ಪಿಪಿಇ ಕಿಟ್ ಧರಿಸಿದ ಸಿಬ್ಬಂದಿಯನ್ನು ನೋಡಿ ದೆವ್ವ ಎಂದು ಹೆದರಿ ಕಿರುಚಾಡಿದ ರೋಗಿ; ಅಕ್ಕಪಕ್ಕದವರೆಲ್ಲಾ ಗಾಬರಿ
ಆ ರೋಗಿ ಪಿಪಿಇ ಕಿಟ್ ಧರಿಸಿದ ಸಿಬ್ಬಂದಿಯನ್ನು ಕಂಡು ದೆವ್ವವೆಂದು ಭಾವಿಸಿದ್ದರಂತೆ. ಹೀಗಾಗಿ ಬೆದರಿ ಕಿರುಚಾಡಿದ್ದಾರೆ. ಅವರ ಕಿರುಚಾಟ ನೋಡಿ ಸ್ವತಃ ವೈದ್ಯಕೀಯ ಸಿಬ್ಬಂದಿಯೇ ಗಾಬರಿಯಾಗಿ ಸಮಾಧಾನಿಸಲು ಯತ್ನಿಸಿದ್ದಾರೆ. ಅಕ್ಕಪಕ್ಕದ ಬೆಡ್ನವರಂತೂ ಎದ್ದು ಕೂತಿದ್ದಾರೆ. ಅಷ್ಟೇ ಅಲ್ಲದೇ ಆಸ್ಪತ್ರೆಯ ಇತರೆ ಸಿಬ್ಬಂದಿ ಕೂಡಾ ಓಡಿ ಬಂದು ಏನಾಯಿತೆಂದು ನೋಡಿದ್ದಾರೆ.
ಮನುಷ್ಯನ ಮನಸ್ಸಿನಲ್ಲಿರುವ ಭಯ ಯಾವಾಗ, ಹೇಗೆ ವ್ಯಕ್ತವಾಗುತ್ತದೆ. ಏನೆಲ್ಲಾ ಅವಾಂತರ ಸೃಷ್ಟಿಸುತ್ತದೆ ಎಂದು ಹೇಳಲಾಗದು. ಎಷ್ಟೇ ಧೈರ್ಯವಂತರಾದರೂ ಯಾವುದೋ ಸಣ್ಣ ಪುಟ್ಟ ವಿಚಾರಗಳಿಗೆ ವಿಪರೀತ ಭಯಪಟ್ಟು ಕಂಗಾಲಾಗುತ್ತಾರೆ. ಅದಕ್ಕಾಗಿಯೇ ಹಿರಿಯರು ಹಗ್ಗ ತುಳಿದು ಹಾವು ಅಂತ ಬೆದರಿದಂತೆ ಎಂಬ ಮಾತು ಹೇಳಿರುವುದು. ಕೆಲವೊಂದು ಸಂದರ್ಭದಲ್ಲಿ ಹಗ್ಗವೂ ಹಾವಿನಂತೆ ಕಾಣುವುದು ಸುಳ್ಳಲ್ಲ ಬಿಡಿ. ಈ ಮಾತನ್ನು ಈಗ ಹೇಳಲು ಕಾರಣ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಒಂದು ವಿಡಿಯೋ.
ಕಳೆದ ಒಂದೂವರೆ ವರ್ಷಗಳಲ್ಲಿ ಅಂದರೆ ಕೊರೊನಾ ಬಂದ ನಂತರ ಕೆಲವೊಂದು ವಿಷಯಗಳನ್ನು ಹೊಸದಾಗಿ ತಿಳಿದುಕೊಂಡಿದ್ದೇವೆ. ಆ ಪೈಕಿ ಪಿಪಿಇ ಕಿಟ್ ಕೂಡಾ ಒಂದು ಎಂದರೆವ ತಪ್ಪಾಗಲಿಕ್ಕಿಲ್ಲ. ಕೊರೊನಾಕ್ಕಿಂತ ಮೊದಲೂ ಅದು ಬಳಕೆಯಲ್ಲಿದ್ದರೂ ಈ ಮಟ್ಟಕ್ಕೆ ಪರಿಚಿತವಾಗಿರಲಿಲ್ಲ. ಹೀಗಾಗಿ ಶುರುವಿನಲ್ಲಿ ಪಿಪಿಇ ಕಿಟ್ ಧರಿಸಿದವರನ್ನು ವಿಚಿತ್ರವಾಗಿ ನೋಡಲಾಗುತ್ತಿತ್ತು. ಕೆಲವರಂತೂ ಪಿಪಿಇ ಕಿಟ್ ಧರಿಸಿದವರನ್ನು ಕಂಡು ಬೆಚ್ಚಿಬೀಳುತ್ತಿದ್ದರು. ಈ ವೈರಲ್ ವಿಡಿಯೋದಲ್ಲೂ ಅದೇ ಆಗಿದೆ. ವಿಚಿತ್ರವೆಂದರೆ ಆಸ್ಪತ್ರೆಯಲ್ಲಿದ್ದ ರೋಗಿಯೇ ಬೆಚ್ಚಿಬಿದ್ದಿದ್ದಾರೆ.
