ಕುಡಿದು ರೈಲಿನಲ್ಲಿ ಅರೆ ನಗ್ನವಾಗಿ ಓಡಾಡಿದ ಜೆಡಿಯು ಶಾಸಕ ನನ್ನ ಚಿನ್ನದ ಉಂಗುರ ಕಿತ್ತುಕೊಂಡರು; ಸಹ ಪ್ರಯಾಣಿಕ ದೂರು

Gopal Mandal: ರೈಲಿನಲ್ಲಿ ಅರೆ ನಗ್ನವಾಗಿ ಓಡಾಡಿದ್ದೂ ಅಲ್ಲದೆ ನನ್ನ ಕೈಲಿದ್ದ ಚಿನ್ನದ ಉಂಗುರವನ್ನು ಕಿತ್ತುಕೊಂಡಿದ್ದಾರೆ, ಆ ವೇಳೆ ಅವರು ಮೈ ಮೇಲೆ ಪ್ರಜ್ಞೆ ಇಲ್ಲದಷ್ಟು ಕುಡಿದಿದ್ದರು ಎಂದು ಗೋಪಾಲ್​ ಮಂಡಲ್ ವಿರುದ್ಧ ಸಹ ಪ್ರಯಾಣಿಕರೊಬ್ಬರು ದೂರು ನೀಡಿದ್ದಾರೆ.

ಕುಡಿದು ರೈಲಿನಲ್ಲಿ ಅರೆ ನಗ್ನವಾಗಿ ಓಡಾಡಿದ ಜೆಡಿಯು ಶಾಸಕ ನನ್ನ ಚಿನ್ನದ ಉಂಗುರ ಕಿತ್ತುಕೊಂಡರು; ಸಹ ಪ್ರಯಾಣಿಕ ದೂರು
ಜೆಡಿಯು ಶಾಸಕ ಗೋಪಾಲ್ ಮಂಡಲ್
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Sep 04, 2021 | 1:17 PM

ನವದೆಹಲಿ: ಬಿಹಾರದ ಜೆಡಿಯು ಶಾಸಕ ಗೋಪಾಲ್ ಮಂಡಲ್ ರೈಲಿನೊಳಗೆ ಚಡ್ಡಿ, ಬನಿಯನ್ ಧರಿಸಿ ಓಡಾಡಿದ ವಿಡಿಯೋ ಭಾರೀ ಚರ್ಚೆಗೆ ಕಾರಣವಾಗಿತ್ತು. ಆ ರೈಲಿನಲ್ಲಿದ್ದ ಬೇರೆ ಪ್ರಯಾಣಿಕರೊಬ್ಬರು ಶಾಸಕ ಗೋಪಾಲ್ ಜೊತೆ ಜಗಳವಾಡಿದ್ದರು. ಅದೆಲ್ಲ ಆದಮೇಲೆ ನಾನೇ ಆ ಪ್ರಯಾಣಿಕರ ಬಳಿ ಕ್ಷಮೆ ಕೇಳಿದ್ದೆ ಎಂದು ಕೂಡ ಜೆಡಿಯು ಶಾಸಕ ಗೋಪಾಲ್ ಮಂಡಲ್ ಹೇಳಿದ್ದರು. ಆದರೆ, ರೈಲಿನಲ್ಲಿ ಕಂಠಪೂರ್ತಿ ಕುಡಿದಿದ್ದ ಶಾಸಕ ಗೋಪಾಲ್ ಮಂಡಲ್ ಸಹ ಪ್ರಯಾಣಿಕರ ಕೈಯಲ್ಲಿದ್ದ ಚಿನ್ನದ ಉಂಗುರವನ್ನು ಕೂಡ ಕಿತ್ತುಕೊಂಡಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಮೂಲಕ ಶಾಸಕ ಗೋಪಾಲ್​ ಮಂಡಲ್​ಗೆ ಮತ್ತೊಂದು ಸಂಕಷ್ಟ ಎದುರಾಗಿದೆ.

