AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಬಾಲಕಿಯ ಸ್ಟಂಟ್​ ನೋಡಿ ಮೂಳೆ ಇದೆಯೋ? ಇಲ್ಲವೋ ಎಂದು ಪ್ರಶ್ನಿಸಿದ ನೆಟ್ಟಿಗರು; ವಿಡಿಯೋ ನೋಡಿ

ಕೆಲವರು ಇವಳ ಪ್ರತಿಭೆಯನ್ನು ಮೆಚ್ಚಲೇಬೇಕು ಎಂದು ಶ್ಲಾಘಿಸಿದ್ದಾರೆ. ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ.

Viral Video: ಬಾಲಕಿಯ ಸ್ಟಂಟ್​  ನೋಡಿ ಮೂಳೆ ಇದೆಯೋ? ಇಲ್ಲವೋ ಎಂದು ಪ್ರಶ್ನಿಸಿದ ನೆಟ್ಟಿಗರು; ವಿಡಿಯೋ ನೋಡಿ
ಬಾಲಕಿಯ ಸ್ಟಂಟ್​ ನೋಡಿ ಮೂಳೆ ಇದೆಯೋ? ಇಲ್ಲವೋ ಎಂದು ಪ್ರಶ್ನಿಸಿದ ನೆಟ್ಟಿಗರು; ವಿಡಿಯೋ ನೋಡಿ
TV9 Web
| Edited By: |

Updated on: Sep 06, 2021 | 1:37 PM

Share

ಜಗತ್ತಿನಲ್ಲಿ ಪ್ರತಿಭಾವಂತ ಮಕ್ಕಳಿಗೆ ಕೊರತೆಯಿಲ್ಲ. ಇದಕ್ಕೆ ಸಾಕ್ಷಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಪುಟ್ಟ ಪುಟ್ಟ ಮಕ್ಕಳ ಸ್ಟಂಟ್​ಗಳು. ವಿಡಿಯೋವನ್ನು ನೋಡಿದಾಕ್ಷಣ ಒಮ್ಮೆ ಆಶ್ವರ್ಯವಾಗುವುದಂತೂ ಸತ್ಯ. ಇತ್ತೀಚೆಗಂತೂ ಬಾಲಕಿಯರ ಅದ್ಭುತ ಸಾಹಸಗಳ ವಿಡಿಯೋಗಳು ಸುದ್ದಿಯಲ್ಲಿರುತ್ತವೆ. ಇದೀಗ ವೈರಲ್ ಆದ ವಿಡಿಯೋ ಕೂಡಾ ಅಂಥದ್ದೇ! ಬಾಲಕಿಯನ್ನು ನೋಡಿದ ನೆಟ್ಟಿಗರು ಈಕೆಗೆ ಮೂಳೆಗಳಿದೆಯೋ? ಇಲ್ಲವೋ? ಎಂದು ಪ್ರಶ್ನಿಸಿದ್ದಾರೆ. ವಿಡಿಯೋ ಇದೆ ನೀವೂ ನೋಡಿ..

ವಿಡಿಯೋ ನೋಡಿದ ನೆಟ್ಟಿಗರು ಹುಬ್ಬೇರಿಸಿದ್ದಾರೆ. ಕೆಲವರು ಬಾಲಕಿಯ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈಕೆಯ ದೇಹ ರಬ್ಬರ್​ನಂತೆಯೇ, ಹೇಗೆ ಬೇಕಾದರೂ ಬಳುಕುತ್ತದೆ, ಮೂಳೆಗಳಿಲ್ಲದ ದೇಹ ಎಂದು ಕೆಲವರು ಹೇಳಿದ್ದಾರೆ. ಜತೆಗೆ ಬಾಲಕಿಯ ಪ್ರತಿಭೆಯನ್ನು ಶ್ಲಾಘಿಸುವ ಮೂಲಕ ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ವಿಭಾಗದಲ್ಲಿ ಹಂಚಿಕೊಂಡಿದ್ದಾರೆ.

ಈ ಸ್ಟಂಟ್ ಮಾಡಲು ತರಬೇತಿ ಬೇಕು. ಅಭ್ಯಾಸವಿಲ್ಲದೇ ಈಥರಹದ ಸಾಹಸಗಳನ್ನು ಮಾಡಲು ಸಾಧ್ಯವಿಲ್ಲ ಎಂದು ಕೆಲವರು ಹೇಳಿದ್ದಾರೆ. ಇನ್ನು ಕೆಲವರು ಇವಳ ಪ್ರತಿಭೆಯನ್ನು ಮೆಚ್ಚಲೇಬೇಕು ಎಂದು ಶ್ಲಾಘಿಸಿದ್ದಾರೆ. ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ. ನೆಟ್ಟಿಗರು ವಿಡಿಯೋವನ್ನು ಹೆಚ್ಚು ಇಷ್ಟಪಟ್ಟಿದ್ದು 1,700ಕ್ಕೂ ಹೆಚ್ಚು ಲೈಕ್ಸ್​ಗಳನ್ನು ಪಡೆದುಕೊಂಡಿದೆ.

ಇದನ್ನೂ ಓದಿ:

Viral Video: ನಗುತ್ತಾ ವಧುವಿನ ಊಟದ ಬಾಳೆಯಲ್ಲಿದ್ದ ಹಪ್ಪಳ ಕದ್ದ ವರ; ಕ್ಯೂಟ್ ವಿಡಿಯೋ ವೈರಲ್

Viral Video: ಬಾಯಾರಿಕೆ ನೀಗಿಸಿಕೊಳ್ಳಲು ಬುದ್ಧಿವಂತಿಕೆ ಉಪಯೋಗಿಸಿದ ಆನೆ; ವೈರಲ್​ ಆಯ್ತು ವಿಡಿಯೋ

(Little girl stunt video goes viral in social media)