AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Coronavirus cases in India: ದೇಶದಲ್ಲಿ 25,072 ಹೊಸ ಕೊವಿಡ್ ಪ್ರಕರಣ ಪತ್ತೆ, 389 ಮಂದಿ ಸಾವು

Covid-19: ದೆಹಲಿಯಲ್ಲಿ ಸತತ ಮೂರನೇ ದಿನ ಕೊವಿಡ್ -19 ನಿಂದಾಗಿ ಯಾವುದೇ ಸಾವು ಸಂಭವಿಸಿಲ್ಲ. 24 ಹೊಸ ಪ್ರಕರಣಗಳು ಇಲ್ಲಿ ವರದಿ ಆಗಿದ್ದು ಧನಾತ್ಮಕ ದರವು ಶೇಕಡಾ 0.04 ರಷ್ಟಿದೆ ಎಂದು ಆರೋಗ್ಯ ಇಲಾಖೆಯ ತಿಳಿಸಿರುವುದಾಗಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಮಹಾರಾಷ್ಟ್ರದಲ್ಲಿ ಭಾನುವಾರ 4,141 ಹೊಸ ಕೊವಿಡ್ ಪ್ರಕರಣಗಳು ವರದಿ ಆಗಿದೆ.

Coronavirus cases in India: ದೇಶದಲ್ಲಿ 25,072 ಹೊಸ ಕೊವಿಡ್ ಪ್ರಕರಣ ಪತ್ತೆ, 389 ಮಂದಿ ಸಾವು
ಪ್ರಾತಿನಿಧಿಕ ಚಿತ್ರ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: Aug 23, 2021 | 10:41 AM

Share

ದೆಹಲಿ: ಭಾರತವು ಭಾನುವಾರ 25,072 ಹೊಸ ಕೊವಿಡ್ -19 ಪ್ರಕರಣಗಳು ಮತ್ತು 389ಸಾವುಗಳನ್ನು ವರದಿ ಮಾಡಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 3,33,924  ಆಗಿದ್ದು,  ಭಾರತದ ಕೊವಿಡ್ -19 ಲಸಿಕೆ ವ್ಯಾಪ್ತಿಯು 58 ಕೋಟಿ ತಲುಪಿದೆ. ಕಳೆದ 24 ಗಂಟೆಗಳಲ್ಲಿ58,25,49,595 ಲಸಿಕೆ ಡೋಸ್ ನೀಡಲಾಗಿದೆ. ಒಟ್ಟು ಕೊವಿಡ್  ಪ್ರಕರಣಗಳ ಸಂಖ್ಯೆ 3,24,49,306 ಆಗಿದ್ದು 3,16,80,626 ಮಂದಿ ಚೇತರಿಸಿಕೊಂಡಿದ್ದಾರೆ.

ದೆಹಲಿಯಲ್ಲಿ ಸತತ ಮೂರನೇ ದಿನ ಕೊವಿಡ್ -19 ನಿಂದಾಗಿ ಯಾವುದೇ ಸಾವು ಸಂಭವಿಸಿಲ್ಲ. 24 ಹೊಸ ಪ್ರಕರಣಗಳು ಇಲ್ಲಿ ವರದಿ ಆಗಿದ್ದು ಧನಾತ್ಮಕ ದರವು ಶೇಕಡಾ 0.04 ರಷ್ಟಿದೆ ಎಂದು ಆರೋಗ್ಯ ಇಲಾಖೆಯ ತಿಳಿಸಿರುವುದಾಗಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಮಹಾರಾಷ್ಟ್ರದಲ್ಲಿ ಭಾನುವಾರ 4,141 ಹೊಸ ಕೊವಿಡ್ ಪ್ರಕರಣಗಳು ವರದಿ ಆಗಿದೆ.

ಏತನ್ಮಧ್ಯೆ, 12 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಕರು ಮತ್ತು ಮಕ್ಕಳಿಗೆ ಕೋವಿಡ್ ಲಸಿಕೆ ZyCoV-D ನಿನ್ನೆ ಅನುಮೋದನೆ ಪಡೆದ ಜೈಡಸ್ ಕ್ಯಾಡಿಲಾ ಅಕ್ಟೋಬರ್ ವೇಳೆಗೆ ತಿಂಗಳಿಗೆ ಒಂದು ಕೋಟಿ ಡೋಸ್ ಉತ್ಪಾದಿಸುವ ಭರವಸೆ ಇದೆ ಎಂದು ಶನಿವಾರ ಹೇಳಿದರು.

