ರಾಷ್ಟ್ರೀಯ ಸುದ್ದಿ ಪ್ರಸಾರಕ ಒಕ್ಕೂಟದ ಸ್ವಯಂ ನಿಯಂತ್ರಣ ಸಂಸ್ಥೆಗೆ ಕೇಂದ್ರ ಸರ್ಕಾರದಿಂದ ಮಾನ್ಯತೆ; ಇದು ಎನ್ಬಿಎಫ್ ಹೆಗ್ಗಳಿಕೆ
NBF: ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆಯಬೇಕಾದರೆ ಅನುಸರಿಸಬೇಕಾದ ಎಲ್ಲ ರಾಷ್ಟ್ರೀಯ ಮಾನದಂಡಗಳನ್ನೂ ಪೂರೈಸಿ, ಯಶಸ್ವಿಯಾಗಿ ಕೇಂದ್ರದ ಮಾನ್ಯತೆ ಪಡೆದ, ಸುದ್ದಿ ಕ್ಷೇತ್ರದ ಮೊದಲ ಮತ್ತು ಏಕೈಕ ಸಂಸ್ಥೆ ಪಿಎನ್ಬಿಎಸ್ಎ ಆಗಿದೆ.
ರಾಷ್ಟ್ರೀಯ ಸುದ್ದಿ ಪ್ರಸಾರಕ ಒಕ್ಕೂಟ (News Broadcasters Federation (NBF)ದ ಸ್ವಯಂ ನಿಯಂತ್ರಕ ಸಂಸ್ಥೆಯಾದ ವೃತ್ತಿಪರ ಸುದ್ದಿ ಪ್ರಸಾರಕರ ಗುಣಮಟ್ಟ ಪ್ರಾಧಿಕಾರ (PNBSA)ಕ್ಕೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆ (MIB) ಅಧಿಕೃತವಾಗಿ ಮಾನ್ಯತೆ ನೀಡಿದೆ. ಇದೊಂದು ಮಹತ್ವದ ಬೆಳವಣಿಗೆಯಾಗಿದ್ದು, ದೇಶದಲ್ಲಿ ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ಏಕೈಕ ಮತ್ತು ಮೊದಲ ಪ್ರಸಾರಕರ ಒಕ್ಕೂಟವಾಗಿದೆ. ಎನ್ಬಿಎಫ್ ಭಾರತದ ಅತಿದೊಡ್ಡ ಸುದ್ದಿ ಪ್ರಸಾರಕರ ಸಂಸ್ಥೆಯಾಗಿದ್ದು, ಸುದ್ದಿ ಮಾಧ್ಯಮ ವಲಯದಲ್ಲಿ, ಸ್ವಯಂ ನಿಯಂತ್ರಣಾ ಚೌಕಟ್ಟುಗಳನ್ನು ಬಲಪಡಿಸಲು ಅವಿರತವಾಗಿ ಶ್ರಮಿಸುತ್ತಿದೆ.
ಕೇಂದ್ರ ಸರ್ಕಾರ ಮಾನ್ಯತೆ ನೀಡಲು ಇರುವ ಎಲ್ಲ ಮಾನದಂಡಗಳನ್ನೂ ಪೂರೈಸಿದ ಏಕೈಕ ಸಂಸ್ಥೆಯಾಗಿ ಎನ್ಬಿಎಫ್ನ ಸ್ವಯಂ ನಿಯಂತ್ರಕ ಸಂಸ್ಥೆ ಹೊರಹೊಮ್ಮಿದೆ. ಇದೀಗ ಕೇಂದ್ರ ಸರ್ಕಾರದಿಂದ ಮಾನ್ಯತೆಯನ್ನು ಗಳಿಸುವ ಮೂಲಕ ಇನ್ನಷ್ಟು ಹೆಚ್ಚಿನ ಜವಾಬ್ದಾರಿಯೆಡೆಗೆ ತೆರೆದುಕೊಂಡಿರುವ ಎನ್ಬಿಎಫ್ನ ಸ್ವಯಂ ನಿಯಂತ್ರಕ ಸಂಸ್ಥೆ ಪಿಎನ್ಬಿಎಸ್ಎ, ಸುದ್ದಿ ಕ್ಷೇತ್ರವನ್ನು ಇನ್ನಷ್ಟು ಪಾರದರ್ಶಕತ್ವ ಮತ್ತು ಜವಾಬ್ದಾರಿಯುತವಾಗಿ ರೂಪಿಸಲು ಎಲ್ಲ ಸಿದ್ಧತೆ ಮಾಡಿಕೊಂಡಿದೆ ಎಂದು ಎನ್ಬಿಎಫ್ ಹೇಳಿದೆ.
ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆಯಬೇಕಾದರೆ ಅನುಸರಿಸಬೇಕಾದ ಎಲ್ಲ ರಾಷ್ಟ್ರೀಯ ಮಾನದಂಡಗಳನ್ನೂ ಪೂರೈಸಿ, ಯಶಸ್ವಿಯಾಗಿ ಕೇಂದ್ರದ ಮಾನ್ಯತೆ ಪಡೆದ, ಸುದ್ದಿ ಕ್ಷೇತ್ರದ ಮೊದಲ ಮತ್ತು ಏಕೈಕ ಸಂಸ್ಥೆ ಪಿಎನ್ಬಿಎಸ್ಎ ಆಗಿದೆ. ಎನ್ಬಿಎಫ್ ಮತ್ತು ಪಿಎನ್ಬಿಎಸ್ಎ ಗಳ ಅತ್ಯುನ್ನತ ವೃತ್ತಿಪರ ಗುಣಮಟ್ಟದ ಕೆಲಸ ಮತ್ತು ಹಿರಿಮೆಯ ಸಂಕೇತವಾಗಿದೆ. ಭಾರತದ ಅತಿದೊಡ್ಡ ಸುದ್ದಿ ಪ್ರಸಾರಕರ ಒಕ್ಕೂಟವಾದ ಎನ್ಬಿಎಫ್, ಅದರ ಸದಸ್ಯ ಸುದ್ದಿ ಸಂಸ್ಥೆಗಳ ಪಾಲಿಗೆ ಆಧಾರ ಸ್ತಂಭವಾಗಿದೆ. ಇದೀಗ ದೊರೆತಿರುವ ಕೇಂದ್ರದ ಮಾನ್ಯತೆಯಿಂದ ಪಿಎನ್ಬಿಎಸ್ಎ ಜವಾಬ್ದಾರಿ ಹೆಚ್ಚಾಗಿದ್ದು, ಇನ್ನಷ್ಟು ಯಶಸ್ವಿಯಾಗಿ ಕಾರ್ಯ ನಡೆಸುತ್ತೇವೆ ಎಂದು ಎನ್ಬಿಎಫ್ ತನ್ನ ಹೇಳಿಕೆಯಲ್ಲಿ ಪ್ರಸ್ತುತ ಪಡಿಸಿದೆ.
ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಬಳಿಕ ಮಾತನಾಡಿದ ಎನ್ಬಿಎಫ್ ಅರ್ನಬ್ ಗೋಸ್ವಾಮಿ ಸಂತಸ ವ್ಯಕ್ತಪಡಿಸಿದ್ದಾರೆ. ಹಾಗೇ, ಈ ಒಕ್ಕೂಟದ ಸದಸ್ಯರಾಗಿರುವ ಪ್ರತಿ ಸುದ್ದಿ ಸಂಸ್ಥೆಗಳಿಗೂ ಧನ್ಯವಾದ ತಿಳಿಸಿದ್ದಾರೆ. ಇಂದು ಎನ್ಬಿಎಫ್ನ ಸ್ವಯಂ ನಿಯಂತ್ರಣಾ ಸಂಸ್ಥೆ ಕೇಂದ್ರದ ಮಾನ್ಯತೆ ಪಡೆಯಲು, ಇದರಲ್ಲಿನ ಎಲ್ಲ ಸದಸ್ಯ ಸಂಸ್ಥೆಗಳ ಶ್ರಮವೂ ಇದೆ. ನನ್ನೊಂದಿಗೆ ಕೈಜೋಡಿಸಿದ್ದಾರೆ. ನಮ್ಮ ಪ್ರಜಾಪ್ರಭುತ್ವವನ್ನು ಬಲಪಡಿಸಲು ಮತ್ತು ಅದರ ಉನ್ನತಿಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವಲ್ಲಿ ಮಾಧ್ಯಮಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಸದ್ಯ ನಾವು ಮಾಧ್ಯಮದ ಸ್ವಯಂ ನಿಯಂತ್ರಣ ಚೌಕಟ್ಟನ್ನು ಬಲಪಡಿಸುವತ್ತ ಮಹತ್ವದ ಹೆಜ್ಜೆ ಇಟ್ಟಿದ್ದೇವೆ. ಎನ್ಬಿಎಫ್ ದೇಶಾದ್ಯಂತ ಚಾಪು ಮೂಡಿಸಿದ್ದು, ಪ್ರಜಾಪ್ರಭುತ್ವ ಸ್ವರೂಪದಡಿ ಕೆಲಸ ಮಾಡುತ್ತಿದೆ. ಈ ಬಗ್ಗೆ ನಮಗೆ ಹೆಮ್ಮೆಯಿದೆ ಎಂದಿದ್ದಾರೆ.
ಎನ್ಬಿಎಫ್ ಸಂಸ್ಥೆಯಲ್ಲಿ 24 ಚಾನೆಲ್ಗಳು ಎನ್ಬಿಎಫ್ (NBF)ನ ಸ್ವಯಂ ನಿಯಂತ್ರಕ ಸಂಸ್ಥೆಯಾದ ವೃತ್ತಿಪರ ಸುದ್ದಿ ಪ್ರಸಾರಕರ ಗುಣಮಟ್ಟ ಪ್ರಾಧಿಕಾರ (PNBSA) ಕೇಬಲ್ ಟೆಲಿವಿಶನ್ ನೆಟ್ವರ್ಕ್ ಆ್ಯಕ್ಟ್ನ ಹೊಸ ತಿದ್ದುಪಡಿ ಕಾಯ್ದೆಯಡಿ ಅಧಿಕೃತವಾಗಿ ನೋಂದಣಿಯಾಗಿದೆ. NBF-PNBSA ನ್ನು ಅಗತ್ಯ ನಿಯಮಗಳೊಂದಿಗೆ ರೂಪಿಸಲಾಗಿದ್ದು, ಪ್ರಬಲ ಸ್ವಯಂ ನಿಯಂತ್ರಕ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ. ಈ ಎನ್ಬಿಎಫ್ನಲ್ಲಿ ಒಟ್ಟು 24 ಸುದ್ದಿ ಚಾನೆಲ್ಗಳು ಸೇರ್ಪಡೆಗೊಂಡಿದೆ. ಇತ್ತೀಚೆಗೆ ಟಿವಿ 9 ಸಮೂಹ ಕೂಡ ಸೇರ್ಪಡೆಗೊಂಡಿದ್ದು, ಈ ಬಗ್ಗೆ ಅಧ್ಯಕ್ಷ ಅರ್ನಬ್ ಗೋಸ್ವಾಮಿ ಸಂತಸ ವ್ಯಕ್ತಪಡಿಸಿದ್ದಾರೆ.