ರೈಲಿನಲ್ಲಿ ಅರೆ ನಗ್ನವಾಗಿ ಓಡಾಡಿದ್ದೂ ಅಲ್ಲದೆ ನನ್ನ ಕೈಲಿದ್ದ ಚಿನ್ನದ ಉಂಗುರವನ್ನು ಕಿತ್ತುಕೊಂಡಿದ್ದಾರೆ, ಆ ವೇಳೆ ಅವರು ಮೈ ಮೇಲೆ ಪ್ರಜ್ಞೆ ಇಲ್ಲದಷ್ಟು ಕುಡಿದಿದ್ದರು ಎಂದು ಗೋಪಾಲ್​ ಮಂಡಲ್ ವಿರುದ್ಧ ಸಹ ಪ್ರಯಾಣಿಕರೊಬ್ಬರು ದೂರು ನೀಡಿದ್ದಾರೆ. ಕಂಠಪೂರ್ತಿ ಕುಡಿದಿದ್ದ ಶಾಸಕ ಗೋಪಾಲ್ ಮಂಡಲ್ ರೈಲಿನೊಳಗೆ ಚಡ್ಡಿ, ಬನಿಯನ್ ಧರಿಸಿ ಓಡಾಡುತ್ತಿದ್ದರು. ಈ ರೀತಿ ಅಸಭ್ಯವಾಗಿ ಓಡಾಡಬೇಡಿ ಎಂದು ನಾನು ಹೇಳಿದ್ದೆ. ಅದಕ್ಕೆ ಅದನ್ನೆಲ್ಲ ಕೇಳಲು ನೀನು ಯಾರೆಂದು ಜಗಳವಾಡಿದ್ದರು. ಆಗ ಕುಡಿದ ಮತ್ತಿನಲ್ಲಿ ಅವಾಚ್ಯ ಶಬ್ದಗಳಿಂದ ಬೈದ ಅವರು ಚಿನ್ನದ ಉಂಗುರವನ್ನು ಕಸಿದುಕೊಂಡರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಬಿಹಾರದ ಜೆಡಿಯು ಶಾಸಕ ಗೋಪಾಲ್ ಮಂಡಲ್ ಒಳ ಉಡುಪಿನಲ್ಲಿ ರೈಲಿನೊಳಗೆ ಓಡಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ದೆಹಲಿಯ ತೇಜಸ್ ರಾಜಧಾನಿ ಎಕ್ಸ್​ಪ್ರೆಸ್​ ರೈಲಿನ ಎಸಿ ಫಸ್ಟ್​ ಕ್ಲಾಸ್​​ ಕಂಪಾರ್ಟ್​ಮೆಂಟ್​ನಲ್ಲಿ ಶಾಸಕ ಗೋಪಾಲ್ ಮಂಡಲ್ ಜೊತೆಗೆ ಸಹ ಪ್ರಯಾಣಿಕರು ಜಗಳವಾಡಿದ್ದರು. ಗೋಪಾಲ್ ಮಂಡಲ್ ಪಾಟ್ನಾದಿಂದ ನವದೆಹಲಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ಸಂದರ್ಭದಲ್ಲಿ ಶಾಸಕರು ಬಿಳಿ ಬಣ್ಣದ ಬನಿಯನ್ ಹಾಗೂ ಅಂಡರ್ ವೇರ್ ಧರಿಸಿ ಓಡಾಡಿದ ವಿಡಿಯೋ ಭಾರೀ ಚರ್ಚೆಗೆ ಕಾರಣವಾಗಿತ್ತು.

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ತಾವು ಒಳ ಉಡುಪಿನಲ್ಲಿ ರೈಲಿನೊಳಗೆ ಓಡಾಡಿರುವುದಕ್ಕೆ ಕಾರಣ ತಿಳಿಸಿದ್ದ ಜೆಡಿಯು ಶಾಸಕ ಗೋಪಾಲ್ ಮಂಡಲ್, ಪ್ರಯಾಣದ ವೇಳೆ ನನ್ನ ಹೊಟ್ಟೆ ಸರಿಯಿರಲಿಲ್ಲ. ಅರ್ಜೆಂಟಾಗಿ ಟಾಯ್ಲೆಟ್​ಗೆ ಹೋಗಬೇಕಾಗಿತ್ತು. ಹೀಗಾಗಿ, ಪ್ಯಾಂಟ್, ಶರ್ಟ್​ ಅನ್ನು ಕಂಪಾರ್ಟ್​ಮೆಂಟ್​ನಲ್ಲಿ ಬಿಚ್ಚಿಟ್ಟು, ಟಾಯ್ಲೆಟ್​ ಕಡೆ ಹೋಗುವಾಗ ಟವೆಲ್ ಸುತ್ತಿಕೊಳ್ಳಲು ಮರೆತು ಹೆಗಲ ಮೇಲೆ ಹಾಕಿಕೊಂಡಿದ್ದೆ. ಅದನ್ನು ಸೊಂಟಕ್ಕೆ ಸುತ್ತಿಕೊಳ್ಳಲು ನಾನು ಮರೆತಿದ್ದೆ ಎಂದು ಸ್ಪಷ್ಟನೆ ನೀಡಿದ್ದರು.

