Coconut Benefits: ತೆಂಗಿನಕಾಯಿ ಪೂಜೆ ಮತ್ತು ಅಡುಗೆಗೆ ಮಾತ್ರ ಎಂದು ತಿಳಿದರೆ ಅದು ತಪ್ಪು; ಆರೋಗ್ಯಕರ ಗುಣದ ಬಗ್ಗೆಯೂ ಗಮನಹರಿಸಿ

ತೆಂಗಿನಕಾಯಿ ಅನೇಕ ಆರೋಗ್ಯಕರ ಗುಣಗಳನ್ನು ಹೊಂದಿದೆ. ಪ್ರಾಚೀನ ಕಾಲದಿಂದ ತನ್ನ ನೈಸರ್ಗಿಕ ಗುಣಗಳಿಂದ ತೆಂಗಿನಕಾಯಿ ಅನೇಕ ಕಾಯಿಲೆಗಳನ್ನು ದೂರ ಮಾಡಿಕೊಂಡು ಬಂದಿದೆ.

Coconut Benefits: ತೆಂಗಿನಕಾಯಿ ಪೂಜೆ ಮತ್ತು ಅಡುಗೆಗೆ ಮಾತ್ರ ಎಂದು ತಿಳಿದರೆ ಅದು ತಪ್ಪು; ಆರೋಗ್ಯಕರ ಗುಣದ ಬಗ್ಗೆಯೂ ಗಮನಹರಿಸಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: shruti hegde

Updated on: Aug 25, 2021 | 8:17 AM

ಭಾರತೀಯ ಹಿಂದೂ ಸಂಪ್ರದಾಯದಲ್ಲಿ ತೆಂಗಿನಕಾಯಿಗೆ ವಿಶಿಷ್ಟ ಸ್ಥಾನವಿದೆ. ತೆಂಗಿನಕಾಯಿಯನ್ನು ಭಾರತೀಯರು ಶುಭಪ್ರಧಾನವಾಗಿ ಭಾವಿಸುತ್ತಾರೆ. ಪೂಜಾದಿಕಾರ್ಯಕ್ರಮಗಳಿಗೆ, ಶುಭಕಾರ್ಯಗಳಿಗೆ ತೆಂಗಿನಕಾಯಿ ಕಡ್ಡಾಯ. ಇಷ್ಟೇ ಅಲ್ಲದೆ ಮಾಡುವ ಪ್ರತಿಯೊಂದು ಅಡುಗೆಗೂ ತೆಂಗಿನಕಾಯಿ ಬೇಕೆ ಬೇಕು. ಇನ್ನು ತೆಂಗಿನಕಾಯಿಯನ್ನು ಕೊಬ್ಬರಿ ಮಾಡಿ ಅದರಿಂದ ಎಣ್ಣೆ ಮಾಡುವುದು ಕೂಡ ಹೆಚ್ಚಿನ ಜನರಲ್ಲಿ ಚಾಲ್ತಿಯಲ್ಲಿದೆ. ಅದರಂತೆ ತೆಂಗಿನಕಾಯಿ ಅನೇಕ ಆರೋಗ್ಯಕರ ಗುಣಗಳನ್ನು ಹೊಂದಿದೆ. ಪ್ರಾಚೀನ ಕಾಲದಿಂದ ತನ್ನ ನೈಸರ್ಗಿಕ ಗುಣಗಳಿಂದ ತೆಂಗಿನಕಾಯಿ ಅನೇಕ ಕಾಯಿಲೆಗಳನ್ನು ದೂರ ಮಾಡಿಕೊಂಡು ಬಂದಿದೆ.

ಪೋಷಕಾಂಶ ತೆಂಗಿನಕಾಯಿಯಲ್ಲಿ ಪೌಷ್ಟಿಕ ಮೌಲ್ಯಗಳು ಹೆಚ್ಚಿರುತ್ತವೆ. ಇದರಲ್ಲಿ ವಿಟಮಿನ್ ಎ, ಬಿ, ಸಿ, ರೈಬೋಫ್ಲೆವಿನ್, ಕಬ್ಬಿಣಾಂಶ, ಕ್ಯಾಲ್ಸಿಯಂ, ಫಾಸ್ಫರಸ್ ಅಂಶಗಳು ಸಮೃದ್ಧವಾಗಿದೆ. ಇನ್ನು ತೆಂಗಿನಕಾಯಿಯ ನೀರು ದೇಹಕ್ಕೆ ಹೆಚ್ಚು ಶಕ್ತಿ ನೀಡುತ್ತದೆ. ತೆಂಗಿನಕಾಯಿ ದೇಹವು ಸದಾ ಹೈಡ್ರೇಟೆಡ್ ಆಗಿ ಉಳಿಯಲು ಸಹಾಯ ಮಾಡುತ್ತದೆ.

