Money Heist 5: ‘ಮನಿ ಹೈಸ್ಟ್​ 5’ ಮೋಡಿಗೆ ಸಿಲುಕಿದ ನಟಿ ಕೀರ್ತಿ ಸುರೇಶ್​: ನಾಯಿ ಜೊತೆಗಿನ ವಿಡಿಯೋ ವೈರಲ್​

ಜಗತ್ತಿನಾದ್ಯಂತ ಫೇಮಸ್​ ಆಗಿರುವ ‘ಮನಿ ಹೈಸ್ಟ್​’ ವೆಬ್​ ಸಿರೀಸ್​ನ 5ನೇ ಸೀಸನ್​ ಬಿಡುಗಡೆ ಆಗಿದೆ. ನೆಟ್​ಫ್ಲಿಕ್ಸ್​ ಮೂಲಕ ಪ್ರಸಾರ ಆಗುತ್ತಿರುವ ಈ ವೆಬ್​ ಸರಣಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಅದರ ಮೋಡಿಗೆ ಕೀರ್ತಿ ಸುರೇಶ್​ ಕೂಡ ಸಿಲುಕಿದ್ದಾರೆ.

Money Heist 5: ‘ಮನಿ ಹೈಸ್ಟ್​ 5’ ಮೋಡಿಗೆ ಸಿಲುಕಿದ ನಟಿ ಕೀರ್ತಿ ಸುರೇಶ್​: ನಾಯಿ ಜೊತೆಗಿನ ವಿಡಿಯೋ ವೈರಲ್​
ಮನಿ ಹೈಸ್ಟ್​, ಕೀರ್ತಿ ಸುರೇಶ್
Follow us
TV9 Web
| Updated By: ಮದನ್​ ಕುಮಾರ್​

Updated on: Sep 05, 2021 | 8:55 AM

ದಕ್ಷಿಣ ಭಾರತದ ಬಹುಬೇಡಿಕೆಯ ನಟಿ ಕೀರ್ತಿ ಸುರೇಶ್​ ಅವರು ಈಗ ಹಲವು ಪ್ರಾಜೆಕ್ಟ್​ಗಳಲ್ಲಿ ಬ್ಯುಸಿ ಆಗಿದ್ದಾರೆ. ಶೂಟಿಂಗ್​ ಬಿಡುವಿನ ಸಂದರ್ಭದಲ್ಲಿ ಅವರು ಸೋಶಿಯಲ್​ ಮೀಡಿಯಾ ಮೂಲಕ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿ ಇರಲು ಪ್ರಯತ್ನಿಸುತ್ತಾರೆ. ತಮ್ಮ ದಿನಚರಿಯ ಬಗ್ಗೆ ಆಗಾಗ ಅಪ್​ಡೇಟ್​ ನೀಡುತ್ತಿರುತ್ತಾರೆ. ಈಗ ಕೀರ್ತಿ ಸುರೇಶ್​ಗೆ ‘ಮನಿ ಹೈಸ್ಟ್​ 5’ ಕ್ರೇಜ್​ ಶುರುವಾಗಿದೆ. ಅದನ್ನು ಅವರು ವ್ಯಕ್ತಪಡಿಸಿದ್ದಾರೆ.

ಜಗತ್ತಿನಾದ್ಯಂತ ಫೇಮಸ್​ ಆಗಿರುವ ‘ಮನಿ ಹೈಸ್ಟ್​’ ವೆಬ್​ ಸಿರೀಸ್​ನ 5ನೇ ಸೀಸನ್​ ಬಿಡುಗಡೆ ಆಗಿದೆ. ನೆಟ್​ಫ್ಲಿಕ್ಸ್​ ಮೂಲಕ ಪ್ರಸಾರ ಆಗುತ್ತಿರುವ ಈ ವೆಬ್​ ಸರಣಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಆ ಬಳಗದಲ್ಲಿ ಕೀರ್ತಿ ಸುರೇಶ್​ ಕೂಡ ಸೇರಿಕೊಂಡಿದ್ದಾರೆ. ತಮ್ಮ ಮುದ್ದು ನಾಯಿಯ ಜೊತೆ ಕುಳಿತು ಅವರು ಮನಿ ಹೈಸ್ಟ್​ನ ಹಾಡೊಂದನ್ನು ಗುನುಗಿದ್ದಾರೆ. ಆ ವಿಡಿಯೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಅಪ್​ಲೋಡ್​ ಮಾಡಿಕೊಂಡಿದ್ದು, ಅದು ಅವರ ಅಭಿಮಾನಿಗಳ ವಲಯದಲ್ಲಿ ವೈರಲ್​ ಆಗುತ್ತಿದೆ.

