Video: ಕಂಠಪೂರ್ತಿ ಕುಡಿದು ರಸ್ತೆ ಮಧ್ಯೆ ಕಿರುಚಿ, ಕುಣಿದಾಡಿದ ಯುವತಿ; ಅಮಲಿನಲ್ಲಿ ಅವಾಂತರ

ಹುಡುಗಿಯ ಉಪಟಳ ಸಹಿಸಲಾಗದ ಜನ ನಂತರ ಪೊಲೀಸರಿಗೆ ಕರೆ ಮಾಡಿದ್ದರು. ಆದರೆ ಪೊಲೀಸರು ಬರುವುದಕ್ಕೂ ಮೊದಲೇ ಆಕೆಯ ಸ್ನೇಹಿತರ ಕಾರು ಬಂದ ಕಾರಣ ಅವಳು ಕಾರು ಹತ್ತಿ ಕಾಲ್ಕಿತ್ತಿದ್ದಾಳೆ.

Video: ಕಂಠಪೂರ್ತಿ ಕುಡಿದು ರಸ್ತೆ ಮಧ್ಯೆ ಕಿರುಚಿ, ಕುಣಿದಾಡಿದ ಯುವತಿ; ಅಮಲಿನಲ್ಲಿ ಅವಾಂತರ
ಕುಡಿದು ಕೂಗಾಡಿದ ಯುವತಿ
Follow us
TV9 Web
| Updated By: Lakshmi Hegde

Updated on:Sep 04, 2021 | 1:48 PM

ಮಹಾರಾಷ್ಟ್ರ (Maharashtra)ದ ಅಂಬರ್​ನಾಥ್​ ಫೂರ್ವದಲ್ಲಿರುವ ಗೋವಿಂದ ಸೇತುವೆ ಬಳಿಯ ಡಿಪಿ ರಸ್ತೆ (DP Road)ಯಲ್ಲಿ ಹುಡುಗಿಯೊಬ್ಬಳು ನಿನ್ನೆ ರಾತ್ರಿ ಸಿಕ್ಕಾಪಟೆ ತೊಂದರೆ ನೀಡಿದ್ದಾಳೆ. ಕಂಠಪೂರ್ತಿ ಕುಡಿದು ಬೇಕಾಬಿಟ್ಟಿ ನಡೆದಾಡಿದ್ದಾಳೆ. ರಸ್ತೆ ಮಧ್ಯೆ ನಿಂತು ವಾಹನ ಸವಾರರಿಗೆ ತೊಂದರೆ ಕೊಟ್ಟಿದ್ದಾಳೆ. ಈ ವಿಡಿಯೋ ಇದೀಗ ಸೋಷಿಯಲ್​ ಮೀಡಿಯಾ (Social Media)ಗಳಲ್ಲಿ ಸಿಕ್ಕಾಪಟೆ ವೈರಲ್ ಆಗಿದೆ. ಅಮಲಿನಲ್ಲಿ ಅವಾಂತರ ಸೃಷ್ಟಿಸಿದ ಯುವತಿಯ ವಿಡಿಯೋ ಕಳೆದ ಒಂದು ತಾಸಿನಿಂದಲೂ ಹರಿದಾಡುತ್ತಿದೆ.

ಜೀನ್ಸ್​ಪ್ಯಾಂಟ್​, ಕೆಂಪು ಬಣ್ಣದ ಟಾಪ್​ ಧರಿಸಿರುವ ಯುವತಿ ರಸ್ತೆ ಮಧ್ಯೆ ನಿಂತು ಗಲಾಟೆ ಮಾಡಿದ್ದಾಳೆ. ವಾಹನ ಸವಾರರನ್ನು ತಡೆದು, ಸವಾರರಿಗೆ ಬಾಯಿಗೆ ಬಂದಂತೆ ಬೈದಿದ್ದಾಳೆ. ಆಕೆ ಆಟವನ್ನು ನೋಡಿ ಹಲವರು ತಮ್ಮ ಗಾಡಿ ನಿಲ್ಲಿಸಿದ್ದಾರೆ. ಆಕೆಯ ಬಳಿ ಮಾತನಾಡಲೂ ಕೆಲವರು ಪ್ರಯತ್ನಿಸಿದ್ದಾರೆ. ಆದರೆ ಹುಡುಗಿ ತನ್ನ ಮೇಲೆ ಸಂಪೂರ್ಣವಾಗಿ ನಿಯಂತ್ರಣ ಕಳೆದುಕೊಂಡಿದ್ದಳು. ಅಲ್ಲಿದ್ದವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದನ್ನು ವಿಡಿಯೋದಲ್ಲಿ ನೋಡಬಹುದು.

