Brain Tumor: ಬ್ರೈನ್ ಟ್ಯೂಮರ್ ಕಾಯಿಲೆಯ ಬಗ್ಗೆ ಸುಳ್ಳು ವರದಿಗಳನ್ನು ನಂಬುವ ಮುನ್ನ ಸತ್ಯಾಸತ್ಯತೆ ಬಗ್ಗೆ ಅರಿಯುವುದು ಸೂಕ್ತ

Health Tips: ಬ್ರೈನ್ ಟ್ಯೂಮರ್​ನ ರೋಗಲಕ್ಷಣಗಳನ್ನು ಮೊದಲೇ ತಿಳಿಯುವುದರಿಂದ ಅಪಾಯವನ್ನು ಬಹಳ ಬೇಗ ಕಡಿಮೆ ಮಾಡಬಹುದು. ಅದರಲ್ಲೂ ಮುಖ್ಯವಾಗಿ ಈ ಕಾಯಿಲೆಯ ಬಗ್ಗೆ ಜನರ ಕಲ್ಪನೆ ಮತ್ತು ತಜ್ಞರು ಏನು ಹೇಳುತ್ತಾರೆಂದು ತಿಳಿದುಕೊಳ್ಳುವುದು ಸೂಕ್ತ.

Brain Tumor: ಬ್ರೈನ್ ಟ್ಯೂಮರ್ ಕಾಯಿಲೆಯ ಬಗ್ಗೆ ಸುಳ್ಳು ವರದಿಗಳನ್ನು ನಂಬುವ ಮುನ್ನ ಸತ್ಯಾಸತ್ಯತೆ ಬಗ್ಗೆ ಅರಿಯುವುದು ಸೂಕ್ತ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: shruti hegde

Updated on: Aug 24, 2021 | 8:24 AM

ಬ್ರೈನ್ ಟ್ಯೂಮರ್ ಮನುಷ್ಯನನ್ನು ತುಂಬಾ ಬಾಧಿಸುವ ಆರೋಗ್ಯ ಸಮಸ್ಯೆ. ಅದಾಗಿಯೂ ಕೆಲವರು ಮೆದುಳಿನ ಗಡ್ಡೆಗಳು ಮೆದುಳಿಗೆ ಮಾತ್ರ ಸೀಮಿತವಾಗಿವೆ ಎಂದು ನಂಬುತ್ತಾರೆ. ಆದರೆ ಇದು ಸಂಪೂರ್ಣವಾಗಿ ಸತ್ಯವಲ್ಲ. ಈ ಗೆಡ್ಡೆ ಕ್ಯಾನ್ಸರ್ ಆಗಿದ್ದರೆ, ಅದು ಮೂತ್ರಪಿಂಡ, ಕರುಳು ಮತ್ತು ಶ್ವಾಸಕೋಶಗಳನ್ನು ಕೂಡ ತಲುಪಬಹುದು. ಹಾಗಾಗಿ ಜಾಗರೂಕರಾಗಿರುವುದು ಅಗತ್ಯವಾಗಿದೆ. ಒಂದೊಂದು ರೋಗಿಯ ರೋಗಲಕ್ಷಣಗಳು ವಿಭಿನ್ನವಾಗಿ ಕಾಣುತ್ತವೆ. ಇವುಗಳನ್ನು ತಡೆಗಟ್ಟಲು ಅತ್ಯಂತ ಮುಖ್ಯವಾದ ವಿಷಯವೆಂದರೆ ಅದರ ಆರಂಭಿಕ ರೋಗಲಕ್ಷಣಗಳನ್ನು ಸಕಾಲಿಕವಾಗಿ ಗುರುತಿಸುವುದು. ಬ್ರೈನ್ ಟ್ಯೂಮರ್​ನ ರೋಗಲಕ್ಷಣಗಳನ್ನು ಮೊದಲೇ ತಿಳಿಯುವುದರಿಂದ ಅಪಾಯವನ್ನು ಬಹಳ ಬೇಗ ಕಡಿಮೆ ಮಾಡಬಹುದು. ಅದರಲ್ಲೂ ಮುಖ್ಯವಾಗಿ ಈ ಕಾಯಿಲೆಯ ಬಗ್ಗೆ ಜನರ ಕಲ್ಪನೆ ಮತ್ತು ತಜ್ಞರು ಏನು ಹೇಳುತ್ತಾರೆಂದು ತಿಳಿದುಕೊಳ್ಳುವುದು ಸೂಕ್ತ.

