AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಚಿಟ್ಟೆಗಳ ಜತೆ ಮುದ್ದು ನಾಯಿಮರಿಯ ಆಟ; ಜನ ಮೆಚ್ಚಿದ ವಿಡಿಯೋ ಸಿಕ್ಕಾಪಟ್ಟೆ ವೈರಲ್

ಪುಟಾಣಿ ನಾಯಿ ಮರಿಯೊಂದು ಚಿಟ್ಟೆಗಳ ಜತೆ ಮುದ್ದು ಮುದ್ದಾಗಿ ಆಟ ಆಡುವ ವಿಡಿಯೋ ವೈರಲ್ ಆಗಿದೆ. ಬ್ಯೂಟಂಗ್​ಬೈಡನ್​ ಎಂಬ ಹೆಸರಿನ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋವನ್ನು ಈಗಾಗಲೇ ಸಾವಿರಾರು ಜನ ವೀಕ್ಷಿಸಿದ್ದು, ಮುದ್ದು ಮುದ್ದಾಗಿರುವ ನಾಯಿ ಮರಿಯನ್ನು ಮೆಚ್ಚಿಕೊಂಡಿದ್ದಾರೆ.

Viral Video: ಚಿಟ್ಟೆಗಳ ಜತೆ ಮುದ್ದು ನಾಯಿಮರಿಯ ಆಟ; ಜನ ಮೆಚ್ಚಿದ ವಿಡಿಯೋ ಸಿಕ್ಕಾಪಟ್ಟೆ ವೈರಲ್
ವೈರಲ್​ ವಿಡಿಯೋ
TV9 Web
| Updated By: Skanda|

Updated on: Sep 05, 2021 | 10:48 AM

Share

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಕೆಲವೊಂದು ಸಂಗತಿಗಳು ಮನಸ್ಸನ್ನು ಹಗುರಾಗಿಸಲು ಅತ್ಯುತ್ತಮ ಔಷಧಿ. ಪುಟಾಣಿ ಮಕ್ಕಳು, ಪ್ರಾಣಿ, ಪಕ್ಷಿಗಳು, ಪರಿಸರದಲ್ಲಾಗುವ ಹಿತವಾದ ಬದಲಾವಣೆಗಳು ಇವೆಲ್ಲವೂ ಮನಸ್ಸಿಗೆ ಮುದ ನೀಡುತ್ತವೆ. ತಲೆಯೊಳಗೆ ಎಷ್ಟೇ ಚಿಂತೆ ಇದ್ದರೂ ಆ ವಿಡಿಯೋಗಳನ್ನು ನೋಡುತ್ತಾ ಹಗುರಾಗಿ ಕಳೆದುಹೋಗಬಹುದು. ಕೊರೊನಾದಿಂದಾಗಿ ಎಲ್ಲರೂ ಮನೆಯಲ್ಲೇ ಕೂತು ಕೆಲಸ ಮಾಡುವಂತಾದ ಮೇಲಂತೂ ಇಂಥಾ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಮತ್ತಷ್ಟು ವೇಗವಾಗಿ ಹರಿದಾಡುತ್ತಿವೆ. ಇಲ್ಲೀಗ ತೋರಿಸಲು ಹೊರಟ ವೈರಲ್​ ವಿಡಿಯೋ ಕೂಡಾ ಅಷ್ಟೇ ಖುಷಿ ಕೊಡುವಂತಿದೆ. 

ಪುಟಾಣಿ ನಾಯಿ ಮರಿಯೊಂದು ಚಿಟ್ಟೆಗಳ ಜತೆ ಮುದ್ದು ಮುದ್ದಾಗಿ ಆಟ ಆಡುವ ವಿಡಿಯೋ ವೈರಲ್ ಆಗಿದೆ. ಬ್ಯೂಟಂಗ್​ಬೈಡನ್​ ಎಂಬ ಹೆಸರಿನ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋವನ್ನು ಈಗಾಗಲೇ ಸಾವಿರಾರು ಜನ ವೀಕ್ಷಿಸಿದ್ದು, ಮುದ್ದು ಮುದ್ದಾಗಿರುವ ನಾಯಿ ಮರಿಯನ್ನು ಮೆಚ್ಚಿಕೊಂಡಿದ್ದಾರೆ.

ವಿಡಿಯೋದಲ್ಲಿ ಕಾಣುವಂತೆ ಕಪ್ಪು ಬಣ್ಣದ ಗುಂಡು ಗುಂಡಾಗಿರುವ ನಾಯಿ ಮರಿಯೊಂದು ಗಾರ್ಡನ್​ನಲ್ಲಿ ಚೆಂಡಿನೊಂದಿಗೆ ಆಡುವಾಗ ಚಿಟ್ಟೆಗಳೆರಡು ಹತ್ತಿರ ಬಂದಿವೆ. ಒಂದು ಚಿಟ್ಟೆಯಂತೂ ಸೀದಾ ಬಂದು ನಾಯಿ ಮರಿಯ ಮೂತಿ ಮೇಲೆ ಕೂತಿದೆ. ಚಿಟ್ಟೆ ಕೂತಿದ್ದನ್ನ ನೋಡಿದ ಪುಟಾಣಿ ನಾಯಿ ಮರಿ ತನ್ನ ಮೂತಿಯನ್ನು ಬಗ್ಗಿಸಿ ನೆಲಕ್ಕೆ ತಾಗಿಸಿದೆ. ಆಮೇಲೆ ಚಿಟ್ಟೆ ಹಾರಿ ಹೋಗಿದೆ.

ಸಾಧಾರಣವಾಗವಾಗಿ ಬೆಕ್ಕು, ನಾಯಿಗಳು ಚಿಕ್ಕ ಮರಿಗಳಾಗಿದ್ದಾಗ ಕಣ್ಣಿಗೆ ಕಂಡಿದ್ದನ್ನೆಲ್ಲಾ ಹಿಡಿಯಲು ಹೋಗಿ ಚೇಷ್ಟೆ ಮಾಡುತ್ತಿರುತ್ತವೆ. ಆದರೆ, ಈ ನಾಯಿ ಮರಿ ಮಾತ್ರ ಮುಗ್ಧವಾಗಿ ವರ್ತಿಸಿದ್ದು, ನೋಡುಗರ ಮನಸ್ಸು ಗೆದ್ದಿದೆ. ಅದನ್ನು ನೋಡಿದ ಜನ ತರಹೇವಾರಿ ಕಮೆಂಟ್​ಗಳನ್ನು ಮಾಡಿದ್ದು, ಕೆಲವರಂತೂ ಜಗತ್ತು ಸುಂದರವಾಗಿದೆ ಎನ್ನುವುದಕ್ಕೆ ಇದಕ್ಕಿಂತ ಉತ್ತಮ ಸಾಕ್ಷಿ ಬೇರೆ ಬೇಕಾಗಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: Viral Video: ನಗುತ್ತಾ ವಧುವಿನ ಊಟದ ಬಾಳೆಯಲ್ಲಿದ್ದ ಹಪ್ಪಳ ಕದ್ದ ವರ; ಕ್ಯೂಟ್ ವಿಡಿಯೋ ವೈರಲ್

Money Heist 5: ‘ಮನಿ ಹೈಸ್ಟ್​ 5’ ಮೋಡಿಗೆ ಸಿಲುಕಿದ ನಟಿ ಕೀರ್ತಿ ಸುರೇಶ್​: ನಾಯಿ ಜೊತೆಗಿನ ವಿಡಿಯೋ ವೈರಲ್​

(Cute video of puppy Dog playing with butterflies gone viral)