AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral News: ಕೆಟ್ಟ ಕೈ ಬರಹವೇ ಶಾಪವಾಯ್ತು; ಬ್ಯಾಂಕ್​ ದರೋಡೆಗೆ ಹೋದವನು ಬರಿಗೈಯಲ್ಲಿ ಬಂದ!

Crime News | ಬ್ಯಾಂಕ್ ದರೋಡೆಗೆ ಹೋದವ ಕಳ್ಳನೊಬ್ಬನಿಗೆ ಆತನ ಕೈಬರಹವೇ ಶಾಪವಾಗಿದೆ. ಆತನ ಕೆಟ್ಟ ಹ್ಯಾಂಡ್ ರೈಟಿಂಗ್​ನಿಂದಾಗಿ ದರೋಡೆ ಮಾಡಲು ಹೋಗಿ ಬರಿಗೈಯಲ್ಲಿ ವಾಪಾಸಾಗಿದ್ದಾನೆ.

Viral News: ಕೆಟ್ಟ ಕೈ ಬರಹವೇ ಶಾಪವಾಯ್ತು; ಬ್ಯಾಂಕ್​ ದರೋಡೆಗೆ ಹೋದವನು ಬರಿಗೈಯಲ್ಲಿ ಬಂದ!
ದರೋಡೆಗೆ ಬಂದ ವ್ಯಕ್ತಿ ಹಾಗೂ ಆತನ ಕೈಬರಹದ ಚೀಟಿ
TV9 Web
| Updated By: ಸುಷ್ಮಾ ಚಕ್ರೆ|

Updated on: Aug 14, 2021 | 3:08 PM

Share

ದುಡ್ಡಿಗಾಗಿ ಅನೇಕರು ನಾನಾ ರೀತಿಯ ಮಾರ್ಗಗಳನ್ನು ಅನುಸರಿಸುತ್ತಾರೆ. ಕೆಲವರಿಗೆ ದರೋಡೆ ಮಾಡುವುದೇ ಕಸುಬಾಗಿರುತ್ತದೆ. ಅದೇರೀತಿ ಬ್ಯಾಂಕ್ ದರೋಡೆಗೆ ಹೋದವ ಕಳ್ಳನೊಬ್ಬನಿಗೆ ಆತನ ಕೈ ಬರಹವೇ (Hand Writing) ಶಾಪವಾಗಿದೆ. ಆತನ ಕೆಟ್ಟ ಹ್ಯಾಂಡ್ ರೈಟಿಂಗ್​ನಿಂದಾಗಿ ದರೋಡೆ ಮಾಡಲು ಹೋಗಿ ಬರಿಗೈಯಲ್ಲಿ ವಾಪಾಸಾಗಿದ್ದಾನೆ. ಈ ವಿಚಿತ್ರ ಘಟನೆ ನಡೆದಿರುವುದು ಇಂಗ್ಲೆಂಡ್​ನ (United Kingdom) ಈಸ್ಟ್​ಬೋರ್ನ್​ನಲ್ಲಿ.

ಬ್ಯಾಂಕ್​ನಲ್ಲಿ ಗ್ರಾಹಕರು ಇರುವಾಗಲೇ ದರೋಡೆಗೆ ನುಗ್ಗಿದ ಕಳ್ಳ ‘ತಾನು ದರೋಡೆಗೆ ಬಂದಿದ್ದೇನೆ, ನೀವಾಗಿಯೇ ಹಣ ನೀಡಿದರೆ ನಿಮ್ಮ ಗ್ರಾಹಕರಿಗೆ ಏನೂ ತೊಂದರೆ ಮಾಡುವುದಿಲ್ಲ, ನಿಮ್ಮ ಗ್ರಾಹಕರ ಬಗ್ಗೆಯೂ ಸ್ವಲ್ಪ ಯೋಚನೆ ಮಾಡಿ’ ಎಂದು ಚೀಟಿಯಲ್ಲಿ ಬರೆದು ಕ್ಯಾಶಿಯರ್ ಕೈಗೆ ಕೊಟ್ಟಿದ್ದ. ಆದರೆ, ಆತನ ಕೆಟ್ಟ ಕೈಬರಹವನ್ನು ಓದಲಾಗದೆ ಆ ಕ್ಯಾಶಿಯರ್ ಆ ಚೀಟಿಯನ್ನು ನೋಡಿ ಪಕ್ಕದಲ್ಲಿಟ್ಟಿದ್ದಾರೆ. ಆ ಚೀಟಿಯನ್ನು ಏನು ಬರೆದಿದ್ದಾರೆಂದು ಅರ್ಥವಾಗದ ಕಾರಣ ಕ್ಯಾಶಿಯರ್ ದರೋಡೆಕೋರನಿಗೆ ಬಿಡಿಗಾಸು ಹಣವನ್ನೂ ನೀಡಿಲ್ಲ. ಹೀಗಾಗಿ, ದರೋಡೆಕೋರ ಬರಿಗೈಯಲ್ಲಿ ವಾಪಾಸಾಗಿದ್ದಾನೆ.