ಮಹೇಶ್​ ಬಾಬು ನಟನೆಯ ‘ಸರ್ಕಾರು ವಾರಿ ಪಾಟ’, ರಜನಿಕಾಂತ್​ ನಟನೆಯ ‘ಅಣ್ಣಾತೆ’, ಮೋಹನ್​ಲಾಲ್​ ಅಭಿನಯದ ‘ಮರಕ್ಕರ್​’ ಸೇರಿದಂತೆ ಅನೇಕ ಹೈವೋಲ್ಟೇಜ್​ ಸಿನಿಮಾಗಳಲ್ಲಿ ಕೀರ್ತಿ ಸುರೇಶ್​ ನಟಿಸುತ್ತಿದ್ದಾರೆ. ಹಿಂದಿಯಲ್ಲಿ ಸೂಪರ್​ ಹಿಟ್​ ಆಗಿರುವ ‘ಮಿಮಿ’ ಚಿತ್ರದ ತೆಲುಗು ರಿಮೇಕ್​ನಲ್ಲೂ ಅವರು ಅಭಿನಯಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದರೆ ಆ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

‘ಮನಿ ಹೈಸ್ಟ್​’ ನಾಲ್ಕು ಸೀಸನ್​ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಪ್ರತಿ ಪಾತ್ರಕ್ಕೂ ಖ್ಯಾತ ನಗರಗಳ ಹೆಸರನ್ನು ಇಟ್ಟಿರೋದು ವಿಶೇಷ. ಬ್ಯಾಂಕ್​ ದರೋಡೆ ಮಾಡುವ ಒಂದು ತಂಡದ ಕಥೆಯನ್ನು ಈ ವೆಬ್​ ಸೀರಿಸ್​ ಹೇಳುತ್ತಿದೆ. ಸಾಕಷ್ಟು ಕುತೂಹಲಕಾರಿ ಅಂಶ ಹಾಗೂ ಪ್ರಶ್ನೆಗಳೊಂದಿಗೆ ನಾಲ್ಕನೇ ಸೀಸನ್​ ಅಂತ್ಯವಾಗಿತ್ತು. ಈ ಎಲ್ಲಾ ಪ್ರಶ್ನೆಗಳಿಗೆ ಸೀಸನ್​ 5ರಲ್ಲಿ ಪ್ರೇಕ್ಷಕರು ಉತ್ತರ ಹುಡುಕುತ್ತಿದ್ದಾರೆ.

ಭಾರತದಲ್ಲಿ ‘ಮನಿ ಹೈಸ್ಟ್​ 5’​ ಬಗ್ಗೆ ಕ್ರೇಜ್​ ಎಷ್ಟಿದೆ ಎಂದರೆ, ಈ ವೆಬ್​ ಸಿರೀಸ್ ರಿಲೀಸ್​ ಆಗುವ ದಿನ (ಸೆ.3) ಜೈಪುರ ಮೂಲದ ಕಂಪನಿಯೊಂದು ರಜೆ ಘೋಷಿಸಿತ್ತು. ಈ ವಿಶೇಷ ರಜೆಗೆ ‘ನೆಟ್​ಫ್ಲಿಕ್ಸ್​ ಮತ್ತು ಚಿಲ್​ ಹಾಲಿಡೇ’ ಎಂದು ಹೆಸರಿಡಲಾಗಿತ್ತು. ಈ ಬಗ್ಗೆ ಕಂಪನಿಯ ಸಿಇಒ ಸೋಶಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದರು.

ಇದನ್ನೂ ಓದಿ:

ತೆಲುಗಿನಲ್ಲಿ ‘ಪರಮ ಸುಂದರಿ’ ಯಾರು? ನಟಿ ಕೀರ್ತಿ ಸುರೇಶ್​ ಬಗ್ಗೆ ಕೇಳಿಬರುತ್ತಿದೆ ಗುಸುಗುಸು

Virat Kohli: ವಿರಾಟ್​ ಕೊಯ್ಲಿಗೆ ‘ಮನಿ ಹೈಸ್ಟ್​’ ಪ್ರೊಫೆಸರ್ ಪಾತ್ರ? ವೈರಲ್​ ಆಯ್ತು ಹೊಸ ಲುಕ್​

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