Left Side Sleeping: ಎಡಭಾಗಕ್ಕೆ ತಿರುಗಿ ಮಲಗುವುದು ನಮ್ಮ ಆರೋಗ್ಯಕ್ಕೆ ಎಷ್ಟು ಮುಖ್ಯ?

Health Tips: ಎಡಭಾಗಕ್ಕೆ ತಿರುಗಿ ಮತ್ತು ನಿಮ್ಮ ಎಡಗೈಯನ್ನು ತಲೆಕೆಳಗಾಗಿ ಇಟ್ಟುಕೊಳ್ಳಿ. ಈ ರೀತಿಯಾಗಿ ನಿದ್ರೆಯನ್ನು ಮಾಡುವುದರಿಂದ ಹೆಚ್ಚು ವಿಶ್ರಾಂತಿ ಸಿಗುತ್ತದೆ. 

Left Side Sleeping: ಎಡಭಾಗಕ್ಕೆ ತಿರುಗಿ ಮಲಗುವುದು ನಮ್ಮ ಆರೋಗ್ಯಕ್ಕೆ ಎಷ್ಟು ಮುಖ್ಯ?
ಸಾಂಕೇತಿಕ ಚಿತ್ರ
Follow us
TV9 Web
| Updated By: preethi shettigar

Updated on:Aug 08, 2021 | 7:30 AM

ಪೂರ್ವಜರು ಹಾಕಿಕೊಟ್ಟ ಕೆಲವು ನಿಯಮಗಳು ಮತ್ತು ಸಂಪ್ರದಾಯಗಳನ್ನು ನಾವು ಇಂದಿಗೂ ಪಾಲಿಸಿಕೊಂಡು ಬಂದಿದ್ದೇವೆ ಅದಕ್ಕೆ ಕಾರಣ, ಈ ನಿಯಮಗಳು ನಮ್ಮ ಆರೋಗ್ಯವನ್ನು(Health) ಸದಾ ಕಾಪಾಡುತ್ತದೆ. ಊಟ ಮಾಡುವುದರಿಂದ ಹಿಡಿದು, ನಿದ್ರೆಯವರೆಗೆ ಅನೇಕ ನಂಬಿಕೆಗಳು ನಮ್ಮಲ್ಲಿ ಚಾಲ್ತಿಯಲ್ಲಿದೆ. ಇದಕ್ಕೆ ಉದಾಹರಣೆ ಎಂಬಂತೆ ಈಗಲೂ ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗುವುದನ್ನು ಮನೆಯಲ್ಲಿ ಹಿರಿಯರು ತಪ್ಪು ಎನ್ನುತ್ತಾರೆ. ಅದರಂತೆಯೇ ಮಲಗುವಾಗ ಬಲಭಾಗಕ್ಕೆ ತಿರುಗಿ ಮಲಗುವುದು ಒಳ್ಳೆಯದಲ್ಲ. ಬದಲಾಗಿ ಎಡಭಾಗದಲ್ಲಿ (Left Side) ಮಾತ್ರ ಮಲಗಬೇಕು. ಎಡಭಾಗಕ್ಕೆ ತಿರುಗಿ ಮಲಗುವುದರಿಂದ ಅನೇಕ ಆರೋಗ್ಯಕರ ಪ್ರಯೋಜನಗಳಿವೆ.

ಎಡಭಾಗಕ್ಕೆ ತಿರುಗಿ ಮಲಗುವುದರಿಂದ ಊಟದ ನಂತರ ಜೀರ್ಣವಾಗಲು ಹೊಟ್ಟೆಯನ್ನು ಸಕ್ರಿಯಗೊಳಿಸುತ್ತದೆ. ಹೀಗೆ ಮಲಗುವುದರಿಂದ ರಕ್ತ ದೇಹದ ಎಲ್ಲಾ ಭಾಗಗಳಿಗೂ ತಲುಪುತ್ತದೆ. ನಂತರ ಮೆದುಳು ವಿಶ್ರಾಂತಿ ಪಡೆಯಲು ಇದು ಸಹಕರಿಸುತ್ತದೆ. ಅಲ್ಲದೆ ಸುಖವಾದ ನಿದ್ದೆ ಬರುತ್ತದೆ.  ವಿಶ್ರಾಂತಿ ಪಡೆಯಲು ಇಚ್ಛಿಸುವವರು ಎಡಭಾಗಕ್ಕೆ ತಿರುಗಿ ಮಲಗುವುದು ಉತ್ತಮ.  ಇನ್ನು ಊಟವಾದ ತಕ್ಷಣ ಮಲಗಲು ಹೋಗಬೇಡಿ. ಕನಿಷ್ಠ ಎರಡು ಗಂಟೆಗಳ ಅಂತರವನ್ನು ನೀಡಿದ ನಂತರ ಮಲಗಲು ಹೋಗಿ. ಊಟವಾದ ತಕ್ಷಣ ಮಲಗುವುದರಿಂದ ಮಧುಮೇಹ ಮತ್ತು ಹೃದಯಾಘಾತದಂತಹ ರೋಗಗಳ ಅಪಾಯ ಹೆಚ್ಚಳವಾಗುತ್ತದೆ.