67 ವರ್ಷದ ಅಲಾನ್ ಸ್ಲಾಟರಿ ಎಂಬಾತ ನಿವೃತ್ತನಾಗಿದ್ದು, ಹೀಗೆ ಬ್ಯಾಂಕ್​ನವರನ್ನು ಹೆದರಿಸಿ ದರೋಡೆ ಮಾಡುವುದನ್ನೇ ಕಸುಬಾಗಿಸಿಕೊಂಡಿದ್ದ. ಒಂದು ಬ್ಯಾಂಕ್​ನಿಂದ ಈ ರೀತಿ ಲಕ್ಷಾಂತರ ರೂ. ವಸೂಲಿ ಮಾಡಿದ್ದ ಆತ ಒಟ್ಟು 3 ಬ್ಯಾಂಕ್​ಗಳಿಗೆ ಹೋಗಿದ್ದ. ಅದರಲ್ಲಿ ಒಂದು ಬ್ಯಾಂಕ್​ನ ಕ್ಯಾಶಿಯರ್ ಆತನ ಕೈಬರಹ ಓದಲಾಗದೆ ವಾಪಾಸ್ ಕಳುಹಿಸಿದ್ದಾರೆ.

ಅದಾದ ಬಹಳ ಹೊತ್ತಿನ ಬಳಿಕ ಆ ಚೀಟಿಯನ್ನು ಬ್ಯಾಂಕ್​ನಲ್ಲಿದ್ದ ಬೇರೆಯವರಿಗೂ ತೋರಿಸಿದ ಕ್ಯಾಶಿಯರ್​ಗೆ ತನ್ನ ಬಳಿ ಬಂದವನು ದರೋಡೆಕೋರ ಎಂಬ ವಿಷಯ ಬಯಲಾಗಿದೆ. ತಕ್ಷಣ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈಗಾಗಲೇ ಒಂದು ಬ್ಯಾಂಕ್ ದರೋಡೆ ಮಾಡಿರುವ ಆರೋಪದಲ್ಲಿ ಆತನನ್ನು ಪೊಲೀಸರು ಬಂಧಿಸಿದ್ದಾರೆ.

‘ನೀನು ಈ ಚೀಟಿಯನ್ನು ಓದಿ ಕೂಗಾಡಿದರೂ ನಾನೇನು ಮಾಡಬೇಕು ಎಂದುಕೊಂಡಿದ್ದೇನೋ ಅದನ್ನು ಮಾಡಿಯೇ ಮಾಡುತ್ತೇನೆ. ಬಾಯಿ ಮುಚ್ಚಿಕೊಂಡು ನೀನಾಗಿಯೇ ಹಣ ಕೊಟ್ಟರೆ ನಿನ್ನ ಪ್ರಾಣ ಉಳಿಯುತ್ತದೆ, ಗ್ರಾಹಕರಿಗೂ ಏನೂ ಮಾಡುವುದಿಲ್ಲ. ನಿಮ್ಮ ಗ್ರಾಹಕರ ಬಗ್ಗೆ ಯೋಚನೆ ಮಾಡು’ ಎಂದು ಆ ಚೀಟಿಯಲ್ಲಿ ಬರೆಯಲಾಗಿತ್ತು.

ಇದನ್ನೂ ಓದಿ: Viral News: 40 ವರ್ಷ ಹಿಂದಿನ ಕೇಕ್ ತುಂಡು​ 19 ಲಕ್ಷ ರೂ.ಗೆ ಹರಾಜು; ಇದು ಅಂತಿಂಥಾ ಕೇಕ್ ಅಲ್ಲ!

Viral Video: ಸೀರೆಯುಟ್ಟು ಸ್ಟಂಟ್ ಮಾಡಿದ ಯುವತಿ ವಿಡಿಯೋ ವೈರಲ್; ಒಲಿಂಪಿಕ್ಸ್​ನಲ್ಲಿ ಸ್ಪರ್ಧಿಸಿ ಎಂದ ನೆಟ್ಟಿಗರು

(Viral News Bad handwriting foils mans Bank robbery Attempt in United Kingdom Interesting Story)

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