ಕೂದಲಿನ ಆರೈಕೆಗೆ ಉತ್ತಮ ಕೂದಲಿನ ಆರೈಕೆಗೂ ತೆಂಗಿನಕಾಯಿ ಉತ್ತಮವಾಗಿದೆ. ಕೂದಲಿಗೆ ಕೊಬ್ಬರಿ ಎಣ್ಣೆ ಮಾತ್ರ ಅಲ್ಲ ತೆಂಗಿನಕಾಯಿಯ ಹಾಲು ಕೂಡ ಒಳ್ಳೆಯದು. ಕೂದಲಿನ ತೇವವನ್ನು ಹಾಗೆಯೇ ಇರಿಸಿಕೊಳ್ಳಲು ಆಗಾಗ ಕೊಬ್ಬರಿ ಎಣ್ಣೆಯನ್ನು ಬಳಸುವುದು ಸೂಕ್ತ.

ನೈಸರ್ಗಿಕ ಶಕ್ತಿ ಶಕ್ತಿ ಹೀನವಾಗಿದ್ದಾಗ ತೆಂಗಿನಕಾಯಿ ಸಹಾಯಕಾಗಿ ಕೆಲಸ ಮಾಡುತ್ತದೆ. ತೆಂಗಿನಕಾಯಿಯೊಳಗಿನ ಎಲೆಕ್ಟ್ರೋಲೈಟ್ಸ್, ಆಕ್ಸಿಡೆಂಟ್ ಲಕ್ಷಣಗಳು ಮನಸ್ಸು ಮತ್ತು ದೇಹಕ್ಕೆ ಹೊಸ ಹುರುಪು ನೀಡವಲ್ಲಿ ಸಹಾಯ ಮಾಡುತ್ತವೆ.

ಚರ್ಮದ ಕಾಂತಿ ಹೆಚ್ಚಿಸುತ್ತದೆ ತೆಂಗಿನಕಾಯಿಯ ನೀರು ನೈಸರ್ಗಿಕವಾದ ಟೋನರ್ ಆಗಿ ಕಾರ್ಯನಿರ್ವಹಿಸುತ್ತದೆ. ತೆಂಗಿನ ಕಾಯಿಯನ್ನು ನಿಯಮಿತ ಪ್ರಮಾಣದಲ್ಲಿ ಸೇವಿಸುವುದರಿಂದ ಚರ್ಮ ಮೃದುವಾಗುತ್ತದೆ ಮತ್ತು ಕಾಂತಿಯು ಹೆಚ್ಚಳವಾಗುತ್ತದೆ. ತೆಂಗಿನಕಾಯಿಯಲ್ಲಿ ಇರುವ ಸೈಟೋಕಿನಿನ್ಸ್ ಚರ್ಮದ ಮೇಲಿನ ಸುಕ್ಕುಗಳನ್ನು ದೂರ ಮಾಡುತ್ತದೆ.

ಜೀರ್ಣಕಾರಿ ಸಮಸ್ಯೆಯನ್ನು ದೂರ ಮಾಡುತ್ತದೆ ತೆಂಗಿನಕಾಯಿ ರುಚಿಯಷ್ಟೇ ಅಲ್ಲ ಆರೋಗ್ಯಯುತವಾಗಿದೆ. ಇದು ಅಜೀರ್ಣದಂತಹ ಸಮಸ್ಯೆಯನ್ನು ದೂರ ಮಾಡುತ್ತದೆ. ಅಲ್ಲದೆ ತೆಂಗಿನಕಾಯಿಯಲ್ಲಿ ಕಡಿಮೆ ಸಕ್ಕರೆ ಇರುತ್ತದೆ. ಜತೆಗೆ ಹೊಟ್ಟೆ ಉಬ್ಬರಿಸಿದಂತಾಗುವುದು ಅಥವಾ ಹೊಟ್ಟೆಗೆ ಸಂಬಂಧಿಸಿದ ಇನ್ನಿತರ ಕಾಯಿಲೆಗೆ ತೆಂಗಿನಕಾಯಿ ರಾಮಬಾಣದಂತೆ ಕೆಲಸ ಮಾಡುತ್ತದೆ.

ಇದನ್ನೂ ಓದಿ: Health Tips: ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ವಿಧಾನಗಳನ್ನು ಅನುಸರಿಸಿ

Left Side Sleeping: ಎಡಭಾಗಕ್ಕೆ ತಿರುಗಿ ಮಲಗುವುದು ನಮ್ಮ ಆರೋಗ್ಯಕ್ಕೆ ಎಷ್ಟು ಮುಖ್ಯ?

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