ಆಕೆಯ ಉಪಟಳ ಸಹಿಸಲಾಗದ ಜನ ನಂತರ ಪೊಲೀಸರಿಗೆ ಕರೆ ಮಾಡಿದ್ದರು. ಆದರೆ ಪೊಲೀಸರು ಬರುವುದಕ್ಕೂ ಮೊದಲೇ ಆಕೆಯ ಸ್ನೇಹಿತರ ಕಾರು ಬಂದ ಕಾರಣ ಅವಳು ಕಾರು ಹತ್ತಿ ಕಾಲ್ಕಿತ್ತಿದ್ದಾಳೆ. ಈ ರೋಡಿನಲ್ಲಿ ಪದೇಪದೆ ಇಂಥ ಘಟನೆ ನಡೆಯುತ್ತಿದೆ. ಪೊಲೀಸರು ಇಲ್ಲಿ ಗಸ್ತು ಹೆಚ್ಚಿಸಬೇಕು. ರಾತ್ರಿ ಕುಡಿದು ಓಡಾಡುವವರು, ಗಲಾಟೆ ಮಾಡುವವರನ್ನು ನಿಯಂತ್ರಿಸಬೇಕು ಎಂದು ಸ್ಥಳೀಯ ನಾಗರಿಕರು ಎಚ್ಚರಿಸಿದ್ದಾರೆ.

ಇಂಥದ್ದೇ ಘಟನೆ ನಡೆದಿತ್ತು ! ಕೆಲವು ದಿನಗಳ ಹಿಂದೆಯೂ ಇಂಥದ್ದೇ ಒಂದು ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿತ್ತು. ಯುವತಿಯೊಬ್ಬಳು ಭರ್ಜರಿ ಕುಡಿದು ಪುಣೆಯ ತಿಲಕ್ ರಸ್ತೆಯ ಹೀರಾಭಾಗ್ ಚೌಕ್​ನಲ್ಲಿ ನೆಲಕ್ಕೆ ಬಿದ್ದು ಹೊರಳಾಡಿದ್ದಳು. ಮಧ್ಯ ರಸ್ತೆಯಲ್ಲಿ ಯೋಗಾಸನ ಮಾಡಿದ ವಿಡಿಯೋ ವೈರಲ್ ಆಗಿತ್ತು. ಆ ಯುವತಿ ಕೂಡ ಜೀನ್ಸ್​ ಮತ್ತು ಕೆಂಪು ಬಣ್ಣದ ಟಾಪ್​ ಧರಿಸಿದ್ದಳು. ಅಂದು ಆ ಯುವತಿ ಉದ್ದಕ್ಕೆ ಮಲಗಿ ವಾಹನಗಳನ್ನು ನೋಡುತ್ತಿದ್ದಳು. ಸ್ಥಳೀಯರು ಏನೂ ಮಾಡಲು ತೋಚದೆ ಪೊಲೀಸರಿಗೆ ದೂರು ನೀಡಿದ್ದರು. ಅಲ್ಲಿಗೆ ಬಂದ ಪೊಲೀಸರು ಯುವತಿಯನ್ನು ಕರೆದುಕೊಂಡು ಹೋಗಿದ್ದರು.

ಇದನ್ನೂ ಓದಿ: ಕುಡಿದು ರೈಲಿನಲ್ಲಿ ಅರೆ ನಗ್ನವಾಗಿ ಓಡಾಡಿದ ಜೆಡಿಯು ಶಾಸಕ ನನ್ನ ಚಿನ್ನದ ಉಂಗುರ ಕಿತ್ತುಕೊಂಡರು; ಸಹ ಪ್ರಯಾಣಿಕ ದೂರು

ಕರ್ನಾಟಕ ಭೂ ಕಂದಾಯ ಕಾಯಿದೆಯಡಿ ಆದಾಯ ಮಿತಿಗೆ ತಿದ್ದುಪಡಿ ತರಲು ಗೃಹ ಸಚಿವ ಆರಗ ಜ್ಞಾನೇಂದ್ರ ಮನವಿ

Published On - 1:47 pm, Sat, 4 September 21