ಎನ್ಬಿಎಫ್ ಒಳಗೊಂಡ ಮಾಧ್ಯಮಗಳು ಹೀಗಿವೆ.. ಟಿವಿ ಭಾರತ್ವರ್ಷ್, ಟಿವಿ 9 ಗುಜರಾತಿ, ಟಿವಿ 9 ಕನ್ನಡ, ಟಿವಿ9 ಮರಾಠಿ, ಟಿವಿ 9 ತೆಲುಗು, ವಿ6. ಸಿವಿಆರ್ ಇಂಗ್ಲಿಷ್, ಸಿವಿಆರ್ ಹೆಲ್ತ್, ಸಿವಿಆರ್ ನ್ಯೂಸ್, ಡಿಎ ನ್ಯೂಸ್ ಪ್ಲಸ್, ಡಿವೈ 365, ಗಲಿಸ್ತಾನ್ ನ್ಯೂಸ್, ಐಬಿಸಿ 24, ಐಎನ್ಡಿ 24, ಇಂಡಿಯಾ ನ್ಯೂಸ್ ಗುಜರಾತ್, ಇಂಡಿಯಾ ನ್ಯೂಸ್ ಹರ್ಯಾಣ, ಇಂಡಿಯಾ ನ್ಯೂಸ್ ಹಿಂದಿ, ಇಂಡಿಯಾ ನ್ಯೂಸ್ ಎಂಪಿಸಿಜಿ, ಇಂಡಿಯಾ ನ್ಯೂಸ್ ಪಂಜಾಬಿ, ಇಂಡಿಯಾ ನ್ಯೂಸ್ ರಾಜಸ್ಥಾನ, ಇಂಡಿಯಾ ನ್ಯೂಸ್ ಯುಪಿ, ಖಬರ್ ಫಾಸ್ಟ್, ಎಂಎಚ್ ಒನ್, ನ್ಯೂಸ್9, ನ್ಯೂಸ್ ಫಸ್ಟ್ ಕನ್ನಡ, ನ್ಯೂಸ್ ಲೈವವ, ನ್ಯೂಸ್ ನೇಶನ್, ನ್ಯೂಸ್ ಎಕ್ಸ್, ನಾರ್ತ್ ಈಸ್ಟ್ ಲೈವ್, ನಾರ್ತ್ ಈಸ್ಟ್ ನ್ಯೂಸ್, ಒಟಿವಿ, ಪ್ರಾಗ್ ನ್ಯೂಸ್, ಪುತಿಯಾತಲೈಮುರೈ, ರಿಪಬ್ಲಿಕ್ ಭಾರತ್, ರಿಪಬ್ಲಿಕ್ ಬಾಂಗ್ಲಾ, ರಿಪಬ್ಲಿಕ್ ಟಿವಿ, ಸಹರಾ ಸಮಯ್, ಸಮಯ್ ಬಿಹಾರ್, ಸಮಯ್ ಮಹಾರಾಷ್ಟ್ರ, ಸಮಯ್ ಎಂಪಿಸಿಜಿ, ಸಮಯ್ ರಾಜಸ್ಥಾನ, ಸಮಯ್ ಯುಪಿ, ಟಿವಿ 5 ಕನ್ನಡ, ಟಿವಿ 5 ತೆಲುಗು.
ಇದನ್ನೂ ಓದಿ: ಡಿಜಿಟಲ್ ಮಾಧ್ಯಮ ಜಗತ್ತಿನಲ್ಲಿ ಟಿವಿ9 ನೆಟ್ವರ್ಕ್ಗೆ ಮುಕುಟ ಪ್ರಾಯ ಸ್ಥಾನ; ಯೂಟ್ಯೂಬ್ ವಿಡಿಯೋ ವೀಕ್ಷಣೆಯಲ್ಲಿ ನಂ. 1
NBF: ರಾಷ್ಟ್ರೀಯ ಸುದ್ದಿ ಪ್ರಸಾರಕರ ಒಕ್ಕೂಟಕ್ಕೆ ಸೇರ್ಪಡೆಗೊಂಡ ಟಿವಿ9 ಸಮೂಹ
Published On - 11:26 am, Mon, 23 August 21