Viral Video: ಒಂದು ಜಿಂಕೆಗಾಗಿ 6 ಸಿಂಹಗಳ ಕಿತ್ತಾಟ; ಭಯಾನಕ ವಿಡಿಯೋ ವೈರಲ್

ಸಿಂಹವೊಂದು ಮರವನ್ನು ಹತ್ತಿ ಜಿಂಕೆಯನ್ನು ತಿನ್ನುತ್ತಿರುವಾಗ ಇನ್ನೂ 5 ಸಿಂಹಗಳು ಮರವನ್ನು ಹತ್ತಿ ಆ ಜಿಂಕೆಗಾಗಿ ಕಿತ್ತಾಡುತ್ತಿರುವ ವಿಡಿಯೋ ನೋಡಿದರೆ ನಿಮಗೆ ಶಾಕ್ ಆಗುವುದು ಗ್ಯಾರಂಟಿ.

Viral Video: ಒಂದು ಜಿಂಕೆಗಾಗಿ 6 ಸಿಂಹಗಳ ಕಿತ್ತಾಟ; ಭಯಾನಕ ವಿಡಿಯೋ ವೈರಲ್
ಜಿಂಕೆಗಾಗಿ ಸಿಂಹಗಳ ಕಿತ್ತಾಟ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Aug 20, 2021 | 3:31 PM

ಕಾಡಿನ ಪ್ರಾಣಿಗಳ ಭಯಾನಕ ವಿಡಿಯೋಗಳು ಆಗಾಗ ಹರಿದಾಡುತ್ತಲೇ ಇರುತ್ತದೆ. 6 ಸಿಂಹಗಳು ಜಿಂಕೆಯೊಂದನ್ನು ಬೇಟೆಯಾಡುತ್ತಿರುವ ವಿಡಿಯೋ ಭಾರೀ ವೈರಲ್ ಆಗಿದೆ. ಸಿಂಹವೊಂದು ಮರವನ್ನು ಹತ್ತಿ ಜಿಂಕೆಯನ್ನು ತಿನ್ನುತ್ತಿರುವಾಗ ಇನ್ನೂ 5 ಸಿಂಹಗಳು ಮರವನ್ನು ಹತ್ತಿ ಆ ಜಿಂಕೆಗಾಗಿ ಕಿತ್ತಾಡುತ್ತಿರುವ ವಿಡಿಯೋ ನೋಡಿದರೆ ನಿಮಗೆ ಶಾಕ್ ಆಗುವುದು ಗ್ಯಾರಂಟಿ. ಈ 45 ಸೆಕೆಂಡ್​ಗಳ ವಿಡಿಯೋ ಭಾರೀ ವೈರಲ್ ಆಗಿದೆ.

ಮರದ ಮೇಲೆ ಕುಳಿತುಕೊಂಡು 2 ಸಿಂಹಗಳು ಜಿಂಕೆಗಾಗಿ ಹೊಡೆದಾಡುತ್ತಿದ್ದವು. ಆಗ ಮೂರನೇ ಸಿಂಹ ಮರ ಹತ್ತಿ ಆ ಜಿಂಕೆಯನ್ನು ಎಳೆಯುತ್ತಿತ್ತು. ಬಳಿಕ ಇನ್ನೂ ಮೂರು ಸಿಂಹಗಳು ಆ ಜಿಂಕೆಗಾಗಿ ಮರ ಹತ್ತಿ ಬಂದಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಸತ್ತ ಜಿಂಕೆಯ ಮಾಂಸಕ್ಕಾಗಿ ಆ ಆರು ಸಿಂಹಗಳು ಕಿತ್ತಾಡುತ್ತಿರುವ ದೃಶ್ಯ ನೋಡಿದರೆ ಎಂಥವರಿಗೂ ಎದೆ ಝಲ್ಲೆನ್ನದೇ ಇರದು.

ಈ ವಿಡಿಯೋವನ್ನು ಟ್ವಿಟ್ಟರ್​ನಲ್ಲಿ ಹಂಚಿಕೊಂಡಿರುವ ನೆಟ್ಟಿಗರು ‘ಒಂದು ಜಿಂಕೆಗಾಗಿ ಆರು ಸಿಂಹಗಳ ಕಾದಾಟ. ಇದು ಅರಣ್ಯದಲ್ಲಿ ದಿನವೂ ನಡೆಯುವ ದೃಶ್ಯ’ ಎಂದು ಕಮೆಂಟ್ ಮಾಡಿದ್ದಾರೆ. ಕೆಳಗಿನಿಂದ ಹತ್ತಿ ಬರುವ ಸಿಂಹ ಜಿಂಕೆಯ ಹಿಂದಿನ ಎರಡು ಕಾಲುಗಳನ್ನು ಹಿಡಿದು ಕೆಳಗೆ ಎಳೆದುಕೊಂಡು ತಿನ್ನಲು ಪ್ರಯತ್ನಿಸುತ್ತದೆ. ಆಗ ಮೇಲಿದ್ದ ಸಿಂಹ ಅದನ್ನು ತನ್ನತ್ತ ಎಳೆದುಕೊಳ್ಳುತ್ತದೆ. ಕೊನೆಗೆ ಒಂದು ಸಿಂಹ ಮರದಿಂದ ಕೆಳಗೆ ಇಳಿದುಬಂದು ಮೇಲೆ ನೋಡುತ್ತಾ ಕೂರುತ್ತದೆ.

ಅಷ್ಟರಲ್ಲಿ ಜಿಂಕೆಯ ಸಮೇತ 5 ಸಿಂಹಗಳು ಮರದ ಮೇಲಿನಿಂದ ಹಾರುತ್ತವೆ. ಕೆಳಗೆ ಬಿದ್ದ ಜಿಂಕೆಯನ್ನು ಎಳೆದಾಡುತ್ತಾ ಮಾಂಸವನ್ನು ಕಿತ್ತು ತಿನ್ನುವ 6 ಸಿಂಹಗಳು ಆ ಜಿಂಕೆಯನ್ನು ಸೆಳೆದುಕೊಂಡು ಕಾಡಿನತ್ತ ಹೋಗುತ್ತವೆ.ಸಫಾರಿಗೆ ಹೋದವರು ಈ ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಇದು ನಡೆದಿರುವುದು ಎಲ್ಲಿ, ಯಾವಾಗ ಎಂಬ ಮಾಹಿತಿ ಲಭ್ಯವಾಗಿಲ್ಲ. ಆದರೆ, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಇದನ್ನೂ ಓದಿ: Viral Video: 22 ಅಡಿ ಉದ್ದದ ಹಾವನ್ನು ಹೆಗಲ ಮೇಲೆ ಹಾಕಿಕೊಂಡು ಹೋದ ವ್ಯಕ್ತಿ; ಮೈ ಜುಂ ಎನಿಸುವ ವಿಡಿಯೋ ಇಲ್ಲಿದೆ

Viral News: ಕೆಟ್ಟ ಕೈ ಬರಹವೇ ಶಾಪವಾಯ್ತು; ಬ್ಯಾಂಕ್​ ದರೋಡೆಗೆ ಹೋದವನು ಬರಿಗೈಯಲ್ಲಿ ಬಂದ!

(Viral Video 6 Lions Fight for Deer on Tree Shocking Video goes Viral in Social Media)

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