ಎಡಭಾಗಕ್ಕೆ ತಿರುಗಿ ಮಲಗಿ ಎಡಭಾಗಕ್ಕೆ ತಿರುಗಿ ಮತ್ತು ನಿಮ್ಮ ಎಡಗೈಯನ್ನು ತಲೆಕೆಳಗಾಗಿ ಇಟ್ಟುಕೊಳ್ಳಿ. ಈ ರೀತಿಯಾಗಿ ನಿದ್ರೆಯನ್ನು ಮಾಡುವುದರಿಂದ ಹೆಚ್ಚು ವಿಶ್ರಾಂತಿ ಸಿಗುತ್ತದೆ.  ದಣಿದಾಗ, ಈ ರೀತಿ ಎಡಭಾಗದಲ್ಲಿ ಮಲಗಿಕೊಂಡರೆ ಆಯಾಸವನ್ನು ನಿವಾರಿಸುತ್ತದೆ. ಉಳಿದ ದಿನಗಳಲ್ಲಿ ಹೆಚ್ಚು ಉತ್ಸಾಹದಿಂದ ಕೆಲಸಗಳನ್ನು ಮಾಡಲು ಸಹಕಾರಿಯಾಗಿದೆ.

ಎಡಭಾಗಕ್ಕೆ ತಿರುಗಿ ಮಲಗುವ ಪ್ರಯೋಜನಗಳು: * ಗೊರಕೆಯನ್ನು ಕಡಿಮೆ ಮಾಡುತ್ತದೆ. * ಗರ್ಭಿಣಿಯರಿಗೆ ಉತ್ತಮ ರಕ್ತ ಪರಿಚಲನೆ ದೊರಕುತ್ತದೆ. ಗರ್ಭಕೋಶ, ಗರ್ಭದಲ್ಲಿರುವ ಭ್ರೂಣಕ್ಕೆ ಉತ್ತಮ ರಕ್ತ ಪರಿಚಲನೆ ಸಿಗುತ್ತದೆ. * ಬೆನ್ನು ನೋವನ್ನು ನಿವಾರಿಸುತ್ತದೆ. * ಊಟದ ನಂತರ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. *  ಕುತ್ತಿಗೆ ನೋವನ್ನು ನಿವಾರಿಸುತ್ತದೆ. * ದೇಹದಲ್ಲಿರುವ ವಿಷ ಮತ್ತು ತ್ಯಾಜ್ಯ ಉತ್ಪನ್ನಗಳನ್ನು ತೆಗೆಯಲು ಸಹಕರಿಸುತ್ತದೆ. * ಯಕೃತ್ತು ಸರಿಯಾಗಿ ಕಾರ್ಯನಿರ್ವಹಿಸುತ್ತದೆ. * ಜೀರ್ಣ ಪ್ರಕ್ರಿಯೆಯು ನಿಯಮಿತವಾಗಿರುತ್ತದೆ. * ಹೃದಯ ಸರಿಯಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. * ಹೃದಯದಲ್ಲಿನ ಉರಿಯೂತವನ್ನು ತಡೆಯುತ್ತದೆ. * ಬೆಳಿಗ್ಗೆ ಆಯಾಸವಿಲ್ಲದೆ ಉತ್ಸುಕರಾಗಿರುವಂತೆ ಮಾಡುತ್ತದೆ. * ಕೊಬ್ಬಿನ ಪದಾರ್ಥಗಳು ಸುಲಭವಾಗಿ ಜೀರ್ಣವಾಗುತ್ತವೆ. * ಮೆದುಳು ಸಕ್ರಿಯವಾಗಿರುತ್ತದೆ.

ಆಯುರ್ವೇದ ವೈದ್ಯರು ಹೇಳುವಂತೆ ಎಡಭಾಗದಲ್ಲಿ ಮಲಗುವುದು ಉತ್ತಮ ವಿಧಾನ. ಪ್ರತಿದಿನ ನೀವು ಎಡಭಾಗದಲ್ಲಿ ಮಲಗಿದ ನಂತರ ನಿಮ್ಮ ದೇಹದಲ್ಲಿ ಆಗುವ ಬದಲಾವಣೆಗಳನ್ನು ಗಮನಿಸಬಹುದು.

ಇದನ್ನೂ ಓದಿ: Health Tips: ಈ ಮೂರು ಸಮಯದಲ್ಲಿ ನೀರು ಕುಡಿಯುವ ಅಭ್ಯಾಸ ಆರೋಗ್ಯಕ್ಕೆ ಹಾನಿಕಾರಕ ಇಂದೇ ಅದನ್ನು ಬದಲಾಯಿಸಿ

Garam Masala Benefits: ಗರಂ ಮಸಾಲೆ ಪರಿಮಳ ಮತ್ತು ರುಚಿಗಷ್ಟೇ ಸಿಮಿತವಾಗಿಲ್ಲ ಅನೇಕ ಆರೋಗ್ಯಕರ ಗುಣಗಳು ಇದರಲ್ಲಿದೆ (You must know the health benefits of sleeping on your left side every night)

Published On - 7:30 am, Sun, 8 August 21

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್