AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral News: ಮೂರು ದಿನಗಳಿಂದ ಕಾಣೆಯಾಗಿದ್ದ ಮೂರು ವರ್ಷದ ಬಾಲಕ ಪತ್ತೆಯಾಗಿದ್ದು ಕಾಡಿನಲ್ಲಿ! ರೋಚಕ ಕಥೆ ಓದಿ

ಹೆಲಿಕಾಪ್ಟರ್ ಮೂಲಕ ಬಾಲಕನನ್ನು ಹುಡುಕಲು ಹೊರಟಾಗ ಹಾಡಿನ ಮಧ್ಯದ ಪೊದೆಯಲ್ಲಿ ಒಬ್ಬಂಟಿಯಾಗಿ ಕುಳಿತಿರುವುದು ಕಂಡು ಬಂದಿದೆ. ಪೊಲೀಸ್ ಮತ್ತು ರಕ್ಷಣಾ ಸಿಬ್ಬಂದಿಯನ್ನೇ ಬೆಚ್ಚಿ ಬಿಳಿಸಿರುವ ಘಟನೆ ನಡೆದಿದೆ.

Viral News: ಮೂರು ದಿನಗಳಿಂದ ಕಾಣೆಯಾಗಿದ್ದ ಮೂರು ವರ್ಷದ ಬಾಲಕ ಪತ್ತೆಯಾಗಿದ್ದು ಕಾಡಿನಲ್ಲಿ! ರೋಚಕ ಕಥೆ ಓದಿ
ಮೂರು ದಿನಗಳಿಂದ ಕಾಣೆಯಾಗಿದ್ದ ಮೂರು ವರ್ಷದ ಬಾಲಕ ಪತ್ತೆಯಾಗಿದ್ದು ಕಾಡಿನಲ್ಲಿ
TV9 Web
| Updated By: shruti hegde|

Updated on: Sep 07, 2021 | 10:45 AM

Share

ಮೂರು ವರ್ಷದ ಬಾಲಕ ಕಾಡಿನ ಮಧ್ಯದ ದಟ್ಟವಾದ ಪೊದೆಯಲ್ಲಿ ಪತ್ತೆಯಾಗಿದ್ದಾನೆ. ವಿಚಿತ್ರವೆನಿಸಿದರೂ ಸಹ ನಂಬಲೇಬೇಕಾದ ಸತ್ಯ ಇದಾಗಿದ್ದು, ಈ ಘಟನೆ ಎಲ್ಲರನ್ನು ಬೆಚ್ಚಿ ಬೀಳಿಸುವಂತಿದೆ. ಹೆಲಿಕಾಪ್ಟರ್ ಮೂಲಕ ಬಾಲಕನನ್ನು ಹುಡುಕಲು ಹೊರಟಾಗ ಹಾಡಿನ ಮಧ್ಯದ ಪೊದೆಯಲ್ಲಿ ಒಬ್ಬಂಟಿಯಾಗಿ ಕುಳಿತಿರುವುದು ಕಂಡು ಬಂದಿದೆ. ಪೊಲೀಸ್ ಮತ್ತು ರಕ್ಷಣಾ ಸಿಬ್ಬಂದಿಯನ್ನೇ ಬೆಚ್ಚಿ ಬಿಳಿಸಿರುವ ಘಟನೆ ನಡೆದಿದೆ.

ಆಸ್ಟ್ರೇಲಿಯಾದ ಬಾಲಕ ಆಂಟನಿ ಎಜೆ 3 ದಿನಗಳಿಂದ ನಾಪತ್ತೆಯಾಗಿದ್ದ. ಮನೆಯ ಮಂದಿ ಆತನನ್ನು ಹುಡುಕಲು ಪ್ರಾರಂಭಿಸಿದ್ದರು. ಪೊಲೀಸರಿಗೂ ಮಾಹಿತಿ ತಿಳಿಸಲಾಗಿತ್ತು. ಬಳಿಕ ರಕ್ಷಣಾ ಪಡೆ ಮತ್ತು ಪೊಲೀಸ್ ಸಿಬ್ಬಂದಿ ಹುಡುಕಲು ಮುಂದಾಗಿದ್ದಾರೆ. ಸಿಡ್ನಿಯಿಂದ 140 ಕಿಲೋಮೀಟರ್ ದೂರದಲ್ಲಿನ ಹಳ್ಳಿಯಲ್ಲಿರುವ ಅವರ ಕುಟುಂಬದಿಂದ ತಪ್ಪಿಸಿಕೊಂಡಿದ್ದ ಮೂರು ದಿನಗಳ ನಂತರ ಎಲ್ಪಾಲಾಕ್ ಕಾಡಿನಲ್ಲಿ ಪತ್ತೆಯಾಗಿದ್ದಾನೆ.

ಸೆಪ್ಟೆಂಬರ್ 4ರಂದು ರಕ್ಷಣಾ ಸಿಬ್ಬಂದಿ ಬಾಲಕನನನ್ನು ಹುಡುಕಲು ಪ್ರಾರಂಭಿಸಿದರು. 3 ವರ್ಷದ ಬಾಲಕ ಆಂಟನಿ ಎಜೆ ಆಟಿಸಂನಿಂದ ಬಳಲುತ್ತಿದ್ದನು. ಎಲ್ಲರಿಗೂ ಆಘಾತ ಮತ್ತು ಆಶ್ಚರ್ಯವನ್ನುಂಟು ಮಾಡುವಂತೆ ಕಾಡಿನಲ್ಲಿ ಪತ್ತೆಯಾಗಿದ್ದಾನೆ. ಹರಿಯುವ ನೀರನ್ನು ಕೈಯಿಂದ ಹಿಡಿದು ಕುಡಿತ್ತಿರುವ ಬಾಲಕನ ದೃಶ್ಯ ಕ್ಯಾಮರಾದಲ್ಲಿ ಸೆರೆಹಿಡಿಯಲಾಗಿದೆ.