ಜನರ ಕಲ್ಪನೆ: ಎಲ್ಲಾ ರೀತಿಯ ಮೆದುಳಿನ ಗಡ್ಡೆಗಳು ಕ್ಯಾನ್ಸರ್​ಗೆ ಕಾರಣವಾಗಬಹುದು.

ತಜ್ಞರ ಸಲಹೆ: ಮೆದುಳಿನ ಗಡ್ಡೆಗಳಲ್ಲಿ ಕೇವಲ ಮೂರನೇ ಒಂದು ಭಾಗ ಮಾತ್ರ ಕ್ಯಾನ್ಸರ್ ಆಗಿ ಬದಲಾಗುತ್ತದೆ ಎಂದು ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯ ಮುಖ್ಯ ನರ ಶಸ್ತ್ರಚಿಕಿತ್ಸಕ ಡಾ.ಅಭಯ್ ಕುಮಾರ್ ಹೇಳಿದ್ದಾರೆ. ಹೆಚ್ಚಿನ ಮೆದುಳಿನ ಗಡ್ಡೆಗಳು ಕ್ಯಾನ್ಸರ್ ಆಗಿ ಬದಲಾಗುವುದಿಲ್ಲ. ಅಂದರೆ ಅವು ಕ್ಯಾನ್ಸರ್​ಗೆ ಕಾರಣವಾಗುವುದಿಲ್ಲ. ಅವುಗಳನ್ನು ಚಿಕಿತ್ಸೆಯಿಂದ ಸಂಪೂರ್ಣವಾಗಿ ನಿರ್ಮೂಲನೆ ಮಾಡಬಹುದು.

ಜನರ ಕಲ್ಪನೆ: ಮೆದುಳಿನ ಗಡ್ಡೆಗಳು ಮೆದುಳಿಗೆ ಸೀಮಿತವಾಗಿವೆ.

ತಜ್ಞರ ಸಲಹೆ: ಇದು ಮೆದುಳಿನಲ್ಲಿ ಆರಂಭವಾಗುತ್ತದೆ ಆದರೆ ಅದು ಕ್ಯಾನ್ಸರ್ ಆಗಿ ಬದಲಾದಾಗ, ದೇಹದ ಹಲವು ಭಾಗಗಳನ್ನು ತಲುಪುತ್ತದೆ. ಉದಾಹರಣೆಗೆ: ಮೂತ್ರಪಿಂಡಗಳು, ಸ್ತನ, ಶ್ವಾಸಕೋಶ ಮತ್ತು ಕರುಳನ್ನು ತಲುಪಬಹುದು. ಆದ್ದರಿಂದ ಮೆದುಳಿನ ಗಡ್ಡೆ ಬಗ್ಗೆ ತಿಳಿದ ತಕ್ಷಣ ಚಿಕಿತ್ಸೆಯನ್ನು ಪ್ರಾರಂಭಿಸಬೇಕು.

ಜನರ ಕಲ್ಪನೆ: ಮೆದುಳಿನ ಗಡ್ಡೆಗಳು ಕುಟುಂಬದ ಸದಸ್ಯರಲ್ಲಿ ಅನುವಂಶಿಕವಾಗಿರುತ್ತವೆ.

ತಜ್ಞರ ಸಲಹೆ: ಡಾ. ಅಭಯ್ ಅವರ ಪ್ರಕಾರ, ಇದು ಕುಟುಂಬದ ಸದಸ್ಯರಲ್ಲಿ ಅನುವಂಶಿಕವಾಗಿದೆ ಎಂಬುವುದಕ್ಕೆ ಇದುವರೆಗೆ ಯಾವುದೇ ಪುರಾವೆಗಳಿಲ್ಲ. ಇದು ಯಾವುದೇ ವಯಸ್ಸಿನಲ್ಲಿ ಯಾರಿಗಾದರೂ ಬರಬಹುದು. ನವಜಾತ ಶಿಶುಗಳಲ್ಲಿ ಮೆದುಳಿನ ಗಡ್ಡೆಗಳ ಪ್ರಕರಣಗಳು ಕೂಡ ಕಂಡುಬಂದಿವೆ.