ಈ ದೃಶ್ಯ ಎಲ್ಲಿಯದು, ಯಾವ ಆಸ್ಪತ್ರೆಯದು ಎನ್ನುವುದು ಖಚಿತವಾಗಿ ತಿಳಿದಿಲ್ಲ. ಆದರೆ, ಇದು ಆಸ್ಪತ್ರೆ ವಾರ್ಡಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದಂತಿದೆ. ಬಹುತೇಕ ರಾತ್ರಿ ವೇಳೆ ಘಟನೆ ಆದಂತೆ ವಿಡಿಯೋದಲ್ಲಿ ಕಾಣುತ್ತಿದ್ದು ವಾರ್ಡ್ ಒಂದರಲ್ಲಿ ರೋಗಿಗಳು ಮಲಗಿರುವಾಗ ತಪಾಸಣೆಗೆಂದು ವೈದ್ಯಕೀಯ ಸಿಬ್ಬಂದಿ ಒಳಗೆ ಬಂದಿದ್ದಾರೆ. ಕೊರೊನಾ ಭಯ ಇರುವುದರಿಂದ ಸಹಜವಾಗಿಯೇ ಪಿಪಿಇ ಕಿಟ್ ಧರಿಸಿ ಬಂದಿದ್ದಾರೆ. ಆದರೆ, ಸಿಬ್ಬಂದಿ ಒಳಗೆ ಬರುವಾಗ ರೋಗಿ ಅತ್ತ ತಿರುಗಿ ಮಲಗಿದ್ದ ಕಾರಣ ತಕ್ಷಣಕ್ಕೆ ಅವರ ಗಮನಕ್ಕೆ ಬಂದಿಲ್ಲ. ಯಾವಾಗ ಪಿಪಿಇ ಕಿಟ್ ಧರಿಸಿದ ಸಿಬ್ಬಂದಿ ಹತ್ತಿರ ಹೋದರೋ ಆಗ ಭಯ ಬಿದ್ದು ಅರಚಾಡಿದ್ದಾರೆ.
ಹರತಿದಾಡುತ್ತಿರುವ ವಿಡಿಯೋದಲ್ಲಿ ಹೇಳಿರುವ ಪ್ರಕಾರ ಆ ರೋಗಿ ಪಿಪಿಇ ಕಿಟ್ ಧರಿಸಿದ ಸಿಬ್ಬಂದಿಯನ್ನು ಕಂಡು ದೆವ್ವವೆಂದು ಭಾವಿಸಿದ್ದರಂತೆ. ಹೀಗಾಗಿ ಬೆದರಿ ಕಿರುಚಾಡಿದ್ದಾರೆ. ಅವರ ಕಿರುಚಾಟ ನೋಡಿ ಸ್ವತಃ ವೈದ್ಯಕೀಯ ಸಿಬ್ಬಂದಿಯೇ ಗಾಬರಿಯಾಗಿ ಸಮಾಧಾನಿಸಲು ಯತ್ನಿಸಿದ್ದಾರೆ. ಅಕ್ಕಪಕ್ಕದ ಬೆಡ್ನವರಂತೂ ಎದ್ದು ಕೂತಿದ್ದಾರೆ. ಅಷ್ಟೇ ಅಲ್ಲದೇ ಆಸ್ಪತ್ರೆಯ ಇತರೆ ಸಿಬ್ಬಂದಿ ಕೂಡಾ ಓಡಿ ಬಂದು ಏನಾಯಿತೆಂದು ನೋಡಿದ್ದಾರೆ. ಆದರೆ, ಕೆಲ ಹೊತ್ತು ಕಿರುಚಾಡಿದ ರೋಗಿ ನಂತರ ತನ್ನ ಭಯಕ್ಕೆ ಕಾರಣ ಹೇಳಿದಾಗ ಅಲ್ಲಿದ್ದವರೆಲ್ಲಾ ಬೇಸ್ತುಬಿದ್ದಿದ್ದಾರೆ. ಒಬ್ಬರಂತೂ ಹೊಟ್ಟೆ ಹಿಡಿದುಕೊಂಡು ನಕ್ಕಿದ್ದಾರೆ.
ಇದನ್ನೂ ಓದಿ: Shocking Video: ಮೈಕೆಲ್ ಜಾಕ್ಸನ್ ದೆವ್ವವನ್ನೇ ಮದುವೆಯಾದ ಮಹಿಳೆ; ಥ್ರಿಲ್ಲಿಂಗ್ ಲವ್ ಸ್ಟೋರಿ ಇಲ್ಲಿದೆ
Viral Video: ಕಡುಕತ್ತಲಿನಲ್ಲಿ ಸೇತುವೆ ಮೇಲೆ ಕಂಡುಬಂದ ಆಕೃತಿ ಏನು? ವಿಡಿಯೋ ನೋಡಿ ಗಾಬರಿಗೊಂಡ ನೆಟ್ಟಿಗರು
(Patient scared and scream after seeing doctor in PPE Kit thinking it as ghost Video goes Viral)