ಆಂಧ್ರಪ್ರದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 1,085 ಹೊಸ ಕೊರೊನಾವೈರಸ್ ಪ್ರಕರಣಗಳು, 1,541 ಚೇತರಿಕೆ ಮತ್ತು 8 ಸಾವುಗಳು ವರದಿ ಆಗಿವೆ. ರಾಜ್ಯದ ಕೊವಿಡ್ -19 ಚಾರ್ಟ್ ಈಗ ಒಟ್ಟು 20,02,340 ಪಾಸಿಟಿವ್, 19,73,940 ಚೇತರಿಕೆ ಮತ್ತು 13,723 ಸಾವುಗಳನ್ನು ತೋರಿಸಿದೆ. ಇತ್ತೀಚಿನ ಬುಲೆಟಿನ್ ಪ್ರಕಾರ, ಸಕ್ರಿಯ ಪ್ರಕರಣಗಳ ಸಂಖ್ಯೆ 14,677 ಕ್ಕೆ ಇಳಿದಿದೆ. 24 ಗಂಟೆಗಳಲ್ಲಿ, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳ ಸಂಖ್ಯೆ 10 ರಿಂದ 137 ರಷ್ಟಿದೆ.

ಭಾರತದಲ್ಲಿ 58 ಕೋಟಿ ಲಸಿಕೆ ವಿತರಣೆ

ಭಾರತದ ಕೋವಿಡ್ -19 ಲಸಿಕೆ ವ್ಯಾಪ್ತಿಯು 58 ಕೋಟಿ ದಾಟಿದೆ ಮೀರಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಭಾನುವಾರ ತಿಳಿಸಿದೆ. ಕಳೆದ 24 ಗಂಟೆಗಳಲ್ಲಿ 52,23,612 ಲಸಿಕೆ ಡೋಸ್‌ಗಳ ವಿತರಣೆಯೊಂದಿಗೆ ಭಾರತದ ಕೋವಿಡ್ -19 ಲಸಿಕೆ ವ್ಯಾಪ್ತಿಯು ತಾತ್ಕಾಲಿಕ ವರದಿಗಳ ಪ್ರಕಾರ ಒಟ್ಟು ಅಂಕಿ ಅಂಶ 58.14 ಕೋಟಿ (58,14,89,377) ದಾಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

ಭಾರತವು ವಾರದಲ್ಲಿ ಶೇ 13.6ನಷ್ಟು ಕೊವಿಡ್ ಪ್ರಕರಣಗಳನ್ನು ವರದಿ ಮಾಡಿದೆ. ಹಬ್ಬಗಳ ಕಾರಣದಿಂದಾಗಿ ಈ ಅವಧಿಯಲ್ಲಿ ಪರೀಕ್ಷೆಯು ಉತ್ತುಂಗದಲ್ಲಿದ್ದರೂ ಕಳೆದ ವಾರದಲ್ಲಿ ಸೋಂಕುಗಳು ಶೇ 13.6ರಷ್ಟು ಕಡಿಮೆಯಾಗಿ ಸುಮಾರು ಎರಡು ತಿಂಗಳಲ್ಲಿ ಸಾಪ್ತಾಹಿಕ ಕೊವಿಡ್ -19 ಪ್ರಕರಣಗಳಲ್ಲಿ ಭಾರತವು ತೀವ್ರ ಕುಸಿತವನ್ನು ಕಂಡಿತು. ಜೂನ್ 28-ಜುಲೈ 4 ವಾರಗಳ ನಂತರ ಸಾಪ್ತಾಹಿಕ ಪ್ರಕರಣಗಳಲ್ಲಿ ಇದು ಮೊದಲ ಎರಡು-ಅಂಕಿಯ ಕುಸಿತವಾಗಿದೆ.

ಇದನ್ನೂ ಓದಿ:  ಕರ್ನಾಟಕದ ಕೊರೊನಾ ಹಾಟ್​ಸ್ಪಾಟ್ ಆಗುತ್ತಿದೆ ದಕ್ಷಿಣ ಕನ್ನಡ; ಕರಾವಳಿಯಲ್ಲಿ ಕೊವಿಡ್ ಹೆಚ್ಚಾಗಲು ಕಾರಣವೇನು?

(India records 25,072 new Covid-19 cases 389 deaths in last 24 hours as per health ministry)

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