Video: ಟ್ವಿಟರ್ನಲ್ಲಿ ಸ್ಪೆಷಲ್ ದೋಸೆ ವೈರಲ್; ಇದಕ್ಕಿಂತ ಬೆಂಗಳೂರು ಮಸಾಲೆ ದೋಸೆಯೇ ಮೇಲು ಎಂದ ನೆಟ್ಟಿಗರು!
Dosa: ಬಹಳಷ್ಟು ಟ್ವಿಟರ್ ಬಳಕೆದಾರರು ಈ ವಿಡಿಯೋ ನೋಡಿ ಅಥವಾ ಹಂಚಿಕೊಂಡು ದೋಸಾ ಅಂಗಡಿಯವನನ್ನು ಬಯ್ಯುತ್ತಿದ್ದಾರೆ. ಈ ದೋಸಾ ರೆಸಿಪಿ ಗಮನಿಸಿ ನೆಗೆಟಿವ್ ಕಮೆಂಟ್ ಮಾಡಿದ್ದಾರೆ.
ಆಹಾರದ ಮತ್ತು ಪಾನೀಯಗಳ ವಿಶೇಷ ರುಚಿ ಸಿಗುವುದೇ ಸ್ಟ್ರೀಟ್ ಫುಡ್ನಲ್ಲಿ ಎಂದು ತಿಂಡಿಪೋತರು ಹೇಳುತ್ತಿರುತ್ತಾರೆ. ರೆಸ್ಟೋರೆಂಟ್ ಫುಡ್ ಆದರೂ ಅದು ಒಂದು ಸ್ಟ್ರೀಟ್ ಫುಡ್ ಕೊಡುವಷ್ಟು ಸಂಭ್ರಮ ಕೊಡುವುದಿಲ್ಲ. ಸ್ಟ್ರೀಟ್ ಫುಡ್ನಲ್ಲಿ ಅಂಗಡಿಯಾತ ಗ್ರಾಹಕರನ್ನು ಸೆಳೆಯಲು ಬಳಸುವ ತಂತ್ರ, ಅವರನ್ನು ರಂಜಿಸುವ ವಿಧಾನ, ಸಾಮಾಜಿ ಜಾಲತಾಣದಲ್ಲಿ ಪಡೆಯುವ ಸ್ಥಾನ ಇತ್ಯಾದಿ ಬಹಳ ದೊಡ್ಡದು. ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಾ ಎಲ್ಲರನ್ನೂ ರಂಜಿಸುತ್ತಿರುತ್ತಾರೆ.
ಬೀದಿ ಬದಿ ವ್ಯಾಪಾರ, ವಹಿವಾಟು ನಡೆಸುವವರು ಕಡಿಮೆ ಬೆಲೆಗೆ ಸಾಧ್ಯವಾದಷ್ಟು ವಿಶೇಷವಾಗಿ ಆಹಾರ ಸೇವೆ ಒದಗಿಸುತ್ತಾರೆ. ಎಂದೂ ನಗುತ್ತಲೇ ಗ್ರಾಹಕರನ್ನು ಸೆಳೆಯುತ್ತಾರೆ. ಆಹಾರದ ಹೆಸರುಗಳಿಂದ ಹಿಡಿದು, ಅದನ್ನು ಅಲಂಕರಿಸುವುದು, ನೀಡುವ ಶೈಲಿಯಲ್ಲಿಯೂ ವಿಭಿನ್ನತೆ ಇದ್ದೇ ಇರುತ್ತದೆ. ದಕ್ಷಿಣ ಭಾರತದ ಆಹಾರದ ಮೇಲಂತೂ ಅನೇಕ ಅನೇಕ ಪ್ರಯೋಗಗಳು ಸ್ಟ್ರೀಟ್ ಫುಡ್ ವಿಭಾಗದಲ್ಲಿ ಆಗುತ್ತಿರುತ್ತದೆ.
ದೋಸಾಗಳ ಮೇಲೆ ಹಲವು ಪ್ರಯೋಗ ಆಗುತ್ತದೆ. ವಿವಿಧ ಬಗೆಯ ದೋಸೆಗಳನ್ನು ನೀವು ತಿಂದೇ ಇರುತ್ತೀರಿ. 99 ವೆರೈಟಿ ದೋಸಾ ಎಂಬ ಬೋರ್ಡ್ಗಳನ್ನು ಕೂಡ ಗಮನಿಸಿ ಇರುತ್ತೀರಿ. ಈ ದೋಸಾ (#Dosa) ಎಂಬ ಪದವು ಈಗ ಟ್ವಿಟರ್ನಲ್ಲಿ ಟ್ರೆಂಡ್ ಆಗುತ್ತಿದೆ. ಇದಕ್ಕೆ ಕಾರಣ ಹೊಸದೊಂದು ದೋಸಾ ರೆಸಿಪಿ. ಆದರೆ, ಇದೊಂದು ಋಣಾತ್ಮಕ ವಿಷಯ. ಇಲ್ಲಿ ದೋಸೆ ಪ್ರಖ್ಯಾತ ಆಗಿಲ್ಲ. ಕೆಟ್ಟ ಹೆಸರು ಪಡೆದುಕೊಂಡು ವೈರಲ್ ಆಗುತ್ತಿದೆ.