ಈ ವೇಳೆ ಟಾಯ್ಲೆಟ್​ನಿಂದ ಬರುತ್ತಿದ್ದ ಪ್ರಯಾಣಿಕರೊಬ್ಬರು ಶಾಸಕ ಗೋಪಾಲ್ ಮಂಡಲ್ ಅರೆ ನಗ್ನವಾಗಿ ಓಡಾಡುತ್ತಿರುವುದಕ್ಕೆ ಆಕ್ಷೇಪ ಎತ್ತಿದ್ದರು. ಇಲ್ಲಿ ಮಹಿಳೆಯರು ಕೂಡ ಓಡಾಡುತ್ತಾರೆ. ನೀವು ಹೀಗೆಲ್ಲ ಬಟ್ಟೆ ಬಿಚ್ಚಿ ಓಡಾಡಬಾರದು ಎಂದು ಜಗಳವಾಡಿದ್ದರು. ಅದರಿಂದ ಕೋಪಗೊಂಡ ಗೋಪಾಲ್ ಮಂಡಲ್, ಅದನ್ನೆಲ್ಲ ಕೇಳೋಕೆ ನೀನು ಯಾರು? ನಾನು ಓರ್ವ ಶಾಸಕ. ನನ್ನನ್ನು ಹೀಗೆಲ್ಲ ಪ್ರಶ್ನೆ ಮಾಡೋಕೆ ನೀನು ಯಾರು? ನನಗೆ ಟಾಯ್ಲೆಟ್​ಗೆ ಹೋಗೋಕೆ ಅರ್ಜೆಂಟ್ ಆಗಿದೆ ದಾರಿ ಬಿಡಿ ಎಂದು ಹೇಳಿದೆ. ಅದಕ್ಕೆ ಆತ ನೀವು ಶಾಸಕರಾದರೆ ನಾನು ಈ ದೇಶದ ಪ್ರಜೆ ಎಂದು ಹೇಳಿದರು. ನಾನು ಟಾಯ್ಲೆಟ್​ಗೆ ಹೋಗಿ ಬರುವಷ್ಟರಲ್ಲಿ ಅಲ್ಲಿಗೆ ರೈಲ್ವೆ ಅಧಿಕಾರಿಗಳು ಬಂದರು. ಆಮೇಲೆ ನಾನು ಆ ಪ್ರಯಾಣಿಕರ ಬಳಿ ಕ್ಷಮೆ ಕೇಳಿದೆ ಎಂದು ಮಾಧ್ಯಮಗಳಿಗೆ ಗೋಪಾಲ್ ಮಂಡಲ್ ಹೇಳಿದ್ದರು.

ಆದರೆ, ಗೋಪಾಲ್ ಮಂಡಲ್ ಯಾವ ಕ್ಷಮಾಪಣೆಯನ್ನೂ ಕೇಳಿಲ್ಲ. ಅವರು ಕುಡಿದು ಈ ರೀತಿ ವರ್ತಿಸಿದ್ದರು ಎಂದು ಪ್ರಯಾಣಿಕ ದೆಹಲಿಯ ರೈಲ್ವೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಇದನ್ನೂ ಓದಿ: Viral Video: ಒಳ ಉಡುಪಿನಲ್ಲಿ ರೈಲಿನೊಳಗೆ ಓಡಾಡಿದ ಶಾಸಕನ ವಿಡಿಯೋ ವೈರಲ್; ಹೊಟ್ಟೆ ಕೆಟ್ಟಿತ್ತು ಎಂದ ಗೋಪಾಲ್ ಮಂಡಲ್

Viral Video: ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳು ಹೇಗೆ ತಲೆ ಸ್ನಾನ ಮಾಡುತ್ತಾರೆ?; ವೈರಲ್ ವಿಡಿಯೋ ಇಲ್ಲಿದೆ

(Bihar JDU MLA Gopal Mandal In Underwear in Train Was Drunk Snatched My Gold Ring Co-Passenger Filed Complaint)

Published On - 1:11 pm, Sat, 4 September 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