್ಪ ಕಾರಣವಿದೆ ಎಂದು ಹೇಳಿದ್ದಾರೆ. ಆದಾಗ್ಯೂ, ದೇಶದಲ್ಲಿ ಮಕ್ಕಳ ಕೊವಿಡ್ ಸೇವೆಗಳನ್ನು ಸುಧಾರಿಸುವ ಅವಶ್ಯಕತೆಯಿದೆ ಎಂದು ತಜ್ಞರು ಒಪ್ಪುತ್ತಾರೆ.
ಇದನ್ನೂ ಓದಿ: Coronavirus cases in India: ದೇಶದಲ್ಲಿ 25,072 ಹೊಸ ಕೊವಿಡ್ ಪ್ರಕರಣ ಪತ್ತೆ, 389 ಮಂದಿ ಸಾವು
ಇದನ್ನೂ ಓದಿ: School Reopening: ನಿಮ್ಮ ಹತ್ತಿರದ ಯಾವುದೇ ಶಾಲೆಗೆ ಹೋಗಿ ಪಾಠ ಕೇಳಿ; ವಲಸೆ ಮಕ್ಕಳಿಗೆ ಶಿಕ್ಷಣ ಸಚಿವರಿಂದ ಶುಭ ಸುದ್ದಿ
(Home Ministry Report Warns that the third wave of COVID-19 may affect children more)
Published On - 11:40 am, Mon, 23 August 21