ಬಹಳಷ್ಟು ಟ್ವಿಟರ್ ಬಳಕೆದಾರರು ಈ ವಿಡಿಯೋ ನೋಡಿ ಅಥವಾ ಹಂಚಿಕೊಂಡು ದೋಸಾ ಅಂಗಡಿಯವನನ್ನು ಬಯ್ಯುತ್ತಿದ್ದಾರೆ. ಈ ದೋಸಾ ರೆಸಿಪಿ ಗಮನಿಸಿ ನೆಗೆಟಿವ್ ಕಮೆಂಟ್ ಮಾಡಿದ್ದಾರೆ. ಟ್ವಿಟರ್ನಲ್ಲಿ ದೋಸಾ ಮಾಡುವ ವಿಡಿಯೋ ಹಂಚಿಕೊಳ್ಳಲಾಗಿದೆ. 1.5 ಮಿಲಿಯನ್ಗೂ ಹೆಚ್ಚು ಮಂದಿ ಆ ವಿಡಿಯೋ ನೋಡಿದ್ದಾರೆ. ವಿಡಿಯೋ ನೋಡಿ ದೋಸಾ ಮಾಡುವವನ ಬಗ್ಗೆ ಕಮೆಂಟ್ ಹಂಚಿಕೊಂಡಿದ್ದಾರೆ. ಹಲವರಿಗೆ ಈ ದೋಸಾ ರೆಸಿಪಿ ಇಷ್ಟ ಆಗಿಲ್ಲ.
No matter what all the value addition he did with all these unnecessary stuffs including Cheese, cashew nuts etc etc, nothing to beat the Bangalore :
MASALA DOSE ???? pic.twitter.com/VYhNe6NJ1s
— Subba Rao ???? (@TNSubbaRao1) September 6, 2021
ಹಲವರು ಹೇಳುತ್ತಿರುವಂತೆ, ದೋಸೆಯನ್ನು ಹೊಸ ಪ್ರಯೋಗ, ಹೊಸ ರೆಸಿಪಿ ಹೆಸರಿನಲ್ಲಿ ಹಾಳುಮಾಡಲಾಗುತ್ತಿದೆ. ಹದವಾಗಿ ತಿನ್ನಬಹುದಾದ ದೋಸೆ ವಿಚಿತ್ರ ರುಚಿ ಪಡೆಯುತ್ತಿದೆ. ಆ ಬಗ್ಗೆ ಗ್ರಾಹಕರು ಅಸಮಾಧಾನ ಪಟ್ಟಿದ್ದಾರೆ. ಒಬ್ಬ ಬಳಕೆದಾರ ಈ ಅಂಗಡಿಯಾತನನ್ನು ಬಂಧಿಸಬೇಕು ಎಂದು ತಮಾಷೆ ಮಾಡಿದ್ದಾರೆ. ಮತ್ತೊಬ್ಬರು, ದೋಸಾದ ಮೇಲೆ ಆಗುತ್ತಿರುವ ಅನ್ಯಾಯವನ್ನು ತಡೆದು ಸಿಬಿಐ ತನಿಖೆಗೆ ವಹಿಸಬೇಕು ಎಂದು ಹೇಳಿದ್ದಾರೆ.
ಈ ವಿಡಿಯೋ ವೈರಲ್ ಆದ ಬಳಿಕ ದೋಸಾ (#Dosa) ಎಂಬ ಹ್ಯಾಷ್ಟ್ಯಾಗ್ ಟ್ವಿಟರ್ನಲ್ಲಿ ಟ್ರೆಂಡಿಂಗ್ ಆಗಿದೆ. ಸ್ಟ್ರೀಟ್ ಫುಡ್ ಬಗ್ಗೆ ಜನರಿಗೆ ಎಷ್ಟು ಒಲವು ಇದೆಯೋ, ದೋಸೆ ಮೇಲಿನ ಪ್ರಯೋಗ ಎಂದು ಅದರ ನೈಜ ರುಚಿ ಹಾಳು ಮಾಡುತ್ತಿರುವುದರ ಬಗ್ಗೆಯೂ ಜನರಿಗೆ ಅಷ್ಟೇ ಸಿಟ್ಟಿದೆ ಎಂಬುದು ಈ ವಿಡಿಯೋ ಕಮೆಂಟ್ ಮೂಲಕ ಗೊತ್ತಾಗಿದೆ. ಏನೇ ಆಗಲಿ ನಮ್ಮ ಬೆಂಗಳೂರು ವಿದ್ಯಾರ್ಥಿ ಭವನ ದೋಸೆ ರುಚಿಯೇ ಸೂಪರ್ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: Viral Video: ಎರಡು ಸುರಂಗಗಳ ಮೂಲಕ ವಿಮಾನ ಹಾರಿಸಿದ ಪೈಲಟ್; ದಿಗ್ಭ್ರಮೆಗೊಳಿಸುವ ವಿಡಿಯೋ ವೈರಲ್
ಇದನ್ನೂ ಓದಿ: Viral Video: ಬಾಲಕಿಯ ಸ್ಟಂಟ್ ನೋಡಿ ಮೂಳೆ ಇದೆಯೋ? ಇಲ್ಲವೋ ಎಂದು ಪ್ರಶ್ನಿಸಿದ ನೆಟ್ಟಿಗರು; ವಿಡಿಯೋ ನೋಡಿ
Published On - 10:04 pm, Mon, 6 September 21