ಗುಜರಾತ್ನ ಗಿರ್ ಅರಣ್ಯದಲ್ಲಿ ಗೂಡ್ಸ್ ರೈಲಿಗೆ ಸಿಲುಕಿ ಸಿಂಹ ಸಾವು
2019ರಿಂದ 2020ರ ಅವಧಿಯಲ್ಲಿ ಗುಜರಾತ್ನಲ್ಲಿ ಒಟ್ಟು 313 ಸಿಂಹಗಳು ಸಾವನ್ನಪ್ಪಿವೆ. ಈ ಪೈಕಿ 23 ಸಿಂಹಗಳು ಅಸಹಜವಾಗಿ ಸತ್ತಿವೆ
ಗಾಂಧಿನಗರ: ಗುಜರಾತ್ನ ಅಮ್ರೇಲಿ ಜಿಲ್ಲೆಯಲ್ಲಿರುವ ಗಿರ್ ಅರಣ್ಯದಲ್ಲಿ ಗೂಡ್ಸ್ ರೈಲಿಗೆ ಸಿಲುಕಿ ಸಿಂಹವೊಂದು ಮೃತಪಟ್ಟಿರುವ ಘಟನೆ ಭಾನುವಾರ ನಡೆದಿದೆ. ಸಾವರ್ಕುಂಡ್ಲಾ ಅರಣ್ಯ ವಲಯದ ಗಿರ್ (ಪೂರ್ವ) ಅರಣ್ಯ ವಿಭಾಗದ ಖಡ್ಕಾಲಾ ಗ್ರಾಮದ ಸಮೀಪ ಶನಿವಾರ ರಾತ್ರಿ 9.30ಕ್ಕೆ ಈ ದುರ್ಘಟನೆ ನಡೆದಿದೆ ಎಂದು ಗುಜರಾತ್ನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ದುಷ್ಯಂತ್ ವಸವಾಡ ಹೇಳಿದರು.
ರೈಲು ಹಳಿಗಳ ಸಮೀಪ ಸುಮಾರು 6 ವರ್ಷ ವಯೋಮಾನದ ಗಂಡು ಸಿಂಹದ ಕಳೇಬರ ಪತ್ತೆಯಾಗಿದೆ. ಡಬಲ್ ಡೆಕರ್ ಗೂಡ್ಸ್ ರೈಲಿಗೆ ಸಿಲುಕಿ ಸಿಂಹ ಸಾವನ್ನಪ್ಪಿರಬಹುದು ಎಂದು ಅವರು ತಿಳಿಸಿದರು. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಸಿಂಹದ ಕಳೇಬರವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿದರು ಎಂದು ಹೇಳಿದರು.
2019ರಿಂದ 2020ರ ಅವಧಿಯಲ್ಲಿ ಗುಜರಾತ್ನಲ್ಲಿ ಒಟ್ಟು 313 ಸಿಂಹಗಳು ಸಾವನ್ನಪ್ಪಿವೆ. ಈ ಪೈಕಿ 23 ಸಿಂಹಗಳು ಅಸಹಜವಾಗಿ ಸತ್ತಿವೆ ಎಂದು ಅರಣ್ಯ ಸಚಿವ ಮಾನ್ಗತ್ ವಸವ ವಿಧಾನಸಭೆಗೆ ಕಳೆದ ಮಾರ್ಚ್ ತಿಂಗಳಲ್ಲಿ ಮಾಹಿತಿ ನೀಡಿದ್ದರು. ಕೆಲ ಸಿಂಹಗಳು ಬಾವಿಗೆ ಬಿದ್ದು, ಕೆಲವು ವಾಹನಗಳಿಗೆ ಸಿಲುಕಿ, ಕೆಲವು ವಿದ್ಯುತ್ ಆಘಾತದಿಂದ ಸಾವನ್ನಪ್ಪಿವೆ ಎಂದು ಅವರು ತಿಳಿಸಿದ್ದರು. ಸಿಂಹದ ಸಾವುಗಳನ್ನು ಕಡಿಮೆ ಮಾಡಲು ಸರ್ಕಾರವು ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಅವರು ಹೇಳಿದ್ದರು.
ಗುಜರಾತ್ನ ಹಲವು ಜಿಲ್ಲೆಗಳಲ್ಲಿ ಹರಡಿಕೊಂಡಿರುವ ಗಿರ್ ಅಭಯಾರಣ್ಯವು ವಿಶ್ವದಲ್ಲಿ ಏಷ್ಯಾಟಿಕ್ ಸಿಂಹಗಳ ಕೊನೆಯ ಆಶ್ರಯತಾಣವಾಗಿದೆ.
(Male Lion Killed in Gir Forest of Gujarat After Being Run Over By A Train)
ಇದನ್ನೂ ಓದಿ: Viral Video: ಒಂದು ಜಿಂಕೆಗಾಗಿ 6 ಸಿಂಹಗಳ ಕಿತ್ತಾಟ; ಭಯಾನಕ ವಿಡಿಯೋ ವೈರಲ್
ಇದನ್ನೂ ಓದಿ: ಸಿಂಹಿಣಿ ತನ್ನ ಬಳಗಕ್ಕಾಗಿ ತಾನೇ ಬೇಟೆಯಾಡುತ್ತದೆ, ಆದರೆ ಕೊನೆಯಲ್ಲಿ ತಿನ್ನುತ್ತದೆ; ಕುತೂಹಲಕಾರಿ ಮಾಹಿತಿಗಳು ಇಲ್ಲಿವೆ