ಬಾಲಕನ ಬಿಳಿ ಬಣ್ಣದ ಟೀ-ಶರ್ಟ್ ಮತ್ತು ಪ್ಯಾಂಟ್ ಧರಿಸಿದ್ದ. ದೇಹದ ಮೇಲೆ ಸಣ್ಣ ಪುಟ್ಟ ಗಾಯಗಳಾಗಿವೆ. ಇರುವೆಗಳಿಂದ ಕಚ್ಚಿಸಿಕೊಂಡ ಗಾಯಗಳೂ ಇವೆ. ಕಾಡಿನಲ್ಲಿ ಏಕಾಂಗಿಯಾಗಿ ಮೂರು ದಿನವನ್ನು ಕಳೆದಿದ್ದಾನೆ. ಆದರೆ ಅದೃಷ್ಟವಶಾತ್ ಬಾಲಕನಿಗೆ ಯಾವುದೇ ಅಪಾಯವಾಗಿಲ್ಲ ಎಂಬುದು ವರದಿಗಳಿಂದ ತಿಳಿದು ಬಂದಿದೆ.

ಹೆಲಿಕಾಫ್ಟರ್ ಮೂಲಕ ರಕ್ಷಣಾ ಪಡೆ ಮತ್ತು ಪೊಲೀಸ್ ಬಾಲಕನನ್ನು ಹುಡುಕಲು ಪ್ರಾರಂಭಿಸಿದೆ. ಕಾಡಿನಲ್ಲಿ ನೀರುಕುಡಿಯುತ್ತ ಕುಳಿತಿದ್ದ ಬಾಲಕನನ್ನು ಕಂಡು ರಕ್ಷಣಾ ಪಡೆ ಬೆರಗಾಗಿದ್ದಾರೆ.

ಆಂಟನಿ ಪತ್ತೆಯಾದ ಸ್ವಲ್ಪ ಸಮಯದ ಬಳಿಕ ಎನ್ಎಸ್​ಡಬ್ಲ್ಯೂ ಪೊಲೀಸ್ ಫೋರ್ಸ್​ ಟ್ವಿಟರ್​ನಲ್ಲಿ ಹಂಚಿಕೊಂಡಿದೆ. ಕಾಣೆಯಾದ ಆಂಟನಿ ಎಜೆ ಎಂಬ ಬಾಲಕ ಸ್ವಲ್ಪ ಸಮಯದ ಹಿಂದಷ್ಟೇ ಕಾಡಿನಲ್ಲಿ ಪತ್ತೆಯಾಗಿದ್ದಾನೆ. ವೈದ್ಯರಲ್ಲಿ ಪರೀಕ್ಷೆಗಾಗಿ ಕಳುಕಿಸಿಕೊಡಲಾಗುವುದು. ಇದರಿಂದ ಹೆಚ್ಚಿನ ಮಾಹಿತಿ ಬರಲಿದೆ ಎಂದು ಬರೆಯಲಾಗಿದೆ.

ಮೂರು ದಿನಗಳಕಾಲ ರಾತ್ರಿಯಿಡೀ ಕಾಡಿನಲ್ಲಿ ಏಕಾಂಗಿಯಾಗಿ ಬದುಕಿರುವುದು ಪವಾಡ ಎಂದು ಪುಟ್ಟ ಬಾಲಕನ ತಂದೆ ಹೇಳಿದ್ದಾರೆ. ಅಮ್ಮನ ಬಳಿ ಹೋಗಿ ಬಿಗಿದಪ್ಪಿಕೊಂಡಿದ್ದಾನೆ. ಅಮ್ಮನನ್ನು ಕಣ್ತೆರೆದು ನೋಡಿ ಮತ್ತೆ ನಿದ್ರಿಸಿದ್ದಾನೆ ಎಂದು ಬಾಲಕನ ತಂದೆ ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:

Viral News: ವಿಷಕಾರಿ ಪ್ರಾಣಿಗಳಿರುವ ಕಾಡಿನಲ್ಲಿ ಕಳೆದಹೋದ 72 ವರ್ಷದ ವೃದ್ಧ ಮರಳಿ ಮನೆಗೆ ಬಂದ ಇಂಟ್ರೆಸ್ಟಿಂಗ್​​ ಸ್ಟೋರಿ ಇಲ್ಲಿದೆ

Viral News: ನೊಕಿಯಾ ಮೊಬೈಲ್​ ಸೆಟ್​ ನುಂಗಿದ ಯುವಕ; ಶಸ್ತ್ರಚಿಕಿತ್ಸೆ ಮಾಡಿ ಪ್ರಾಣಾಪಾಯದಿಂದ ಪಾರು ಮಾಡಿದ ವೈದ್ಯರು

(Viral News Toddler 3 years boy survives 3 days in forest watch video)

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!