ಜನರ ಕಲ್ಪನೆ: ಮೊಬೈಲ್ ಫೋನ್​ಗಳು ಮೆದುಳಿನ ಗಡ್ಡೆಗಳನ್ನು ಉಂಟುಮಾಡಬಹುದು.

ತಜ್ಞರ ಸಲಹೆ: ಮೊಬೈಲ್ ಫೋನ್ ಅಥವಾ ವಿಕಿರಣವು ಮೆದುಳಿನ ಗಡ್ಡೆಗಳನ್ನು ಉಂಟುಮಾಡಬಹುದು ಎಂದು ಸಾಬೀತುಪಡಿಸುವ ಯಾವುದೇ ಸಂಶೋಧನೆ ಇದುವರೆಗೆ ಹೊರಬಂದಿಲ್ಲ. ಇಲ್ಲದಿದ್ದರೆ, ವಿಕಿರಣಕ್ಕೆ ದೀರ್ಘಕಾಲ ಒಡ್ಡಿಕೊಳ್ಳುವುದು ಆರೋಗ್ಯಕ್ಕೆ ಹಾನಿಕಾರಕ. ಹಾಗಾಗಿ ಜಾಗರೂಕರಾಗಿರುವುದು ಅಗತ್ಯವಾಗಿದೆ.

ಜನರ ಕಲ್ಪನೆ: ಬ್ರೈನ್ ಟ್ಯೂಮರ್ ಹೊಂದಿರುವ ಪ್ರತಿಯೊಬ್ಬ ರೋಗಿಯೂ ಒಂದೇ ರೀತಿಯ ಲಕ್ಷಣಗಳನ್ನು ಹೊಂದಿರುತ್ತಾನೆ.

ತಜ್ಞರ ಸಲಹೆ: ಇದು ಸಂಪೂರ್ಣವಾಗಿ ಸತ್ಯವಲ್ಲ. ಮೆದುಳಿನ ಗಡ್ಡೆಯ ಗಾತ್ರ, ಸ್ಥಳವನ್ನು ಅವಲಂಬಿಸಿ, ವಿವಿಧ ರೋಗಿಗಳಲ್ಲಿ ರೋಗಲಕ್ಷಣಗಳು ಸಹ ವಿಭಿನ್ನವಾಗಿ ಕಾಣಿಸಬಹುದು. ಕೆಲವು ರೋಗಿಗಳಿಗೆ ಕಾಯಿಲೆಯ ಗುಣಲಕ್ಷಣಗಳು ಕೂಡ ತಿಳಿಯುವುದಿಲ್ಲ. ಹೀಗಾಗಿ ಹೆಚ್ಚು ಜಾಗರುಕರಾಗಿರುವುದು ಸೂಕ್ತ.

ಜನರ ಕಲ್ಪನೆ: ಬ್ರೈನ್ ಟ್ಯೂಮರ್ ನಿರಂತರ ತಲೆನೋವಿಗೆ ಕಾರಣವಾಗಬಹುದು

ತಜ್ಞರ ಸಲಹೆ: ಇದು ಪ್ರತಿ ರೋಗಿಯಲ್ಲಿನ ಮೆದುಳಿನ ಗಡ್ಡೆಯ ಲಕ್ಷಣವಲ್ಲ. ತಲೆನೋವಿಗೆ ಹಲವು ಕಾರಣಗಳಿರಬಹುದು. ಇದನ್ನು ಕೇವಲ ಮೆದುಳಿನ ಗಡ್ಡೆಯ ಲಕ್ಷಣವೆಂದು ಪರಿಗಣಿಸುವುದು ಸರಿಯಲ್ಲ. ಪರೀಕ್ಷೆ ನಡೆಸಿದ ಬಳಿಕವೇ ನಿರ್ಧಾರಕ್ಕೆ ಬರುವುದು ಸೂಕ್ತ.

ಇದನ್ನೂ ಓದಿ: Health Tips: ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ವಿಧಾನಗಳನ್ನು ಅನುಸರಿಸಿ

Custard Apple: ಸೀತಾಫಲ ಹಣ್ಣು ಸೇವಿಸುದರಿಂದ ಅನೇಕ ಆರೋಗ್ಯಕರ ಪ್ರಯೋಜನಗಳಿವೆ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್