Viral Video: ಬಾಯಾರಿಕೆ ನೀಗಿಸಿಕೊಳ್ಳಲು ಬುದ್ಧಿವಂತಿಕೆ ಉಪಯೋಗಿಸಿದ ಆನೆ; ವೈರಲ್ ಆಯ್ತು ವಿಡಿಯೋ
ಆನೆಯೊಂದು ತನ್ನ ಬಾಯಾರಿಕೆ ನೀಗಿಸಿಕೊಳ್ಳಲು ಭಾರೀ ಉಪಾಯ ಮಾಡಿದೆ. ಎದುರಿದ್ದ ಬೋರ್ವೆಲ್ ಅನ್ನು ನೋಡಿ ತಲೆ ಓಡಿಸಿದೆ. ಮನುಷ್ಯರು ಹೇಗೆ ಬೋರ್ವೆಲ್ ಹಿಡಿಪು ಜಗ್ಗಿ ನೀರು ತೆಗೆಯುತ್ತಾರೋ ಥೇಟ್ ಅದೇ ರೀತಿ ತನ್ನ ಸೊಂಡಿಲಿನಿಂದ ಬೋರವೆಲ್ ಹಿಡುಪನ್ನು ಜಗ್ಗಿದ ಆನೆ ನೀರನ್ನು ಕುಡಿದಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಕೆಲವೊಂದು ಸಂಗತಿಗಳು ನಮ್ಮನ್ನು ಮಂತ್ರಮುಗ್ಧರನ್ನಾಗಿಸುತ್ತವೆ. ಅದರಲ್ಲೂ ಪ್ರಾಣಿ ಪಕ್ಷಿಗಳ ಅಪರೂಪದ ವಿಡಿಯೋಗಳಿದ್ದರೆ ಅವುಗಳಿಗೆ ಬೇಡಿಕೆ ಜಾಸ್ತಿ. ಬುದ್ಧಿವಂತ ಪ್ರಾಣಿ ಎಂದು ತನ್ನನ್ನು ತಾನೇ ಕರೆದುಕೊಂಡ ಮನುಷ್ಯನ ಬುದ್ಧಿವಂತಿಕೆಗೆ ಸವಾಲೆಸೆಯುವ ಮೂಕ ಪ್ರಾಣಿಗಳ ವಿಡಿಯೋ ಸಹಜವಾಗಿಯೇ ಬಲುಬೇಗ ವೈರಲ್ ಆಗುತ್ತವೆ. ಸಾಕುಪ್ರಾಣಿಗಳಷ್ಟೇ ಅಲ್ಲದೆ ಕಾಡುಪ್ರಾಣಿಗಳೂ ಈ ವಿಚಾರದಲ್ಲಿ ಪೈಪೋಟಿ ಕೊಡುತ್ತಿದ್ದು, ಇದೀಗ ಬುದ್ಧಿವಂತ ಆನೆಯ ವಿಡಿಯೋ ಒಂದು ಭಾರೀ ಸದ್ದು ಮಾಡುತ್ತಿದೆ.
ಚಿಕ್ಕವರಿದ್ದಾಗ ನೀವೆಲ್ಲಾ ಇದೇ ರೀತಿಯ ಒಂದು ಕತೆ ಕೇಳಿರಬಹುದು. ಬಾಯಾರಿಕೆ ತಡೆಯಲಾರದ ಕಾಗೆಯೊಂದು ಹೂಜಿಗೆ ಒಂದೊಂದೇ ಕಲ್ಲು ಹಾಕಿ ತಳದಲ್ಲಿದ್ದ ನೀರು ಮೇಲೆ ಬರುವಂತೆ ಬುದ್ಧಿವಂತಿಕೆ ಉಪಯೋಗಿಸಿದ ಕತೆ. ಇಂದು ವೈರಲ್ ಆಗಿರುವ ಈ ವಿಷಯವೂ ಅದಕ್ಕಿಂತ ಹೆಚ್ಚೇನೂ ಭಿನ್ನವಿಲ್ಲ. ಆದರೆ, ಕಾಗೆಯ ಬದಲು ಇಲ್ಲಿ ಆನೆ ಇದೆಯಷ್ಟೇ.
ವಿಡಿಯೋದಲ್ಲಿ ಕಾಣುವಂತೆ ದೈತ್ಯ ಆನೆಯೊಂದು ತನ್ನ ಬಾಯಾರಿಕೆ ನೀಗಿಸಿಕೊಳ್ಳಲು ಭಾರೀ ಉಪಾಯ ಮಾಡಿದೆ. ಎದುರಿದ್ದ ಬೋರ್ವೆಲ್ ಅನ್ನು ನೋಡಿ ತಲೆ ಓಡಿಸಿದೆ. ಮನುಷ್ಯರು ಹೇಗೆ ಬೋರ್ವೆಲ್ ಹಿಡಿಪು ಜಗ್ಗಿ ನೀರು ತೆಗೆಯುತ್ತಾರೋ ಥೇಟ್ ಅದೇ ರೀತಿ ತನ್ನ ಸೊಂಡಿಲಿನಿಂದ ಬೋರವೆಲ್ ಹಿಡುಪನ್ನು ಜಗ್ಗಿದ ಆನೆ ನೀರನ್ನು ಕುಡಿದಿದೆ.
एक हाथी भी #जल की एक-एक #बूंद का महत्व समझता है। फिर हम इंसान क्यों इस अनमोल रत्न को व्यर्थ करते हैं? आइए, आज इस जानवर से सीख लें और #जल_संरक्षण करें। pic.twitter.com/EhmSLyhtOI
— Ministry of Jal Shakti ?? #AmritMahotsav (@MoJSDoWRRDGR) September 3, 2021
ಅದೆಷ್ಟು ಬುದ್ಧಿವಂತಿಕೆ ಉಪಯೋಗಿಸಿದೆ ಎಂದರೆ ಒಮ್ಮೆ ಜಗ್ಗಿದ ಕೂಡಲೇ ನೀರು ಬಂದರೂ ಅಲ್ಲಿಗೇ ನಿಲ್ಲಿಸದೆ ಕೆಲ ಕಾಲ ನೀರು ತೆಗೆದು ಅಲ್ಲಿ ಸಾಕಷ್ಟು ಸಂಗ್ರಹವಾಗುವವರೆಗೆ ಕಾದು ನಂತರ ತನ್ನ ಸೊಂಡಿಲಿನಿಂದ ನೀರು ಕುಡಿದಿದೆ. ಈ ವಿಡಿಯೋ ಟ್ವಿಟರ್ನಲ್ಲಿ ಸಾಕಷ್ಟು ಸದ್ದು ಮಾಡುತ್ತಿದ್ದು, ನೋಡುಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಮನುಷ್ಯ ತನ್ನ ಅನುಕೂಲಕ್ಕೆ ಎಂದು ಕಂಡುಹಿಡಿದುಕೊಂಡ ಉಪಕರಣಗಳ ಬಳಕೆಯನ್ನು ಪ್ರಾಣಿಗಳೂ ಹೇಗೆ ಕಲಿತುಬಿಡುತ್ತವೆ ಎಂದು ಆಶ್ಚರ್ಯ ಹೊರಹಾಕಿದ್ದಾರೆ. ಈ ವಿಡಿಯೋವನ್ನು ಕೇಂದ್ರ ಸರ್ಕಾರದ ಜಲಶಕ್ತಿ ಇಲಾಖೆಯ ಅಧಿಕೃತ ಟ್ವಿಟರ್ ಖಾತೆಯಲ್ಲೂ ಹಂಚಿಕೊಳ್ಳಲಾಗಿದ್ದು, ನೀರಿನ ಸದ್ಬಳಕೆ ಹೇಗೆ ಮಾಡಿಕೊಳ್ಳಬೇಕು, ನೀರನ್ನು ಏಕೆ ಪೋಲು ಮಾಡಬಾರದು ಎಂಬ ಸಂದೇಶ ಸಾರಲಾಗಿದೆ.
Water and animals both are precious, to be conserved for own survival. pic.twitter.com/oU79GCJSTX
— Ramesh Pandey (@rameshpandeyifs) September 3, 2021
ಇದನ್ನೂ ಓದಿ: ಅಪರೂಪದಲ್ಲಿ ಅಪರೂಪವಿದು: 80ವರ್ಷಗಳ ನಂತರ ಶ್ರೀಲಂಕಾದಲ್ಲಿ ಅವಳಿ ಮರಿಗಳಿಗೆ ಜನ್ಮ ನೀಡಿದ ಆನೆ
Viral Video: ರೈಲು ಹಳಿ ದಾಟಲು ಪ್ರಯತ್ನಿಸುತ್ತಿದ್ದ ಆನೆಯನ್ನು ಪ್ರಾಣಾಪಾಯದಿಂದ ರಕ್ಷಿಸಿದ ಚಾಲಕರು; ವಿಡಿಯೋ ನೋಡಿ
(Elephant Drinking water from Borewell video goes viral)